ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಎದುರಿಸಲು ನವೋದ್ಯಮಗಳಿಗೆ ಉತ್ತೇಜನ ನೀಡಲು ಮತ್ತು ಉದ್ಯಮದ ವಿಸ್ತರಣೆಗೆ ನ್ಯಾನೋ ಲೇಪಿತ ಹಾಗು ನ್ಯಾನೋ ಆಧಾರಿತ ಸೋಂಕು ನಿವಾರಕಗಳನ್ನು ಅಭಿವೃದ್ಧಿಪಡಿಸುವ ಅಲ್ಪಾವಧಿ ಪ್ರಸ್ತಾವಗಳಿಗೆ ಆಹ್ವಾನ ನೀಡಿದ ಡಿ ಎಸ್ ಟಿ

Posted On: 06 APR 2020 3:23PM by PIB Bengaluru

ಕೋವಿಡ್-19 ಎದುರಿಸಲು ನವೋದ್ಯಮಗಳಿಗೆ ಉತ್ತೇಜನ ನೀಡಲು ಮತ್ತು ಉದ್ಯಮದ ವಿಸ್ತರಣೆಗೆ ನ್ಯಾನೋ ಲೇಪಿತ ಹಾಗು ನ್ಯಾನೋ ಆಧಾರಿತ ಸೋಂಕು ನಿವಾರಕಗಳನ್ನು ಅಭಿವೃದ್ಧಿಪಡಿಸುವ ಅಲ್ಪಾವಧಿ ಪ್ರಸ್ತಾವಗಳಿಗೆ ಆಹ್ವಾನ ನೀಡಿದ ಡಿ ಎಸ್ ಟಿ

 

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ತನ್ನ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮಂಡಳಿ(ಎಸ್ಇಆರ್ ಬಿ) ಮೂಲಕ ನ್ಯಾನೋ ಲೇಪಿತ ಮತ್ತು ನ್ಯಾನೋ ಆಧಾರಿತ ವಸ್ತು ಬಳಸಿ, ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ)ಗಳನ್ನು ಹಾಗೂ ಸೋಂಕು ನಿವಾರಕಗಳನ್ನು ಅಭಿವೃದ್ಧಿಪಡಿಸಲು ಅಲ್ಪಾವಧಿ ಪ್ರಸ್ತಾವಗಳಿಗೆ ಚಿಂತನೆಗಳನ್ನು ಆಹ್ವಾನಿಸಿದೆ. ಇದರಿಂದ ನವೋದ್ಯಮಗಳನ್ನು ಮತ್ತು ಉದ್ಯಮವನ್ನು ಇನ್ನಷ್ಟು ಉನ್ನತೀಕರಿಸುವ ಉದ್ದೇವಿದೆ. ಅಂತಹ ನ್ಯಾನೋ ಲೇಪಿತ ಉತ್ಪನ್ನಗಳು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಎದುರಾಗುತ್ತಿರುವ ಆರೋಗ್ಯ ರಕ್ಷಣಾ ಅಗತ್ಯತೆಗಳಿಗೆ ಮಹತ್ವದ ಕೊಡುಗೆಯನ್ನು ನೀಡಲಿವೆ. ಡಿಎಸ್ ಟಿಯ ನ್ಯಾನೋ ಮಿಷನ್ ಅಡಿಯಲ್ಲಿ ಶೈಕ್ಷಣಿಕ ಗುಂಪುಗಳು ಮತ್ತು ಕೈಗಾರಿಕಾ ಗುಂಪುಗಳನ್ನು ಒಟ್ಟಾಗಿ ಸೇರಿಸುವುದು ಈ ಆಹ್ವಾನದ ಹಿಂದಿರುವ ಉದ್ದೇಶವಾಗಿದೆ. ಈ ವರ್ಷ ಉತ್ಪಾದನೆಯನ್ನು ಹೆಚ್ಚಿಸಲು ಕೈಗಾರಿಕೆಗಳ ನಡುವೆ ಸಹಭಾಗಿತ್ವ ಸಾಧಿಸುವುದು ಮತ್ತು ಬಹುಶಿಸ್ತೀಯ ಪ್ರಯತ್ನಗಳನ್ನು ಉತ್ತೇಜಿಸುವುದಾಗಿದೆ.

ಕೋವಿಡ್-19 ಎದುರಿಸಲು ಮೂರು ಪದರಗಳ ಮಾಸ್ಕ್ ಗಳನ್ನು ನ್ಯಾನೋ ಲೇಪಿತ ಸೋಂಕು ನಿವಾರಕ ಮಾಸ್ಕ್ ಗಳನ್ನು ಅಭಿವೃದ್ಧಿಪಡಿಸಲೂ ಸಹ ಕರೆ ನೀಡಲಾಗಿದೆ ಮತ್ತು ಎನ್-95 ರೆಸ್ಪಿರೇಟರ್ ಅಥವಾ ಬೃಹತ್ ಪ್ರಮಾಣದಲ್ಲಿ ಉತ್ತಮ ಮಾಸ್ಕ್ ಗಳನ್ನು ಹಾಗೂ ಕೋವಿಡ್-19 ವಿರುದ್ಧ ಆರೋಗ್ಯ ರಕ್ಷಣಾ ಕಾರ್ಯಕರ್ತರ ರಕ್ಷಣೆಗೆ ಪಿಪಿಇಗಳನ್ನು ಅಭಿವೃದ್ಧಿಪಡಿಸುವುದು ಸಹ ಇದರಲ್ಲಿ ಸೇರಿದೆ.

ಮಾನವ ಸಂಪನ್ಮೂಲ ಬೆಂಬಲ ಮತ್ತು ಐರೋಪ್ಯ ಒಕ್ಕೂಟ ಅಥವಾ ಅಮೆರಿಕ ಮಾನದಂಡಗಳಿಗೆ ಅನುಗುಣವಾಗಿ ನ್ಯಾನೋ ಲೇಪಿತ ಪರೀಕ್ಷೆಗಳನ್ನು ನಡೆಸಲು ಬೆಂಬಲ ನೀಡುವುದು ಉದ್ಯಮದ ಕೊಡುಗೆಯಲ್ಲಿ ಸೇರಿದೆ.

ಈ ಪ್ರಸ್ತಾವಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧರಿಸಿ ಮತ್ತು ವ್ಯಾಪ್ತಿ ಅನುಸರಿಸಿ ಗಂಭೀರವಾಗಿ ಪರಿಶೀಲಿಸಲಾಗುವುದು. ವಸ್ತುಗಳನ್ನು ಅಭಿವೃದ್ಧಿಪಡಿಸಿ ಅದನ್ನು ಉದ್ಯಮಕ್ಕೆ ವರ್ಗಾಯಿಸಿದಾಗ ಅವುಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು, ನ್ಯಾನೋ ಲೇಪಿತ ಆಧರಿಸಿದ ಉತ್ಪನ್ನಗಳ ಗುಣಮಟ್ಟದಲ್ಲಿ ಸೂಕ್ತ ಭಾರತೀಯ ಮಾನದಂಡಗಳನ್ನೂ ಸಹ ಖಾತ್ರಿಗೊಳಿಸಬೇಕಾಗುತ್ತದೆ. ಪ್ರಸ್ತಾವಗಳನ್ನು ಸಲ್ಲಿಸಲು 2020ರ ಏಪ್ರಿಲ್ 30 ಕೊನೆಯ ದಿನವಾಗಿದೆ.

ಪ್ರಸ್ತಾವಗಳಿಗೆ ಆಹ್ವಾನ ನೀಡಿರುವ ವಿವರಗಳು ಇಲ್ಲಿ ಲಭ್ಯವಿದೆ www.serbonline.in

ಸಮನ್ವಯ ನಡೆಸುತ್ತಿರುವ ವಿಜ್ಞಾನಿಗಳ ಸಂಪರ್ಕ ವಿವರ:

· ಡಾ. ಟಿ. ಥಂಗರಾಡ್ ಜೌ, ವಿಜ್ಞಾನಿ ಇ, ಎಸ್ಇಆರ್ ಬಿ ಇ-ಮೇಲ್ : ttradjou@serb.gov.in

· ಡಾ. ನಾಗಭೂಪತಿ ಮೋಹನ್, ವಿಜ್ಞಾನಿ ಸಿ, ಡಿಎಸ್ ಟಿ, ಇ-ಮೇಲ್: boopathy.m[at]gov[dot]in

· ಶ್ರೀ ರಾಜೀವ್ ಖನ್ನಾ, ವಿಜ್ಞಾನಿ ಸಿ, ಡಿಎಸ್ ಟಿ, ಇ-ಮೇಲ್: Khanna.rk[at]nic[dot]in

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಡಾ. ಮಿಲಿಂದ್ ಕುಲಕರ್ಣಿ, ವಿಜ್ಞಾನಿ ಜಿ&ಹೆಡ್, ನ್ಯಾನೋ ಮಿಷನ್ ಡಿಎಸ್ ಟಿ

ಇ-ಮೇಲ್ : milind[at]nic[dot]in, ಮೊಬೈಲ್ +91-9650152599, 9868899962}

 

*****

 



(Release ID: 1611741) Visitor Counter : 139