ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಅಪ್ ಡೇಟ್ಸ್

Posted On: 06 APR 2020 6:08PM by PIB Bengaluru

ಕೋವಿಡ್ – 19 ಅಪ್ ಡೇಟ್ಸ್

ಹೊರಗುತ್ತಿಗೆ ನೀಡಿದ್ದ  ಪಿಪಿಇಗಳು ಭಾರತಕ್ಕೆ ಬಂದಿಳಿಯಲುಆರಂಭಿಸಿದೆ

 

ಚೀನಾದಿಂದ 1.70 ಲಕ್ಷ ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ (ಪಿಪಿಇ) ಕವರಾಲ್‌ಗಳನ್ನು ಭಾರತ ಸರ್ಕಾರಕ್ಕೆ ದೇಣಿಗೆ ನೀಡಿರುವುದನ್ನು ಸ್ವೀಕರಿಸುವ ಮೂಲಕ ವಿದೇಶದ ಸರಬರಾಜು ಮಾರ್ಗಗಳು ಇಂದು ತೆರೆದಿವೆ.  20,000 ಕವರಾಲ್‌ಗಳ ದೇಶೀಯ ಸರಬರಾಜಿನೊಂದಿಗೆ, ಒಟ್ಟು 1.90 ಲಕ್ಷ ಕವರಾಲ್‌ಗಳನ್ನು ಈಗ ಆಸ್ಪತ್ರೆಗಳಿಗೆ ವಿತರಿಸಲಾಗುವುದು ಮತ್ತು ದೇಶದಲ್ಲಿ ಈಗಾಗಲೇ ಲಭ್ಯವಿರುವ 3,87,473 ಪಿಪಿಇಗಳನ್ನು ಸೇರಿಸಲಾಗುವುದು. ಒಟ್ಟು 2.94 ಲಕ್ಷ ಪಿಪಿಇ ಕವರಾಲ್‌ಗಳನ್ನು ಈಗ ಭಾರತ ಸರ್ಕಾರವು ವ್ಯವಸ್ಥೆ ಮಾಡಿ ಪೂರೈಸಿದೆ.

ಇದಲ್ಲದೆ, ದೇಶೀಯವಾಗಿ ಉತ್ಪಾದಿಸುವ 2 ಲಕ್ಷ ಎನ್ 95 ಮುಖಗವಸುಗಳನ್ನು ಸಹ ವಿವಿಧ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.  ಇವುಗಳನ್ನು ಒಳಗೊಂಡಂತೆ ಭಾರತ ಸರ್ಕಾರವು 20 ಲಕ್ಷಕ್ಕೂ ಹೆಚ್ಚು ಎನ್ 95 ಮುಖಗವಸುಗಳನ್ನು ಸರಬರಾಜು ಮಾಡಿದೆ.  ದೇಶದಲ್ಲಿ ಪ್ರಸ್ತುತ ಸುಮಾರು 16 ಲಕ್ಷ ಎನ್ 95 ಮುಖಗವಸುಗಳು ಲಭ್ಯವಿದ್ದು,  2 ಲಕ್ಷ ಮುಖಗವಸುಗಳ ಹೊಸ ಪೂರೈಕೆಯೊಂದಿಗೆ ಈ ಅಂಕಿ ಅಂಶ ಹೆಚ್ಚಾಗುತ್ತದೆ.

ಹೊಸ ಸರಬರಾಜಿನ ಹೆಚ್ಚಿನ ಭಾಗಗಳನ್ನು ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನಗಳಂತಹ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿರುವ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ.  ಕೇಂದ್ರ ಸಂಸ್ಥೆಗಳಾದ ಏಮ್ಸ್, ಸಫ್ದರ್ ಜಂಗ್ ಮತ್ತು ಆರ್‌ಎಂಎಲ್ ಆಸ್ಪತ್ರೆಗಳು, ಆರ್ ಐ ಎಮ್ ಎಸ್, ಎನ್ ಇ ಐ ಜಿ ಆರ್ ಐಹೆಚ್‌ಎಂಎಸ್, ಬಿಎಚ್‌ಯು ಮತ್ತು ಎಎಂಯುಗಳಿಗೆ ಕಳುಹಿಸಲಾಗುತ್ತಿದೆ.

ಕೋವಿಡ್-19 ವಿರುದ್ಧದ ಯುದ್ಧಕ್ಕಾಗಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಸಂಗ್ರಹಿಸುವ ನಮ್ಮ ಪ್ರಯತ್ನಗಳಲ್ಲಿ ವಿದೇಶಿ ಸರಬರಾಜುಗಳ ಪ್ರಾರಂಭವು ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಮೊದಲು ಸಿಂಗಾಪುರ ಮೂಲದ ವಾಣಿಜ್ಯ ವೇದಿಕೆಯಲ್ಲಿ  80 ಲಕ್ಷ ಸಂಪೂರ್ಣ ಪಿಪಿಇ ಕಿಟ್‌ಗಳಿಗೆ (ಎನ್ 95 ಮುಖಗವಸುಗಳನ್ನು ಒಳಗೊಂಡಂತೆ) ಆದೇಶವನ್ನು ನೀಡಲಾಗಿತ್ತು ಮತ್ತು ಈಗ 2020 ರ ಏಪ್ರಿಲ್ 11 ರಿಂದ 2 ಲಕ್ಷದೊಂದಿಗೆ ಪ್ರಾರಂಭವಾಗಲಿದೆ ಮತ್ತು ನಂತರ ಒಂದು ವಾರದಲ್ಲಿ 8 ಲಕ್ಷ ಹೆಚ್ಚು ಸರಬರಾಜಾಗಲಿದೆ ಎಂದು ಸೂಚಿಸಲಾಗಿದೆ,.  60 ಲಕ್ಷ ಸಂಪೂರ್ಣ ಪಿಪಿಇ ಕಿಟ್‌ಗಳ ಆದೇಶವನ್ನು ನೀಡಲು ಚೀನಾದ ವಾಣಿಜ್ಯ ವೇದಿಕೆಯೊಂದಿಗೆ ಮಾತುಕತೆಗಳು ಅಂತಿಮ ಹಂತದಲ್ಲಿವೆ, ಇದರಲ್ಲಿ ಎನ್ 95 ಮುಖಗವಸುಗಳೂ ಸೇರಿವೆ. ಕೆಲವು ವಿದೇಶಿ ಕಂಪನಿಗಳ ಮೇಲೆ ಎನ್ 95 ಮುಖಗವಸುಗಳು ಮತ್ತು ರಕ್ಷಣಾತ್ಮಕ ಕನ್ನಡಕಗಳಿಗೆ ಪ್ರತ್ಯೇಕ ಆದೇಶಗಳನ್ನು ಇಡಲಾಗುತ್ತಿದೆ.

ದೇಶೀಯ ಕಂಪನಿಗಳಿಗೆ ಮತ್ತಷ್ಟು ಉತ್ತೇಜನ ನೀಡಲು, ಉತ್ತರ ರೈಲ್ವೆಯು  ಪಿಪಿಇ ಕವರಾಲ್ ಅನ್ನು ಅಭಿವೃದ್ಧಿಪಡಿಸಿದೆ.  ಇದು ಮೊದಲು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಪಿಪಿಇ ಕವರಾಲ್‌ಗಳು ಮತ್ತು ಎನ್ 99 ಮುಖಗವಸುಗಳಿಗೆ ಹೆಚ್ಚುವರಿಯಾಗಿರುತ್ತದೆ. ಈ ಉತ್ಪನ್ನಗಳ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಲು ಈಗ ಪ್ರಯತ್ನಗಳು ನಡೆಯುತ್ತಿವೆ. ಅಸ್ತಿತ್ವದಲ್ಲಿರುವ ಎನ್ 95 ಮುಖಗವಸು ಉತ್ಪಾದಕರು ತಮ್ಮ ಸಾಮರ್ಥ್ಯವನ್ನು ದಿನಕ್ಕೆ ಸುಮಾರು 80,000 ಮುಖಗವಸುಗಳಿಗೆ ಹೆಚ್ಚಿಸಿದ್ದಾರೆ.

112.76 ಲಕ್ಷ ಎನ್ 95 ಮುಖವಾಡಗಳು ಮತ್ತು 157.32 ಲಕ್ಷ ಪಿಪಿಇ ಕವರಲ್‌ಗಳಿಗೆ ಆದೇಶ ಕೊಡಲಾಗಿದೆ.  ಈ ಪೈಕಿ 80 ಲಕ್ಷ ಪಿಪಿಇ ಕಿಟ್‌ಗಳಲ್ಲಿ ಎನ್ 95 ಮುಖಗವಸುಗಳು ಸೇರಿವೆ. ವಾರಕ್ಕೆ ಸುಮಾರು 10 ಲಕ್ಷ ಪಿಪಿಇ ಕಿಟ್‌ಗಳ ಪೂರೈಕೆಯನ್ನು ಸಾಧಿಸುವುದು ಇದರ ಉದ್ದೇಶ.  ದೇಶದ ರೋಗಿಗಳ ಸಂಖ್ಯೆಯನ್ನು ನೋಡಿದರೆ, ಈ ಕ್ಷಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ವಾರದಲ್ಲಿ ಹೆಚ್ಚಿನ ಸರಬರಾಜುನ್ನು ನಿರೀಕ್ಷಿಸಲಾಗಿದೆ.

***



(Release ID: 1611911) Visitor Counter : 239