ರಕ್ಷಣಾ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೃತ್ತಿಪರರ ಪ್ರಾಥಮಿಕ ಆರೋಗ್ಯ ರಕ್ಷಿಸುವ ಮುಖ ರಕ್ಷಾ ಕವಚಗಳು ಮತ್ತು ಸ್ಯಾನಿಟೈಸರ್ ಚೌಕಟ್ಟು ಪ್ರದೇಶಗಳನ್ನು ಅಭಿವೃದ್ಧಿಪಡಿಸಿದ ಡಿಆರ್ ಡಿಒ

Posted On: 04 APR 2020 6:29PM by PIB Bengaluru

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೃತ್ತಿಪರರ ಪ್ರಾಥಮಿಕ ಆರೋಗ್ಯ ರಕ್ಷಿಸುವ ಮುಖ ರಕ್ಷಾ ಕವಚಗಳು ಮತ್ತು ಸ್ಯಾನಿಟೈಸರ್ ಚೌಕಟ್ಟು ಪ್ರದೇಶಗಳನ್ನು ಅಭಿವೃದ್ಧಿಪಡಿಸಿದ ಡಿಆರ್ ಡಿಒ

 

ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಪ್ರಯತ್ನಗಳು ಮುಂದುವರಿದಿರುವಂತೆಯೇ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಕ್ಷಿಪ್ರ ಗತಿಯಲ್ಲಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ತನ್ನ ವೈಜ್ಞಾನಿಕ ಸಮುದಾಯವನ್ನು ಬಳಸಿಕೊಳ್ಳುತ್ತಿದೆ. ಡಿಆರ್ ಡಿಒ ಪ್ರಯೋಗಾಲಯಗಳು ಉದ್ಯಮದ ಪಾಲುದಾರರಿಗೆ ಪೂರಕವಾಗಿ ಭಾರೀ ಪ್ರಮಾಣದ ಉತ್ಪಾದನೆಯಲ್ಲಿ ಕಾರ್ಯೋನ್ಮುಖವಾಗಿದೆ.

ವೈಯಕ್ತಿಕ ಸ್ಯಾನಿಟೈಸೇಶನ್ (ನಿರ್ಮಲೀಕರಣ) ಚೌಕಟ್ಟುಗಳು (ಪಿಎಸ್ಇ);

ಅಹಮದಾಬಾದ್ ಡಿಆರ್ ಡಿಒ ಪ್ರಯೋಗಾಲಯ, ವಾಹನ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ವಿಆರ್ ಡಿಇ), ಸಂಪೂರ್ಣ ದೇಹ ಸೋಂಕಿನ ವಿರುದ್ಧ ನಿಯಂತ್ರಿಸುವಂತಹ ಪಿಎಸ್ಇ ಹೆಸರಿನ ಉಪಕರಣವನ್ನು ವಿನ್ಯಾಸಗೊಳಿಸಿದೆ. ಇದರೊಳಗೆ ನಡೆದು ಹೋಗಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಿರುವ ವೈಯಕ್ತಿಕ ಸೋಂಕು ನಿವಾರಣೆ(ಡಿಕಂಟಾಮಿನೇಷನ್) ಚೌಕಟ್ಟುಗಳನ್ನು ಓರ್ವ ವ್ಯಕ್ತಿ ಒಮ್ಮೆ ಬಳಸಬಹುದಾಗಿದೆ. ಇದು ಮಡಿಚಿಡಬಹುದಾದ ಉಪಕರಣವಾಗಿದ್ದು, ಇದರಲ್ಲಿ ಸ್ಯಾನಿಟೈಸರ್ ಮತ್ತು ಸೋಪು ಡಿಸ್ಪೆನ್ಸರ್ ಇರುತ್ತವೆ. ಇದರೊಳಗೆ ಪ್ರವೇಶವಾದ ಕೂಡಲೇ ಕಾಲಿನಿಂದ ಪೆಡಲ್ ಗಳನ್ನು ಒತ್ತಿದರೆ ಸೋಂಕು ನಿವಾರಣಾ ಪ್ರಕ್ರಿಯೆ ಆರಂಭವಾಗುತ್ತದೆ, ಈ ಚೇಂಬರ್ ಪ್ರವೇಶಿಸುತ್ತಿದ್ದಂತೆ ವಿದ್ಯುನ್ಮಾನ ಚಾಲಿತ ಪಂಪ್, ಸೋಂಕು ನಿವಾರಿಸುವ ಹೈಪೋ ಸೋಡಿಯಂ ಕ್ಲೋರೈಡ್ಅನ್ನು ಹೊಗೆಯ ರೀತಿಯಲ್ಲಿ ಸಿಂಪಡಿಸುತ್ತದೆ. ಈ ಧೂಮದ ಸಿಂಪಡಣೆ 25 ಸೆಕೆಂಡ್ ಗಳ ಕಾಲ ಇರಲಿದೆ ಮತ್ತು ಆ ಕಾರ್ಯಾಚರಣೆ ಮುಗಿಯುವ ಸೂಚನೆ ನೀಡಿ ನಂತರ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ನಿಯಮದಂತೆ ಸೋಂಕು ನಿವಾರಣೆಗೆ ಒಳಗಾಗುವ ವ್ಯಕ್ತಿ ಚೇಂಬರ್ ಒಳ ಪ್ರವೇಶಿಸುತ್ತಿದ್ದಂತೆ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾದ ಅಗತ್ಯವಿದೆ.

https://ci5.googleusercontent.com/proxy/SKPJMKYWBrQPPI73hfSlj_xzgd44iuzJYz5WVnOqG_vfdsgm6CXDtbf5t5TJmTmZMlfFw-6vk8t2fLMtF1F2iga7ui3RcFwpYlY2CfCmcpczQ_o4Znbo=s0-d-e1-ft#https://static.pib.gov.in/WriteReadData/userfiles/image/image00200D8.jpghttps://ci4.googleusercontent.com/proxy/jYj3ZgDZkFC-LgssNtGhFwVeffUIzdHuHivYABFSVO0VDee_lwGTCitTSEzmEuVq8_s6HddGVjjj0YWACtnzdBEMpL3q39AnGbpv-1qggx0_B3uVDjIg=s0-d-e1-ft#https://static.pib.gov.in/WriteReadData/userfiles/image/image001CG6J.jpg

 

ಈ ವ್ಯವಸ್ಥೆಯಲ್ಲಿ ಮೇಲ್ಛಾವಣಿ ಇರಲಿದ್ದು, ಕೆಳಭಾಗದಲ್ಲಿ ಒಟ್ಟು 700 ಲೀಟರ್ ಸಾಮರ್ಥ್ಯದ ಟ್ಯಾಂಕ್ ಇರುತ್ತದೆ. ಸರಿಸುಮಾರು 650 ವ್ಯಕ್ತಿಗಳು ಈ ಚೇಂಬರ್ ಪ್ರವೇಶ ಮಾಡಿ, ಸೋಂಕು ನಿವಾರಣಾ ಪ್ರಕ್ರಿಯೆಗೆ ಒಳಗಾದ ನಂತರ ಆ ಟ್ಯಾಂಕ್ ಅನ್ನು ಮತ್ತೆ ಭರ್ತಿಮಾಡುವ ಅಗತ್ಯವಿದೆ.

ಈ ವ್ಯವಸ್ಥೆಯ ಮೇಲ್ಭಾಗದ ಗೋಡೆಗಳಿಗೆ ಗಾಜಿನ ಪ್ಯಾನಲ್ ಗಳಿದ್ದು, ಅವುಗಳಿಂದ ಸುಲಭವಾಗಿ ನಿಗಾವಹಿಸಬಹುದಾಗಿದೆ ಮತ್ತು ರಾತ್ರಿ ವೇಳೆಗೆ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಾರೆ ಈ ವ್ಯವಸ್ಥೆಯ ಕಾರ್ಯಾಚರಣೆಯ ಮೇಲೆ ನಿಗಾವಹಿಸಲು ಒಂದು ಪ್ರತ್ಯೇಕ ಆಪರೇಟರ್ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿರುತ್ತದೆ.

ಈ ವ್ಯವಸ್ಥೆಯನ್ನು ಗಾಜಿಯಾಬಾದ್ ನ ಮೆಸ್ಸರ್ಸ್ ಡಿಎಚ್ ಲಿಮಿಟೆಡ್ ನ ಸಹಾಯದಿಂದ ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಸಿದ್ಧಪಡಿಸಲಾಗಿದೆ. ಆಸ್ಪತ್ರೆಗಳು, ಮಾಲ್ ಗಳು, ಕಚೇರಿ ಕಟ್ಟಡಗಳು ಮತ್ತು ಸೂಕ್ಷ್ಮ ಸ್ಥಾವರಗಳ ಪ್ರವೇಶ ಮತ್ತು ನಿರ್ಗಮನ ದ್ವಾರದ ಬಳಿ ಇರುವ ಹೆಚ್ಚಿನ ಜನ ಓಡಾಡುವ ಪ್ರದೇಶಗಳಲ್ಲಿರುವ ವ್ಯಕ್ತಿಗಳಲ್ಲಿ ಸೋಂಕು ನಿವಾರಣೆಗೆ(disinfection)ಗೆ ಈ ವ್ಯವಸ್ಥೆಯನ್ನು ಬಳಸಬಹುದಾಗಿದೆ.

ಪೂರ್ಣ ಮುಖ ರಕ್ಷಾಕವಚ (ಎಫ್ಎಫ್ಎಂ)

ಹೈದ್ರಾಬಾದ್ ನ ಇಮರಾತ್ ಸಂಶೋಧನಾ ಕೇಂದ್ರ(ಆರ್ ಸಿ ಐ) ಮತ್ತು ಚಂಡಿಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯ(ಟಿಬಿಆರ್ ಎಲ್) ಕೋವಿಡ್-19 ರೋಗಿಗಳನ್ನು ನಿರ್ವಹಿಸುತ್ತಿರುವ ವೃತ್ತಿಪರರ ಆರೋಗ್ಯ ರಕ್ಷಣೆಗೆ ಅನುಕೂಲವಾಗುವಂತಹ ಪೂರ್ಣ ಮುಖ ರಕ್ಷಾ ಕವಚವನ್ನು ಅಭಿವೃದ್ಧಿಪಡಿಸಿದೆ. ಈ ಬಾರವಿಲ್ಲದ ಹಗುರ ಮಾಸ್ಕ್ ದೀರ್ಘಕಾಲ ಅತ್ಯಂತ ಆರಾಮಾಗಿ ಧರಿಸಬಹುದಾಗಿದೆ. ಸಾಮಾನ್ಯವಾಗಿ ಲಭ್ಯವಿರುವ ಎ4 ಗಾತ್ರದ ಓವರ್ –ಹೆಡ್ ಪ್ರೊಜಕ್ಷನ್ (ಒಎಚ್ ಪಿ) ಫಿಲಂನಿಂದ ಮುಖವನ್ನು ರಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.

 

https://ci3.googleusercontent.com/proxy/ZvsOvv-em_grzRckEAboXXn5-XXWrg6R22cyZsvkFhjyczbDVBjLKnuOWSlPI4GD7LIRdkKVApWvLPptet2FeqtGjvlebuLc9Hc56_u0Amn-l2qUo8D6=s0-d-e1-ft#https://static.pib.gov.in/WriteReadData/userfiles/image/image003K9X5.pnghttps://ci4.googleusercontent.com/proxy/-HXqzjO3ytW0EV0rk9ZFVd-7P7ZleVq2Oi6W5HzosC5b1z38YluPyrmgRTbRwoa0GnEixCHMxY3pBue-HARHw30_xe35uq4fGvqxbfnFdkD21bUCu5pr=s0-d-e1-ft#https://static.pib.gov.in/WriteReadData/userfiles/image/image0040EKH.png

 

ಈ ಮಾಸ್ಕಅನ್ನು ಹಿಡಿದಿಡುವ ಫ್ರೇಂ ಅನ್ನು ಫ್ಯೂಸ್ಡ್ ಡಿಪೋಸಿಷನ್ ಮಾಡಲಿಂಗ್(3ಡಿ ಪ್ರಿಂಟಿಂಗ್) ಬಳಸಿ ಉತ್ಪಾದಿಸಲಾಗಿದೆ. ಫ್ರೇಂನ 3ಡಿ ಪ್ರಿಂಟ್ ಮಾಡಲು ಪಾಲಿಲ್ಯಾಕ್ಟಿಕ್ ಆಸಿಡ್ ಫಿಲಮೆಂಟ್ ಬಳಕೆ ಮಾಡಲಾಗುತ್ತದೆ. ಈ ಥರ್ಮೋಪ್ಲಾಸ್ಟಿಕ್ ಅನ್ನು ನವೀಕರಿಸಬಹುದಾದ ಜೋಳದ ಕಡ್ಡಿ ಅಥವಾ ಕಬ್ಬಿನ ಸಿಪ್ಪೆ ಮತ್ತು ಪರಿಸರದಲ್ಲಿ ನಾಶವಾಗುವ ಜೈವಿಕಗಳನ್ನು ಬಳಸಿ ಸಂಪನ್ಮೂಲಗಳಿಂದ ಬಳಕೆ ಮಾಡಲಾಗಿದ್ದು, ಈ ಫೇಸ್ ಮಾಸ್ಕ್ ಅನ್ನು ಇಂಜಕ್ಷನ್ ಮಾಡಲಿಂಗ್ ತಂತ್ರಜ್ಞಾನ ಬಳಸಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಬಹುದು.

ಟಿ ಆರ್ ಬಿ ಎಲ್ ನಲ್ಲಿ ಪ್ರತಿ ದಿನ ಒಂದು ಸಾವಿರ ಮುಖ ರಕ್ಷಾಕವಚಗಳನ್ನು ಉತ್ಪಾದಿಸಲಾಗುತ್ತಿದೆ ಮತ್ತು ಅವುಗಳನ್ನು ಚಂಡಿಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ(ಪಿಜಿಐಎಂಇಆರ್)ಗೆ ಪೂರೈಕೆ ಮಾಡಲಾಗುತ್ತಿದೆ. ಅದೇ ರೀತಿ ಆರ್ ಸಿ ಐನಲ್ಲಿ ನೂರು ಮುಖ ರಕ್ಷಾ ಕವಚಗಳನ್ನು ಉತ್ಪಾದಿಸಲಾಗುತ್ತಿದೆ ಮತ್ತು ಅವುಗಳನ್ನು ಹೈದ್ರಾಬಾದ್ ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಆಸ್ಪತ್ರೆಗೆ ಹಸ್ತಾಂತರ ಮಾಡಲಾಗುತ್ತಿದೆ. ಪ್ರಾಯೋಗಿಕ ಬಳಕೆ ಯಶಸ್ವಿ ಆಧರಿಸಿ ಪಿಜಿಐಎಂಇಆರ್ ಮತ್ತು ಇಎಸ್ಐಸಿ ಆಸ್ಪತ್ರೆಗಳಿಂದ ಸುಮಾರು 10,000 ಮುಖ ರಕ್ಷಾ ಕವಚಗಳಿಗೆ ಬೇಡಿಕೆ ಬಂದಿದೆ.

***


(Release ID: 1611261) Visitor Counter : 179