ಇಂಧನ ಸಚಿವಾಲಯ

ವಿದ್ಯುತ್ ದೀಪಗಳನ್ನು ಆರಿಸಲು ಪ್ರಧಾನಿ ಅವರು ನೀಡಿದ ಕರೆಗೆ “ಬೃಹತ್ ಪ್ರತಿಕ್ರಿಯೆ” ಲಭಿಸಿದೆ: ಕೇಂದ್ರ ಇಂಧನ ಸಚಿವರು

Posted On: 06 APR 2020 6:15PM by PIB Bengaluru

ವಿದ್ಯುತ್ ದೀಪಗಳನ್ನು ಆರಿಸಲು ಪ್ರಧಾನಿ ಅವರು ನೀಡಿದ ಕರೆಗೆ “ಬೃಹತ್ ಪ್ರತಿಕ್ರಿಯೆ” ಲಭಿಸಿದೆ: ಕೇಂದ್ರ ಇಂಧನ ಸಚಿವರು

 

ಕೊವಿಡ್ – 19 ವಿರುದ್ಧ ರಾಷ್ಟ್ರೀಯ ಐಕ್ಯತೆಯನ್ನು ತೋರಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯುತ್ ದೀಪಗಳನ್ನು ಆರಿಸಿ ಹಣತೆಗಳನ್ನು ಬೆಳಗಲು ನೀಡಿದ ಕರೆಗೆ ಅಪಾರವಾದ ಪ್ರತಿಕ್ರಿಯೆ ಲಭಿಸಿದೆ ಎಂದು, 5-4-2020 ರಂದು ಸ್ವತಃ ಪವರ್ ಗ್ರಿಡ್ ನ ಮೇಲ್ವಿಚಾರಣೆ ಮಾಡುತ್ತಿದ್ದ ಕೇಂದ್ರ ಇಂಧನ ಸಚಿವರಾದ ಶ್ರೀ ಆರ್. ಕೆ. ಸಿಂಗ್  ನಿನ್ನೆ ತಡರಾತ್ರಿ ತಿಳಿಸಿದರು. ಈ ಕಾರ್ಯಕ್ರಮದ ವೇಳೆ ರಾಷ್ಟ್ರೀಯ ವಿದ್ಯುತ್ ನಿರ್ವಹಣಾ ಕೇಂದ್ರದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಶ್ರೀ ಆರ್. ಕೆ. ಸಿಂಗ್ ಕಾರ್ಯನಿರತರಾಗಿದ್ದರೆ, ಅವರ ಕುಟುಂಬದ ಸದಸ್ಯರೆಲ್ಲರೂ ಒಗ್ಗೂಡಿ ಆ ವೇಳೆಯಲ್ಲಿ ಸರ್ವರಿಗೂ ಭರವಸೆ ಮತ್ತು ಸಕಾರಾತ್ಮಕತೆ ದೊರಕಿಸುವ  ‘ಜ್ಯೋತಿಗಳನ್ನು’ ಬೆಳಗುತ್ತಿದ್ದರು.

117300 ಮೆಗಾವ್ಯಾಟ್ ಗಳಲ್ಲಿದ್ದ ಬೇಡಿಕೆ 08 ಗಂಟೆ 49 ನಿಮಿಷಗಳಿಂದ 09 ಗಂಟೆ 09 ನಿಮಿಷಗಳವರೆಗೆ 85300 ಮೆಗಾವ್ಯಾಟ್ ಗಳಿಗೆ ಇಳಿದಿತ್ತು; ಅಂದರೆ ಕೆಲವೇ ನಿಮಿಷಗಳಲ್ಲಿ 32000 ಮೆಗಾವ್ಯಾಟ್ ಕಡಿತವಾಗಿತ್ತು. ನಂತರ ಬೇಡಿಕೆ ಮತ್ತೆ ಹೆಚ್ಚಲಾರಂಭಿಸಿತು. ಆವರ್ತನ ಮತ್ತು ವೋಲ್ಟೇಜನ್ನು 49.7 ರಿಂದ 50.26 ಹರ್ಟ್ಜ್ ನ ಸಾಮಾನ್ಯ ಬ್ಯಾಂಡ್ ನಲ್ಲಿ ನಿರ್ವಹಿಸಲಾಗಿತ್ತು ಅಂದರೆ ವೊಲ್ಟೇಜನ್ನು ಸ್ಥಿರವಾಗಿಡಲಾಯಿತು. 32000 ಮೆಗಾವ್ಯಾಟ್ ಗಳ ರಾಷ್ಟ್ರೀಯ ಬೇಡಿಕೆಯಲ್ಲಿನ ಕುಸಿತವು, ಪ್ರಧಾನ ಮಂತ್ರಿ ಅವರ ಕರೆಗೆ ನಮ್ಮ ದೇಶ ನೀಡಿದ ಅಭೂತಪೂರ್ವ ಪ್ರತಿಕ್ರಯೆಯನ್ನು ತೋರುತ್ತದೆ ಎಂದು ಸಚಿವರು ತಮ್ಮ ಟ್ವೀಟ್ ವೊಂದರಲ್ಲಿ ತಿಳಿಸಿದ್ದಾರೆ.

ವಿದ್ಯುತ್ ದೀಪ ಆರಿಸುವ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಒಂದು ತಂಡದಂತೆ ಕಾರ್ಯನಿರ್ವಹಿಸಿದ ರಾಷ್ಟ್ರವನ್ನು ಮತ್ತು ರಾಷ್ಟ್ರೀಯ ವಿದ್ಯುತ್ ವ್ಯವಸ್ಥೆಯನ್ನು ಶ್ರೀ ಸಿಂಗ್ ಅಭಿನಂದಿಸಿದರು. ಪ್ರಧಾನ ಮಂತ್ರಿಗಳ ಕರೆಗೆ, ರಾತ್ರಿ 9 ಗಂಟೆ 9 ನಿಮಿಷಗಳಿಗೆ ಯಶಸ್ವಿಯಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಕ್ಕೆ ಅವರು ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ರಾಷ್ಟ್ರಿಯ ಗ್ರಿಡ್ ಮ್ಯಾನೇಜರ್ ಪೊಸೊಕೊ, ಪವರ್ ಜೆನಕೊಸ್ ಎನ್ ಟಿ ಪಿ ಸಿ, ಎನ್ ಎಚ್ ಪಿ ಸಿ, ಟಿ ಎಚ್ ಡಿ ಸಿ, ಎನ್ ಇ ಇ ಪಿ ಸಿ ಒ, ಎಸ್ ಜೆ ವಿ ಎನ್ ಎಲ್, ಬಿ ಬಿ ಎಮ್ ಬಿ ಮತ್ತು ಪಿ ಜಿ ಸಿ ಯ ಎಲ್ ನ ಅಧಿಕಾರಿಗಳು ಮತ್ತು ರಾಜ್ಯ ವಿದ್ಯುತ್ ಶಕ್ತಿ ಇಲಾಖೆಗಳ ಎಲ್ಲ ಇಂಜಿನಿಯರ್ ಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಿದ್ದಕ್ಕೆ, ಅವರು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

“ದೇಶದಲ್ಲಿನ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಮತ್ತು ಇಡೀ ರಾಷ್ಟ್ರ ಪ್ರಧಾನ ಮಂತ್ರಿಯವರೊಂದಿಗಿದೆ. ಭಾರತ ಒಗ್ಗಟ್ಟಿನಿಂದ ಪ್ರಧಾನ ಮಂತ್ರಿಯವರೊಂದಿಗೆ ನಿಂತಿದೆ” ಎಂದು ಅವರು ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

***



(Release ID: 1611841) Visitor Counter : 236