ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ ಡೇಟ್ಸ್

Posted On: 04 APR 2020 7:11PM by PIB Bengaluru

ಕೋವಿಡ್-19 ಅಪ್ ಡೇಟ್ಸ್
 

ದೇಶದಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆ ಹಾಗೂ ಮುಂಜಾಗ್ರತೆಯಾಗಿ ಭಾರತ ಸರ್ಕಾರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳನ್ನು ನಿರಂತರವಾಗಿ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ದೇಶದಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆ ಅಗತ್ಯತೆಗಳನ್ನು ಪೂರೈಸಲು ವೈದ್ಯರು, ನರ್ಸ್ ಗಳು, ವೃತ್ತಿಪರರು ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರು ಸೇರಿದಂತೆ ಮತ್ತಿತರರು ನಾನಾ ಹಂತಗಳಲ್ಲಿ ದುಡಿಯುತ್ತಿದ್ದಾರೆ. 9.70 ಲಕ್ಷ ಆಶಾ ಕಾರ್ಯಕರ್ತರು, ಒಂದು ಲಕ್ಷ ಆಯುಷ್ ವೃತ್ತಿಪರರು, ಎನ್ ಸಿಸಿ ಕೆಡೆಟ್ ಗಳು, ನಿವೃತ್ತ ಯೋಧರು, ರೆಡ್ ಕ್ರಾಸ್/ಎನ್ಎಸ್ಎಸ್/ಎನ್ ವೈಕೆ ಸ್ವಯಂ ಸೇವಕರು, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನೌಕರರು, ನಾಗರಿಕ ಸೇವಾ ಸಂಘಟನೆಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ನಿವಾಸಿಗಳು, ಪಿಜಿ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ನಿರ್ದಿಷ್ಟ ಕಾರ್ಯತಂತ್ರ ಶಿಷ್ಟಾಚಾರ(ಎಸ್ಒಪಿ)ಅನ್ನು ಆಸ್ಪತ್ರೆಗಳ ನಿರ್ವಹಣೆಗೆ ಸಿದ್ಧಪಡಿಸಲಾಗಿದೆ. ಹೆಚ್ಚುವರಿಯಾಗಿ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು, ಸರ್ಕಾರಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಖಾಸಗಿ ವೈದ್ಯರು ಸೇರಿ, 31,000ಕ್ಕೂ ಅಧಿಕ ವೈದ್ಯರು ಕೋವಿಡ್-19 ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಸ್ವಯಂ ಪ್ರೇರಿತವಾಗಿ ಸಹಿ ಹಾಕಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ‘ಬಾಯಿ ಮತ್ತು ಮೂಗು ರಕ್ಷಣೆಗೆ ಮನೆಯಲ್ಲೇ ಮಾಡಬಹುದಾದ ಮಾಸ್ಕ್’ಗಳ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದು https://pib.gov.in/PressReleseDetail.aspx?PRID=1610963 ಲಭ್ಯವಿದೆ.

ಕ್ಲಿನಿಕಲ್ ನಿರ್ವಹಣೆ, ವೆಂಟಿಲೇಟರ್ ನೆರವು, ಸೋಂಕು ನಿಯಂತ್ರಣ ಮತ್ತು ತಡೆ, ಕ್ವಾರಂಟೈನ್ ನಿರ್ವಹಣೆ ಮತ್ತಿತರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ 30 ತರಬೇತಿ ಮಾದರಿಗಳನ್ನು ಸಿದ್ಧಪಡಿಸಲಾಗಿದೆ  ಮತ್ತು ಅವುಗಳು ಆರೋಗ್ಯ ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಿದೆ: https://www.mohfw.gov.in/.

ಈ ವರೆಗೆ, ಕೋವಿಡ್ ಸೋಂಕಿನಿಂದ ಮೃತಪಟ್ಟವರು ಬಹುತೇಕ ವಯಸ್ಸಾದವರಾಗಿದ್ದಾರೆ ಅಥವಾ ಅವರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ/ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಇತರೆ ಕಾಯಿಲೆಗಳಿರುವುದು ವರದಿಯಾಗಿದೆ ಹಾಗಾಗಿ ಆ ಅಪಾಯಕಾರಿ ವರ್ಗಕ್ಕೆ ಸೇರುವ ಜನರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ಅಲ್ಲದೆ ಈವರೆಗೆ ವರದಿಯಾಗಿರುವ ಎಲ್ಲಾ ಸೋಂಕು ದೃಢಪಟ್ಟ ಪ್ರಕರಣಗಳ ವಿವರಗಳನ್ನು ವಿಶ್ಲೇಷಿಸಿರುವಂತೆ:

·        8.61% ರಷ್ಟು ಪ್ರಕರಣಗಳು 0-20 ವರ್ಷದೊಳಗಿನವು

·        41.88% ರಷ್ಟು ಪ್ರಕರಣಗಳು 21 ರಿಂದ 40 ವರ್ಷದೊಳಗಿನವು

·        32.82% ರಷ್ಟು ಪ್ರಕರಣಗಳು 41 ರಿಂದ 60 ವರ್ಷದೊಳಗಿನವು

·        16.69% ರಷ್ಟು ಪ್ರಕರಣಗಳು 60 ವರ್ಷ ಮೇಲ್ಪಟ್ಟಿರುವಂತಹವರು

ಜೀವನಾಡಿ ಉಡಾನ್, ಈವರೆಗೆ ತನ್ನ ಸರಕು ವಿಮಾನಗಳ ಮೂಲಕ 119 ಟನ್ ಸಾಮಗ್ರಿಗಳನ್ನು ಎಲ್ಲಾ ರಾಜ್ಯಗಳು ಮತ್ತು ವಿಶೇಷವಾಗಿ ಈಶಾನ್ಯ ಭಾಗಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ತಲುಪಿಸಿವೆ. ಅವುಗಳಲ್ಲಿ ಕೋವಿಡ್-19ಗೆ ಸಂಬಂಧಿಸಿದ ವೈದ್ಯಕೀಯ ಸಲಕರಣೆಗಳು, ಪರೀಕ್ಷಾ ಕಿಟ್ ಗಳು, ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಮಾಸ್ಕ್ ಮತ್ತು ಗ್ಲೌಸ್ ಇತ್ಯಾದಿ ಸೇರಿವೆ.

ಈವರೆಗೆ 2902 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ ಮತ್ತು 68 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. 183 ಮಂದಿ ಚೇತರಿಕೆಯ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2902 ಪ್ರಕರಣಗಳ ಪೈಕಿ 1023 ಪ್ರಕರಣಗಳು ತಬ್ಲಿಘಿ ಜಮಾತ್ ಗೆ ಸಂಬಂಧಿಸಿದ್ದಾಗಿದ್ದು, ಅವುಗಳು ದೆಹಲಿ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲಪ್ರದೇಶ, ಹರಿಯಾಣ, ಹಿಮಾಚಲಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಈ 17 ರಾಜ್ಯಗಳಿಗೆ ಸಂಬಂಧಿಸಿದವುಗಳಾಗಿವೆ.

ಕೋವಿಡ್-19ಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ವಿಷಯಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳಿಗೆ ಹಾಗೂ ಎಲ್ಲ ಖಚಿತ ಮತ್ತು ಅಪ್ ಡೇಟೆಡ್ ಮಾಹಿತಿಗೆ ನಿರಂತರವಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಬಹುದುhttps://www.mohfw.gov.in/.

ಕೋವಿಡ್-19 ಕುರಿತ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಮತ್ತು  ncov2019[at]gov[dot]in .ಇ-ಮೇಲ್ ವಿಳಾಸಕ್ಕೆ ಬರೆದು ಉತ್ತರ ಪಡೆಯಬಹುದು.

ಕೋವಿಡ್-19 ಕುರಿತ ಯಾವುದೇ ಪ್ರಶ್ನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ: +91-11-23978046 ಅಥವಾ 1075 (ಟೋಲ್ ಫ್ರೀಕರೆ ಮಾಡಬಹುದು. ಕೋವಿಡ್-19 ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳು ಈ ವೆಬ್ ಸೈಟ್ ನಲ್ಲಿ  ಲಭ್ಯ. https://www.mohfw.gov.in/pdf/coronvavirushelplinenumber.pdf 

 

 *****


(Release ID: 1611210) Visitor Counter : 234