ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಬುಡಕಟ್ಟು ಸಂಗ್ರಾಹಕರು ತಮ್ಮ ಕೆಲಸವನ್ನು ಸುರಕ್ಷಿತವಾಗಿ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಸ್ವಸಹಾಯ ಗುಂಪುಗಳಿಗಾಗಿ ಯುನಿಸೆಫ್ ಸಹಯೋಗದೊಂದಿಗೆ ಡಿಜಿಟಲ್ ಅಭಿಯಾನ ಆರಂಭಿಸಲಿರುವ TRIFED
Posted On:
08 APR 2020 7:20PM by PIB Bengaluru
ಬುಡಕಟ್ಟು ಸಂಗ್ರಾಹಕರು ತಮ್ಮ ಕೆಲಸವನ್ನು ಸುರಕ್ಷಿತವಾಗಿ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಸ್ವಸಹಾಯ ಗುಂಪುಗಳಿಗಾಗಿ ಯುನಿಸೆಫ್ ಸಹಯೋಗದೊಂದಿಗೆ ಡಿಜಿಟಲ್ ಅಭಿಯಾನ ಆರಂಭಿಸಲಿರುವ TRIFED
ನಾಳೆ ವೆಬ್ನಾರ್ ಮೂಲಕ ಅಭಿಯಾನದ ಪ್ರಚಾರ
ಬುಡಕಟ್ಟು ಸಂಗ್ರಾಹಕರು ತಮ್ಮ ಕೆಲಸವನ್ನು ಸುರಕ್ಷಿತವಾಗಿ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು, ಮುಖ್ಯವಾಗಿ ಸಾಮಾಜಿಕ ಅಂತರದ ಮಹತ್ವವನ್ನುತಿಳಿಸಲು ಈ ಕಾರ್ಯದಲ್ಲಿ ಭಾಗಿಯಾಗಿರುವ ಸ್ವಸಹಾಯ ಗುಂಪುಗಳಲ್ಲಿ (ಸ್ವಸಹಾಯ ಗುಂಪುಗಳು) ಡಿಜಿಟಲ್ ಅಭಿಯಾನವನ್ನು ಉತ್ತೇಜಿಸಲು TRIFED ಯುನಿಸೆಫ್ ಸಹಯೋಗದೊಂದಿಗೆ ಡಿಜಿಟಲ್ ಸಂವಹನ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಿದೆ. ಯುನಿಸೆಫ್ ಸ್ವಸಹಾಯ ಕೇಂದ್ರಗಳಿಗೆ ಡಿಜಿಟಲ್ ಮಲ್ಟಿಮೀಡಿಯಾ ವಿಷಯ, ವರ್ಚುವಲ್ ತರಬೇತಿಗಳಿಗಾಗಿ ವೆಬ್ನಾರ್ಗಳು (COVID ಬಗ್ಗೆ ಸಾಮಾನ್ಯ ತಿಳುವಳಿಕೆ, ತಡೆಗಟ್ಟುವ ಕ್ರಮಗಳು), ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ವನ್ಯಾ ರೇಡಿಯೋದಲ್ಲಿ (ಸಾಮಾಜಿಕ ಅಂತರ, ಮನೆ ನಿರ್ಬಂಧ ಇತ್ಯಾದಿ) ಪ್ರಸಾರ ಮಾಡಲು ಅಗತ್ಯವಾದ ಬೆಂಬಲವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಬುಡಕಟ್ಟು ಸಮುದಾಯದ ಉಳಿವಿಗಾಗಿ ಹೆಚ್ಚು ಅಗತ್ಯವಾದ ಆಹಾರ ಮತ್ತು ಪಡಿತರವನ್ನು ಒದಗಿಸುವಲ್ಲಿ TRIFED ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ನ #iStandWithHumanity ಉಪಕ್ರಮವನ್ನು ಬುಡಕಟ್ಟು ಕುಟುಂಬಗಳಿಗೆ ತಲುಪಿಸಲಿದೆ.
ಅಭಿಯಾನದ ಪ್ರಚಾರಕ್ಕಾಗಿ ನಾಳೆ ಅಂದರೆ ಏಪ್ರಿಲ್ 9, 2020 ರಂದು ವೆಬ್ನಾರ್ ನಡೆಯಲಿದೆ. ಇದು 18,000 ಕ್ಕೂ ಹೆಚ್ಚು ಭಾಗವಹಿಸುವವರನ್ನು ತಲುಪುವ ಗುರಿಯನ್ನು ಹೊಂದಿದೆ ಮತ್ತು ಎಲ್ಲಾ 27 ರಾಜ್ಯಗಳಲ್ಲಿರುವ ಬುಡಕಟ್ಟು ಪ್ರದೇಶಗಳನ್ನು ಒಳಗೊಂಡಿರುತ್ತದೆ.
ಸುಮಾರು 18,075 ವನಧನ್ ಸ್ವಸಹಾಯ ಗುಂಪುಗಳನ್ನು ಒಳಗೊಂಡ 27 ರಾಜ್ಯಗಳು ಮತ್ತು 1 ಕೇಂದದ್ರಾಡಳಿತ ಪ್ರದೇಶದಲ್ಲಿ ಒಟ್ಟು 1205 ವನಧನ್ ವಿಕಾಸ ಕೇಂದ್ರಗಳನ್ನು (ವಿಡಿವಿಕೆ) ಮಂಜೂರು ಮಾಡಲಾಗಿದೆ. ಇದು 3.6 ಲಕ್ಷಕ್ಕೂ ಹೆಚ್ಚು ಬುಡಕಟ್ಟು ಸಂಗ್ರಾಹಕರನ್ನು ಒಳಗೊಂಡಿದೆ. ಮೊದಲಿಗೆ, ಈ 15,000 ಸ್ವಸಹಾಯ ಗುಂಪುಗಳನ್ನು ಡಿಜಿಟಲ್ ತರಬೇತಿ ಕಾರ್ಯಕ್ರಮದ ಮೂಲಕ ವನಧನ್ ಸಾಮಾಜಿಕ ಅಂತರ ಜಾಗೃತಿ ಮತ್ತು ಜೀವನೋಪಾಯ ಕೇಂದ್ರಗಳಾಗಿ ಬಡ್ತಿ ನೀಡಲಾಗುವುದು. ಸ್ವಸಹಾಯ ಗುಂಪುಗಳು ಸಾಮಾಜಿಕ ಅಂತರ ಮತ್ತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತವೆ. ಕೋವಿಡ್-19 ರ ಸಮಯದಲ್ಲಿ ಎನ್ಟಿಎಫ್ಪಿಗೆ ಸಂಬಂಧಿಸಿದ ಸಲಹೆಗಳು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಅಭ್ಯಾಸಗಳು, ನಗದು ರಹಿತ ಅಭ್ಯಾಸಗಳನ್ನು ಅಳವಡಿಸಿಕೆ ಇತ್ಯಾದಿಗಳನ್ನು ಇವುಗಳೊಂದಿಗೆ ಹಂಚಿಕೊಳ್ಳಲಾಗುವುದು.
***
(Release ID: 1612450)
Visitor Counter : 125
Read this release in:
Urdu
,
Assamese
,
English
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu