ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

COVID-19: ಸ್ಮಾರ್ಟ್ ಸಿಟಿಗಳ ವೈದ್ಯರೊಂದಿಗೆ ನಗರಾಡಳಿತಗಳ ಸಹಯೋಗ

Posted On: 07 APR 2020 1:57PM by PIB Bengaluru

COVID-19: ಸ್ಮಾರ್ಟ್ ಸಿಟಿಗಳ ವೈದ್ಯರೊಂದಿಗೆ ನಗರಾಡಳಿತಗಳ ಸಹಯೋಗ

 

COVID-19 ಶಂಕಿತ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಮತ್ತು ನಗರ ಆಡಳಿತದ ಸಹಯೋಗದ ಪ್ರಯತ್ನಗಳನ್ನು ಸ್ಮಾರ್ಟ್ ಸಿಟಿಗಳು ಖಾತ್ರಿಪಡಿಸುತ್ತಿವೆ. ಸ್ಮಾರ್ಟ್ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ, ನಗರಗಳು heat map ಗಳನ್ನು ಬಳಸಿಕೊಂಡು ಮುನ್ಸೂಚಕ ವಿಶ್ಲೇಷಣೆಯನ್ನು ಅಭಿವೃದ್ಧಿಪಡಿಸುತ್ತಿವೆ ಮತ್ತು ಅನುಮಾನಾಸ್ಪದ ಪ್ರಕರಣಗಳ ಚಲನೆಯನ್ನು ಮೇಲ್ವಿಚಾರಣೆ ಮಾಡುವುದು (ಜಿಯೋ-ಫೆನ್ಸಿಂಗ್ ಬಳಸಿ) ಹಾಗೂ  ಕಾಲಕಾಲಕ್ಕೆ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿವೆ.

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಮುಖ ಕ್ರಮಗಳಲ್ಲಿ ಸಾಮಾಜಿಕ ಅಂತರವೂ ಒಂದಾಗಿದೆ. ಸಮರ್ಥ ಸಂವಹನದ ಮೂಲಕ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಟೆಲಿಮೆಡಿಸಿನ್ ಒಂದು ಪ್ರಮುಖ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸ್ಮಾರ್ಟ್ ಸಿಟಿಗಳು, ನಾಗರಿಕರಿಗೆ ಆನ್ಲೈನ್ ವೈದ್ಯಕೀಯ ಸಮಾಲೋಚನೆ ಸೌಲಭ್ಯಗಳನ್ನು ಒದಗಿಸಲು ನಗರಗಳಲ್ಲಿರುವ ವೈದ್ಯರೊಂದಿಗೆ (ಪ್ರಮಾಣೀಕೃತ ವೈದ್ಯರು ಮತ್ತು ಆರೋಗ್ಯ ತಜ್ಞರು) ಸಹಯೋಗ ಮಾಡಿಕೊಂಡಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಹೆಚ್ಡಬ್ಲ್ಯು) ನೀತಿ ಆಯೋಗ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯ ಸಹಯೋಗದೊಂದಿಗೆ ಹೊರಡಿಸಿರುವ ಮಾರ್ಗಸೂಚಿಗಳು, ಲಾಕ್ಡೌನ್ ಅವಧಿಯಲ್ಲಿ ವೈದ್ಯಕೀಯ ಸೇವೆಗಳನ್ನು ದೂರದಿಂದಲೇ ತಲುಪಿಸಲು ಅನುವು ಮಾಡಿಕೊಡುತ್ತವೆ. ದೂರವಾಣಿ, ಪಠ್ಯ ಅಥವಾ ವೀಡಿಯೊ ಸಂಭಾಷಣೆಗಳನ್ನು - ಚಾಟ್, ಚಿತ್ರಗಳು, ಸಂದೇಶ ಕಳುಹಿಸುವಿಕೆ, ಇಮೇಲ್ಗಳು, ಫ್ಯಾಕ್ಸ್ ಮತ್ತು ಮತ್ತಿತರ- ಆಧರಿಸಿ ಔಷಧಿಗಳನ್ನು ಬರೆಯಲು ಮಾರ್ಗಸೂಚಿಗಳು ವೈದ್ಯರಿಗೆ ಅವಕಾಶ ಮಾಡಿಕೊಡುತ್ತವೆ  ಆದ್ದರಿಂದ ನಾಗರಿಕರು ಮನೆಯಿಂದ ಹೊರಗೆ ಹೋಗಬೇಕಾದ ಅಗತ್ಯವಿಲ್ಲದೆ ಪ್ರಮಾಣೀಕೃತ ವೈದ್ಯರನ್ನು ಸಂಪರ್ಕಿಸಬಹುದು, ಇದು COVID-19 ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಸ್ಮಾರ್ಟ್ ನಗರಗಳ ಕೆಲವು ಪ್ರಮುಖ ಉಪಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.

ಮಧ್ಯಪ್ರದೇಶ:

ಭೋಪಾಲ್ ನಲ್ಲಿ, ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಅನ್ನು ನಾಗರಿಕರಿಗೆ ಸಹಾಯವಾಣಿ ಮತ್ತು ಟೆಲಿ-ಕೌನ್ಸೆಲಿಂಗ್ ಕೇಂದ್ರವಾಗಿ ಬಳಸಲಾಗುತ್ತಿದೆ. ಇದು 104 ರೊಂದಿಗೆ ಸಂಯೋಜಿಸಲ್ಪಟ್ಟಿದೆ, ಐಸಿಸಿಸಿಯ ಟೋಲ್ ಫ್ರೀ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ. ಐಸಿಸಿಸಿಯಲ್ಲಿನ ಸ್ಟೇಷನ್ ಆಪರೇಟರ್ಗಳಿಗೆ ಕರೆಗಳನ್ನು ಸ್ವೀಕರಿಸಲು ತರಬೇತಿ ನೀಡಲಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಸಹಾಯ ಮಾಡಲು ವೈದ್ಯಕೀಯ ಅಧಿಕಾರಿಗಳು ವಿವಿಧ ಪಾಳಿಯಲ್ಲಿ ಐಸಿಸಿಸಿಯಲ್ಲಿರುತ್ತಾರೆ.

ಉಜ್ಜಯಿನಿಯ ಐಸಿಸಿಸಿಯಲ್ಲಿ, ನಾಗರಿಕರಿಂದ ವೀಡಿಯೊ ಕಾನ್ಫರೆನ್ಸಿಂಗ್ / ದೂರವಾಣಿ ಕರೆಗಳನ್ನು ಸ್ವೀಕರಿಸಲು ಮತ್ತು ರೋಗಲಕ್ಷಣಗಳ ಆಧಾರದ ಮೇಲೆ ಸೂಕ್ತ ಸಲಹೆಗಳನ್ನು ನೀಡಲು ಇಬ್ಬರು ವೈದ್ಯರನ್ನು 24 ಗಂಟೆಗಳ ಕಾಲ ಕೇಂದ್ರದಲ್ಲಿ ಇರಿಸಲಾಗಿದೆ. ವೈದ್ಯರ ಸಲಹೆಗಳ ಆಧಾರದ ಮೇಲೆ ಜನರಿಗೆ ಔಷಧಿಗಳನ್ನು ವಿತರಿಸಲು 40 ವೈದ್ಯಕೀಯ ಮೊಬೈಲ್ ಘಟಕಗಳು (ಎಂಎಂಯು) ಕಾರ್ಯನಿರ್ವಹಿಸುತ್ತಿವೆ.

ಜಬಲ್ಪುರದಲ್ಲಿ, ಸ್ಕ್ರೀನಿಂಗ್, ಆಂಬ್ಯುಲೆನ್ಸ್, ಕ್ಯಾರೆಂಟೈನ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಐಸಿಸಿಸಿಯಲ್ಲಿ ಹಾಜರಿರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ವಾರ್ಡ್ ಪ್ರಕಾರ ನಿಯೋಜನೆಗಂಡ ರಾಪಿಡ್ ರೆಸ್ಪಾನ್ಸ್ ಟೀಮ್ (ಆರ್ಆರ್ಟಿ) ಮತ್ತು ಮೊಬೈಲ್ ಆಕ್ಷನ್ ಯುನಿಟ್ (ಎಂಎಯು) ಇರುತ್ತವೆ. ಸಹಾಯವಾಣಿ ಮೂಲಕ ನಾಗರಿಕರಿಗೆ ಯಾವುದೇ ತ್ವರಿತ ವೈದ್ಯಕೀಯ ಸೇವೆ ಒದಗಿಸಲು ವೈದ್ಯಕೀಯ ತಂಡವನ್ನು ಐಸಿಸಿಸಿಯಲ್ಲಿ ಇರಿಸಲಾಗಿದೆ. +917222967605 ಸಂಖ್ಯೆಯ ಮೂಲಕ ವಾಟ್ಸಾಪ್ ವಿಡಿಯೋ ಕರೆ ಮಾಡಬಹುದು. ಟೆಲಿಮೆಡಿಸಿನ್ ಮತ್ತು ನಾಗರಿಕರ ವೀಡಿಯೊ ಸಮಾಲೋಚನೆ ಸೌಲಭ್ಯಗಳು ಜಾರಿಯಲ್ಲಿವೆ. ಎಲ್ಲಾ ಆಪರೇಟರ್ ಗಳಿಗೆ ಕ್ಯಾರೆಂಟೈನ್ ನಲ್ಲಿರುವ ನಾಗರಿಕರು, ಇತ್ತೀಚೆಗೆ ವಿದೇಶದಿಂದ ಬಂದ ಪ್ರಯಾಣಿಕರನ್ನು ಮೇಲ್ವಿಚಾರಣೆ ಮಾಡಲು ಮತ್ತು ಕೋವಿಡ್ -19 ಗೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳನ್ನು ಪರಿಹರಿಸುವ ದೈನಂದಿನ ಕಾರ್ಯಗಳನ್ನು ನೀಡಲಾಗುತ್ತದೆ.

ಗ್ವಾಲಿಯರ್ಐಸಿಸಿಸಿಯಲ್ಲಿ 24X7 ಸಮಾಲೋಚನಾ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ತರಬೇತಿ ಪಡೆದ ವೃತ್ತಿಪರರು ನಾಗರಿಕರು ಕೇಳಿದ ಪ್ರಶ್ನೆಗಳನ್ನು ಆರಂಭಿಕ ಹಂತದಲ್ಲಿ ಪರಿಹರಿಸುತ್ತಾರೆ ಮತ್ತು ಕರೆಗಳನ್ನು ನಂತರ ಗೊತ್ತುಪಡಿಸಿದ ವೈದ್ಯರೊಂದಿಗೆ ಸಂಪರ್ಕಿಸಲಾಗುತ್ತದೆ. ಸಮಾಲೋಚನೆ ಪ್ರಕ್ರಿಯೆಯು ಕರೆ ಮಾಡುವವರಲ್ಲಿ ಭಯವನ್ನು ಕಡಿಮೆ ಮಾಡುತ್ತದೆ. ಅನುಮಾನಾಸ್ಪದ ನಾಗರಿಕರು ವೈದ್ಯರನ್ನು ಸಂಪರ್ಕಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಸತ್ನಾ ಮತ್ತು ಸಾಗರಗಳಲ್ಲಿ, ನಾಗರಿಕರಿಂದ ವೀಡಿಯೊ ಕಾನ್ಫರೆನ್ಸಿಂಗ್ / ದೂರವಾಣಿ ಕರೆಗಳನ್ನು ಸ್ವೀಕರಿಸಲು ಮತ್ತು ರೋಗಲಕ್ಷಣಗಳ ಆಧಾರದ ಮೇಲೆ ಸೂಕ್ತ ಸಲಹೆಗಳನ್ನು ನೀಡಲು ವೈದ್ಯರನ್ನು ಐಸಿಸಿಸಿಯಲ್ಲಿ ಇರಿಸಲಾಗಿದೆ.

ಉತ್ತರ ಪ್ರದೇಶ:

ಕಾನ್ಪುರ್ ಸ್ಮಾರ್ಟ್ ಸಿಟಿಯು ಐಸಿಸಿಸಿಯ ಮೂಲಕ ಆರೋಗ್ಯ ಸೇವೆಗಳ ಬಗ್ಗೆ ನಿಗಾ ವಹಿಸುತ್ತಿದೆ. ನಗರಾಡಳಿತ ಪ್ರಾರಂಭಿಸಿದ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ಟೆಲಿಮೆಡಿಸಿನ್ ನೀಡಲಾಗುತ್ತದೆ. ಸೌಲಭ್ಯವನ್ನು ಪಡೆಯಲು ನಾಗರಿಕರು 8429525801 ಸಂಖ್ಯೆಗೆ ವೀಡಿಯೊ ಕರೆ ಮಾಡಲು ಕೋರಲಾಗಿದೆ. ಅಲೀಗಢದಲ್ಲಿ, ಟೆಲಿಮೆಡಿಸಿನ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ನಾಗರಿಕರಿಗೆ ಮೀಸಲಾದ ವಾಟ್ಸಾಪ್ ಮೂಲಕ ಸಂಖ್ಯೆಯ ಮೂಲಕ ೊದಗಿಸಲು ಐಸಿಸಿಸಿಯಲ್ಲಿ ವೈದ್ಯರನ್ನು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:00 ರವರೆಗೆ ಮತ್ತು ಸಂಜೆ 5:00 ರಿಂದ ರಾತ್ರಿ 8:00 ರವರೆಗೆ ನಿಯೋಜಿಸಲಾಗಿದೆ.

ವಾರಣಾಸಿಯಲ್ಲಿ, ವೈದ್ಯರಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ.

ಮಹಾರಾಷ್ಟ್ರ:

ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಂತಹ ರೋಗಲಕ್ಷಣವಿರುವ ನಾಗರಿಕರ ಅನುಕೂಲಕ್ಕಾಗಿ ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ಕೊರೊನಾವೈರಸ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನಾಗರಿಕರು ಅಪ್ಲಿಕೇಶನ್ನಲ್ಲಿ ತಮ್ಮ ರೋಗಲಕ್ಷಣಗಳ ಬಗ್ಗೆ ಮಾಹಿತಿಯನ್ನು ಭರ್ತಿ ಮಾಡಿ ಅದನ್ನು ಸಲ್ಲಿಸಬೇಕು ಮತ್ತು ಮೊಬೈಲ್ ಅಪ್ಲಿಕೇಶನ್ ಅವರು ಸಂಬಂಧಿತ ರೋಗಲಕ್ಷಣಗಳನ್ನು ಹೊಂದಿದ್ದಾರೆಯೇ ಇಲ್ಲವೇ ಎಂದು ಪತ್ತೆ ಮಾಡುತ್ತದೆ. ರೋಗಲಕ್ಷಣಗಳು ಕಂಡುಬಂದ ಸಂದರ್ಭದಲ್ಲಿ, ಹೆಚ್ಚಿನ ಮೇಲ್ವಿಚಾರಣೆ ಮತ್ತು ಕ್ರಮಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಎನ್ಎಂಸಿ ವೈದ್ಯರ ತಂಡಕ್ಕೆ ತಿಳಿಸುತ್ತದೆ.

ಕರ್ನಾಟಕ:

ಮಂಗಳೂರಿನಲ್ಲಿ, ಸ್ವಯಂ ಕ್ವಾರಂಟೈನ್ ಆಗಿರುವ ನಾಗರಿಕರನ್ನು ಮೇಲ್ವಿಚಾರಣೆ ಮಾಡಲು ಮತ್ತು ಟೆಲಿಮೆಡಿಸಿನ್ ಸಲಹೆ ನೀಡಲು 1077 ಸಹಾಯವಾಣಿ ಸಂಖ್ಯೆ ಹೊಂದಿರುವ ಕಾಲ್ ಸೆಂಟರ್ ಅನ್ನು ಕಾರ್ಯಗತಗೊಳಿಸಲಾಗಿದೆ. ನಾಗರಿಕರಿಂದ ಕರೆಗಳನ್ನು ಸ್ವೀಕರಿಸಲು ಮತ್ತು ಸೂಕ್ತ ಮಾಹಿತಿಯನ್ನು ಒದಗಿಸಲು ಮಂಗಳೂರು ಕಾರ್ಪೊರೇಷನ್, ಪೊಲೀಸ್ ಮತ್ತು ವೈದ್ಯರನ್ನೊಳಗೊಂಡ ವೃತ್ತಿಪರ ತಂಡವು  ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ಸಿಸಿಸಿ) ನಲ್ಲಿ ಲಭ್ಯವಿದೆ.

ತಮಿಳುನಾಡು:

ಚೆನ್ನೈನಲ್ಲಿ, 25 ವೈದ್ಯರು ಐಸಿಸಿಸಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಲಾ 250 ಕ್ವಾರಂಟೈನ್ ವ್ಯಕ್ತಿಗಳಿಗೆ ಮಾರ್ಗದರ್ಶನ ಮತ್ತು ನೈತಿಕ ಹಾಗೂ ಮಾನಸಿಕ ಬೆಂಬಲ ನೀಡಿದ್ದಾರೆ. ಅವರು ಅಗತ್ಯವಾದ ಔಷಧಿಗಳನ್ನು ಸಹ ಸಲಹೆ ಮಾಡುತ್ತಾರೆ. ವೆಲ್ಲೂರಿನಲ್ಲಿ, 118 ಶಂಕಿತರನ್ನು ವೈಯಕ್ತಿಕ ಆರೋಗ್ಯ ತಜ್ಞರೊಂದಿಗೆ ಸಲಹೆಗಾಗಿ ಸಂಪರ್ಕ ಕಲ್ಪಿಸಲಾಗಿದೆ. ಸಂಪರ್ಕ ವಿವರಗಳು ಮತ್ತು ವೈದ್ಯಕೀಯ ಇತಿಹಾಸವನ್ನು ಹಂಚಿಕೊಳ್ಳಲಾಗಿದೆ ಮತ್ತು ಶಂಕಿತರಿಗೆ ಅಗತ್ಯವಾದ ಸಲಹೆಗಳನ್ನು ನೀಡಲಾಗುತ್ತದೆ.

ಗುಜರಾತ್:

ಗಾಂಧಿನಗರದಲ್ಲಿ, ತಜ್ಞ ವೈದ್ಯರ ಆರೋಗ್ಯ ತಂಡವು ಮನೆಯಲ್ಲಯೇ ಕ್ಯಾರೆಂಟೈನ್ ಆಗಿರುವ ಅಥವಾ ಕೊರೊನಾ ಶಂಕಿತರಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತ್ರ ಆರಂಭಿಕ ಕ್ರಮಗಳು / ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತದೆ. ಗಾಂಧಿನಗರದ ಎಲ್ಲಾ ವಲಯಗಳಿಗೆ ಕಿರಾಣಿ ಅಂಗಡಿಗಳ ಸಂಪರ್ಕ ಸಂಖ್ಯೆಗಳನ್ನು ಗಾಂಧಿನಗರ ನಗರಪಾಲಿಕೆಯ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ರಾಜಸ್ಥಾನ:

ಕೋಟಾ ಸ್ಮಾರ್ಟ್ ಸಿಟಿಯು ರಿಮೋಟ್ ಡಿಜಿಟಲ್ ವೈದ್ಯಕೀಯ ಸಮಾಲೋಚನೆ ಸೌಲಭ್ಯವನ್ನು ಒದಗಿಸಿದೆ ಮತ್ತು ಸ್ಥಳೀಯ ವೈದ್ಯಕೀಯ ಮಳಿಗೆಗಳನ್ನು ಇದರೊಂದಿಗೆ ಸಂಪರ್ಕಿಸಿದೆ

ಕೋಲ್ಕತಾ ನವನಗರವು ಸ್ಕೈಪ್ ಬಳಕೆಯ ಮೂಲಕ ಟೆಲಿಮೆಡಿಸಿನ್ ಕೇಂದ್ರದ ಕಾರ್ಯಾಚರಣೆಯನ್ನು ಆರಂಭಿಸಿದೆ.

***



(Release ID: 1612083) Visitor Counter : 263