ರೈಲ್ವೇ ಸಚಿವಾಲಯ
ಅತ್ಯಲ್ಪ ಅವಧಿಯಲ್ಲಿಯೇ ಹೊಸದಾಗಿ ಸ್ಥಾಪಿಸಲಾದ ಭಾರತೀಯ ರೈಲ್ವೆಯ ಕೇಂದ್ರೀಕೃತ ನಿಯಂತ್ರಣ ಕಚೇರಿಯಿಂದ ಉತ್ತಮ ಫಲಿತಾಂಶ
Posted On:
06 APR 2020 2:07PM by PIB Bengaluru
ಅತ್ಯಲ್ಪ ಅವಧಿಯಲ್ಲಿಯೇ ಹೊಸದಾಗಿ ಸ್ಥಾಪಿಸಲಾದ ಭಾರತೀಯ ರೈಲ್ವೆಯ ಕೇಂದ್ರೀಕೃತ ನಿಯಂತ್ರಣ ಕಚೇರಿಯಿಂದ ಉತ್ತಮ ಫಲಿತಾಂಶ
ಲಾಕ್ ಡೌನ್ ಅವಧಿಯ ಮೊದಲ 10 ದಿನಗಳಲ್ಲಿ ಸಹಾಯವಾಣಿ ಸಂಖ್ಯೆ(138 &139), ಸಾಮಾಜಿಕ ಮಾದ್ಯಮ ಮತ್ತು ಇ-ಮೇಲ್ ಮೂಲಕ 1,25,000 ದೂರುಗಳಿಗೆ ಉತ್ತರಿಸಿದ ರೈಲ್ವೆ ಸಿಬ್ಬಂದಿ
ನೇರ ಮಾನವ ಸಂಪರ್ಕದ ಮೂಲಕ ಶೇ.87ರಷ್ಟು(ಸುಮಾರು 1,09,000) ದೂರುಗಳ ನಿರ್ವಹಣೆ
ರೈಲ್ವೆ ಸಹಾಯವಾಣಿ – 139, 138, ಸಾಮಾಜಿಕ ಮಾಧ್ಯಮ ಮತ್ತು ಇ-ಮೇಲ್ ಮೂಲಕ 24 X 7 ಪ್ರತಿಕ್ರಿಯೆ
ರಾಷ್ಟ್ರೀಯ ರೈಲ್ ಮದದ್ ಸಹಾಯವಾಣಿ 139 ಮೂಲಕ ನಿರಂತರ ಸೇವೆ, ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪರಿಣಾಮಕಾರಿಗೊಳಿಸಲು ಸಾರ್ವಜನಿಕರನ್ನು ಸ್ಥಳೀಯ ಭಾಷೆಗಳಲ್ಲೇ ತಲುಪಲು 138 ಮೂಲಕ ಸೇವೆ
ರೈಲ್ವೆ ಪ್ರಯಾಣಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಮತ್ತು ನಾಗರಿಕರು ಹಾಗು ಸರಕು ಸಾಗಾಣೆದಾರರಿಗೆ ನೆರವಾಗಲು ಭಾರತೀಯ ರೈಲ್ವೆ, ಲಾಕ್ ಡೌನ್ ಆದ ತಕ್ಷಣವೇ ರೈಲ್ವೆ ನಿಯಂತ್ರಣ ಕಚೇರಿಯನ್ನು ಆರಂಭಿಸಿತು. ಕಚೇರಿ ಆರಂಭವಾದ ಕೆಲವೇ ದಿನಗಳಲ್ಲಿ ಅದು ಭಾರೀ ಯಶಸ್ಸು ಕಂಡಿದ್ದು, ಮೊದಲ ಹತ್ತು ದಿನಗಳಲ್ಲಿ(ಲಾಕ್ ಡೌನ್ ಅವಧಿಯೂ ಸೇರಿ) 1,25,000 ದೂರುಗಳಿಗೆ ರೈಲ್ವೆ ಸಿಬ್ಬಂದಿ ನಿಗದಿತ ಸಂವಹ ಮಾರ್ಗಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅವುಗಳಲ್ಲಿ ಶೇ.87ರಷ್ಟು(1,09,000) ದೂರುಗಳನ್ನು ನೇರವಾಗಿ ದೂರವಾಣಿ ಮೂಲಕ ಮಾನವ ಸಂಪರ್ಕದೊಂದಿಗೆ ನಿರ್ವಹಣೆ ಮಾಡಲಾಗಿದೆ.
ರೈಲ್ವೆ ನಿಯಂತ್ರಣ ಕಚೇರಿ ದಿನದ 24 ಗಂಟೆಯೂ ನಾಲ್ಕು ಸಂವಹನ ವಿಧಾನಗಳ ಮೂಲಕ ನಿರ್ವಹಣೆ ಮಾಡುತ್ತಿವೆ. ಆ ವೇದಿಕೆಗಳೆಂದರೆ ಸಹಾಯವಾಣಿ ಸಂಖ್ಯೆಗಳು - 139, 138, ಸಾಮಾಜಿಕ ಮಾಧ್ಯಮ(ಇಎಸ್ ಪಿ ಟ್ವಿಟರ್) ಮತ್ತು ಇ-ಮೇಲ್ (railmadad@rb.railnet.gov.in). ರೈಲ್ವೆ ಆಡಳಿತ ಮತ್ತು ಜನಸಾಮಾನ್ಯರ ನಡುವೆ ಲಾಕ್ ಡೌನ್ ವೇಳೆ ಮಾಹಿತಿ ಹಾಗೂ ಸಲಹೆಗಳು ನಿರಂತರವಾಗಿ ಖಾತ್ರಿಪಡಿಸುವುದು ಇದರ ಉದ್ದೇಶವಾಗಿದೆ.
ನಿರ್ದೇಶಕರ ಮಟ್ಟದ ಅಧಿಕಾರಿಗಳು ದಿನದ 24 ಗಂಟೆಯೂ ನಿಯಂತ್ರಣ ಕೋಣೆಗಳ ಕಚೇರಿಗಳ ಮೇಲೆ ನಿಗಾ ಇರಿಸಿದ್ದಾರೆ. ಈ ಅಧಿಕಾರಿಗಳು ನಾಗರಿಕರ ಪ್ರತಿಕ್ರಿಯೆ ಹಾಗೂ ಸಾಮಾಜಿಕ ಮಾಧ್ಯಮ ಮತ್ತು ಇ–ಮೇಲ್ ಮೂಲಕ ಸ್ವೀಕರಿಸುವ ಸಲಹೆಗಳನ್ನು ಪರಿಶೀಲಿಸಿ, ರೈಲ್ವೆ ಗ್ರಾಹಕರು(ವಿಶೇಷವಾಗಿ ಸರಕು ಸಾಗಣೆ) ಯಾವುದೇ ರೀತಿಯ ತೊಂದರೆಗಳು ಎದುರಾದರೆ ಅವುಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವರು. ಎಡಿಆರ್ ಎಂಎಸ್ ಮಟ್ಟದಲ್ಲಿನ ತಳಹಂತದ ಅಧಿಕಾರಿಗಳು ವಿಭಾಗೀಯ ಮಟ್ಟವನ್ನು ತಮ್ಮ ತಂಡವೆಂದು ಪರಿಗಣಿಸಿ, ನಿರ್ವಹಣೆ ಮಾಡುವರು.
ರೈಲ್ ಮಡಾಡ್ ಸಹಾಯವಾಣಿ 139 ಲಾಕ್ ಡೌನ್ ಆದ ಮೊದಲ 10 ದಿನಗಳ ಅವಧಿಯಲ್ಲಿ ಸುಮಾರು 80,000 ಕರೆಗಳಿಗೆ ಮುಖಾಮುಖಿ ಆಧಾರದಲ್ಲಿ ಉತ್ತರ ನೀಡಿದೆ. ಅಲ್ಲದೆ ಐವಿಆರ್ ಎಸ್ ಸೌಕರ್ಯದ ಪ್ರಶ್ನೆಗಳಿಗೂ ಉತ್ತರಿಸಲಾಗಿದೆ. ಬಹುತೇಕ ಕರೆಗಳು ರೈಲು ಸೇವೆಗಳು, ಸರಳೀಕೃತ ಮರುಪಾವತಿ ನಿಯಮಗಳ(ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ ಈ ನಿಯಮಾವಳಿಗಳನ್ನು ರೂಪಿಸಲಾಗಿದೆ) ಬಗ್ಗೆ ಬಂದಿದ್ದವು. ಈ ಸಂಕಷ್ಟದ ಸಮಯದಲ್ಲಿ ರೈಲ್ವೆಯ ಪ್ರಯತ್ನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಕೋವಿಡ್-19 ಎದುರಿಸಲು ಅಗತ್ಯ ವಸ್ತುಗಳ ಸಾಗಾಣೆಗೆ ಸರಕು ರೈಲುಗಳ ಸಂಚಾರ, ತಡವಾಗಿ ವ್ಯಾಗನ್ ಗಳ ಬಿಡುಗಡೆಗೆ ದಂಡ ಮನ್ನ, ರೈಲ್ವೆ ಬೋಗಿಗಳನ್ನು ಆಸ್ಪತ್ರೆ ವಾರ್ಡ್ ಗಳನ್ನಾಗಿ ಪರಿವರ್ತಿಸುವುದು, ಆಹಾರ ಪ್ಯಾಕೆಟ್ ಗಳ ವಿತರಣೆ, ಪಿಪಿಇಗಳನ್ನು ಸಿದ್ಧಪಡಿಸುವುದು, ಸ್ಯಾನಿಟೈಸರ್ ಮತ್ತಿತರ ಉಪಕರಣಗಳ ಉತ್ಪಾದನೆ, ಇತ್ಯಾದಿ ಕ್ರಮಗಳಿಗೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗಿದೆ.
ಸಹಾಯವಾಣಿ ಸಂಖ್ಯೆ 138ರಿಂದ ಸ್ವೀಕರಿಸಲಾದ ಕರೆಗಳು ಬಹುತೇಕ ಆಯಾ ಭೌಗೋಳಿಕ ವ್ಯಾಪ್ತಿಗೆ ಅಂದರೆ ಸಮೀಪದ ರೈಲ್ವೆ ವಿಭಾಗೀಯ ನಿಯಂತ್ರಣ ಕಚೇರಿ ವ್ಯಾಪ್ತಿ(ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಇದರಲ್ಲಿ ರೈಲ್ವೆ ಸಿಬ್ಬಂದಿ, ಸ್ಥಳೀಯ ಭಾಷೆಗಳು ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವಂತಹವರು ಕಾರ್ಯ ನಿರ್ವಹಿಸುತ್ತಾರೆ)ಗೆ ಬಂದಿರುವಂತಹವು. ಇದರಿಂದ ಕರೆ ಮಾಡಿದ ವ್ಯಕ್ತಿಗೆ ತನಗೆ ಸೂಕ್ತ ಎನಿಸಿದ ತಿಳಿದಿರುವ ಭಾಷೆಯಲ್ಲೇ ಮಾರ್ಗದರ್ಶನ ಅಥವಾ ಮಾಹಿತಿ ದೊರಕುತ್ತವೆ. ಈ ಹೊಸ ಅಂಶ ಭಾಷಾ ಅಡತಡೆಯಿಂದ ಹೊರಬರಲು ಸಹಾಯಕವಾಗುವುದಲ್ಲದೆ, ರೈಲ್ವೆ ಗ್ರಾಹಕರಿಗೆ ಸುಲಭವಾಗಿ ಮಾಹಿತಿ ದೊರಕುತ್ತದೆ. ಆಯಾ ವಿಭಾಗದಲ್ಲಿ ಲಭ್ಯವಿರುವ ಮಾಹಿತಿ ಜರೂರಾಗಿ ಸಿಗುತ್ತದೆ.
ಭಾರತೀಯ ರೈಲ್ವೆ, ತನ್ನ ಎಲ್ಲ ಪ್ರಯಾಣಿಕರ ಮತ್ತು ವಾಣಿಜ್ಯ ಬಳಕೆದಾರರ ಹಿತಾಸಕ್ತಿಯನ್ನು ಕಾಯಲು ಸಮಗ್ರ ಪ್ರಯತ್ನಗಳನ್ನು ನಡೆಸಿದೆ ಮತ್ತು ರಾಷ್ಟ್ರೀಯ ಪೂರೈಕೆ ಸರಣಿ ಎಲ್ಲಾ ಸಮಯದಲ್ಲೂ ನಿರಂತರವಾಗಿ ಚಾಲೂ ಇರುವಂತೆ ನೋಡಿಕೊಂಡಿದೆ.
****
(Release ID: 1611636)
Visitor Counter : 278