ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೋವಿಡ್ – 19 ವಿರುದ್ಧ ಹೋರಾಟಕ್ಕೆ ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ “ಸಮಾಧಾನ್” ಸ್ಪರ್ಧೆ ಆರಂಭ

Posted On: 07 APR 2020 5:41PM by PIB Bengaluru

ಕೋವಿಡ್ – 19 ವಿರುದ್ಧ ಹೋರಾಟಕ್ಕೆ ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಮಾಧಾನ್ಸ್ಪರ್ಧೆ ಆರಂಭ

ಸಮಾಧಾನ್ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಏಪ್ರಿಲ್ 2020

 

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆವಿಷ್ಕಾರ ಘಟಕ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಫೋರ್ಜ್ ಮತ್ತು ಇನ್ನೋವೆಶಿಯೋ ಕ್ಯೂರಿಸ್ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಆವಿಷ್ಕಾರ ಸಾಮರ್ಥ್ಯ ಪರೀಕ್ಷಿಸಲು ಸಮಾಧಾನ್ ಎಂಬ ಮೆಗಾ ಆನ್ ಲೈನ್ ಸ್ಪರ್ಧೆಯೊಂದನ್ನು ಆರಂಭಿಸಿದೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಕೊರೊನಾ ವೈರಸ್ ಹರಡುವಿಕೆ ಮತ್ತು ಮುಂತಾದ ವಿಪತ್ತುಗಳಿಗೆ ಸರ್ಕಾರದ ಎಜನ್ಸಿಗಳು, ಆರೋಗ್ಯ ಸೇವೆಗಳು, ಆಸ್ಪತ್ರೆಗಳು ಮತ್ತು ಇತರ ಸಂಸ್ಥೆಗಳು ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಲಭ್ಯವಾಗುವಂತಹ ಕ್ರಮಗಳನ್ನು ಶೋಧಿಸಿ ಅಭಿವೃದ್ಧಿಗೊಳಿಸಬೇಕಿದೆ. ಇದಲ್ಲದೆ, ಸಮಾಧಾನಸ್ಪರ್ಧೆಯಿಂದ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು, ಪ್ರೇರೆಪಿಸುವ ಕೆಲಸ ಮಾಡುವುದು, ಯಾವುದೇ ಸವಾಲನ್ನು ಎದುರಿಸಲು, ಯಾವುದೇ ಸಮಸ್ಯೆಯನ್ನು ತಡೆಗಟ್ಟಲು ಮತ್ತು ಜೀವನೋಪಾಯ ಪಡೆಯಲು ಸಹಾಯ ಮಾಡುವಂತಹ ಕೆಲಸಗಳನ್ನು ಮಾಡಲಾಗುವುದುಸಮಾಧಾನಸ್ಪರ್ಧೆ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊಸ ಪ್ರಯೋಗಗಳನ್ನು ಮಾಡಲು ಮತ್ತು ಆವಿಷ್ಕಾರಗಳನ್ನು ಕೈಗೊಳ್ಳಲು ಪ್ರೇರೆಪಿಸಲಾಗುತ್ತದೆ ಜೊತೆಗೆ ಆವಿಷ್ಕಾರ ಮತ್ತು ಶೋಧನೆಗೆ ಎಡೆಮಾಡಿ ಕೊಡುವಂಥ  ಚೈತನ್ಯ ತುಂಬಲು ಒಂದು ಬಲವಾದ ವೇದಿಕೆಯನ್ನು ಕಲ್ಪಿಸಲಾಗುತ್ತದೆ. ತಾಂತ್ರಕವಾಗಿ ಮತ್ತು ವಾಣಿಜ್ಯಿಕವಾಗಿ ಎಷ್ಟರ ಮಟ್ಟಿಗೆ ಪರಿಹಾರಗಳನ್ನು ಕಂಡುಹಿಡಿಯಬಹುದು ಮತ್ತು ಕೊರೊನಾ ವೈರಾಣುವಿನಂಥ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದು ಸಹಾಯ ಮಾಡಬಲ್ಲದು ಎಂಬುದು ಇದರಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ಪರಿಣಾಮಕಾರಿ ವಿಚಾರಗಳ ಮೇಲೆ ಈ ಕಾರ್ಯಕ್ರಮದ ಯಶಸ್ಸು ಅವಲಂಬಿಸಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಏಪ್ರಿಲ್ 7 2020 ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 14 ಏಪ್ರಿಲ್ 7 2020. ಆಯ್ಕೆ ಮಾಡಲಾದ ಸ್ಪರ್ಧಿಗಳ ಹೆಸರುಗಳನ್ನು 17 ಏಪ್ರಿಲ್ 7 2020 ರಂದು ಪ್ರಕಟಿಸಲಾಗುವುದು ಮತ್ತು ಇಂತಹ ಸ್ಪರ್ಧಿಗಳು ಏಪ್ರಿಲ್ 18 ರಿಂದ 23 ರ ರೊಳಗೆ ತಮ್ಮ ದಾಖಲೆಗಳನ್ನು ಸಲ್ಲಿಸಬೇಕಿದೆ. ಅಂತಿಮ ಪಟ್ಟಿಯನ್ನು 24 ಏಪ್ರಿಲ್  2020 ರಂದು ಬಿಡುಗಡೆ ಮಾಡಲಾಗುವುದು ತದನಂತರ 25 ಏಪ್ರಿಲ್ 2020 ರಂದು ತೀರ್ಪುಗಾರರ ಮಹಾ ಸಮೀತಿ ಆನ್ ಲೈನ್ ಮೂಲಕ ವಿಜೇತರನ್ನು ನಿರ್ಧರಿಸುತ್ತದೆ.

*****



(Release ID: 1612064) Visitor Counter : 232