ಪರಿಸರ ಮತ್ತು ಅರಣ್ಯ ಸಚಿವಾಲಯ

ನ್ಯೂಯಾರ್ಕ್ ನಲ್ಲಿ ಹುಲಿಗೆ COVID-19 ಪಾಸಿಟಿವ್ ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು ಭಾರತದ ಪ್ರಾಣಿಸಂಗ್ರಹಾಲಯಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು  ಕೇಂದ್ರ ಮೃಗಾಲಯ ಪ್ರಾಧಿಕಾರ ಸಲಹೆ ನೀಡಿದೆ

Posted On: 06 APR 2020 6:09PM by PIB Bengaluru

ನ್ಯೂಯಾರ್ಕ್ ನಲ್ಲಿ ಹುಲಿಗೆ COVID-19 ಪಾಸಿಟಿವ್ ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು ಭಾರತದ ಪ್ರಾಣಿಸಂಗ್ರಹಾಲಯಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು  ಕೇಂದ್ರ ಮೃಗಾಲಯ ಪ್ರಾಧಿಕಾರ ಸಲಹೆ ನೀಡಿದೆ

 

ಅಮೆರಿಕಾದ ಕೃಷಿ ಇಲಾಖೆಯ ರಾಷ್ಟ್ರೀಯ ಪಶುವೈದ್ಯಕೀಯ ಸೇವೆಗಳ ಪ್ರಯೋಗಾಲಯವು, ಏಪ್ರಿಲ್ 5, 2020 ರಂದು ನೀಡಿರುವ ಹೇಳಿಕೆಯಲ್ಲಿ, ನ್ಯೂಯಾರ್ಕ್ ನ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಯಲ್ಲಿ  SARS-CoV-2 (COVID-19) ಇರುವುದನ್ನು ದೃಢಪಡಿಸಿದೆ.

https://wvvw.aphis.usda.gov/aphisinewsroominews/sa_by_date/sa-2020/ny-zoo-covid-19

ಇದನ್ನು ಗಮನದಲ್ಲಿಟ್ಟುಕೊಂಡು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಮೃಗಾಲಯ ಪ್ರಾಧಿಕಾರವು ದೇಶದ ಪ್ರಾಣಿಸಂಗ್ರಹಾಲಯಗಳಿಗೆ ಹೆಚ್ಚು ಜಾಗರೂಕರಾಗಿರುವಂತೆ, ಪ್ರಾಣಿಗಳನ್ನು ದಿನದ 24 ಗಂಟೆಯೂ ಗಮನಿಸುವಂತೆ, ಯಾವುದೇ ಅಸಹಜ ವರ್ತನೆ / ರೋಗಲಕ್ಷಣಗಳಿಗಾಗಿ ಸಿಸಿಟಿವಿ ಬಳಸುವಂತೆ, ಕೀಪರ್‌ಗಳು / ಹ್ಯಾಂಡ್ಲರ್‌ಗಳು ಸುರಕ್ಷತಾ ಸಾಧನ ಇಲ್ಲದೆ ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್) ಪ್ರಾಣಿಗಳ ಸಮೀಪ ಹೋಗದಂತೆ, ರೋಗಪೀಡಿತ ಪ್ರಾಣಿಗಳನ್ನು ಪ್ರತ್ಯೇಕಿಸುವುದು ಮತ್ತು ಕ್ವಾರಂಟೈನ್ ಮಾಡುವುದು  ಮತ್ತು ಪ್ರಾಣಿಗಳಿಗೆ ಆಹಾರ ನೀಡುವಾಗ ಆದಷ್ಟು ಕನಿಷ್ಠ ಸಂಪರ್ಕವನ್ನು ಹೊಂದುವಂತೆ ಸಲಹೆ ನೀಡಿದೆ.

ಮಾಂಸಾಹಾರಿಗಳಂತಹ ಸಸ್ತನಿಗಳು ವಿಶೇಷವಾಗಿ ಬೆಕ್ಕು, ಕಾಡು ಬೆಕ್ಕು ಮತ್ತು ಸಸ್ತನಿಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕು ಮತ್ತು ಶಂಕಿತ ಪ್ರಕರಣಗಳ ಹದಿನೈದು ದಿನಗಳ ಮಾದರಿಗಳನ್ನು ನಿರ್ದಿಷ್ಟ ಪ್ರಾಣಿ ಆರೋಗ್ಯ ಸಂಸ್ಥೆಗಳಿಗೆ COVID-19 ಪರೀಕ್ಷೆಗಾಗಿ ಕಳುಹಿಸಬೇಕು ಮತ್ತು ರಾಷ್ಟ್ರೀಯ / ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ಈ ಹೆಚ್ಚಿನ ಅಪಾಯಕಾರಿ ರೋಗಕಾರಕವನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಜೈವಿಕ-ನಿಗ್ರಹ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆಯಲ್ಲಿ ಹೇಳಲಾಗಿದೆ. 

1. ಹೆಚ್ಚು ರಕ್ಷಣೆಯ ಪ್ರಾಣಿ ರೋಗಗಳ ರಾಷ್ಟ್ರೀಯ ಸಂಸ್ಥೆ ಎನ್ಐಹೆಚ್ಎಸ್ಎಡಿ), ಭೋಪಾಲ್, ಮಧ್ಯಪ್ರದೇಶ

2. ಈಕ್ವಿನ್‌ಗಳ ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಇ), ಹಿಸಾರ್, ಹರಿಯಾಣ.

3. ಪ್ರಾಣಿ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಕೇಂದ್ರ (ಕ್ಯಾಡ್ರಾಡ್), ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, (ಐವಿಆರ್‌ಐ), ಇಜತ್‌ನಗರ, ಬರೇಲಿ, ಯುಪಿ.

ನೊವೆಲ್ ಕೊರೊನಾವೈರಸ್ ಕಾಯಿಲೆ (ಸಿಒವಿಐಡಿ -19) ಕುರಿತು ಕಾಲಕಾಲಕ್ಕೆ ಸರ್ಕಾರ ಹೊರಡಿಸಿರುವ ಸುರಕ್ಷತೆ ಮತ್ತು ಸೋಂಕುನಿವಾರತ ಶಿಷ್ಟಾಚಾರವನ್ನು ಎಲ್ಲಾ ಮೃಗಾಲಯದ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಮೃಗಾಲಯ ಪ್ರಾಧಿಕಾರ ಸೂಚಿಸಿದೆ.

ಇದಲ್ಲದೆ, ಸರ್ಕಾರದ ಗೊತ್ತುಪಡಿಸಿದ ಸಾರ್ವಜನಿಕ ಆರೋಗ್ಯದ ಜವಾಬ್ದಾರಿಯುತ ನೋಡಲ್ ಏಜೆನ್ಸಿಗಳೊಂದಿಗೆ ಸಮನ್ವಯ ಹೊಂದಲು ಪ್ರಾಣಿಸಂಗ್ರಹಾಲಯಗಳಿಗೆ ಸೂಚಿಸಲಾಗಿದೆ ಮತ್ತು ನೋಡಲ್ ಏಜೆನ್ಸಿಗೆ ಅಗತ್ಯವಿರುವಾಗ ತಪಾಸಣೆ, ಪರೀಕ್ಷೆ ಮತ್ತು ಕಣ್ಗಾವಲು ಮತ್ತು ರೋಗನಿರ್ಣಯದ ಮಾದರಿಗಳನ್ನು ಪಡೆಯಲು ಅನುಮತಿ ನೀಡಲು ತಿಳಿಸಲಾಗಿದೆ.

 

***



(Release ID: 1611776) Visitor Counter : 174