ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕೈಗಾರಿಕೆ ಮತ್ತು ವ್ಯಾಪಾರಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರ ಚರ್ಚೆ 

Posted On: 09 APR 2020 6:02PM by PIB Bengaluru

ಕೈಗಾರಿಕೆ ಮತ್ತು ವ್ಯಾಪಾರಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರ ಚರ್ಚೆ 

ಸಮಸ್ಯೆಗಳನ್ನು ಬಗೆಹರಿಸಲು ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಭರವಸೆ
 

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ವೀಡಿಯೊ ಕಾನ್ಫೆರೆನ್ಸ್ಮೂಲಕ ದೇಶದ ಕೈಗಾರಿಕೆ ಮತ್ತು ವ್ಯಾಪಾರ ಸಂಘಟನೆಗಳ ಜತೆ ಸಭೆ ನಡೆಸಿತು. ಕೋವಿಡ್‌–19 ವ್ಯಾಪಿಸಿದ ಬಳಿಕ ಉಂಟಾದ ಸಮಸ್ಯೆಗಳು ಮತ್ತು ವಾಸ್ತವ ಪರಿಸ್ಥಿತಿ ಬಗ್ಗೆ ಸಮಾಲೋಚನೆ ಕೈಗೊಳ್ಳಲಾಯಿತು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ರೈಲ್ವೆ ಸಚಿವ ಶ್ರೀ ಪಿಯೂಷ್ಗೊಯಲ್‌, ರಾಜ್ಯ ಸಚಿವ ಶ್ರೀ ಸೋಮ್ಪ್ರಕಾಶ್ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಧಿಕಾರಿಗಳು ಸಭೆ ನಡೆಸಿದರು.

ಕೈಗಾರಿಕೆ ಸಂಘಟನೆಗಳು ಲಾಕ್ಡೌನ್ಘೋಷಣೆಯಾದ ದಿನದಿಂದ ಉಂಟಾಗಿರುವ ಪರಿಸ್ಥಿತಿ ಮತ್ತು ಕೆಲ ದಿನಗಳಲ್ಲಿನ ಪ್ರಗತಿ ಬಗ್ಗೆ ವಿವರಿಸಿದರು. ಆರ್ಡ್ರ್ಗಳು ರದ್ದುಗೊಂಡಿರುವುದು, ಕಾರ್ಮಿಕರ ಕೊರತೆ, ಕೇಂದ್ರ ಸರ್ಕಾರದ ಆದೇಶಗಳನ್ನು ರಾಜ್ಯ ಸರ್ಕಾರದ ಮತ್ತು ಜಿಲ್ಲೆಯ ಅಧಿಕಾರಿಗಳು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸಿರುವುದು, ಲಾರಿಗಳು ರಸ್ತೆಯಲ್ಲಿ ನಿಂತಿರುವುದು, ಬಿಡಿ ಭಾಗಗಳು ಲಭ್ಯವಾಗದಿರುವುದು ಮುಂತಾದ ಸಮಸ್ಯೆಗಳನ್ನು ಸಂದರ್ಭದಲ್ಲಿ ವಿವರಿಸಿದರು. ಆದರೂ, ಕಳೆದ 15 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಮಾಹಿತಿ ತಂತ್ರಜ್ಞಾನ ಶೇಕಡ 95ರಷ್ಟು ಸುಧಾರಿಸಲು ಸಾಧ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಜತೆಗೆ ಕಾರ್ಪೋರೇಟ್ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್‌) ಬಗ್ಗೆಯೂ ಅವರು ಮಾಹಿತಿ ನೀಡಿದರು. ಕೈಗಾರಿಕೆ ಮತ್ತು ಉದ್ದಿಮೆದಾರರು ಉತ್ತಮ ಪದ್ಧತಿಗಳನ್ನು ಅನುಸರಿಸಿಕೊಂಡಿದ್ದಾರೆ ಮತ್ತು ಸಮುದಾಯದ ಕಿಚನ್ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀ ಪಿಯೂಷ್ಗೊಯಲ್ಅವರು, ಆರ್ಥಿಕತೆ ಮತ್ತು ಬದುಕನ್ನು ರಕ್ಷಿಸಬೇಕಾದ ಮಹತ್ತರ ಜವಾಬ್ದಾರಿ ಇದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಮೊದಲು ದೇಶದ ಜನರ ಜೀವವನ್ನು ಕಾಪಾಡಬೇಕಾಗಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಲಾಕ್ಡೌನ್ತೆರವುಗೊಳಿಸುವ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳಲಾಗುವುದು. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ಆದರೆ, ಲಾಕ್ಡೌನ್ಸಂದರ್ಭದಲ್ಲಿನ ಲಾಭವನ್ನು ನಷ್ಟವೆಂದು ಪರಿಗಣಿಸಬಾರದು ಎಂದರು. ಕೆಲವು ರಾಜ್ಯಗಳು ಲಾಕ್ಡೌನ್ವಿಸ್ತರಿಸಬೇಕು ಎನ್ನುವುದನ್ನು ಪ್ರತಿಪಾದಿಸಿವೆ ಎಂದು ಪದಾಧಿಕಾರಿಗಳು ಗಮನಕ್ಕೆ ತಂದರು. ಸಮಸ್ಯೆಗಳಿಗೆ ಸಾರ್ವತ್ರಿಕವಾದ ಚಿಂತನೆ ಕೈಗೊಳ್ಳಬೇಕು. ಇದರಿಂದ, ಉತ್ಪಾದನೆ ಹೆಚ್ಚಾಗುತ್ತದೆ. ಆದರೆ, ಉದ್ಯೋಗಿಗಳು ಮತ್ತು ಭಾಗಿದಾರರ ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು. ನಾವು ಮತ್ತಷ್ಟು ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.

ಸಂಚಾರ ಹಾಗೂ ರಫ್ತು ಮತ್ತು ಆಮದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಚಿವಾಲಯ ಪ್ರಯತ್ನಿಸುತ್ತಿದೆ. ಉದ್ಯಮದ ವಿವಿಧ ಸಮಸ್ಯೆಗಳ ಬಗ್ಗೆಯೂ ವಿವಿಧ ಸಚಿವಾಲಯಗಳ ಜತೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಇತ್ತೀಚೆಗೆ ವಲಸೆ ಹೋದ ಕಾರ್ಮಿಕರು ಕೋವಿಡ್ಪ್ರಕರಣಗಳು ಮತ್ತೆ ಕಡಿಮೆಯಾದ ಬಳಿಕ ಮತ್ತೆ ಮರಳುವ ಭರವಸೆ ಇದೆ ಎಂದು ಸಚಿವರು ಹೇಳಿದರು. ಕೈಗಾಕೆಗಳಿಗೆ ಪರಿಹಾರ ಪ್ಯಾಕೇಜ್ಘೋಷಿಸುವಂತೆ ಕೆಲವರು ಮಂಡಿಸಿದ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಸ್ತಾವವನ್ನು ಪರಿಗಣಿಸುವಂತೆ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು. ಸಚಿವಾಲಯವು ಸಮತೋಲನದ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಿಸಿದರು. ಸಂಘಟನೆಯ ಸದಸ್ಯರು ಮಾನವೀಯತೆಯನ್ನು ಮೆರೆದು ಜನರಿಗೆ ನೆರವಾಗುತ್ತಿದ್ದಾರೆ ಎಂದು ಶ್ರೀ ಗೊಯಲ್ಅವರು ಶ್ಲಾಘಿಸಿದರು. ಎಲ್ಲ ಸದಸ್ಯರು ಮತ್ತು ಇತರರುಆರೋಗ್ಯ ಸೇತುಆ್ಯಪ್ಅನ್ನು ಡೌನ್ಲೌಡ್ಮಾಡಿಕೊಳ್ಳಬೇಕು. ಕೋವಿಡ್‌–19 ವಿರುದ್ಧ ಹೋರಾಡಲು ಆ್ಯಪ್ಸಹಕಾರಿಯಾಗಿದೆ ಎಂದು ಸಚಿವರು ಕೋರಿದರು.

ವೀಡಿಯೊ  ಕಾನ್ಫೆರೆನ್ಸ್ಸಭೆಯಲ್ಲಿ ಸಿಐಐ, ಎಫ್ಐಸಿಸಿಐ, ಅಸೋಚಾಮ್‌, ಐಸಿಸಿ, ಲಘು ಉದ್ಯೋಗ ಭಾರತಿ, ಎಫ್ಐಎಸ್ಎಂಇ, ನಾಸ್ಕಾಂ, ಪಿಎಚ್ಡಿ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಎಸ್ಐಎಎಂ, ಎಸಿಎಂಎ, ಐಎಂಟಿಎಂಎ, ಐಇಇಎಂಎ, ಸಿಎಐಟಿ ಮತ್ತು ಎಫ್ಎಎಂಇ ಪದಾಧಿಕಾರಿಗಳು ಭಾಗವಹಿಸಿದ್ದರು.

 

***

 



(Release ID: 1612824) Visitor Counter : 215