ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಏಮ್ಸ್ ಜಜ್ಜರ್‌ಗೆ ಡಾ. ಹರ್ಷವರ್ಧನ್: COVID-19 ನಿಗ್ರಹಿಸಲು ಸನ್ನದ್ಧತೆಯ ಪರಿಶೀಲನೆ

Posted On: 05 APR 2020 6:07PM by PIB Bengaluru

ಏಮ್ಸ್ ಜಜ್ಜರ್ಗೆ ಡಾ. ಹರ್ಷವರ್ಧನ್: COVID-19 ನಿಗ್ರಹಿಸಲು ಸನ್ನದ್ಧತೆಯ ಪರಿಶೀಲನೆ

"ಲಾಕ್ಡೌನ್ ಮತ್ತು ಸಾಮಾಜಿಕ ಅಂತರ: COVID-19 ವಿರುದ್ಧ ಪರಿಣಾಮಕಾರಿ ಸಾಮಾಜಿಕ ಲಸಿಕೆ"

COVID-19 ಮೀಸಲಾದ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿರುವ ಏಮ್ಸ್ ಜಜ್ಜರ್

 

COVID-19 ಸಾಂಕ್ರಾಮಿಕ ನಿಗ್ರಹದ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಜಜ್ಜರ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಭೇಟಿ ನೀಡಿದರು.

300 ಹಾಸಿಗೆಗಳ ಪ್ರತ್ಯೇಕತಾ ವಾರ್ಡ್ಗಳನ್ನು ಒಳಗೊಂಡಿರುವ ಏಮ್ಸ್ ಜಜ್ಜರ್ COVID-19 ಕ್ಕೆ ಮೀಸಲಾದ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದ್ದು, ಐಸೋಲೇಷನ್ ನಲ್ಲಿರುವ ರೋಗಿಗಳಿಗೆ ಅಗತ್ಯವಾದ ವೈದ್ಯಕೀಯ ಬೆಂಬಲಗಳೊಂದಿಗೆ ಆರೈಕೆ ಮಾಡಲಾಗುವುದು ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ. ಅವರು COVID-19 ರೋಗಿಗಳಿಗೆ ಪ್ರತ್ಯೇಕ ಸೌಲಭ್ಯವನ್ನು ಹೊಂದಿರುವ ಅತ್ಯಾಧುನಿಕ ಕಟ್ಟಡದ ವಿವಿಧ ಸೌಲಭ್ಯಗಳಿಗೆ ಹಾಗೂ ವಿಶ್ರಾಮ್ ಸದನ, ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಯ ವಸತಿ ನಿಲಯಗಳಿಗೆ ಭೇಟಿ ನೀಡಿದರು. ಸಂದರ್ಭದಲ್ಲಿ ಅವರು ಕೆಲವು COVID-19 ಪೀಡಿತ ರೋಗಿಗಳೊಂದಿಗೆ ಫೋನ್ ನಲ್ಲಿ ವೀಡಿಯೊ ಕರೆ ಮೂಲಕ ಮಾತನಾಡಿದರು ಮತ್ತು ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಜಜ್ಜರ್ ಏಮ್ಸ್ನಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಕೇಳಿದರು.

ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ವಿಡಿಯೋ / ವಾಯ್ಸ್ ಕಾಲ್ ತಂತ್ರಜ್ಞಾನದ ಮೂಲಕ COVID-19 ಸೋಂಕಿತ ಮತ್ತು ಶಂಕಿತ ರೋಗಿಗಳ ಯೋಗಕ್ಷೇಮವನ್ನು ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡುವುದನ್ನು ಖಾತರಿಪಡಿಸಿದ್ದಕ್ಕಾಗಿ ಏಮ್ಸ್ ಜಜ್ಜರ್ ಗೆ ಡಾ. ಹರ್ಷವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದರು.ಕಳೆದ ಕೆಲವು ದಿನಗಳಲ್ಲಿ, ನಾನು COVID-19 ಸನ್ನದ್ಧತೆಯನ್ನು ಪರಿಶೀಲಿಸಲು ಏಮ್ಸ್ (ದೆಹಲಿ), LNJP, RML, ಸಫ್ದರ್ಜಂಗ್ ಮತ್ತು ಈಗ ಏಮ್ಸ್ ಜಜ್ಜರ್ಗಳಿಗೆ ಭೇಟಿ ನೀಡುತ್ತಿದ್ದೇನೆ. ಪರೀಕ್ಷಾ ಕಾಲದಲ್ಲಿ ನಮ್ಮ ಆರೋಗ್ಯ ಪಡೆಯ ಮನೋಸ್ಥೈರ್ಯವನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ.” ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಆಸ್ಪತ್ರೆಗಳು ಮಾಡಿರುವ ವ್ಯವಸ್ಥೆಗಳ ಬಗ್ಗೆ ತೃಪ್ತಿ ಹೊಂದಿದ್ದೇನೆ ಎಂದ ಅವರು, COVID-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ದಾದಿಯರು, ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳ ದಿಟ್ಟತನ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಯನ್ನು ಅವರು ಶ್ಲಾಘಿಸಿದರು.

ರೋಗಿಗಳು ಮತ್ತು ಅವರ ಸಂಬಂಧಿಕರಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ವಿರುದ್ಧ ದಾಳಿ ಕುರಿತು, ಗೃಹ ಸಚಿವಾಲಯವು ಇಂತಹ ಘಟನೆಗಳ ಬಗ್ಗೆ ಗಮನಿಸಿದೆ ಮತ್ತು ಅಂತಹವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಹೇಳಿದರು. “ಈಗ ನಮ್ಮ ವೈದ್ಯರು ಮತ್ತು ಆರೋಗ್ಯ ಪಡೆಯು ಭಯವಿಲ್ಲದೆ ಕೆಲಸ ಮಾಡಬೇಕು. ಸರ್ಕಾರವು ಎಲ್ಲ ರೀತಿಯಲ್ಲೂ ಅವರೊಂದಿಗಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟ ಮುಂದುವರೆಸಲು ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಾವು ಗೌರವ, ಬೆಂಬಲ ಮತ್ತು ಸಹಕಾರ ನೀಡಬೇಕು. ಅದಕ್ಕೆ ಅವರು ಅರ್ಹರುಎಂದು ಅವರು ಹೇಳಿದರು.

ಇದಲ್ಲದೆ, ದೇಶದಲ್ಲಿ COVID-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಾಜ್ಯಗಳ ಸಹಯೋಗದೊಂದಿಗೆ ವಿವಿಧ ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು. ಮಾನ್ಯ ಪ್ರಧಾನ ಮಂತ್ರಿಯವರು ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಉನ್ನತ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದರು.

ಭಾರತದ ಜನರು ಲಾಕ್ಡೌನ್ ಅನ್ನು COVID-19 ಹರಡುವುದನ್ನು ತಡೆಯಲು ಇರುವ ಪರಿಣಾಮಕಾರಿ ಸ್ತ್ರವೆಂದು ಪರಿಗಣಿಸಬೇಕು ಎಂದು ಡಾ.ಹರ್ಷವರ್ಧನ್ ಆಗ್ರಹಿಸಿದರು. "ಭೀತಿ ಹುಟ್ಟಿಸಿರುವ ವೈರಸ್ ವಿರುದ್ಧ ಲಸಿಕೆ ಕಂಡುಹಿಡಿಯಲು ಪ್ರಪಂಚದಾದ್ಯಂತ ಜನರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಮತ್ತು ಆದರೆ ಅದಿನ್ನೂ ಪತ್ತೆಯಾಗಿಲ್ಲ, ನಾವು ಲಾಕ್ಡೌನ್ ಮತ್ತು ಸಾಮಾಜಿಕ ಅಂತರವನ್ನು COVID-19 ವಿರುದ್ಧ ಪರಿಣಾಮಕಾರಿ ಸಾಮಾಜಿಕ ಲಸಿಕೆ ಎಂದು ಪರಿಗಣಿಸಬೇಕು" ಎಂದು ಅವರು ಹೇಳಿದರು.

ಪಿಪಿಇಗಳು, ಎನ್ 95 ಮುಖಗವಸುಗಳು ಮತ್ತು ವೆಂಟಿಲೇಟರ್ಗಳ ಲಭ್ಯತೆಯ ಕುರಿತು ಮಾತನಾಡಿದ ಆರೋಗ್ಯ ಸಚಿವರು, “ಅಗತ್ಯವಿದ್ದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸುವ ಸಲುವಾಗಿ ನಾವು ಈಗಾಗಲೇ ಸಾಕಷ್ಟು ಪ್ರಮಾಣಕ್ಕೆ ಆದೇಶ ನೀಡಿದ್ದೇವೆ ಎಂದು ಹೇಳಿದರು.

ದೇಶದ ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ದೇಶವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಲು ಮಾನ್ಯ ಪ್ರಧಾನಿಯವರು ನೀಡಿರುವ ಕರೆಗೆ ಅನುಸಾರವಾಗಿ ಜನರು ಇಂದು ರಾತ್ರಿ 09 ಗಂಟೆಗೆ ದೀಪ ಬೆಳಗಿಸಬೇಕೆಂದು ಅವರು ಒತ್ತಾಯಿಸಿದರು.

***

 


(Release ID: 1611450) Visitor Counter : 190