ಇಂಧನ ಸಚಿವಾಲಯ

ದೀಪ ಆರಿಸಿದ ವೇಳೆ ಪವರ್ ಗ್ರಿಡ್ ಕಾರ್ಯಾಚರಣೆ ಕುರಿತ ಪ್ರಶ್ನೋತ್ತರಗಳು

Posted On: 05 APR 2020 5:21PM by PIB Bengaluru

ದೀಪ ಆರಿಸಿದ ವೇಳೆ ಪವರ್ ಗ್ರಿಡ್ ಕಾರ್ಯಾಚರಣೆ ಕುರಿತ ಪ್ರಶ್ನೋತ್ತರಗಳು

 

ಗ್ರಿಡ್ ಅಸ್ಥಿರತೆ ಕುರಿತ ಎಲ್ಲ ಸಂದೇಹಗಳ ನಿವಾರಣೆ

ಪ್ರಶ್ನೆ 1: ರಾತ್ರಿ 9 ಗಂಟೆಯಿಂದ 9 ಗಂಟೆ 9 ನಿಮಿಷದವರೆಗೆ ಮನೆಗಳಲ್ಲಿನ ದೀಪಗಳನ್ನಷ್ಟೇ ಆರಿಸಬೇಕೆ , ಅಥವಾ ಬೀದಿ ದೀಪಗಳು, ಸಾಮಾನ್ಯ ಪ್ರದೇಶದ ದೀಪಗಳು ಹಾಗೂ ಅವಶ್ಯಕ ಸೇವೆಗಳ ದೀಪಗಳನ್ನೂ ಆರಿಸಬೇಕೆ ?

ಉತ್ತರ :  ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳು ಮನವಿ ಮಾಡಿರುವಂತೆ ಕೇವಲ ಮನೆಗಳಲ್ಲಿನ ವಿದ್ಯುತ್ ದೀಪಗಳನ್ನು ಮಾತ್ರ ಸ್ವಯಂಪ್ರೇರಿತವಾಗಿ ಆಫ್ ಮಾಡಬೇಕು. ಯಾವುದೇ ಬೀದಿ ದೀಪಗಳನ್ನು ಅಥವಾ ಸಾಮಾನ್ಯ ಪ್ರದೇಶಗಳ ದೀಪಗಳನ್ನು, ಆಸ್ಪತ್ರೆ ಮತ್ತು ಇತರ ಅವಶ್ಯಕ ದೀಪಗಳನ್ನು ಆಫ್ ಮಾಡಬಾರದು ಎಂದು ಪುನರುಚ್ಚರಿಸಲಾಗಿದೆ.

ಪ್ರಶ್ನೆ 2 : ಮನೆಗಳಲ್ಲಿನ ದೀಪಗಳನ್ನು ಆರಿಸಿದ ಸಂದರ್ಭದಲ್ಲಿ ಗೃಹೋಪಯೋಗಿ ಉಪಕರಣಗಳು ಸುರಕ್ಷಿತವೇ ?

ಉತ್ತರ : ನಿಮ್ಮ ಎಲ್ಲ ಗೃಹೋಪಯೋಗಿ ಉಪಕರಣಗಳು ಸುರಕ್ಷಿತ, ನೀವು ಫ್ಯಾನ್, ಹವಾನಿಯಂತ್ರಿತ ಯಂತ್ರಗಳು, ಫ್ರಿಡ್ಜ್ ಇತ್ಯಾದಿಗಳನ್ನು ಸ್ವಿಚ್ ಆಫ್ ಮಾಡಬೇಕಿಲ್ಲ. ಭಾರತದ ವಿದ್ಯುತ್ ಗ್ರಿಡ್ ಅನ್ನು ಯಾವುದೇ ಬಗೆಯ ಲೋಡ್ ವ್ಯತ್ಯಯ(ಏರಿಳಿತ)ವನ್ನು ನಿರ್ವಹಣೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಅದರೊಳಗೆ ಹಲವು ನಿಯಂತ್ರಣ ಕ್ರಮಗಳಿವೆ ಮತ್ತು ಲೋಡ್ ವ್ಯತ್ಯಯದಿಂದ ತರಂಗಾಂತರ ಬದಲಾವಣೆಗಳು ಉಂಟಾದರೆ ಅವುಗಳನ್ನು ನಿಯಂತ್ರಿಸಲು ಸುರಕ್ಷತಾ ಕ್ರಮಗಳು ಸಹ ಇವೆ. ಆದ್ದರಿಂದ ಎಲ್ಲ ಗೃಹೋಪಯೋಗಿ ಉಪಕರಣಗಳು ಸಂಪೂರ್ಣ ಸುರಕ್ಷಿತ ಮತ್ತು ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಸಾಮಾನ್ಯ ರೀತಿಯಲ್ಲಿ ಬಳಕೆ ಮಾಡಬಹುದು.

ಪ್ರಶ್ನೆ 3 : ಏಪ್ರಿಲ್ 5ರ ರಾತ್ರಿ 9 ಗಂಟೆಯಿಂದ 9 ಗಂಟೆ 9 ನಿಮಿಷದ ವರೆಗೆ ವಿದ್ಯುತ್ ದೀಪಗಳನ್ನು ಆರಿಸಿದ ಸಂದರ್ಭದಲ್ಲಿ ಗ್ರಿಡ್ ಸ್ಥಿರತೆ ಕಾಯ್ದುಕೊಳ್ಳಲು ಅಗತ್ಯ ವ್ಯವಸ್ಥೆ ಮತ್ತು ಶಿಷ್ಟಾಚಾರಗಳನ್ನು ಕೈಗೊಳ್ಳಲಾಗಿದೆಯೇ ?

ಉತ್ತರ: ಹೌದು, ಗ್ರಿಡ್ ನ ಸ್ಥಿರತೆ ಕಾಯ್ದುಕೊಳ್ಳಲು ಎಲ್ಲಾ ಅಗತ್ಯ ವ್ಯವಸ್ಥೆ ಮತ್ತು ನಿರ್ದಿಷ್ಟ ಕಾರ್ಯಾಚರಣೆ ಶಿಷ್ಟಾಚಾರವನ್ನು ಪಾಲಿಸಲಾಗುತ್ತಿದೆ.

ಪ್ರಶ್ನೆ 4 : ವಿದ್ಯುತ್ ದೀಪಗಳನ್ನು ಆರಿಸುವುದು ಸ್ವಯಂ ಪ್ರೇರಿತವೇ ಅಥವಾ ಕಡ್ಡಾಯವೇ ?

ಉತ್ತರ : ಸ್ವಯಂ ಪ್ರೇರಿತ, ಈಗಾಗಲೇ ಹೇಳಿರುವಂತೆ ಮನೆಗಳಲ್ಲಿನ ವಿದ್ಯುತ್ ದೀಪಗಳನ್ನು ಮಾತ್ರ ಆರಿಸಬೇಕು.

ಪ್ರಶ್ನೆ 5 : ಗ್ರಿಡ್ ನಲ್ಲಿ ಅಸ್ಥಿರತೆ ಉಂಟಾಗುತ್ತದೆ ಮತ್ತು ವೋಲ್ಟೇಜ್ ನಲ್ಲಿ ಏರುಪೇರಾಗಿ ಗೃಹೋಪಯೋಗಿ ಉಪಕರಣಗಳಿಗೆ ತೊಂದರೆಯಾಗುತ್ತದೆ ಎಂದು ಕೆಲವರು ಆತಂಕಗಳನ್ನು ವ್ಯಕ್ತಪಡಿಸಿದ್ದಾರಲ್ಲ ?

ಉತ್ತರ : ಈ ಆತಂಕಗಳು ಸಂಪೂರ್ಣ ತಪ್ಪು ಗ್ರಹಿಕೆಯವು, ಇವೆಲ್ಲ ಸಾಮಾನ್ಯ ಅಂಶಗಳು ಮತ್ತು ಭಾರತೀಯ ವಿದ್ಯುತ್ ಗ್ರಿಡ್ ಅನ್ನು ಲೋಡ್ ವ್ಯತ್ಯಯ ಮತ್ತು ತರಂಗಾಂತರ ಬದಲಾವಣೆಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ನಿರ್ದಿಷ್ಟ ಕಾರ್ಯತಂತ್ರ ಶಿಷ್ಟಾಚಾರದ ಪ್ರಕಾರ ವಿನ್ಯಾಸಗೊಳಿಸಲಾಗಿದೆ.

ಪ್ರಶ್ನೆ 6 : ದೀಪಗಳನ್ನು ಆರಿಸಿದ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಯವನ್ನು ತಡೆದುಕೊಳ್ಳುವಂತಹ ಗ್ರಿಡ್ ನಿರ್ವಹಣಾ ತಂತ್ರಜ್ಞಾನವನ್ನು ಹೊಂದಲಾಗಿದೆಯೇ ?

ಉತ್ತರ :  ಭಾರತೀಯ ವಿದ್ಯುತ್ ಗ್ರಿಡ್ ಸ್ಥಿರವಾಗಿದೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಆಧರಿಸಿದೆ. ಅದು ಯಾವುದೇ ಸಂದರ್ಭದಲ್ಲಿ ಬೇಡಿಕೆಯಲ್ಲಿನ ವ್ಯತ್ಯಯಗಳನ್ನು ನಿರ್ವಹಿಸುವ ಮತ್ತು ಅಗತ್ಯ ರೀತಿಯಲ್ಲಿ ನಿಯಂತ್ರಿಸುವ ರಕ್ಷಣಾ ಸಾಮರ್ಥ್ಯವನ್ನು ಹೊಂದಿದೆ.

ಪ್ರಶ್ನೆ 7 : ಫ್ಯಾನ್, ರೆಫ್ರಿಜರೇಟರ್, ಹವಾನಿಯಂತ್ರಿತ ಯಂತ್ರ, ಇತ್ಯಾದಿ ಗೃಹೋಪಯೋಗಿ ಉಪಕರಣಗಳನ್ನು ಸ್ವಿಚ್ ಆಫ್ ಮಾಡಬೇಕೆ ಅಥವಾ ಆನ್ ನಲ್ಲಿ ಇಡಬೇಕೆ ?

ಉತ್ತರ :  ಎಲ್ಲ ಗೃಹೋಪಯೋಗಿ ಉಪಕರಣಗಳು ಸುರಕ್ಷಿತ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಈ ಉಪಕರಣಗಳನ್ನು ಸಾಮಾನ್ಯ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು.  ರಾತ್ರಿ 9 ಗಂಟೆಗೆ ವಿಶೇಷವಾಗಿ ಇವುಗಳನ್ನು ಸ್ವಿಚ್ ಆಫ್ ಮಾಡುವ ಅಗತ್ಯವಿಲ್ಲ.

ಪ್ರಶ್ನೆ 8 : ಬೀದಿ ದೀಪಗಳನ್ನು ಆರಿಸಲಾಗುತ್ತದೆಯೇ ?

ಉತ್ತರ :  ಇಲ್ಲ.

ಆದರೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಬೀದಿ ದೀಪಗಳನ್ನು ಆನ್ ನಲ್ಲಿ ಇಡುವಂತೆ ಸೂಚಿಸಲಾಗಿದೆ.

ಪ್ರಶ್ನೆ 9 : ಆಸ್ಪತ್ರೆ ಅಥವಾ ಇತರೆ ತುರ್ತು ಅವಶ್ಯಕತೆಗಳು ಮತ್ತು ಪ್ರಮುಖ ಸ್ಥಾವರಗಳಲ್ಲಿ ದೀಪಗಳನ್ನು ಆರಿಸಲಾಗುತ್ತದೆಯೇ ?

ಉತ್ತರ :  ಇಲ್ಲ, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಬಳಕೆ, ಪೌರಾಡಳಿತ ಸೇವೆ, ಕಚೇರಿಗಳು, ಪೊಲೀಸ್ ಠಾಣೆಗಳು ಮತ್ತು ಉತ್ಪಾದನಾ ಘಟಕಗಳು ಸೇರಿದಂತೆ ಅವಶ್ಯಕ ಸೇವೆಗಳಲ್ಲಿ ಲೈಟ್ ಗಳನ್ನು ಆಫ್ ಮಾಡುವುದಿಲ್ಲ. ಗೌರವಾನ್ವಿತ ಪ್ರಧಾನಮಂತ್ರಿಗಳು ಕರೆ ನೀಡಿರುವುದು ಕೇವಲ ಮನೆಗಳಲ್ಲಿನ ವಿದ್ಯುತ್ ದೀಪಗಳನ್ನು ಆರಿಸಲು ಅಷ್ಟೆ.

ಪ್ರಶ್ನೆ 10 : ಮನೆಗಳಲ್ಲಿನ ವಿದ್ಯುತ್ ದೀಪ ಆರಿಸುವುದರಿಂದ ಒಟ್ಟಾರೆ ಲೋಡ್ ನ ಸುಮಾರು ಶೇ.20 ರಷ್ಟು ಕಡಿತವಾಗಲಿದ್ದು, ದಿಢೀರ್ ಶೇ.20ರಷ್ಟು ಲೋಡ್ ತಗ್ಗಿದರೆ, ಗ್ರಿಡ್ ನಲ್ಲಿ ಅಸ್ಥಿರತೆ ಉಂಟಾಗುವುದಿಲ್ಲವೇ ? ಸಚಿವಾಲಯ ಇದಕ್ಕೆ ಏನು ಕ್ರಮ ಕೈಗೊಂಡಿದೆ ?

ಉತ್ತರ :  ಗೃಹ ಬಳಕೆ ವಿದ್ಯುತ್  ಲೋಡ್ ಪ್ರಮಾಣ ಶೇ.20ಕ್ಕಿಂತಲೂ ಕಡಿಮೆ. ಅಂತಹ ಬೇಡಿಕೆ ತಗ್ಗಿದಾಗ ಅದನ್ನು ಸುಲಭ ರೀತಿಯಲ್ಲಿ ನಿರ್ವಹಿಸಲು ನಿರ್ದಿಷ್ಟ ತಾಂತ್ರಿಕ ಕಾರ್ಯಾಚಾರಣೆ ಶಿಷ್ಟಾಚಾರವನ್ನು ಪಾಲಿಸಲಾಗುತ್ತದೆ.

ಪ್ರಶ್ನೆ 11 : ಲೋಡ್ ಶೆಡ್ಡಿಂಗ್ ಇರಲಿದೆಯೇ ? ಇದ್ದರೆ ಅದರ ಪರಿಣಾಮವೇನು ?

ಉತ್ತರ :  ಯಾವುದೇ ಲೋಡ್ ಶೆಡ್ಡಿಂಗ್ ಯೋಚನೆ ಇಲ್ಲ.

***

 



(Release ID: 1611507) Visitor Counter : 175