ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
ಆಹಾರ ಸಂಸ್ಕರಣಾ ಉದ್ಯಮದ ಸಮಸ್ಯೆಗಳನ್ನು ಬಗೆಹರಿಸಲು ಆಹಾರ ಸಂಸ್ಕರಣಾ ಸಚಿವಾಲಯವು (MoFPI) ಸಂಬಂಧಪಟ್ಟ ಇಲಾಖೆಗಳೊಂದಿಗೆ ತೊಡಗಿಸಿಕೊಂಡಿದೆ: ಹರ್ಸಿಮ್ರತ್ ಕೌರ್ ಬಾದಲ್
Posted On:
05 APR 2020 2:07PM by PIB Bengaluru
ಆಹಾರ ಸಂಸ್ಕರಣಾ ಉದ್ಯಮದ ಸಮಸ್ಯೆಗಳನ್ನು ಬಗೆಹರಿಸಲು ಆಹಾರ ಸಂಸ್ಕರಣಾ ಸಚಿವಾಲಯವು (MoFPI) ಸಂಬಂಧಪಟ್ಟ ಇಲಾಖೆಗಳೊಂದಿಗೆ ತೊಡಗಿಸಿಕೊಂಡಿದೆ: ಹರ್ಸಿಮ್ರತ್ ಕೌರ್ ಬಾದಲ್
ಕೋವಿಡ್ -19 ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರ ಸಂಸ್ಕರಣಾ ಸಚಿವರಿಂದ ಕೈಗಾರಿಕಾ ಪ್ರತಿನಿಧಿಗಳೊಂದಿಗೆ 2 ನೇ ವಿಡಿಯೋ ಕಾನ್ಫರೆನ್ಸ್
ಉದ್ಯಮದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಆಹಾರ ಸಂಸ್ಕರಣಾ ಸಚಿವಾಲಯವು ಸಂಬಂಧಪಟ್ಟ ಇಲಾಖೆಗಳೊಂದಿಗೆ ತೊಡಗಿಸಿಕೊಂಡಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವೆ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ. ಎಫ್ಐಸಿಸಿಐ, ಸಿಐಐ, ಅಸ್ಸೋಚಾಮ್, ಪಿಎಚ್ಡಿಸಿಸಿಐ ಮತ್ತು ಇತರ ಪ್ರಮುಖ ಉದ್ಯಮ ಸಂಘಗಳೊಂದಿಗೆ ಸಚಿವರು 2020 ರ ಏಪ್ರಿಲ್ 4 ರಂದು 2 ನೇ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ, ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಗಳು ವ್ಯಾಪಾರ ವಾತಾವರಣವನ್ನು ಸರಾಗಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಮತ್ತು ಮೊದಲ ವಿಡಿಯೋ ಕಾನ್ಫರೆನ್ಸ್ ನಂತರದ ಸಮಸ್ಯೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು.
ಆಹಾರ ಮತ್ತು ಔಷಧಿಗಳ ಲಭ್ಯತೆಗಾಗಿ ಪೂರೈಕೆ ಸರಪಳಿ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಗೆ ಅನುಕೂಲವಾಗುವಂತೆ ಸ್ವೀಕರಿಸಲಾದ ಸುಮಾರು 348 ಸಮಸ್ಯೆಗಳಲ್ಲಿ ಶೇ.50 ನ್ನು ಪರಿಹರಿಸಲಾಗಿದೆ ಮತ್ತು ಉಳಿದವುಗಳು ಆ ನಿಟ್ಟಿನಲ್ಲಿವೆ ಎಂದು ಉದ್ಯಮವು ಎದುರಿಸುತ್ತಿರುವ ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಲು ರಚಿಸಲಾಗಿರುವ ಕುಂದುಕೊರತೆ ಕೋಶವು ಸಚಿವಾಲಯಕ್ಕೆ ತಿಳಿಸಿದೆ. ವಸ್ತುಗಳು ಸಂಚಾರ ಆರಂಭಿಸಿವೆ ಮತ್ತು MoFPI ಯಿಂದ ಅಪಾರ ಬೆಂಬಲವನ್ನು ಸಿಗುತ್ತಿದೆ ಎಂದು ಉದ್ಯಮದ ಸದಸ್ಯರು ಹೇಳಿದರು.
ಲಾಕ್ ಡೌನ್ ಮುಗಿದ ನಂತರ ಆಹಾರ ಸಂಸ್ಕರಣಾ ಉದ್ಯಮದ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರು ಉದ್ಯಮದ ಮುಖಂಡರಿಂದ ಸಲಹೆಗಳನ್ನು ಆಹ್ವಾನಿಸಿದರು. ಉದ್ಯಮವು ಕಾರ್ಮಿಕರು ಮತ್ತೆ ಮರಳಿ ಕೆಲಸಕ್ಕೆ ಬರಬೇಕಾದ ಅವಶ್ಯಕತೆಯಂತಹ ಕಳವಳಗಳನ್ನು ವ್ಯಕ್ತಪಡಿಸಿತು. ಅದಕ್ಕಾಗಿ ವಿಶೇಷ ರೈಲುಗಳು ಬೇಕಾಗಬಹುದು ಎಂದು ಅವರು ಸೂಚಿಸಿದರು. ತಕ್ಷಣದ ಹಣಕಾಸು ಬಿಕ್ಕಟ್ಟಿನ ಸಮಸ್ಯೆಯ ಬಗ್ಗೆಯೂ ಮಾತನಾಡಿದರು. ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಕಾರ್ಯ ಬಂಡವಾಳದ ಅಗತ್ಯವಿದೆ, ಈಶಾನ್ಯ ಪ್ರದೇಶದಲ್ಲಿನ ಕಾರ್ಯಾಚರಣೆಗಳ ಬಗ್ಗೆಯೂ ಸಮಸ್ಯೆ ಇದೆ ಎಂದು ಅವರು ಹೇಳಿದರು.
ಉದ್ಯಮದ ಸಲಹೆಗಳಿಗೆ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ ಧನ್ಯವಾದ ಅರ್ಪಿಸಿದರು ಮತ್ತು ಅವರ ಎಲ್ಲಾ ಕಳವಳಗಳನ್ನು ಸೂಕ್ತ ವೇದಿಕೆಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಎಲ್ಲರೂ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲಿ ಎಂದು ಆಶಿಸಿ ಅವರು ಸಭೆಯನ್ನು ಮುಕ್ತಾಯಗೊಳಿಸಿದರು.
ಎಫ್ಪಿಐ ರಾಜ್ಯ ಸಚಿವ ಶ್ರೀ ರಾಮೇಶ್ವರ ತೆಲಿ ಅವರು ಉದ್ಯಮವು ಎತ್ತಿದ ಅಂಶಗಳನ್ನು ಶ್ಲಾಘಿಸಿದರು ಮತ್ತು ವಿವಿಧ ಈಶಾನ್ಯ ರಾಜ್ಯಗಳೊಂದಿಗೆ ಈ ಸಮಸ್ಯೆಗಳನ್ನು ಚರ್ಚಿಸುವುದಾಗಿ ತಿಳಿಸಿದರು.
***
(Release ID: 1611378)
Visitor Counter : 262
Read this release in:
English
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Tamil
,
Telugu