ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಡಿ ಎಸ್‌ ಟಿ ಅನುದಾನಿತ ಸ್ಟಾರ್ಟ್ ಅಪ್  ನಿಂದ COVID 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಸಾಯನಿಕ ಮುಕ್ತ ಸಿಲ್ವರ್ ಆಧಾರಿತ ಸೋಂಕು ನಿವಾರಕದ ಅಭಿವೃದ್ಧಿ

Posted On: 04 APR 2020 5:11PM by PIB Bengaluru

ಡಿ ಎಸ್ಟಿ ಅನುದಾನಿತ ಸ್ಟಾರ್ಟ್ ಅಪ್  ನಿಂದ COVID 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಸಾಯನಿಕ ಮುಕ್ತ ಸಿಲ್ವರ್ ಆಧಾರಿತ ಸೋಂಕು ನಿವಾರಕದ ಅಭಿವೃದ್ಧಿ

ಕೊಲೊಯ್ಡಲ್ ಸಿಲ್ವರ್ ತಯಾರಿಸುವ ಪ್ರಕ್ರಿಯೆಯೆಗೆ ಭಾರತೀಯ ಪೇಟೆಂಟ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್ಗಳು ಮತ್ತು ಸೋಂಕುನಿವಾರಕಗಳ ತಯಾರಿಕೆಗೆ ಪರೀಕ್ಷಾ ಪರವಾನಗಿ ನೀಡಲಾಗಿದೆ

 

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಜಂಟಿಯಾಗಿ ನೆರವು ನೀಡಿರುವ ಪುಣೆ ಮೂಲದ ಸ್ಟಾರ್ಟ್ಅಪ್ Weinnovate Biosolutions, ಆಲ್ಕೊಹಾಲ್ ಇಲ್ಲದ ಜಲೀಯ ಆಧಾರಿತ ಕೊಲೊಯ್ಡಲ್ ಸಿಲ್ವರ್ ದ್ರಾವಣವನ್ನು ಕೈಗಳು ಮತ್ತು ಮೇಲ್ಮೈಗಳ ಸೋಂಕುನಿವಾರಕಕ್ಕಾಗಿ ಅದರ NanoAgCide ತಂತ್ರಜ್ಞಾನದಿಂದ ತಯಾರಿಸಿದೆ.

ದ್ರವವು ಉರಿಯುವುದಿಲ್ಲ ಮತ್ತು ಅಪಾಯಕಾರಿ ರಾಸಾಯನಿಕಗಳಿಂದ ಮುಕ್ತವಾಗಿದೆ ಮತ್ತು ಸಾಂಕ್ರಾಮಿಕ ರೋಗ ಹರಡುವ ಪ್ರಮುಖ ವಿಧಾನವಾದ ಸಂಪರ್ಕದ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಪರಿಣಾಮಕಾರಿಯಾದ ನೈರ್ಮಲ್ಯಕಾರಕವಾಗಬಹುದು. ಇದರಿಂದಾಗಿ ಆರೋಗ್ಯ ವೃತ್ತಿಪರರು ಮತ್ತು ಇತರ ಸೋಂಕಿತರನ್ನು ರಕ್ಷಿಸಬಹುದು.

ವೈರಲ್ ನೆಗೆಟಿವ್-ಸ್ಟ್ರಾಂಡ್ ಆರ್ ಎನ್ ಮತ್ತು ವೈರಲ್ ಮೊಳಕೆಯ ಸಂಶ್ಲೇಷಣೆಯನ್ನು ತಡೆಗಟ್ಟುವ ಬೆಳ್ಳಿ ನ್ಯಾನೊ ಕಣಗಳ ಸಾಮರ್ಥ್ಯವನ್ನು ಆಧರಿಸಿದ We innovate Biosolutions ಕೊಲೊಯ್ಡಲ್ ಸಿಲ್ವರ್ ದ್ರಾವಣವು ಅಪಾಯಕಾರಿ ರಾಸಾಯನಿಕಗಳಿಂದ ಮುಕ್ತವಾಗಿದೆ ಮತ್ತು ಆಲ್ಕೋಹಾಲ್ ಆಧಾರಿತ ಸೋಂಕುನಿವಾರಕಗಳಿಗೆ ಹೋಲಿಸಿದರೆ ಉರಿಯೂತದ ಅಪಾಯವನ್ನು ಹೊಂದಿರುವುದಿಲ್ಲ.

ದ್ರಾವಣವು ಪ್ರಯೋಗಾಲಯ ಪರೀಕ್ಷೆಗೆ ಒಳಗಾಗಿದೆ ಮತ್ತು ತಯಾರಕರು ಪರೀಕ್ಷಾ ಪರವಾನಗಿಯನ್ನು ಪಡೆದಿದ್ದಾರೆ. ಕೊಲೊಯ್ಡಲ್ ಬೆಳ್ಳಿಯನ್ನು ಸಣ್ಣ ಪ್ರಮಾಣದಲ್ಲಿ ಮತ್ತು 5 ಲೀಟರ್ ವರೆಗೆ ಹೆಚ್ಚಿಸುವ ಸಂಶ್ಲೇಷಿಸುವ ಪ್ರಾಥಮಿಕ ಕಾರ್ಯವನ್ನು ಪುನರುತ್ಪಾದನೆಯೊಂದಿಗೆ ನಡೆಸಲಾಗಿದೆ.

"ಹ್ಯಾಂಡ್ ಸ್ಯಾನಿಟೈಜರ್ ಮತ್ತು ಸೋಂಕು ನಿವಾರಕದ ಬೇಡಿಕೆಯನ್ನು ಪೂರೈಸಲು ದಿನಕ್ಕೆ ಕನಿಷ್ಠ 200 ಲೀಟರ್ ಕೊಲೊಯ್ಡಲ್ ಬೆಳ್ಳಿ ದ್ರಾವಣವನ್ನು ತಯಾರಿಸುವ ಗುರಿ ಹೊಂದಿದ್ದೇವೆ. ನಾವು ದ್ರಾವಣದೊಂದಿಗೆ, ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಲು ನಾವು ಸಕಾರಾತ್ಮಕವಾಗಿದ್ದೇವೆ ಮತ್ತು ಸೋಂಕು ಮುಕ್ತವಾಗಿಸಲು ಭಾರತಕ್ಕೆ ಸಹಾಯ ಮಾಡುತ್ತೇವೆಎಂದು Weinnovate Biosolutions ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಮಿಲಿಂದ್ ಚೌಧರಿ ಹೇಳಿತ್ತಾರೆ.

IMG-20180820-WA0044

"ನ್ಯಾನೊ ಕಣಗಳು COVID-19 ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಥೆರಾನೋಸ್ಟಿಕ್ಸ್ (ಥೆರಪಿ ಪ್ಲಸ್ ಡಯಾಗ್ನೋಸ್ಟಿಕ್ಸ್)ನಿಂದ ಸೋಂಕುನಿವಾರಕ, ಇಮೇಜಿಂಗ್ ವರೆಗೆ ಪರಿಣಾಮಕಾರಿಯಾದ ಪರಿಹಾರಗಳಾಗಿ ಹೊರಹೊಮ್ಮುತ್ತಿವೆ. ಅವುಗಳ ಗಾತ್ರದಿಂದಾಗಿ (100 nm ಗಿಂತ ಕಡಿಮೆ)ನ್ಯಾನೊ ಕಣಗಳ ಪ್ರಸ್ತುತತೆಗೆ  ಕಾರಣವಾಗಿದೆ, ಇದನ್ನು COVID-19 ವೈರಸ್ಗೆ ಹೋಲಿಸಬಹುದು "ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ ಹೇಳಿದರು.

ಸಿಲ್ವರ್ ನ್ಯಾನೊ ಕಣಗಳು ಎಚ್ಐವಿ, ಹೆಪಟೈಟಿಸ್ ಬಿ, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಇನ್ಫ್ಲುಯೆನ್ಜಾ ವೈರಸ್ ಮುಂತಾದ ಅನೇಕ ಮಾರಕ ವೈರಸ್ಗಳ ವಿರುದ್ಧ ಕಾರ್ಯನಿರ್ವಹಿಸುವ ಪರಿಣಾಮಕಾರಿ ಆಂಟಿವೈರಲ್ ಎಂದು ಕಂಡುಬಂದಿದೆ. ಜಪಾನ್ ಸೈತಾಮಾದ ರಾಷ್ಟ್ರೀಯ ರಕ್ಷಣಾ ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆಯ ಶಿಂಗೊ ನಕಮುರಾರಂತತಹ ವಿಜ್ಞಾನಿಗಳ ಸಂಶೋಧನೆಯು ರೋಗಿಗಳ ಸೋಂಕನ್ನು ತಡೆಗಟ್ಟುವುದರ ಜೊತೆಗೆ ಆರೋಗ್ಯ ಕಾರ್ಯಕರ್ತರ (ಎಚ್ಸಿಡಬ್ಲ್ಯು) ಸಂಪರ್ಕ ಸೋಂಕನ್ನು ತಡೆಯಲು AgNP  ಆಧಾರಿತ ವಸ್ತುಗಳಿಂದ ಸಾಧ್ಯವಾಗುತ್ತದೆ ಎಂದು ಸೂಚಿಸುತ್ತದೆ. ಹೀಗಾಗಿ Weinnovate Biosolutions ಸ್ಯಾನಿಟೈಜರ್ಗಳ ಕೊಲೊಯ್ಡಲ್ ಬೆಳ್ಳಿ ತಂತ್ರಜ್ಞಾನವು, ಮೇಲ್ಮೈ ಗ್ಲೈಕೊಪ್ರೋಟೀನ್ಗಳನ್ನು ನಿರ್ಬಂಧಿಸುವ ಮೂಲಕ ಆರ್ಎನ್ ಪುನರಾವರ್ತನೆ ಮತ್ತು ಸಾಂಕ್ರಾಮಿಕತೆಯನ್ನು ತಡೆಯುವ ಮೂಲಕ ಕೋವಿಡ್ -19 ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕೊಲೊಯ್ಡಲ್ ಸಿಲ್ವರ್ ತಯಾರಿಸುವ ಪ್ರಕ್ರಿಯೆಗೆ ಸಲ್ಲಿಸಲಾಗಿದ್ದ ಭಾರತೀಯ ಪೇಟೆಂಟ್, ಹ್ಯಾಂಡ್ ಸ್ಯಾನಿಟೈಜರ್ಗಳು ಮತ್ತು ಸೋಂಕುನಿವಾರಕಗಳನ್ನು ತಯಾರಿಸಲು ಪರೀಕ್ಷಾ ಪರವಾನಗಿ ನೀಡಲಾಗಿದೆ.

 

( ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಡಾ.ಮಿಲಿಂದ್ ಚೌಧರಿ

ಸಹ-ಸಂಸ್ಥಾಪಕ Weinnovate Biosolutions

ಇಮೇಲ್: milind.bio[at]gmail[dot]com

ಮೊಬೈಲ್: 9867468149 )

***



(Release ID: 1611179) Visitor Counter : 156