ಪ್ರಧಾನ ಮಂತ್ರಿಯವರ ಕಛೇರಿ

ಕೇಂದ್ರ ಸಚಿವರೊಂದಿಗೆ ಪ್ರಧಾನಿ ಸಂವಾದ

Posted On: 06 APR 2020 3:36PM by PIB Bengaluru

ಕೇಂದ್ರ ಸಚಿವರೊಂದಿಗೆ ಪ್ರಧಾನಿ ಸಂವಾದ

COVID-19 ವಿರುದ್ಧದ ಹೋರಾಟದಲ್ಲಿ ಪ್ರೇರೇಪಿತ, ದೃಢ ನಿಶ್ಚಯದ ಮತ್ತು ಜಾಗರೂಕತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಿ

ಸಚಿವರು ರಾಜ್ಯ ಮತ್ತು ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿರಬೇಕು, ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬೇಕು; ಜಿಲ್ಲಾ ಮಟ್ಟದಲ್ಲಿ ಸೂಕ್ಷ್ಮ ಯೋಜನೆಗಳನ್ನು ರೂಪಿಸಬೇಕು: ಪ್ರಧಾನಿ

ಗರೀಬ್ ಕಲ್ಯಾಣ್ ಯೋಜನೆಯ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪಿರುವುದನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಸಂಬಂಧಿತ ಸಚಿವಾಲಯಗಳಿಗೆ ಪ್ರಧಾನಿ ಆಗ್ರಹ

ಆರೋಗ್ಯ ಸೇತು ಆ್ಯಪ್ ಅನ್ನು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ತಳ ಮಟ್ಟದ ಸಂಸ್ಥೆಗಳಲ್ಲಿ ಜನಪ್ರಿಯಗೊಳಿಸುವಂತೆ ಸಚಿವರಿಗೆ  ಪ್ರಧಾನಿ ಕರೆ

ಮಾರುಕಟ್ಟೆಯೊಂದಿಗೆ ರೈತರನ್ನು ಸಂಪರ್ಕಿಸಲು ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆಗಳ ಮಾದರಿಯಲ್ಲಿಟ್ರಕ್ ಅಗ್ರಿಗೇಟರ್ಸ್ನಂತಹ ನವೀನ ಪರಿಹಾರಗಳ ಬಳಕೆಯನ್ನು ಅನ್ವೇಷಿಸಿ: ಪ್ರಧಾನಿ

ಲಾಕ್ಡೌನ್ ಕ್ರಮಗಳು ಮತ್ತು ಸಾಮಾಜಿಕ ಅಂತರದ ಮಾನದಂಡಗಳು ಜೊತೆಯಾಗಿ ಹೋಗುವ ಅಗತ್ಯವಿದೆ; ಲಾಕ್ಡೌನ್ ಮುಗಿದ ನಂತರ ಪ್ರತಿ ಸಚಿವಾಲಯವು ತಮ್ಮಹತ್ತು ಪ್ರಮುಖ ನಿರ್ಧಾರಗಳು ಮತ್ತು ಹತ್ತು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಬೇಕು: ಪ್ರಧಾನಿ

ಸಚಿವಾಲಯಗಳು ವ್ಯವಹಾರ ಮುಂದುವರಿಕೆ ಯೋಜನೆಯನ್ನು ಸಿದ್ಧಪಡಿಸಬೇಕು ಮತ್ತು COVID-19 ಆರ್ಥಿಕ ಪರಿಣಾಮದ ವಿರುದ್ಧ ಹೋರಾಡಲು ಸಿದ್ಧರಾಗಿರಬೇಕು: ಪ್ರಧಾನಿ

ಬಿಕ್ಕಟ್ಟು ಮೇಕ್ ಇನ್ ಇಂಡಿಯಾವನ್ನು ಪ್ರೋತ್ಸಾಹಿಸಲು ಮತ್ತು ಇತರ ದೇಶಗಳ ಅವಲಂಬನೆಯನ್ನು ಕಡಿಮೆ ಮಾಡಲು ಒಂದು ಅವಕಾಶವಾಗಿದೆ: ಪ್ರಧಾನಿ

ಸಾಂಕ್ರಾಮಿಕ ರೋಗದ ಸವಾಲುಗಳನ್ನು ಎದುರಿಸಲು ಕೈಗೊಂಡ ಕ್ರಮಗಳ ಕುರಿತು ಪ್ರಧಾನ ಮಂತ್ರಿಯವರಿಗೆ ಸಚಿವರ ಫೀಡ್ ಬ್ಯಾಕ್

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವರೊಂದಿಗೆ ಸಂವಾದ ನಡೆಸಿದರು.

ಸಚಿವರ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿಯವರು, ತಾವು ನೀಡುವ ನಿರಂತರ ಫೀಡ್ ಬ್ಯಾಕ್ COVID-19 ಅನ್ನು ನಿಭಾಯಿಸಲು ಕಾರ್ಯತಂತ್ರ ರೂಪಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಿದರು. ನಾಯಕರು ರಾಜ್ಯ ಮತ್ತು ಜಿಲ್ಲಾಡಳಿತದೊಂದಿಗೆ ಸಮಗ್ರವಾಗಿ ಸಂವಹನ ನಡೆಸುವುದು. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕ ರೋಗದ ತಾಣಗಳಾಗಿರುವ ಜಿಲ್ಲೆಗಳಲ್ಲಿ, ಪರಿಸ್ಥಿತಿಯ ಬಗ್ಗೆ ತಿಳಿಸುವುದು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದರು. ಪಡಿತರ ಅಂಗಡಿಗಳಲ್ಲಿ ಜನಸಂದಣಿ ಇಲ್ಲದಂತೆ ಖಚಿತಪಡಿಸಿಕೊಳ್ಳುವುದು, ಪರಿಣಾಮಕಾರಿ ಮೇಲ್ವಿಚಾರಣೆ ಕಾಯ್ದುಕೊಳ್ಳುವುದು, ದೂರುಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಮತ್ತು ಕಾಳದಂಧೆ ತಡೆಯುವುದು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕ್ರಮ ಜರುಗಿಸುವುದೂ ಸಹ ಮುಖ್ಯವಾಗಿದೆ ಎಂದು ಅವರು ಹೇಳಿದರು.

ರೈತರ ಯೋಗಕ್ಷೇಮ ಹೆಚ್ಚು ಪ್ರಮುಖವಾದುದು ಎಂದು ಪ್ರಧಾನಿ ಹೇಳಿದರು. ಕೊಯ್ಲಿನ ಋತುವಿನಲ್ಲಿ ರೈತರಿಗೆ ಸರ್ಕಾರವು ಎಲ್ಲಾ ರೀತಿಯ ನೆರವನ್ನು ನೀಡುತ್ತದೆ ಎಂದು ಅವರು ಹೇಳಿದರು. ನಿಟ್ಟಿನಲ್ಲಿ, ತಂತ್ರಜ್ಞಾನ ಆಧಾರಿತ ಸಜ್ಜುಗೊಳಿಸುವಿಕೆ ಮತ್ತು ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆಗಳ ಮಾದರಿಯಲ್ಲಿ ರೈತರನ್ನು ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲುಟ್ರಕ್ ಅಗ್ರಿಗೇಟರ್‌’ ಗಳಂತಹ ಹೊಸ ಅನ್ವೇಷಣೆಯನ್ನು ಉತ್ತೇಜಿಸುವಂತೆ ಅವರು ಸಲಹೆ ನೀಡಿದರು. ಬುಡಕಟ್ಟು ಉತ್ಪನ್ನಗಳ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರವೊಂದನ್ನು ರೂಪಿಸ ಬೇಕಾದ ಅಗತ್ಯವಿದೆ ಎಂದ ಅವರು, ಇದರಿಂದ ಸ್ಥಳೀಯ ಬುಡಕಟ್ಟು ಜನರ ಆದಾಯದ ಮೂಲಕ್ಕೆ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದರು.

ನಿರಂತರ ಮೇಲ್ವಿಚಾರಣೆಯ ಮಹತ್ವ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳನ್ನು ತಲುಪುವಂತೆ ನೋಡಿಕೊಳ್ಳುವುದನ್ನು ಪ್ರಧಾನಿ ಒತ್ತಿ ಹೇಳಿದರು. ವೈರಸ್ ಮತ್ತಷ್ಟು ಹರಡುವ ಸಾಧ್ಯತೆಯನ್ನೂ ಯೋಜನೆ ಒಳಗೊಂಡಿರಬೇಕು ಎಂದು ಅವರು ಹೇಳಿದರು. ಅಗತ್ಯ ಔಷಧಿಗಳು ಮತ್ತು ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ನಿರಂತರ ಮೇಲ್ವಿಚಾರಣೆ ಇರಬೇಕು. ಪೂರೈಕೆ ಮಾರ್ಗಗಳು ಮತ್ತು ಅಗತ್ಯ ವಸ್ತುಗಳ ಲಭ್ಯತೆಯನ್ನು ಕಾಪಾಡಿಕೊಳ್ಳಲು ಸೂಕ್ಷ್ಮ ಮಟ್ಟದ ಯೋಜನೆ ಅತ್ಯಗತ್ಯ ಎಂದು ಪ್ರಧಾನಿ ತಿಳಿಸಿದರು.

ಲಾಕ್ಡೌನ್ ಕ್ರಮಗಳು ಮತ್ತು ಸಾಮಾಜಿಕ ಅಂತರವ ಜೊತೆ ಜೊತೆಯಾಗಿರಬೇಕು ಎಂದು ಹೇಳಿದ ಪ್ರಧಾನಿ, ಲಾಕ್ಡೌನ್ ಮುಗಿದ ನಂತರ ಉದ್ಭವಿಸುವ ಪರಿಸ್ಥಿತಿಗಳಿಗೆ ಕಾರ್ಯತಂತ್ರ ರೂಪಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ಲಾಕ್ಡೌನ್ ಮುಗಿದ ನಂತರ ಹತ್ತು ಪ್ರಮುಖ ನಿರ್ಧಾರಗಳು ಮತ್ತು ಹತ್ತು ಆದ್ಯತೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅವರು ಸಚಿವರಿಗೆ ತಿಳಿಸಿದರು. ಅದೇ ಸಮಯದಲ್ಲಿ ತಮ್ಮ ಸಚಿವಾಲಯಗಳಲ್ಲಿ ಬಾಕಿ ಉಳಿದಿರುವ ಸುಧಾರಣೆಗಳನ್ನು ಗುರುತಿಸಲು ಮತ್ತು ಕಾರ್ಯಗತಗೊಳಿಸಲು ಅವರಿಗೆ ಸೂಚಿಸಿದರು. ಉದ್ಭವಿಸುವ ಸವಾಲುಗಳ ಕಾರಣದಿಂದಾಗಿ, ದೇಶವು ಇತರ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕಾಗಿದೆ ಎಂದ ಅವರು, ಎಲ್ಲಾ ಇಲಾಖೆಗಳು ತಮ್ಮ ಕೆಲಸವು ಮೇಕ್ ಇನ್ ಇಂಡಿಯಾವನ್ನು ಹೇಗೆ ಉತ್ತೇಜಿಸುತ್ತಿದೆ ಎಂಬುದರ ಕುರಿತು ವಸ್ತುನಿಷ್ಠ ಸೂಚ್ಯಂಕವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.

COVID-19 ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಕುರಿತು ಮಾತನಾಡಿದ ಪ್ರಧಾನಿಯವರು, ಸಾಂಕ್ರಾಮಿಕದ ಪರಿಣಾಮವನ್ನು ತಗ್ಗಿಸಲು ಸರ್ಕಾರವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಸಚಿವಾಲಯಗಳು ವ್ಯವಹಾರ ಮುಂದುವರಿಕೆ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಹೇಳಿದರು. ಬಿಕ್ಕಟ್ಟು ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗುವ ಅವಕಾಶವನ್ನು ನೀಡುತ್ತದೆ ಎಂದರು. ಭಾರತದ ರಫ್ತು ಮೇಲಿನ ಪರಿಣಾಮದ ಬಗ್ಗೆ ಮಾತನಾಡಿದ ಅವರು, ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಬಗ್ಗೆ ಕ್ರಿಯಾತ್ಮಕ ಸಲಹೆಗಳನ್ನು ಸಲ್ಲಿಸುವಂತೆ ಮತ್ತು ಭಾರತದ ರಫ್ತು ನಿವ್ವಳದಲ್ಲಿ ಹೊಸ ವಲಯಗಳು ಮತ್ತು ದೇಶಗಳನ್ನು ಸೇರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವಂತೆ ಸಚಿವರನ್ನು ಕೇಳಿದರು. ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ತಳಮಟ್ಟದ ಸಂಸ್ಥೆಗಳಲ್ಲಿ ಆರೋಗ್ಯ ಸೇತು ಆ್ಯಪ್ ಅನ್ನು ಜನಪ್ರಿಯಗೊಳಿಸಬೇಕು ಎಂದು ಪ್ರಧಾನಿ ಸಚಿವರಿಗೆ ಕರೆ ಕೊಟ್ಟರು.

9 ಗಂಟೆಗೆ 9 ನಿಮಿಷದ ಉಪಕ್ರಮವನ್ನು ಶ್ಲಾಘಿಸಿದ ಸಚಿವರು, ದೇಶದ ಮೂಲೆ ಮೂಲೆಗಳಿಂದ ಜನರು ಭಾಗವಹಿಸಿದರು, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇಡೀ ಜನತೆಯನ್ನು ಒಟ್ಟುಗೂಡಿಸಿತು ಎಂದರು. ವಲಸೆ ಕಾರ್ಮಿಕರು ಎದುರಿಸುತ್ತಿರುವ ತೊಂದರೆಗಳನ್ನು ನಿಭಾಯಿಸುವ ಪ್ರಯತ್ನಗಳು, ಭಯ ಹುಟ್ಟಿಸಲು ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಗಟ್ಟುವುದು, ಅಗತ್ಯ ವಸ್ತುಗಳ ಪೂರೈಕೆ ಮಾರ್ಗಗಳ ನಿರ್ವಹಣೆ, ಮುಂಚೂಣಿ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳನ್ನು ತಗ್ಗಿಸುವ ಪ್ರಯತ್ನಗಳ ಬಗ್ಗೆ ಸಚಿವರು ಪ್ರಧಾನ ಮಂತ್ರಿಯವರಿಗೆ ತಿಳಿಸಿದರು.

ಸವಾಲುಗಳನ್ನು ಎದುರಿಸಲು ಕೈಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ವಿವರ ನೀಡಿದರು.

ಕೇಂದ್ರ ಸಚಿವರು, ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ ಮತ್ತು ಭಾರತ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದರು.

***



(Release ID: 1611757) Visitor Counter : 232