ಪ್ರವಾಸೋದ್ಯಮ ಸಚಿವಾಲಯ

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದ ಉದ್ಯಮ ಸಂಸ್ಥೆಗಳೊಂದಿಗೆ ವರ್ಚುವಲ್ ಕಾನ್ಫರೆನ್ಸ್ ನಡೆಸಿದ ಪ್ರವಾಸೋದ್ಯಮ ಸಚಿವಾಲಯ

Posted On: 04 APR 2020 5:07PM by PIB Bengaluru

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದ ಉದ್ಯಮ ಸಂಸ್ಥೆಗಳೊಂದಿಗೆ ವರ್ಚುವಲ್ ಕಾನ್ಫರೆನ್ಸ್ ನಡೆಸಿದ ಪ್ರವಾಸೋದ್ಯಮ ಸಚಿವಾಲಯ

 

ಪ್ರವಾಸೋದ್ಯಮ ಸಚಿವಾಲಯ ಶುಕ್ರವಾರ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದ ಉದ್ಯಮ ಸಂಸ್ಥೆಗಳೊಂದಿಗೆ ವಸ್ತುಶಃ ಸಮಾವೇಶ ನಡೆಸಿತು. ಈ ವಿಡಿಯೋ ಕಾನ್ಫರೆನ್ಸ್ ನೇತೃತ್ವವನ್ನು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಶ್ರೀ ಯೋಗೇಂದ್ರ ತ್ರಿಪಾಠಿ ವಹಿಸಿದ್ದರು, ಸಚಿವಾಲಯದ ಇತರೆ ಹಿರಿಯ ಅಧಿಕಾರಿಗಳು ಅದರಲ್ಲಿ ಭಾಗವಹಿಸಿದ್ದರು. ಸಿಐಐ, ಎಫ್ ಐಸಿಸಿಐ, ಪಿಎಚ್ ಡಿಸಿಸಿಐ ಮತ್ತು ಐಎಂಎಎಲ್ ನಂತರ 9 ಸಂಸ್ಥೆಗಳ ಮಾತೃ ಸಂಸ್ಥೆಯಾಗಿರುವ ಎಫ್ ಎಐಟಿಎಚ್ ಮೂಲಕ ಒಕ್ಕೂಟಗಳು ಈ ಕಾನ್ಫರೆನ್ಸ್ ನಲ್ಲಿ ಪ್ರತಿನಿಧಿಸಿದ್ದವು.

ಕೋವಿಡ್ -19 ಪ್ರವಾಸದ್ಯಮ ಮತ್ತು ಆತಿಥ್ಯ ವಲಯದಲ್ಲಿ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಹೊರಬರಲು ಉದ್ಯಮ ಹಲವು ಸಲಹೆ ಮತ್ತು ಚಿಂತನೆಗಳನ್ನು ಮುಂದಿಟ್ಟಿತು. ಸಚಿವಾಲಯ ತನ್ನ ಆಂತಕ, ಕಾಳಜಿಗಳನ್ನು ಹಂಚಿಕೊಂಡಿತು ಮತ್ತು ಇಂತಹ ಸಂಕಷ್ಟದ ಸಮಯದಲ್ಲಿ ಸರಕಾರ ತಮ್ಮ ಜೊತೆ ಇದೆ ಎಂದು ಉದ್ಯಮಕ್ಕೆ ಭರವಸೆ ನೀಡಲಾಯಿತು. ಉದ್ಯಮ ಮುಂದಿಟ್ಟಿರುವ ಸಲಹೆಗಳ ಬಗ್ಗೆ ಪರಿಶೀಲಿಸಿ ಕ್ರ ಕೈಗೊಳ್ಳುವುದಾಗಿ ಸಚಿವಾಲಯ ಹೇಳಿತು. ಸಾಮಾನ್ಯ ರೀತಿಯಲ್ಲಿ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೆಚ್ಚಿನ ಒತ್ತು ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಲಾಕ್ ಡೌನ್ ಅವಧಿಯಲ್ಲಿ ಸುರಕ್ಷಿತವಾಗಿ ಮನೆಯಲ್ಲಿಯೇ ಇರಿ ಎಂದು ಮತ್ತು ಜಗತ್ತು ತೆರೆದುಕೊಂಡ ನಂತರ ಪ್ರವಾಸಕ್ಕೆ ಸಿದ್ಧವಾಗುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಚಿವಾಲಯ ಸಾಮಾಹಿಕ ಮಾಧ್ಯಮಗಳ ಮೂಲಕ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ.

ಈ ಮಧ್ಯೆ, ಹೋಟೆಲ್ ಮ್ಯಾನೇಜೆ ಮೆಂಟ್ ಸಂಸ್ಥೆಗಳ ಕೋರ್ಸ್ ಗಳ ಮಾದರಿಗಳನ್ನು ಆನ್ ಲೈನ್ ನಲ್ಲಿ ನೀಡಲಾಗುತ್ತಿದೆ. ಬೋಧಕರು ಮತ್ತು ವಿದ್ಯಾರ್ಥಿಗಳು ತಂತ್ರಜ್ಞಾನದ ಸಹಾಯ ಬಳಸಿಕೊಂಡು ತಮ್ಮ ಕೋರ್ಸ್ ಗಳ ಪಠ್ಯಕ್ರಮದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

 

*******

 



(Release ID: 1611164) Visitor Counter : 162