ಗೃಹ ವ್ಯವಹಾರಗಳ ಸಚಿವಾಲಯ

ದೇಶಾದ್ಯಂತ ಅಡಚಣೆಯಿಲ್ಲದೆ ವೈದ್ಯಕೀಯ ಆಮ್ಲಜನಕ ಸರಬರಾಜು ಮಾಡುವಲ್ಲಿ ವಿಶೇಷ ಗಮನಹರಿಸಬೇಕೆಂದು ರಾಜ್ಯಗಳಿಗೆ ಗೃಹ ಸಚಿವಾಲಯ ತಿಳಿಸಿದೆ

Posted On: 06 APR 2020 5:47PM by PIB Bengaluru

ದೇಶಾದ್ಯಂತ ಅಡಚಣೆಯಿಲ್ಲದೆ ವೈದ್ಯಕೀಯ ಆಮ್ಲಜನಕ ಸರಬರಾಜು ಮಾಡುವಲ್ಲಿ ವಿಶೇಷ ಗಮನಹರಿಸಬೇಕೆಂದು ರಾಜ್ಯಗಳಿಗೆ ಗೃಹ ಸಚಿವಾಲಯ ತಿಳಿಸಿದೆ

 

ದೇಶದಲ್ಲಿ ಅವಶ್ಯಕ ವಸ್ತುಗಳ ಅಡೆತಡೆರಹಿತ ಸರಬರಾಜನ್ನು ನಿರ್ವಹಿಸುವ ಅಂಗವಾಗಿ ವೈದ್ಯಕೀಯ ಆಮ್ಲಜನಕವನ್ನು ಯಾವುದೇ ಅಡಚಣೆಯಿಲ್ಲದೆ ಸರಬರಾಜು ಮಾಡುವುದರತ್ತ ವಿಶೇಷ ಗಮನಹರಿಸಬೇಕೆಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಗೃಹ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ತಿಳಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ದೇಶದಲ್ಲಿ ಸಾಕಷ್ಟು ಪ್ರಮಾಣದ ವೈದ್ಯಕೀಯ ಆಮ್ಲಜನಕ ಸರಬರಾಜಿನ ನಿರ್ವಹಣೆ ಅವಶ್ಯಕವಾಗಿರುವುದರಿಂದ ಮತ್ತು ವೈದ್ಯಕೀಯ ಆಮ್ಲಜನಕವನ್ನು ರಾಷ್ಟ್ರೀಯ ಪಟ್ಟಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅವಶ್ಯಕ ಔಷಧಿಗಳ ಪಟ್ಟಿಗೆ ಸೇರಿಸಿರುವುದರಿಂದ ಇದಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

24.03.2020 ರಂದು ದೇಶದಲ್ಲಿ ಕೋವಿಡ್ – 19 ಹರಡುವಿಕೆ ನಿಯಂತ್ರಣಕ್ಕೆ ಸಚಿವಾಲಯಗಳು/ಭಾರತ ಸರ್ಕಾರದ ಇಲಾಖೆಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ತೆಗೆದುಕೊಳ್ಳಬೇಕಾದ ಲಾಕ್ ಡೌನ್ ಕ್ರಮಗಳ ಕುರಿತು ಕೇಂದ್ರ ಗೃಹ ಸಚಿವಾಲಯ ಸಮಗ್ರ ಮಾರ್ಗಸೂಚಿಗಳನ್ನು ನೀಡಿದೆ  ಹಾಗೂ ಮುಂದೆ 25.03.2020, 26.03.2020, 02.04.2020 ಮತ್ತು 03.04.2020 ರಂದು ಬದಲಾವಣೆ ಮಾಡಿದೆ.

ವೈದ್ಯಕೀಯ ಪರಿಕರಗಳ ಉತ್ಪಾದನಾ ಘಟಕ, ಅವುಗಳ ಕಚ್ಚಾ ವಸ್ತುಗಳು ಮತ್ತು ಸರಬರಾಜುದಾರರು ; ಅವುಗಳ ಪ್ಯಾಕಿಂಗ್ ವಸ್ತುಗಳ ಉತ್ಪಾದನಾ ಘಟಕಗಳು ; ಅಗತ್ಯ ವಸ್ತುಗಳ ಸಾಗಾಟ ಮತ್ತು ವೈದ್ಯಕೀಯ ಸರಬರಾಜು ಹಾಗೂ ಸಂಪನ್ಮೂಲಗಳ ಕ್ರೋಢಿಕರಣ, ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ ಮತ್ತು ವಿಸ್ತರಣೆಗೆ ಕೆಲಸಗಾರರು ಮತ್ತು ವಸ್ತುಗಳು  ಇವೆಲ್ಲವುಗಳಿಗೆ ಸಮಗ್ರ ಮಾರ್ಗಸೂಚಿಗಳಲ್ಲಿ ಅನುಮತಿ ನೀಡಲಾಗಿದೆ. ಇದಲ್ಲದೆ 3 ಏಪ್ರಿಲ್ 2020 ರಂದು ಎಲ್ಲ ರಾಜ್ಯಗಳೊಂದಿಗೆ ಮಾತನಾಡಿ, ನೌಕರರ ಅಂತರ್ ರಾಜ್ಯ ಸಂಚಾರ ಒಳಗೊಂಡಂತೆ ವಿನಾಯಿತಿ ಪಟೆದ ವಸ್ತುಗಳ ಪೂರೈಕೆ ಸರಪಳಿ ಸುಗಮ ಕಾರ್ಯನಿರ್ವಹಣೆಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಾಕ್ ಡೌನ್ ಕ್ರಮಗಳ ಬಗ್ಗೆ ಏಕೀಕೃತ ಮಾರ್ಗಸೂಚಿಗಳ ವಿವಿಧ ಷರತ್ತುಗಳ ಅಡಿಯಲ್ಲಿ ನೀಡಲಾದ ವಿನಾಯಿತಿಗಳನ್ನು ಪುನರುಚ್ಛರಿಸಿದ್ದಾರೆ ಮತ್ತು ಸ್ಪಷ್ಟಪಡಿಸಿದ್ದಾರೆ. ಅವು ಹೀಗಿವೆ:

  • ಎಲ್ಲ ಅನಿಲ/ದ್ರವ  ರೂಪದ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು, ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಗಳು, ದ್ರವ ರೂಪದ ಆಮ್ಲಜನಕ ಶೇಖರಣೆಗೆ ಕ್ರಯೋಜೆನಿಕ್ ಟ್ಯಾಂಕ್ ಗಳು, ದ್ರವ  ರೂಪದ ಕ್ರಯೋಜೆನಿಕ್ ಸಿಲಿಂಡರ್ ಗಳು, ದ್ರವ ರೂಪದ ಆಮ್ಲಜನಕ ಕ್ರಯೋಜೆನಿಕ್ ಸಾಗಣೆ ಟ್ಯಾಂಕ್ ಗಳು, ಆಂಬಿಯೆಂಟ್ ವೆಪೊರೈಸರ್ ಗಳು ಮತ್ತು ಕ್ರಯೋಜೆನಿಕ್ ವಾಲ್ವ್ ಗಳು, ಸಿಲಿಂಡರ್ ವಾಲ್ವ್ ಗಳು ಮತ್ತು ಉಪಸಾಧನಗಳು ;
  • ಮೇಲಿನ ವಸ್ತುಗಳ ಸಾಗಣೆ
  • ಮೇಲಿನ ವಸ್ತುಗಳ ಅಂತಾರಾಜ್ಯ ರವಾನೆ
  •  ಕಾರ್ಖಾನೆಗಳು ಸಂಪೂರ್ಣ ಸ್ಥಾಪಿತ ಸಾಮರ್ಥ್ಯದಿಂದ ಕೆಲಸ ಮಾಡಬೇಕು ಎಂಬುದನ್ನು ಖಚಿತಪಡಿಸಲು ಮೇಲೆ ಹೆಸರಿಸಲಾದ ಉತ್ಪಾದನಾ ಘಟಕಗಳ ಕೆಲಸಗಾರರು ಮತ್ತು ಅವರ ಸಂಚಾರವನ್ನು ಅನುಮತಿಸಬೇಕು/ಅವರ ಮನೆಯಿಂದ ಕಾರ್ಖಾನೆವರೆಗೆ ಪ್ರಯಾಣಿಸಲು ಮತ್ತು ಹಿಂದಿರುಗಲು ಪಾಸ್ ಗಳನ್ನು ನೀಡಬೇಕು

ಲಾಕ್ ಡೌನ್ ಕ್ರಮಗಳಲ್ಲಿ ತಿಳಿಸಿದಂತೆ, ಮೇಲ್ಕಂಡ ಎಲ್ಲ ಚಟುವಟಿಕೆಗಳಲ್ಲೂ ಸೂಕ್ತ ಶುಭ್ರತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಭ್ಯಾಸಗಳನ್ನು ಖಚಿತಪಡಿಸುವ ಕುರಿತು ಈ ಸಂವಹನ ಒತ್ತು ನೀಡುತ್ತದೆ. ಇಂತಹ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸುವುದು ಆಯಾ ಸಂಸ್ಥೆಯ/ವ್ಯವಸ್ಥೆಯ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾ ಅಧಿಕಾರಿಗಳಿಗೆ ಖಂಡಿತವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಮೇಲ್ಕಂಡ ಕಠಿಣ ಕ್ರಮಗಳನ್ನು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಆಮ್ಲಜನಕ ಸರಬರಾಜಿನಲ್ಲಿ ಪಾಲಿಸುವುದನ್ನು ಜಿಲ್ಲಾ ಅಧಿಕಾರಿಗಳು ಫೀಲ್ಡ್ ಏಜನ್ಸಿಗಳಿಗೆ ಕಡ್ಡಾಯವಾಗಿ ತಿಳಿಸುವಂತೆ ಆದೇಶಿಸಲಾಗಿದೆ.      

 

*****

 (Release ID: 1611836) Visitor Counter : 207