ಪ್ರಧಾನ ಮಂತ್ರಿಯವರ ಕಛೇರಿ

ಉಗಾಂಡಾ ಅಧ್ಯಕ್ಷರೊಂದಿಗೆ ಪ್ರಧಾನಿ ದೂರವಾಣಿ ಮಾತುಕತೆ

Posted On: 09 APR 2020 6:09PM by PIB Bengaluru

ಉಗಾಂಡಾ ಅಧ್ಯಕ್ಷರೊಂದಿಗೆ ಪ್ರಧಾನಿ ದೂರವಾಣಿ ಮಾತುಕತೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಉಗಾಂಡಾ ಅಧ್ಯಕ್ಷ ಶ್ರೀ ಯೋವೆರಿ ಕಗುತಾ ಮುಸೆವೆನಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

COVID-19 ಸಾಂಕ್ರಾಮಿಕದಿಂದ ಉಂಟಾಗಿರುವ ಆರೋಗ್ಯ ಮತ್ತು ಆರ್ಥಿಕ ಸವಾಲುಗಳನ್ನು ಉಭಯ ನಾಯಕರು ಚರ್ಚಿಸಿದರು. ಪ್ರಸ್ತುತ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಆಫ್ರಿಕಾದ ತನ್ನ ಸ್ನೇಹಿತರೊಂದಿಗೆ ಇದೆ ಮತ್ತು ಉಗಾಂಡಾದ ಸರ್ಕಾರವು ತನ್ನ ಭೂಪ್ರದೇಶದಲ್ಲಿ ವೈರಸ್ ನಿಯಂತ್ರಣಕ್ಕೆ ಕೈಗೊಳ್ಳುವ ಪ್ರಯತ್ನಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತದೆ ಎಂದು ಅಧ್ಯಕ್ಷ ಮುಸೆವೆನಿ ಅವರಿಗೆ ಪ್ರಧಾನಿಯವರು ಭರವಸೆ ನೀಡಿದರು.

ಸದ್ಯದ ಪರಿಸ್ಥಿತಿಯೂ ಸೇರಿದಂತೆ ಉಗಾಂಡ ಸರ್ಕಾರ ಮತ್ತು ಸಮಾಜವು ಉಗಾಂಡಾದಲ್ಲಿರುವ ಭಾರತೀಯ ವಲಸೆಗಾರರಿಗೆ ನೀಡಿರುವ ಸೌಹಾರ್ದತೆ ಮತ್ತು ಕಾಳಜಿಯ ಬಗ್ಗೆ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜುಲೈ 2018 ತಮ್ಮ ಉಗಾಂಡಾ ಭೇಟಿಯನ್ನು ಪ್ರಧಾನಿ ಪ್ರೀತಿಯಿಂದ ನೆನಪಿಸಿಕೊಂಡರು ಮತ್ತು ಭಾರತ-ಉಗಾಂಡಾ ಸಂಬಂಧಗಳ ವಿಶೇಷತೆಯನ್ನು ತಿಳಿಸಿದರು.

COVID-19 ಸವಾಲನ್ನು ಜಗತ್ತು ಶೀಘ್ರದಲ್ಲೇ ಜಯಿಸುವ ಭರವಸೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು.

***


(Release ID: 1612646) Visitor Counter : 164