PIB Headquarters
ಕೋವಿಡ್ 19: ಪಿ ಐ ಬಿ ದೈನಂದಿನ ವರದಿ
Posted On:
03 APR 2020 7:20PM by PIB Bengaluru
ಕೋವಿಡ್ 19: ಪಿ ಐ ಬಿ ದೈನಂದಿನ ವರದಿ


(Contains Press releases concerning Covid-19, issued in last 24 hours and Fact checks undertaken by PIB)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ 19 ಕುರಿತ ಅಪ್ ಡೇಟ್
ಈವರೆಗೆ 2301 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 56 ಸೋಂಕಿತರು ಸಾವಿಗೀಡಾಗಿದ್ದಾರೆ. 156 ರೋಗಿಗಳು ಗುಣಮುಖರಾಗಿದ್ದಾರೆ/ಚೇತರಿಕೆ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ವೈದ್ಯರಿಗೆ ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ರೋಗಿಗಳು ಮತ್ತು ಅವರ ಕುಟುಂಬದವರಿಗೆ ಮನವಿ ಮಾಡಿದ್ದಾರೆ. ದೇಶದಾದ್ಯಂತ ಮುಂಪಡೆಯ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕೋವಿಡ್ -19ಕ್ಕಾಗಿ ಮಾನವ ಸಂಪನ್ಮೂಲ ನಿರ್ವಹಣೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
https://pib.gov.in/PressReleseDetail.aspx?PRID=1610842
ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
ಪ್ರಧಾನಮಂತ್ರಿಯವರು ಇಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ, ಕರೋನಾ ವೈರಾಣು ವಿರುದ್ಧದ ಹೋರಾಟಕ್ಕಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ನಡುವೆಯೂ ಯಾರೊಬ್ಬರೂ ಒಂಟಿ ಎಂದು ಭಾವಿಸಬಾರದು ಎಂದು ಹೇಳಿದ್ದಾರೆ. ಭಾರತಾದ್ಯಂತ ಬರುವ ಭಾನುವಾರ ಏಪ್ರಿಲ್ 5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ತಮ್ಮ ಮನೆಯ ದೀಪಗಳನ್ನು ಆರಿಸಿ, ಮೇಣದ ಬತ್ತಿ, ದೀಪ ಮತ್ತು ಮೊಬೈಲ್ ಫ್ಲ್ಯಾಷ್ ಲೈಟ್ ಗಳನ್ನು ಬೆಳಗಿಸುವಂತೆ ಆ ಮೂಲಕ ಕೊರೋನಾ ವೈರಾಣುವಿನ ವಿರುದ್ಧದ ರಾಷ್ಟ್ರವ್ಯಾಪಿ ಹೋರಾಟದ ನಡುವೆಯೂ ಏಕತೆಯನ್ನು ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ.
https://pib.gov.in/PressReleseDetail.aspx?PRID=1610580
ಕ್ರೀಡಾಪಟುಗಳೊಂದಿಗೆ ಪ್ರಧಾನಮಂತ್ರಿ ಸಂವಾದ
ಪ್ರಧಾನಮಂತ್ರಿಯವರು ಕ್ರೀಡಾಪಟುಗಳಿಗೆ ತಮ್ಮ ಸಂದೇಶದಲ್ಲಿ ಐದು ಅಂಶಗಳನ್ನು: ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ‘ಸಂಕಲ್ಪ’, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ‘ಸಂಯಮ’, ಧನಾತ್ಮಕತೆಯನ್ನು ಕಾಯ್ದುಕೊಳ್ಳಲು ‘ಸಕಾರಾತ್ಮಕತೆ’, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತಿತರರು ಸೇರಿದಂತೆ ಈ ಸಮರದಲ್ಲಿ ಮುಂಚೂಣಿಯಲ್ಲರುವ ಯೋಧರ ಬಗ್ಗೆ ‘ಸಮ್ಮಾನ್’ (ಗೌರವ), ಮತ್ತು ಪಿ.ಎಂ.-ಸಿಎಆರ್.ಇಎಸ್ ನಿಧಿಗೆ ದೇಣಿಗೆ ನೀಡುವ ಮೂಲಕ ‘ಸಹಯೋಗ’. ಸೇರಿಸಿಕೊಳ್ಳುವಂತೆ ಕರೆ ನೀಡಿದ್ದಾರೆ
https://pib.gov.in/PressReleseDetail.aspx?PRID=1610666
ಕೋವಿಡ್ -19 ಸ್ಪಂದನೆ ಕುರಿತಂತೆ ರಾಜ್ಯಪಾಲರು, ಉಪ ರಾಜ್ಯಪಾಲರು ಮತ್ತು ಆಡಳಿತಗಾರರೊಂದಿಗೆ ಸಮಾಲೋಚನೆ ನಡೆಸಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ದೇಶದ ಜನರು ಅನುಕರಣೀಯ ಧೈರ್ಯ, ಶಿಸ್ತು ಮತ್ತು ಏಕಮತ್ಯವನ್ನು ಪ್ರದರ್ಶಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಪ್ರತಿಪಾದಿಸಿದ್ದಾರೆ. ಆನಂದ್ ವಿಹಾರ್‌ನಲ್ಲಿ ವಲಸೆ ಕಾರ್ಮಿಕರನ್ನು ಒಟ್ಟುಗೂಡಿಸುವುದು ಮತ್ತು ನಿಜಾಮುದ್ದೀನ್‌ನ ತಬ್ಲಿಘಿ ಜಮಾತ್ ಸಭೆಯ ಈ ಎರಡು ಘಟನೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದು, ಅದು ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡಿದೆ ಎಂದು ಹೇಳಿದ್ದಾರೆ.
https://pib.gov.in/PressReleseDetail.aspx?PRID=1610851
ಯಾವುದೇ ಧಾರ್ಮಿಕ ಸಭೆ/ ಸಮಾರಂಭ ಆಯೋಜಿಸದಂತೆ ಧಾರ್ಮಿಕ ನಾಯಕರುಗಳಿಗೆ ಸಲಹೆ ನೀಡುವಂತೆ ರಾಜ್ಯಪಾಲರು/ಲೆಪ್ಟಿನೆಂಟ್ ಗೌರ್ನರ್ ಗಳಿಗೆ ಆಗ್ರಹಿಸಿದ ಉಪರಾಷ್ಟ್ರಪತಿ
ಕೋವಿಡ್ -19 ಪಸರಿಸದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಮ್ಮ ಅನುಯಾಯಿಗಳಿಗೆ ಸಲಹೆ ಮಾಡಲು ಮತ್ತು ಯಾವುದೇ ಧಾರ್ಮಿಕ ಸಭೆ ಸಮಾರಂಭಗಳನ್ನು ಆಯೋಜಿಸದಂತೆ ಧಾರ್ಮಿಕ ನಾಯಕರುಗಳನ್ನು ಪ್ರೋತ್ಸಾಹಿಸುವಂತೆ ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು, ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳಿಗೆ ಕರೆ ನೀಡಿದ್ದಾರೆ. ಆಯಾ ರಾಜ್ಯಗಳಲ್ಲಿ ಕೃಷಿ ಉತ್ಪನ್ನಗಳ ಕೊಯ್ಲು, ದಾಸ್ತಾನು ಮತ್ತು ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಗಮನಹರಿಸಬೇಕೆಂದು ತಾವು ಬಯಸುವುದಾಗಿ ತಿಳಿಸಿದರು.
https://pib.gov.in/PressReleseDetail.aspx?PRID=1610882
ಮಹಿಳಾ ಪಿಎಜೆಡಿವೈ ಖಾತೆದಾರರಿಗೆ ನೇರ ನಗದು ವರ್ಗಾವಣೆ
ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ಪ್ರಧಾನ ಮಂತ್ರಿ ಮಹಿಳಾ ಜನ್-ಧನ್ ಯೋಜನೆ (ಪಿಎಂಜೆಡಿವೈ) ಖಾತೆದಾರರಿಗೆ ಏಪ್ರಿಲ್ 2020ರಲ್ಲಿ ನೀಡಲು 2020 ರ ಏಪ್ರಿಲ್ 2 ರಂದು ತಲಾ 500 / - ರೂ. ಬಿಡುಗಡೆ ಮಾಡಿದೆ. ಫಲಾನುಭವಿಗಳು ಹಣ ಹಿಂಪಡೆಯಲು ಏಕಾಏಕಿ ಶಾಖೆಗೆ ಬಾರದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಕ್ರಮಬದ್ದವಾಗಿ ಹಣ ಪಡೆಯಲು ವ್ಯವಸ್ಥೆ ಮಾಡುವಂತೆ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ.
https://pib.gov.in/PressReleseDetail.aspx?PRID=1610770
ಎಂ.ಎಚ್.ಎ. ಪ್ರವಾಸಿ ವೀಸಾದಲ್ಲಿ ಭಾರತದಲ್ಲಿದ್ದರೂ, ತಬ್ಲಿಘಿ ಜಮಾತ್ ಚಟುವಟಿಕೆಗಳಲ್ಲಿನ ಅವರ ಪಾತ್ರದ ಹಿನ್ನೆಲೆಯಲ್ಲಿ 960 ವಿದೇಶೀಯರನ್ನು ಕಪ್ಪು ಪಟ್ಟಿಗೆ ಸೇರಿಸಿದೆ, ಅಗತ್ಯ ಕಾನೂನು ಕ್ರಮವನ್ನೂ ಜರುಗಿಸಲಿದೆ
ಭಾರತದಲ್ಲಿ ಸಿಲುಕಿರುವ ವಿದೇಶಿಯರ ಮರಳಲು ಎಸ್.ಒಪಿಗಳನ್ನು ವಿಧಿಸಲು ಮತ್ತು ಪ್ರತ್ಯೇಕೀಕರಣದಲ್ಲಿರುವ ವ್ಯಕ್ತಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ತಿಳಿದ ನಂತರವಷ್ಟೇ ಬಿಡುಗಡೆ ಮಾಡಲು ಎಂಹೆಚ್‌ಎ ಅನುಬಂಧವನ್ನು ಹೊರಡಿಸಿದೆ
https://pib.gov.in/PressReleseDetail.aspx?PRID=1610939
ಡಾ. ಹರ್ಷವರ್ಧನ್ ಅವರು ಡಾ.ಆರ್.ಎಂ.ಎಲ್. ಮತ್ತು ಸಫ್ದರ್ ಜಂಗ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಕೋವಿಡ್ -19ರಿಂದ ಹೊರಬರಲು ಮಾಡಿಕೊಂಡಿರುವ ಸಿದ್ಧತೆಗಳ ಖುದ್ದು ಅವಲೋಕನ ಮಾಡಿದರು; ರೋಗಿಗಳೊಂದಿಗೆ ಖುದ್ದು ಸಂವಾದ ನಡೆಸಿದರು.
https://pib.gov.in/PressReleseDetail.aspx?PRID=1610942
ಕೋವಿಡ್ -19 ವಿರುದ್ಧ ಸೆಣಸಲು ಔಷಧಗಳ ಪೂರೈಕೆಯಲ್ಲಿ ಕೊರತೆ ಇಲ್ಲ
ಕೋವಿಡ್ -19 ಮಹಾಮಾರಿಯ ವಿರುದ್ಧ ಸೆಣಸಲು ದೇಶದಲ್ಲಿ ಔಷಧಗಳ ಕೊರತೆ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು ತಿಳಿಸಿದ್ದಾರೆ.
https://pib.gov.in/PressReleseDetail.aspx?PRID=1610773
ಕೋವಿಡ್ -19 ವಿರುದ್ಧ ಸೆಣಸುವಲ್ಲಿ ನಾಗರಿಕ ಪ್ರಾಧಿಕಾರಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿರುವ ಸಶಸ್ತ್ರ ಪಡೆಗಳು
ಸಶಸ್ತ್ರ ಪಡೆಗಳು ಆರು ಪ್ರತ್ಯೇಕೀಕರಣ ಸೌಲಭ್ಯಗಳನ್ನು ಮುಂಬೈ, ಜೈಸಲ್ಮೀರ್, ಜೋದ್ ಪುರ, ಹಿಂಡನ್, ಮಣೇಸರ್ ಮತ್ತು ಚೆನ್ನೈನಲ್ಲಿ ನಡೆಸುತ್ತಿದ್ದು, 1737 ಜನರು ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 403 ಜನರು ಈವರೆಗೆ ಬಿಡುಗಡೆಯಾಗಿದ್ದಾರೆ.
https://pib.gov.in/PressReleseDetail.aspx?PRID=1610886
ಕೋವಿಡ್ -19 ಮಹಾಮಾರಿಯ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಎಫ್.ಸಿ.ಐ. ದೇಶಾದ್ಯಂತ ತಡೆರಹಿತ ಆಹಾರ ಧಾನ್ಯಗಳ ಪೂರೈಕೆಯನ್ನು ಖಚಿತಪಡಿಸಿದೆ.
ಇಂದು 69 ತುಂಬಿದ ರೈಲು ಬೋಗಿಗಳ ಸಾಗಾಟದೊಂದಿಗೆ, ಲಾಕ್ ಡೌನ್ ಆರಂಭವಾದ ಮಾರ್ಚ್ 24ರಿಂದ ಒಟ್ಟಾರೆ 477 ಬೋಗಿಗಳು 13.36 ಎಲ್.ಎಂ.ಟಿ. ಆಹಾರ ಧಾನ್ಯವನ್ನು ಹೊತ್ತು ಸಾಗಿವೆ.
ಪಿಎಂಯುವೈ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಪೂರೈಕೆ ಮತ್ತು ಎಲ್.ಪಿ.ಜಿ. ಸಿಲಿಂಡರ್ ಗಳ ವಿತರಣೆ ಕುರಿತಂತೆ ಡಿ.ಎನ್.ಓ.ಗಳೊಂದಿಗೆ ಸಂವಾದ ನಡೆಸಿದ ಶ್ರೀ ಧರ್ಮೇಂದ್ರ ಪ್ರಧಾನ್
ಇ-ನಾಮ್ ವೇದಿಕೆಯಲ್ಲಿ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದ ಕೃಷಿ ಸಚಿವರು
ರೈತರಿಂದ ಕೃಷಿ ಮಾರುಕಟ್ಟೆ ಬಲಪಡಿಸಲು ಕೃಷಿ ಸಚಿವರು ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ ನಾಮ್) ವೇದಿಕೆಯಲ್ಲಿನ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು. ಇದು ಅರು ಕೊಯ್ಲು ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡಲು ಖುದ್ದು ಸಗಟು ಮಂಡಿಗಳಿಗೆ ಬರುವುದನ್ನು ತಪ್ಪಿಸುತ್ತದೆ, ನಿರ್ಣಾಯಕ ಸಮಯದಲ್ಲಿ ಕೋವಿಡ್ 19ರ ವಿರುದ್ಧ ಸಮರ್ಥವಾಗಿ ಸೆಣಸಲು ಮಂಡಿಗಳಲ್ಲಿ ಜನದಟ್ಟಣೆಯನ್ನು ಇದು ತಪ್ಪಿಸುತ್ತದೆ.
https://pib.gov.in/PressReleseDetail.aspx?PRID=1610542
ಸಾರ್ವಜನಿಕ ಸ್ಥಳಗಳ ಸಮರ್ಥ ನೈರ್ಮಲ್ಯೀಕರಣಕ್ಕೆ ಸಾಧನ ಅಭಿವೃದ್ಧಿಪಡಿಸಿದ ಡಿ.ಆರ್.ಡಿ.ಓ
ನವೋದ್ಯಮದ ಬಾಧ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಶ್ರೀ ಪೀಯೂಷ್ ಗೋಯೆಲ್
ಕೋವಿಡ್ -19 ಮತ್ತು ಲಾಕ್ ಡೌನ್ ನಿಂದ ಅವರ ಮೇಲೆ ಆಗಿರುವ ಪರಿಣಾಮದ ನಿರ್ಧರಣೆ ಮತ್ತು ಅವರ ಸಮಸ್ಯೆಗಳ ಪರಿಹಾರಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ನವೋದ್ಯಮಗಳ ಬಾಧ್ಯಸ್ಥರೊಂದಿಗೆ ಸಭೆ ನಡೆಸಿದರು.
https://pib.gov.in/PressReleseDetail.aspx?PRID=1610859
ಕೋವಿಡ್ 19 ವಿರುದ್ಧ ಸೆಣಸುತ್ತಿರುವ ಆರೋಗ್ಯ ವೃತ್ತಿಪರರನ್ನು ಸುರಕ್ಷತವಾಗಿಡಲು ಹೊಲಿಗೆಯ ಬಳಿ ಅಂಟಿನಿಂದ ಅಂಟಿಸಿದ ಜೈವಿಕ ಸೂಟು ಅಭಿವೃದ್ಧಿ ಪಡಿಸಿದ ಡಿ.ಆರ್.ಡಿ.ಓ.
ಲಾಕ್ ಡೌನ್ ನಿರ್ಬಂಧದಿಂದ ನಿರ್ದಿಷ್ಟ ಸೇವೆಗಳಿಗೆ ವಿನಾಯಿತಿ.
ಲಾಕ್ ಡೌನ್ ಸಂದರ್ಭದಲ್ಲಿ ನಿರ್ದಿಷ್ಟ ಸೇವೆಗಳಿಗೆ ವಿನಾಯಿತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಗೃಹ ಕಾರ್ಯದರ್ಶಿಗಳು, ರಾಜ್ಯಗಳಿಗೆ ಪತ್ರ ಬರೆದಿದ್ದು, ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ, ಮಹಿಳೆಯರು, ಮಕ್ಕಳು, ಹಾಲುಮಿಸುವ ತಾಯಂದಿರಿಗೆ ಆಹಾರ ಮತ್ತು ಪೌಷ್ಟಿಕತೆಯ ಬೆಂಬಲ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸೇವೆಗಳು ಮತ್ತು ಆಯುಷ್ ಪ್ರವರ್ಗದಲ್ಲಿ ಔಷಧ ತಯಾರಿಕೆಯಂಥ ಸೇವೆಗಳನ್ನು ನಿರ್ದಿಷ್ಟಪಡಿಸಿದೆ.
https://pib.gov.in/PressReleseDetail.aspx?PRID=1610878
ಆಂತರಿಕವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಉತ್ಪಾದನೆಗೆ ಸಜ್ಜಾದ ರೈಲ್ವೆ
ಏಪ್ರಿಲ್ 1, 2020ರವರೆಗೆ ಭಾರತೀಯ ರೈಲ್ವೆ ಒಟ್ಟಾರೆ 287704 ಸಂಖ್ಯೆಯ ಮಾಸ್ಕ್ ಗಳು ಮತ್ತು 25806 ಲೀಟರ್ ಸ್ಯಾನಿಟೈಸರ್ ಗಳನ್ನು ತನ್ನ ವಿಭಾಗೀಯ ರೈಲ್ವೆಯ ಉತ್ಪಾದನಾ ಘಟಕ ಮತ್ತು ಪಿ.ಎಸ್.ಯುಗಳಲ್ಲಿ ಉತ್ಪಾದಿಸಿದೆ.
ಕೋವಿಡ್ 19 ವಿರುದ್ಧ ಸೆಣಸಲು ಎಸ್.ಐ.ಎನ್.ಇ, ಐಐಟಿ ಬಾಂಬೆಯಲ್ಲಿ ತ್ವರಿತ ಸ್ಪಂದನಾ ಕೇಂದ್ರ ಸ್ಥಾಪಿಸಿದ ಡಿ.ಎಸ್.ಟಿ.
ಡಿಡಿ ವೀಕ್ಷಿಸುತ್ತಿರುವ ಭಾರತ, ಕೊರೋನಾ ವಿರುದ್ಧ ಭಾರತದ ಸೆಣಸು
ಲಾಕ್ ಡೌನ್ ಸಂದರ್ಭದಲ್ಲಿ ಡಿಡಿ ನ್ಯಾಷನಲ್ ಮತ್ತು ಡಿಡಿ ಭಾರತಿಯಲ್ಲಿ ಮಹೋನ್ನತ ಹಳೆಯ ಧಾರಾವಾಹಿಗಳ ಪುನರ್ ಪ್ರಸಾರದೊಂದಿಗೆ ರಾಷ್ಟ್ರೀಯ ಪ್ರಸಾರ ಸೇವೆಯ ದೂರದರ್ಶನ ಭಾರತೀಯರ ಹೃದಯದಲ್ಲಿ ತನ್ನ ಸ್ಥಾನವನ್ನು ಪುನರ್ ಸ್ಥಾಪಿಸಿಕೊಂಡಿದೆ.
https://pib.gov.in/PressReleseDetail.aspx?PRID=1610888
ಪ್ರಧಾನಮಂತ್ರಿ ಮತ್ತು ಘನತೆವೆತ್ತ ರಾಜಮನೆತನದ ವೇಲ್ಸ್ ರಾಜಕುಮಾರರ ನಡುವೆ ದೂರವಾಣಿ ಸಂಭಾಷಣೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಮನೆತನದ ವೇಲ್ಸ್ ರಾಜಕುಮಾರರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರೂ ಗಣ್ಯರು ಕೋವಿಡ್ -19 ಸಾಂಕ್ರಾಮಿಕದ ಕುರಿತು ಚರ್ಚಿಸಿದರು.
https://pib.gov.in/PressReleseDetail.aspx?PRID=1610538
ಪ್ರಧಾನಮಂತ್ರಿ ಮತ್ತು ಜರ್ಮನಿಯ ಫೆಡರಲ್ ಛಾನ್ಸಲರ್ ನಡುವೆ ದೂರವಾಣಿ ಮಾತುಕತೆ
ಪ್ರಧಾನಮಂತ್ರಿಯವರು ಜರ್ಮನಿಯ ಫೆಡರಲ್ ಛಾನ್ಸಲರ್ ಆಂಗೆಲಾ ಮರ್ಕೆಲ್ ಅವರ ಜೊತೆ ದೂರವಾಣಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಕೋವಿಡ್ 19 ಮಹಾಮಾರಿಯ ಹಿನ್ನೆಲೆಯಲ್ಲಿ ತಮ್ಮ ತಮ್ಮ ರಾಷ್ಟ್ರಗಳ ಪರಿಸ್ಥಿತಿ ಮತ್ತು ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಹಯೋಗದ ಕುರಿತಂತೆ ಚರ್ಚಿಸಿದರು.
https://pib.gov.in/PressReleseDetail.aspx?PRID=1610539
ಕೋವಿಡ್ -19 ಮತ್ತು ಸಂಬಂಧಿತ ಶ್ವಾಸಕೋಶದ ಸೋಂಕಿನ ವಿರುದ್ಧ ಸೆಣಸಲು ಅನುಮೋದಿತ ಪ್ರಥಮ ಸೆಟ್ ಅನ್ನು ಪ್ರಕಟಿಸಿದ ಡಿ.ಎಸ್.ಟಿ.- ಎಸ್.ಇ.ಆರ್.ಬಿ.
ಸರ್ಕಾರ ಹೊರಡಿಸಿರುವ ಎಲ್ಲ ಆರೋಗ್ಯ ಸಂಬಂಧಿತ ಮತ್ತು ಇತರ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ನಿಯಮಿತವಾಗಿ ಪ್ರವಾಸಿಗಳಿಗೆ ಮತ್ತು ಪ್ರವಾಸೋದ್ಯಮ ಕೈಗಾರಿಕೆಗೆ ಪಸರಿಸುತ್ತಿರುವ ಪ್ರವಾಸೋದ್ಯಮ ಸಚಿವಾಲಯ.
ವಿದ್ಯುತ್ ಮತ್ತು ಪುನರ್ ನವೀಕರಿಸಬಹುದಾದ ಇಂಧನ ವಲಯದ ಪಿ.ಎಸ್.ಯು.ಗಳಿಂದ ಪಿ.ಎಂ. ಸಿ.ಎ.ಆರ್.ಇ.ಎಸ್. ನಿಧಿಗೆ 925 ಕೋಟಿ ರೂ. ದೇಣಿಗೆ
ಕೋವಿಡ್ -19 ವೈರಾಣು ಸೋಂಕು ತಡೆಗೆ ಸಮಗ್ರ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಜ್ಜಾಗಿರುವ ಭಾರತೀಯ ರೈಲ್ವೆಯ ಸಂಪೂರ್ಣ ಆಡಳಿತ.
ಕೋವಿಡ್ 19ರ ಭಯದ ನಡುವೆಯೂ ಸುರಕ್ಷಿತವಾಗಿರುವುದು ಹೇಗೆ ಎಂಬ ಬಗ್ಗೆ ಯುಜಿಸಿ, ಎಐಸಿಟಿಇ, ಎನ್.ಸಿ.ಟಿ.ಇ. ಎನ್.ಐ.ಓ.ಎಸ್., ಎನ್.ಸಿ.ಇ.ಆರ್.ಟಿ ಮತ್ತು ಕೆವಿಎಸ್ ಗೆ ಪತ್ರ ಬರೆದ ಎಚ್.ಆರ್.ಡಿ. ಸಚಿವಾಲಯ;
ಲಾಕ್ ಡೌನ್ ಖಾತ್ರಿಗಾಗಿ ಈಶಾನ್ಯ ವಲಯದ ಅಂತಾರಾಷ್ಟ್ರೀಯ ಗಡಿ (ಅಂದಾಜು 5500 ಕಿ.ಮೀ)ಯನ್ನು ಯಶಸ್ವಿಯಾಗಿ ಮುಚ್ಚಲಾಗಿದೆ: ಡಾ. ಜಿತೇಂದ್ರ ಸಿಂಗ್



******
(Release ID: 1610885)
Visitor Counter : 204