ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಪತ್ತೆಗೆ ಡಿ ಎಸ್ ಟಿ ಬೆಂಬಲಿತ ಆರೋಗ್ಯ ರಕ್ಷಣಾ ನವೋದ್ಯಮದಿಂದ ಕ್ಷಿಪ್ರ ಪರೀಕ್ಷೆ ಅಭಿವೃದ್ಧಿ

Posted On: 06 APR 2020 3:21PM by PIB Bengaluru

ಕೋವಿಡ್-19 ಪತ್ತೆಗೆ ಡಿ ಎಸ್ ಟಿ ಬೆಂಬಲಿತ ಆರೋಗ್ಯ ರಕ್ಷಣಾ ನವೋದ್ಯಮದಿಂದ ಕ್ಷಿಪ್ರ ಪರೀಕ್ಷೆ ಅಭಿವೃದ್ಧಿ

 

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆರ್ಥಿಕ ನೆರವು ಪಡೆದಿರುವ ಪುಣೆ ಮೂಲದ ಆರೋಗ್ಯ ರಕ್ಷಣಾ ನವೋದ್ಯಮ “ಮಾಡಲ್ ಇನ್ನೋವೇಶನ್ಸ್” ಕೋವಿಡ್-19 ರೋಗವನ್ನು ಕೇವಲ 10 ರಿಂದ 15 ನಿಮಿಷಗಳ ಪರೀಕ್ಷೆಯಲ್ಲಿ ಪತ್ತೆಹಚ್ಚಬಹುದಾದಂತಹ ತಂತ್ರಜ್ಞಾನ ಆಧಾರಿತ ಕ್ಷಿಪ್ರರೋಗ ಪತ್ತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

ತನ್ನ ಮಹತ್ವದ ಯುಸೆನ್ಸ್ ಉತ್ಪನ್ನದಿಂದ ಈಗಾಲೇ ಸಾಬೀತಾಗಿರುವ ಪರಿಕಲ್ಪನೆಯ ಮಾದರಿ ಆಧರಿಸಿ ಇದೀಗ ಎನ್ ಸಿಒವಿಎಸ್ಇಎನ್ಎಸ್ಇಎಸ್(ಟಿಎಂ) ಅಭಿವೃದ್ಧಿಗೊಳಿಸಿತ್ತಿದ್ದು, ಇದು ಕ್ಷಿಪ್ರ ಪರೀಕ್ಷಾ ಉಪಕರಣವಾಗಿದ್ದು, ಅದು ಮಾನವದ ದೇಹದಲ್ಲಿ ಕೋವಿಡ್-19 ವಿರುದ್ಧ ಸೃಷ್ಟಿಯಾಗುವ ಪ್ರತಿಕಾಯಗಳನ್ನು ಪತ್ತೆ ಹಚ್ಚುತ್ತದೆ.

ಭಾರತದ ಪ್ರಸಕ್ತ ಸನ್ನಿವೇಶದಲ್ಲಿ ಸಾಮೂಹಿಕ ಪರೀಕ್ಷೆ ಅತ್ಯಂತ ತುರ್ತು ಪ್ರಾಮುಖ್ಯತೆ ಹೊಂದಿದೆ. ಈ ಕ್ಷಿಪ್ರ ಪರೀಕ್ಷಾ ಉಪಕರಣದಿಂದ ಸೋಂಕಿತ ರೋಗಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಅಲ್ಲದೆ ಸೋಂಕಿತ ರೋಗಿ ಗುಣಮುಖರಾಗಿದ್ದಾರೆಯೇ ಮತ್ತು ಸೋಂಕಿತ ರೋಗಿ ಯಾವ ಹಂತದಲ್ಲಿದ್ದಾರೆ ಎಂದುದನ್ನು ಪತ್ತೆಹಚ್ಚಬಹುದಾಗಿದೆ.

ಪ್ರಸಕ್ತ ರಿಯಲ್ - ಟೈಮ್ ರಿವರ್ಸ್ ಟ್ರಾನ್ಸ್ ಕ್ರಿಪ್ಶನ್ ಪಾಲಿಮರ್ಸೆ ಚೈನ್ ರಿಯಾಕ್ಷನ್(ಆರ್ ಟಿ – ಪಿಸಿಆರ್) ಮೂಲಕ ಪ್ರಕರಣಗಳನ್ನು ಖಚಿತಪಡಿಸಲಾಗುತ್ತಿದ್ದು, ಇದರ ಮಾನದಂಡಗಳು ದುಬಾರಿ, ಹೆಚ್ಚಿನ ಸಮಯಾವಕಾಶ ಬೇಕು ಮತ್ತು ತರಬೇತಿ ಹೊಂದಿದ ಮಾನವ ಸಂಪನ್ಮೂಲ ಅಗತ್ಯವಿದೆ. ಈ ಹೊಸ ಕ್ಷಿಪ್ರ ಪರೀಕ್ಷೆ ಉಪಕರಣ ಸಮಸ್ಯೆಯನ್ನು ಕಡಿಮೆ ವೆಚ್ಚದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

“ಪಿಸಿಆರ್ ಆಧಾರಿತ ಸೋಂಕಿತ ಪ್ರಕರಣಗಳ ದೃಢಪಡಿಸುವ ವ್ಯವಸ್ಥೆಗೆ ಇದು ಪೂರಕವಲ್ಲ, ಆದರೆ ಪ್ರತಿಕಾಯಗಳನ್ನು ಆಧರಿಸಿ ನಡೆಸುವ ಪರೀಕ್ಷೆಗಳನ್ನು ಕ್ಷಿಪ್ರವಾಗಿ, ಸಾಮೂಹಿಕವಾಗಿ ಮಾಡಬಹುದಾಗಿದೆ. ಇದರಿಂದ ಸೀಮಿತ ಸಂಖ್ಯೆಯಲ್ಲಿರುವ ಪಿಸಿಆರ್ ಯಂತ್ರಗಳ ಮೇಲಿನ ಅವಲಂಬನೆ ತಗ್ಗುತ್ತದೆ. ಅಲ್ಲದೆ ಕಾರ್ಯತಂತ್ರ ವಿಧಾನ ಮತ್ತು ನಿರ್ಧಾರ ಕೈಗೊಳ್ಳುವ ಅಂಶಗಳಿಗೆ ಇದು ನೆರವಾಗಲಿದೆ” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ|| ಅಶುತೋಷ್ ಶರ್ಮ ಹೇಳಿದ್ದಾರೆ.

ncovsense

ಎನ್ ಸಿಒವಿಎಸ್ಇಎನ್ಎಸ್ಇಎಸ್ ಈ ಪರೀಕ್ಷೆಯನ್ನು ಸೋಂಕು ತಗುಲಿದ ನಂತರ ಮಾನವನ ದೇಹದಲ್ಲಿ ಸೃಷ್ಟಿಯಾಗುವ ಐಜಿಎಂ ಪ್ರತಿಕಾಯಗಳನ್ನು ಪತ್ತೆಹಚ್ಚಲು ಗುರಿಯಾಗಿ ಇಟ್ಟುಕೊಳ್ಳಲಾಗಿದೆ ಮತ್ತು ಕೋವಿಡ್-19 ವಿರುದ್ಧ ನಿರ್ದಿಷ್ಟವಾಗಿ ಸ್ಪೈಕ್ ಪ್ರೋಟೀನ್ಸ್ ಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ.

ರಾಷ್ಟ್ರೀಕೃತ ಏಜೆನ್ಸಿಗಳ ಪ್ರಮಾಣೀಕರಣದ ನಂತರ 2-3 ತಿಂಗಳಲ್ಲಿ ಪರೀಕ್ಷೆಯನ್ನು ನಡೆಸಲು ನವೋದ್ಯಮ ಯೋಜನೆ ರೂಪಿಸಿದೆ. ಇದು ಭವಿಷ್ಯದಲ್ಲಿ ಚೇತರಿಸಿಕೊಂಡ ಹಾಗೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ಸಿಬ್ಬಂದಿಗೆ ನೆರವಾಗಲಿದೆ. ಅಲ್ಲದೆ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ ಮತ್ತಿತರ ಕಡೆ ರೋಗಿಗಳು ಮತ್ತು ಪ್ರಯಾಣಿಕರ ತಪಾಸಣೆಗೂ ಈ ಪರೀಕ್ಷೆಯನ್ನು ಬಳಕೆ ಮಾಡಬಹುದಾಗಿದೆ ಮತ್ತು ಭವಿಷ್ಯದಲ್ಲಿ ಮತ್ತೆ ಸೋಂಕು ಹರಡದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ.

ಈ ತಂತ್ರಜ್ಞಾನದ ಸಂಭವನೀಯತೆ ಈಗಾಗಲೇ ಸಾಬೀತಾಗಿದೆ. ಪ್ರೂಫ್ ಆಫ್ ಕಾನ್ಸೆಪ್ಟ್ ಮತ್ತು ಉಪಕರಣದ ಪ್ರೊಟೊಟೈಪ್ ಪ್ರಾತ್ಯಕ್ಷಿಕೆ ಇನ್ನು ಪ್ರದರ್ಶನಗೊಳ್ಳಬೇಕಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಸಚಿನ್ ದುಬೆ

sachin@moduleinnovations.com

7350840295

*****

 



(Release ID: 1611835) Visitor Counter : 120