ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳಲ್ಲಿ ಕೋವಿಡ್ -19 ನಿಗಾಕ್ಕಾಗಿ ಸ್ಮಾರ್ಟ್ ಸಿಟಿ ಅಭಿಯಾನದ ಸಮಗ್ರ ದತ್ತಾಂಶ ಡ್ಯಾಷ್ ಬೋರ್ಡ್ ಬಳಕೆ
Posted On:
06 APR 2020 2:44PM by PIB Bengaluru
ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳಲ್ಲಿ ಕೋವಿಡ್ -19 ನಿಗಾಕ್ಕಾಗಿ ಸ್ಮಾರ್ಟ್ ಸಿಟಿ ಅಭಿಯಾನದ ಸಮಗ್ರ ದತ್ತಾಂಶ ಡ್ಯಾಷ್ ಬೋರ್ಡ್ ಬಳಕೆ
ಸ್ಮಾರ್ಟ್ ಸಿಟಿಗಳಾದ ಪುಣೆ, ಸೂರತ್, ಬೆಂಗಳೂರು ಮತ್ತು ತುಮಕೂರು ತಮ್ಮ ನಗರ ವ್ಯಾಪ್ತಿಯ ವಿವಿಧ ಆಡಳಿತಾತ್ಮಕ ವಲಯಗಳಿಗೆ ಕೊರೊನಾ ವೈರಾಣು ಸ್ಥಿತಿಯ ಬಗ್ಗೆ ನವೀಕೃತ ಸಂಪೂರ್ಣ ಮಾಹಿತಿಯನ್ನು ಒದಗಿಸಲು ದತ್ತಾಂಶ ವಿಶ್ಲೇಷಕರು ಮತ್ತು ದತ್ತಾಂಶ ತಜ್ಞರು ತಮ್ಮ ಐಸಿಸಿಸಿಗಳೊಂದಿಗೆ ಅಭಿವೃದ್ಧಿಪಡಿಸಿರುವ (ಅನೇಕ ನಗರಗಳಲ್ಲಿ ಕೋವಿಡ್-19 ವಾರ್ ರೂಂಗಳಲ್ಲೂ ಕಾರ್ಯನಿರ್ವಹಿಸುತ್ತಿವೆ) ಸಮಗ್ರ ದತ್ತಾಂಶ ಡ್ಯಾಶ್‌ಬೋರ್ಡ್‌ಗಳನ್ನು ಬಳಸುತ್ತಿವೆ.
ಪುಣೆ: ಪುಣೆ ಸ್ಮಾರ್ಟ್ ಸಿಟಿ ಅಭಿವೃದ್ಧಿ ನಿಗಮ ನಿಯಮಿತ (ಪಿ.ಎಸ್.ಸಿ.ಡಿ.ಸಿ.ಎಲ್) ಪುಣೆ ಮುನಿಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸಹಯೋಗದಲ್ಲಿ ಜಾಗತಿಕ ಪಿಡುಗಾಗಿರುವ ಕೊರೊನಾ ವೈರಾಣು ವಿರುದ್ಧ ನಗರದಲ್ಲಿ ನಡೆದಿರುವ ಹೋರಾಟದ ಪ್ರಯತ್ನಗಳ ಕುರಿತಂತೆ ಸಮಗ್ರ ದತ್ತಾಂಶ ಡ್ಯಾಷ್ ಬೋರ್ಡ್ ಅಭಿವೃದ್ಧಿಪಡಿಸಿದೆ (ಕೆಳಗೆ ಹಾಕಲಾಗಿರುವ ಚಿತ್ರ ನೋಡಿ). ನಗರದ ಪ್ರತಿಯೊಂದು ಪ್ರಕರಣವನ್ನೂ ಜಿಯೋ-ಸ್ಪಾಟಿಯಲ್ ಇನ್ಫರ್ಮೇಶನ್ ಸಿಸ್ಟಮ್ ಬಳಸಿಕೊಂಡು ಮ್ಯಾಪ್ ಮಾಡಲಾಗಿದೆ ಮತ್ತು ನಗರ ಆಡಳಿತವು ಪ್ರದೇಶಗಳ ನಿಗಾ ಇಟ್ಟಿದ್ದು, ಕೋವಿಡ್ -19 ಸೋಂಕು ದೃಢಪಟ್ಟಿರುವ ರೋಗಿಗಳಿಗೆ ಬಫರ್ ವಲಯಗಳನ್ನು ರಚಿಸುತ್ತಿದೆ. ಹೀಟ್-ಮ್ಯಾಪಿಂಗ್ ತಂತ್ರಜ್ಞಾನ ಮತ್ತು ಮುನ್ಸೂಚಕ ವಿಶ್ಲೇಷಣೆಯನ್ನು ಬಳಸಿಕೊಂಡು, ನಗರ ಆಡಳಿತವು ನಿಗ್ರಹ ಯೋಜನೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ನಿಗ್ರಹ ವಲಯಗಳು ಡ್ಯಾಶ್‌ಬೋರ್ಡ್‌ನಲ್ಲಿ ಪ್ರತಿಫಲಿಸುತ್ತವೆ. ನಗರದ ನಾಯ್ಡು ಸೋಂಕು ರೋಗಗಳ ಆಸ್ಪತ್ರೆಯಲ್ಲಿ ಆರೋಗ್ಯ ಆರೈಕೆ ಕಾರ್ಯಾಚರಣೆಗಳನ್ನು ಈ ಸೌಲಭ್ಯದಿಂದ ಟ್ರಾಕ್ ಮಾಡಲಾಗುತ್ತದೆ. ಸ್ಮಾರ್ಟ್ ಸಿಟಿಯ ಸಮಗ್ರ ಡ್ಯಾಷಅ ಬೋರ್ಡ್ ಸಹ ಪ್ರತ್ಯೇಕೀಕರಣ ಸೌಲಭ್ಯ ಮತ್ತು ಶಂಕಿತ ರೋಗಿಗಳ ಆರೋಗ್ಯದ ಶೋಧ ಹಾಗೂ ಗೃಹ ದಿಗ್ಭಂದನದಲ್ಲಿರುವಾರ ಅವರ ಸಂಪರ್ಕದ ಬಗ್ಗೆ ನಿಗಾ ಇಡುತ್ತದೆ.
ಸೂರತ್ : ಸೂರತ್ ಮುನಿಸಿಪಲ್ ಕಾರ್ಪೊರೇಷನ್ ತನ್ನ ಮುನಿಸಿಪಲ್ ಅಂತರ್ಜಾಲ ತಾಣದಲ್ಲಿ, ನಾಗರಿಕರಿಗೆ ನಿರಂತರವಾಗಿ ಮಾಹಿತಿ ಒದಗಿಸಲು ಒಂದು ಆನ್ ಲೈನ್ ಡ್ಯಾಷ್ ಬೋರ್ಡ್ ಪ್ರಕಟಿಸಿದೆ. ಪರೀಕ್ಷಿಸಲಾದ, ದೃಢಪಟ್ಟ, ಸಕ್ರಿಯವಾಗಿರುವ, ಚೇತರಿಸಿಕೊಂಡ ಮತ್ತು ಸಾವಿನ ಪ್ರಕರಣಗಳ ಒಟ್ಟಾರೆ ಅಂಕಿ ಅಂಶಗಳನ್ನು ಒದಗಿಸುವುದರ ಜೊತೆಗೆ, ಡ್ಯಾಶ್‌ಬೋರ್ಡ್ ನಗರದೊಳಗೆ ಕೋವಿಡ್-19 ಹರಡುವಿಕೆಯ ಪ್ರವೃತ್ತಿಗಳು ಮತ್ತು ಮಾದರಿಗಳನ್ನು ಒದಗಿಸುತ್ತದೆ, ಸಂಚಿತ ಪ್ರಕರಣಗಳ (ಪ್ರತಿ ದಿನ), ಹೊಸದಾಗಿ ದೃಢಪಟ್ಟ ಪ್ರಕರಣಗಳ ಸಂಖ್ಯೆ, ವರದಿಯಾಗಿರುವ ಪ್ರಕರಣಗಳು (ದಿನಾಂಕವಾರು), ವಯಸ್ಸಿನ ಪ್ರಕಾರ ಪ್ರಕರಣಗಳ ಪಟ್ಟಿ, ವಲಯವಾರು ವಿವರಣೆ ಮತ್ತು ಲಿಂಗವಾರು ವಿವರಗಳನ್ನು ನೀಡಲಿದೆ. ಬಾಧಿತ ಪ್ರದೇಶಗಳ ಪ್ರಾದೇಶಿಕ ಮ್ಯಾಪಿಂಗ್ ಅನ್ನು ಈ ಪುಟದಲ್ಲ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಈ ವೆಬ್ ವಿಳಾಸದಲ್ಲಿ
https://www.suratmunicipal.gov.in/others/CoronaRelated. ಡ್ಯಾಷ್ ಬೋರ್ಡ್ ನೋಡಿ (ಒಂದು ಸಚಿತ್ರ ವಿವರಣೆಯನ್ನು ಕೆಳಗೆ ನೀಡಲಾಗಿದೆ).
ಬೆಂಗಳೂರು ಮತ್ತು ತುಮಕೂರು
ಬಿಬಿಎಂಪಿ ಒಂದು ವಾರ್ ರೂಂ ಸ್ಥಾಪಿಸಿದ್ದು, ತಂತ್ರಜ್ಞಾನ ಬಳಕೆ ಮಾಡಿಕೊಂಡು ವೈರಾಣು ಸೋಂಕು ಹಬ್ಬದಂತೆ ಸೋಂಕು ದೃಢಪಟ್ಟ ರೋಗಿಗಳಿರುವ 8 ಕಿ.ಮೀ. ಪರಿಧಿಯಲ್ಲಿ, ಜನರ ಮೇಲೆ ನಿಗಾ ಇಟ್ಟಿದೆ.
ಕೋವಿಡ್ -19 ಡ್ಯಾಶ್‌ಬೋರ್ಡ್ ಅನ್ನು ಬಳಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವಾರ್ ರೂಂ, ಕರೋನಾ ವೈರಾಣು ಹರಡುವಿಕೆಯ ಪ್ರವೃತ್ತಿಗಳ ಕುರಿತು ದೈನಂದಿನ ವರದಿಯನ್ನು ಪ್ರಕಟಿಸುತ್ತದೆ. ದಿನಾಂಕವಾರು, ವಲಯವಾರು, ಆಸ್ಪತ್ರೆವಾರು, ವಯಸ್ಸಿನ ಪ್ರಕಾರ ಮತ್ತು ಲಿಂಗವಾರು ವಿವರಗಳನ್ನು ವಾರ್ ರೂಂನಲ್ಲಿ ನಿರ್ವಹಿಸಲಾಗುತ್ತಿದೆ ಮತ್ತು ದೈನಂದಿನ ಆಧಾರದಲ್ಲಿ ಪ್ರಕಟಿಸಲಾಗುತ್ತದೆ.
ಕೋವಿಡ್ -19 ವಾರ್ ರೂಂಗಳಾಗಿ ಸಮಗ್ರ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರ (ಐಸಿಸಿಸಿ)
ಕೋವಿಡ್ -19 ವಾರ್ ರೂಂಗಳಂತೆ, ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಸಾರ್ವಜನಿಕ ಸ್ಥಳಗಳ ಸಿಸಿಟಿವಿ ಕಣ್ಗಾವಲು, ಕೋವಿಡ್ ಸಕಾರಾತ್ಮಕ ಪ್ರಕರಣಗಳ ಜಿಐಎಸ್ ಮ್ಯಾಪಿಂಗ್, ಆರೋಗ್ಯ ಕಾರ್ಯಕರ್ತರ ಜಿಪಿಎಸ್ ಟ್ರ್ಯಾಕಿಂಗ್ ಮುಂತಾದ ಉಪಕ್ರಮಗಳನ್ನು ಜಾರಿಗೊಳಿಸುತ್ತಿವೆ. ನಗರದ ವಿವಿಧ ವಲಯಗಳಲ್ಲಿ ವೈರಾಣು ಸೋಂಕು ತಡೆಗಟ್ಟುವಿಕೆಗಾಗಿ ಮುನ್ಸೂಚಕ ವಿಶ್ಲೇಷಣೆ (ಹೀಟ್ ಮ್ಯಾಪಿಂಗ್), ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ವಾಸ್ತವ ತರಬೇತಿ, ಆಂಬ್ಯುಲೆನ್ಸ್ ಮತ್ತು ಸೋಂಕು ಸೇವೆಗಳ ಸಕಾಲಿಕ ಟ್ರ್ಯಾಕಿಂಗ್, ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಟೆಲಿ-ಕೌನ್ಸೆಲಿಂಗ್ ಮತ್ತು ಟೆಲಿ-ಮೆಡಿಸಿನ್ ಮೂಲಕ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ.
********
(Release ID: 1611667)
Visitor Counter : 219