ನಾಗರೀಕ ವಿಮಾನಯಾನ ಸಚಿವಾಲಯ

ದೇಶೀಯ ಸರಕು ಸಾಗಣೆ ವಿಮಾನಗಳಿಂದ ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಬಲವರ್ಧನೆ

Posted On: 04 APR 2020 1:58PM by PIB Bengaluru

ದೇಶೀಯ ಸರಕು ಸಾಗಣೆ ವಿಮಾನಗಳಿಂದ ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಬಲವರ್ಧನೆ

ಔಷಧಗಳ ಪೂರೈಕೆ -ಪರೀಕ್ಷಾ ಕಿಟ್ ಗಳು, ಮಾಸ್ಕ್ ಗಳು, ಕೈಗವಸುಗಳು ಮತ್ತು ಇನ್ನೂ ಅನೇಕ ವಸ್ತುಗಳನ್ನು 2020ರ ಮಾರ್ಚ್ 26ರಿಂದ ದೇಶಾದ್ಯಂತ ಪೂರೈಸುತ್ತಿದೆ
24X7 ನಿರ್ವಹಣೆ ಮತ್ತು ನೀತಿ ಮಟ್ಟದಲ್ಲಿ ಮತ್ತು ನೆಲಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಿಕೆ

 

ನಾಗರಿಕ ವಿಮಾನಯಾನ ಸಚಿವಾಲಯವು ನೀತಿಯ ಮಟ್ಟದಲ್ಲಿ ಮತ್ತು ನೆಲ ಮಟ್ಟದಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದು, ಕೋವಿಡ್ -19 ವಿರುದ್ಧದ ದೇಶದ ಹೋರಾಟಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. ದೇಶದ ವಿವಿಧ ಭಾಗಗಳಿಗೆ ಸಾಗಣೆ ಮಾಡಲಾದ ಸರಕುಗಳಲ್ಲಿ ಕೋವಿಡ್ -19 ಸಂಬಂಧಿತ ದ್ರಾವಣಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್‌ಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕೋರಿದ್ದ ಪಿಪಿಇ, ಮಾಸ್ಕ್ ಗಳು, ಕೈಗವಸುಗಳು ಮತ್ತು ಎಚ್‌ಎಲ್‌ಎಲ್ ಮತ್ತು ಸರಕುಗಳ ಇತರ ಪರಿಕರಗಳು ಮತ್ತು ಅಂಚೆ ಪ್ಯಾಕೆಟ್‌ಗಳೂ ಸೇರಿವೆ.

ವಿವಿಧ ರಾಜ್ಯಗಳಿಗೆ ಮತ್ತು ದೇಶಾದ್ಯಂತದ ಐಸಿಎಂಆರ್ ಕೇಂದ್ರಗಳಿಗೆ ಅತ್ಯಾವಶ್ಯಕ ಔಷಧಗಳನ್ನು ಪೂರೈಸುವುದರೊಂದಿಗೆ ಈ ಕೆಳಗಿನ ಸಾಧನೆ ಮಾಡಲಾಗಿದೆ:

ದ್ರಾವಣಗಳು/ ಸೂಕ್ತ ಸಮಯಕ್ಕೆ ಸರಿಯಾಗಿ ರೋಗಿಗಳ ಪರೀಕ್ಷೆಯನ್ನು ಶಕ್ತಗೊಳಿಸುವ ವೈದ್ಯಕೀಯ ಕಿಟ್‌ಗಳ ಪೂರೈಕೆ ಮಾಡಲಾಗಿದ್ದು, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

· ಈ ವಿಮಾನಗಳ ಮೂಲಕ ಪೂರೈಸಲಾದ ಮಾಸ್ಕ್ ಗಳು ಮತ್ತು ಕೈಗವಸುಗಳನ್ನು ಬಳಸುವ ಮೂಲಕ ವೈದ್ಯರು ಮತ್ತು ಇತರ ಸಾರ್ವಜನಿಕರು ತಮ್ಮನ್ನು ತಾವು ಮತ್ತು ಇತರರನ್ನೂ ಸುರಕ್ಷಿತವಾಗಿಟ್ಟಿದ್ದಾರೆ.

· ಈಶಾನ್ಯ ವಲಯ ಮತ್ತು ದೂರದ ಪ್ರದೇಶಕ್ಕೆ ಔಷಧ ಪೂರೈಕೆಯು ದೇಶದ ಯಾವುದೇ ವಲಯ ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಖಾತ್ರಿಪಡಿಸಿದೆ.

ಹಬ್ ಮತ್ತು ಸ್ಪೋಕ್ ಲೈಫ್ ಲೈನ್ ಸೇವೆಗಳನ್ನು ಪ್ರಾರಂಭಿಸಲಾಗಿದ್ದು, ಇದರಿಂದಾಗಿ ದೇಶದ ವಿವಿಧ ಮತ್ತು ದೂರದ ಪ್ರದೇಶಗಳಿಗೂ ಪೂರೈಸಲು ಮತ್ತು ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳ ಬಹುದಾಗಿರುತ್ತದೆ.

ವಿಮಾನಗಳ ದಿನಾಂಕವಾರ ವಿವರ ಈ ಕೆಳಗಿನಂತಿದೆ:

 

ಕ್ರ.ಸಂ.

ದಿನಾಂಕ

ಏರ್ ಇಂಡಿಯಾ

ಅಲಯನ್ಸ್

ಐ.ಎ.ಎಫ್.

ಇಂಡಿಗೋ

ಸ್ಪೈಸ್ ಜಟ್

ಒಟ್ಟು ಕಾರ್ಯಾಚರಣೆ ಮಾಡಿದ ವಿಮಾನಗಳು

1

26.3.2020

02

--

-

-

02

04

2

27.3.2020

04

09

01

-

--

14

3

28.3.2020

04

08

-

06

--

18

4

29.3.2020

04

10

06

--

--

20

5

30.3.2020

04

-

03

--

--

07

6

31.3.2020

09

02

01

 

--

12

7

01.4.2020

03

03

04

--

-

10

8

02.4.2020

04

05

03

--

--

12

9

03.4.2020

08

--

02

--

--

10

 

ಒಟ್ಟು ವಿಮಾನಗಳು

42

37

20

06

02

107

ಒಟ್ಟು ಸಂಚರಿಸಿದ ಕಿಲೋ ಮೀಟರ್

1,02,115 ಕಿ.ಮೀ.ಗಳು

03.04.2020 ರಂದು ಸಾಗಿಸಲಾದ ಸರಕು

19.39 ಟನ್ ಗಳು

03.04.2020ರಿಂದ ಸಾಗಾಟ ಮಾಡಲಾದ ಒಟ್ಟು ಸರಕು

119.42 + 19.39 = 138.81 ಟನ್ ಗಳು

 

· ಲಡಾಕ್, ದಿಮಾಪುರ್, ಗಂಗ್ಟೋಕ್, ಗುವಾಹತಿ, ಬಾಗ್ದೋಗ್ರಾ, ಚೆನ್ನೈ ಮತ್ತು ಪೋರ್ಟ್ ಬ್ಲೇರ್ ಗಾಗಿ ಏರ್ ಇಂಡಿಯಾ ಮತ್ತು ಐ.ಎ.ಎಫ್. ಸಹಯೋಗ ಸಾಧಿಸಿವೆ.

· ಸಮರ್ಪಿತ ವೈದ್ಯಕೀಯ ವಾಯು ಸರಕು ಸಾಗಣೆ ಸಂಬಂಧಿ ಅಂತರ್ಜಾಲ ಲೈಫ್ ಲೈನ್ ಉಡಾನ್ ಅನ್ನು ಆರಂಭಿಸಲಾಗಿದ್ದು ಅದು ಕಾರ್ಯಾರಂಭಿಸಿದೆ. ಎಂ.ಓ.ಸಿ.ಎ. ಅಂತರ್ಜಾಲ ತಾಣದಲ್ಲಿ ಇದರ ಸಂಪರ್ಕ ಲಭ್ಯ. (www.civilaviation.gov.in).

ಅಂತಾರಾಷ್ಟ್ರೀಯ- ಶಾಂಘೈ ಮತ್ತು ದೆಹಲಿ ನಡುವೆ ವಾಯು ಸೇತುವೆಯನ್ನು ಸ್ಥಾಪಿಸಲಾಗಿದೆ. ಏರ್ ಇಂಡಿಯಾದ ಪ್ರಥಮ ಸರಕು ವಿಮಾನ 2020 ಏಪ್ರಿಲ್ 5ರಂದು ಪ್ರಯಾಣಿಸಲಿದೆ. ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಸಾಗಿಸಲು ಏರ್ ಇಂಡಿಯಾ ಚೀನಾಕ್ಕೆ ಸಮರ್ಪಿತ ನಿಗದಿತ ಸರಕು ಸಾಗಣೆ ಹಾರಾಟ ನಡೆಸಲಿದೆ.

ಖಾಸಗಿ ಆಪರೇಟರುಗಳು- ದೇಶೀಯ ಸರಕು ಕಾರ್ಯಾಚರಣೆದಾರರು; ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೋ ಸಂಸ್ಥೆ ಕಾರ್ಗೋ ವಿಮಾನಗಳನ್ನು ವಾಣಿಜ್ಯ ಆಧಾರದ ಮೇಲೆ ಕಾರ್ಯಚರಣೆ ಮಾಡುತ್ತಿವೆ. 2020 ಮಾರ್ಚ್ 24ರಿಂದ ಏಪ್ರಿಲ್ 3ರವರೆಗೆ ಸ್ಪೈಸ್ ಜೆಟ್ 153 ಸರಕು ಸಾಗಣೆ ವಿಮಾನಗಳ ಕಾರ್ಯಾಚರಣೆ ನಡೆಸಿದ್ದು, 207947 ಕಿ.ಮೀ. ಸಂಚರಿಸಿ, 1213.64 ಟನ್ ಸರಕು ಸಾಗಣೆ ಮಾಡಿದೆ. ಈ ಪೈಕಿ 44 ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳಾಗಿವೆ. ಬ್ಲೂ ಡಾರ್ಟ್ 2020ರ ಮಾರ್ಚ್ 25ರಿಂದ ಏಪ್ರಿಲ್ 3ರವರೆಗೆ 48 ದೇಶೀಯ ಸರಕು ಸಾಗಣೆ ವಿಮಾನ ಹಾರಾಟ ನಡೆಸಿದ್ದು, 45783 ಕಿ.ಮೀ. ದೂರ ಸಾಗಿ, 702.43 ಟನ್ ಸರಕು ಸಾಗಾಟ ನಡೆಸಿದೆ. ಇಂಡಿಗೋ ಸಹ 3.4.2020ರಂದು 5 ಸರಕು ಸಾಗಣೆ ವಿಮಾನಗಳ ಹಾರಾಟ ನಡೆಸಿದ್ದು, 4871 ಕಿಮೀ ಕ್ರಿಮಿಸಿ, 2.33 ಟನ್ ಸರಕು ಸಾಗಾಟ ಮಾಡಿದೆ.

****

 



(Release ID: 1611150) Visitor Counter : 169