ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ರಿಂದ ಹೊರಬರವ ಸಿದ್ಧತೆಯ ಖುದ್ದು ಪರಿಶೀಲನೆಗೆ ಎಲ್.ಎನ್.ಜೆ.ಪಿ. ಆಸ್ಪತ್ರೆಗೆ ಭೇಟಿ ನೀಡಿದ ಡಾ. ಹರ್ಷವರ್ಧನ್

Posted On: 04 APR 2020 4:36PM by PIB Bengaluru

ಕೋವಿಡ್ -19 ರಿಂದ ಹೊರಬರವ ಸಿದ್ಧತೆಯ ಖುದ್ದು ಪರಿಶೀಲನೆಗೆ ಎಲ್.ಎನ್.ಜೆ.ಪಿ. ಆಸ್ಪತ್ರೆಗೆ ಭೇಟಿ ನೀಡಿದ ಡಾ. ಹರ್ಷವರ್ಧನ್

ಸಮರ್ಪಿತ ಕೋವಿಡ್ -19 ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸಲಿರುವ ಎಲ್.ಎನ್.ಜೆ.ಪಿ.

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರಿಂದು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ 19ರಿಂದ ಹೊರಬರಲು ಮಾಡಿಕೊಂಡಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಕೇಂದ್ರ ಸಚಿವರು ಜ್ವರದ ವಾರ್ಡ್, ಹೊಸ ಶಸ್ತ್ರಚಿಕಿತ್ಸೆ ವಾರ್ಡ್ ವಿಭಾಗ,  ಪೌಷ್ಟಿಕ ಆಹಾರ ಇಲಾಖೆವಿಶೇಷ ವಾರ್ಡ್ಕರೋನಾ ಸ್ಕ್ರೀನಿಂಗ್ ಸೆಂಟರ್ಕರೋನಾ ಕಾಳಜಿ ಘಟಕ ಮತ್ತು ಐ.ಸಿ.ಯು.ಗೂ ಭೇಟಿ ನೀಡಿದರು. ವಿವಿಧ ವಾರ್ಡ್ ಗಳು ಮತ್ತು ಆಸ್ಪತ್ರೆಯ ಸಮುಚ್ಛಯದ ಸುದೀರ್ಘ ಪರಾಮರ್ಶೆ ಮತ್ತು ಪರಿಶೀಲನೆಯ ಬಳಿಕ ಆರೋಗ್ಯ ಸಚಿವರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಇಲಾಖೆಗಳ ಕಾರ್ಯ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಅಲ್ಲಿ ನಿಯುಕ್ತರಾಗಿರುವ ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಸಮರ್ಪಣಾಭಾವ ಮತ್ತು ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಇಂಥ ಸಮಯದಲ್ಲಿ ನಿಮ್ಮ ಸೇವೆಗೆ ದೇಶ ಆಭಾರಿಯಾಗಿರುತ್ತದೆ”, ಎಂದು ಹೇಳಿದರುಆಸ್ಪತ್ರೆಯಲ್ಲಿ ಸೂಕ್ತವಾಗಿ ಸೋಂಕು ನಿಯಂತ್ರಣ ಶಿಷ್ಟಾಚಾರವನ್ನು ಅನುಸರಿಸುವಂತೆ ಅವರು ಪ್ರಚೋದಿಸಿದರು. ಹೆಚ್ಚುತ್ತಿರುವ ಪ್ರತ್ಯೇಕೀಕರಣ ಹಾಸಿಗೆಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡುಡಾ.ಹರ್ಷವರ್ಧನ್ಎಲ್.ಎನ್.ಜೆ.ಪಿ ಆಸ್ಪತ್ರೆ ಪ್ರತ್ಯೇಕೀಕರಣ ವಾರ್ಡ್‌ಗಳು ಮತ್ತು ಹಾಸಿಗೆಗಳನ್ನು ಒಳಗೊಂಡು ಸಮರ್ಪಿತವಾದ ಕೋವಿಡ್ -19 ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಸರ್ಕಾರ ಎಲ್.ಎನ್.ಜೆ.ಪಿ. ಆಸ್ಪತ್ರೆಯಲ್ಲಿ 1500 ಹಾಸಿಗೆಗಳು ಮತ್ತು ಜಿ.ಬಿ. ಪಂತ್ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ 500 ಹಾಸಿಗೆಗಳನ್ನು ಕೋವಿಡ್ 19 ರೋಗಿಗಳಿಗಾಗಿ ಗುರುತಿಸಿದೆ ಎಂದು  ಡಾ. ಹರ್ಷವರ್ಧನ್ ತಿಳಿಸಿದರು. ಈ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಸಾರಿಗೆಯಲ್ಲಿ ಆಗುವ ಸಮಸ್ಯೆ ಮತ್ತು ಅವರ ಕುಟುಂಬದವರೊಂದಿಗೆ ತೆರೆದುಕೊಳ್ಳುವುದನ್ನು ತಪ್ಪಿಸಲು ಆವರಣದಲ್ಲಿರುವ ಶುಶ್ರೂಷಕರ ಹಾಸ್ಟೆಲ್ ಮತ್ತು ಹತ್ತಿರದಲ್ಲಿರುವ ಹಾಸ್ಟೆಲ್ ಗಳಲ್ಲಿ ಊಟ ಮತ್ತು ವಸತಿಯ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು. ಆಸ್ಪತ್ರೆಯಲ್ಲಿ ಸೇವೆಗಳನ್ನು ಪಡೆಯುತ್ತಿರುವ ರೋಗಿಗಳಿಗೆ ಟೆಲಿ-ಮೆಡಿಸಿನ್ / ಟೆಲಿ ಸಮಾಲೋಚನೆ ವ್ಯವಸ್ಥೆಯನ್ನು ಸ್ಥಾಪಿಸಲು ಅವರು ಸೂಚಿಸಿದರು. ನವದೆಹಲಿಯ ಏಮ್ಸ್ ನಲ್ಲಿ ಇದೇ ರೀತಿಯ ಸ್ಥಾಪನೆಯನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಸರ್ಕಾರ ಈಗಾಗಲೇ ಡಿಜಿಟಲ್ ಪ್ರಿಸ್ಕ್ರಿಪ್ಷನ್ ಮತ್ತು ಔಷಧಗಳನ್ನು ಮನೆಗೇ ವಿತರಿಸುವ ವ್ಯವಸ್ಥೆಗೆ ಅನುಕೂಲವಾಗುವಂತೆ ಸೂಚನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ಪಿಪಿಇಗಳು, ಎನ್ 95 ಮಾಸ್ಕ್ ಗಳು ಮತ್ತು ವೆಂಟಿಲೇಟರ್ ಗಳ ಲಭ್ಯತೆ ಕುರಿತಂತೆ ಮಾತನಾಡಿದ ಆರೋಗ್ಯ ಸಚಿವರು, ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಅದನ್ನೂ ಪೂರೈಸಲು ನಾವು ಈಗಾಗಲೇ ಬೇಡಿಕೆ ಸಲ್ಲಿಸಿದ್ದೇವೆ’’ ವಿವಿಧ ರಾಜ್ಯ ಸರ್ಕಾರಗಳು ಈಗಾಗಲೇ ಸೂಕ್ತ ಸಂಖ್ಯೆಯ ಅಂದರೆ 4,66,057  ಪಿಪಿಇಗಳು ಮತ್ತು 25,28,996 ಎನ್.95 ಮಾಸ್ಕ್ ಗಳನ್ನು ಹೊಂದಿದೆ, ಅವುಗಳಿಗೆ ಹೆಚ್ಚಿನ ಸಂಖ್ಯೆಯ ಪಿಪಿಇ (ಸಂಖ್ಯೆಯಲ್ಲಿ) 1,54,250 ಮತ್ತು 1,53,300 ಎನ್. 95 ಮಾಸ್ಕ್ ಗಳನ್ನು ಮುಂದಿನ ಕೆಲವು ದಿನಗಳಲ್ಲೇ ಪೂರೈಸಲಾಗುವುದು ಎಂದರು.

ವೈದ್ಯರುಗಳು ಮತ್ತು ಮುಂಪಡೆಯ ಆರೋಗ್ಯ ವೃತ್ತಿಪರರ ವಿರುದ್ಧದ ಅವಹೇಳನೆಯ ವಿಷಯದಲ್ಲಿಗೃಹ ಸಚಿವಾಲಯವು ಇಂತಹ ಘಟನೆಗಳ ಬಗ್ಗೆ ಗಮನ ಹರಿಸಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ ಎಂದರು. ಕೊರೋನಾ ಬಾಧಿತ ಜನರನ್ನು ಉಳಿಸಲು ತಮ್ಮ ಜೀವವನ್ನೇ ಒತ್ತೆ ಇಟ್ಟು ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರುಗಳ ಮೇಲೆ ಹಲ್ಲೆ ಮಾಡದಂತೆ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.

ದೇಶದಲ್ಲಿ ಕೋವಿಡ್ -19 ಪಸರಿಸದಂತೆ ತಡೆಯಲು ಸಾಮಾಜಿಕ ಅಂತರದ ಮಾರ್ಗಸೂಚಿಯನ್ನು ಮತ್ತು  ಮಾಡಬಹುದಾದ ಮತ್ತು ಮಾಡಬೇಕಾದ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜನತೆಗೆ ಅವರು ಮನವಿ ಮಾಡಿದರು.

 

*****


(Release ID: 1611213) Visitor Counter : 208