ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಾಕ್ ಡೌನ್ ನಿರ್ಬಂಧದಿಂದ ಕೃಷಿ ಉತ್ಪನ್ನ ಮಾರುಕಟ್ಟೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಯುಷ್ ಸಂಬಂಧಿಸಿದ ವಿಶೇಷ ಸೇವೆಗಳಿಗೆ ವಿನಾಯ್ತಿ   

Posted On: 02 APR 2020 9:40PM by PIB Bengaluru

ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಾಕ್ ಡೌನ್ ನಿರ್ಬಂಧದಿಂದ ಕೃಷಿ ಉತ್ಪನ್ನ ಮಾರುಕಟ್ಟೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಯುಷ್ ಸಂಬಂಧಿಸಿದ ವಿಶೇಷ ಸೇವೆಗಳಿಗೆ ವಿನಾಯ್ತಿ   

 

ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಾಕ್ ಡೌನ್ ನಿರ್ಬಂಧದ ಕೇಂದ್ರ ಗೃಹ ಸಚಿವಾಲಯ (ಎಂಎಚ್ ಎ) ಹೊರಡಿಸಿದ್ದ ಸಮಗ್ರ ಮಾರ್ಗಸೂಚಿಯ ಕುರಿತು ಕೆಲವು ಪ್ರಶ್ನೆಗಳಿಗೆ ಹಾಗೂ ಆಕ್ಷೇಪಗಳಿಗೆ ಪ್ರತಿಯಾಗಿ ಕೇಂದ್ರ ಗೃಹ ಕಾರ್ಯದರ್ಶಿ ನಿರ್ಬಂಧಗಳಿಂದ ಯಾವ್ಯಾವ ವಿಶೇಷ ಸೇವೆಗಳಿಗೆ ವಿನಾಯ್ತಿ ಇದೆ ಎಂಬುದರ ಕುರಿತು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ , ಲಾಕ್ ಡೌನ್ ವೇಳೆ ವಿನಾಯ್ತಿ  ನೀಡಲಾಗಿರುವ ವಿಶೇಷ ಸೇವೆಗಳು ಈ ಕೆಳಗಿನಂತಿವೆ:

*  ಕೃಷಿ ಉತ್ಪನ್ನ ನೇರ ಮಾರುಕಟ್ಟೆ ಮಾಡುವವರು

* ಮಹಿಳೆಯರು, ಮಕ್ಕಳು ಮತ್ತು ಗರ್ಭಿಣಿಯರಿಗೆ ಆಹಾರ ಮತ್ತು ಪೌಷ್ಟಿಕಾಂಶ ನೀಡುವ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು

*  ಆಯುಷ್ ವಿಭಾಗದಲ್ಲಿ ವೈದ್ಯಕೀಯ ಸೇವೆ ಮತ್ತು ಔಷಧ  ಉತ್ಪಾದನೆಯಲ್ಲಿ ತೊಡಗಿರುವವರು.

ರಾಜ್ಯಗಳಿಗೆ ಕಳುಹಿಸಿರುವ ಸಂವಹನ ಮತ್ತು ವಿನಾಯ್ತಿ ನೀಡಿರುವ ಕ್ಯಾಟಗರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

Click Here to see Communication to States with specific details of exempt categories 

 

*****



(Release ID: 1610878) Visitor Counter : 105