ಇಂಧನ ಸಚಿವಾಲಯ

ಇಂಧನ ಮತ್ತು ಆರ್‌ಇ ವಲಯದ ಸಾರ್ವಜನಿಕ ಉದ್ಯಮಗಳಿಂದ PM CARES ನಿಧಿಗೆ 925 ಕೋ.ರೂ. ಕೊಡುಗೆ

Posted On: 03 APR 2020 3:49PM by PIB Bengaluru

ಇಂಧನ ಮತ್ತು ಆರ್ ವಲಯದ ಸಾರ್ವಜನಿಕ ಉದ್ಯಮಗಳಿಂದ PM CARES ನಿಧಿಗೆ 925 ಕೋ.ರೂ. ಕೊಡುಗೆ

 

ಇಂಧನ ಸಚಿವಾಲಯ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು (ಸಿಪಿಎಸ್) ಕೊರೊನಾವೈರಸ್ (COVID -19) ಸಾಂಕ್ರಾಮಿಕ ರೋಗಕ್ಕೆ ಪರಿಹಾರ ನೀಡಲು ಸ್ಥಾಪಿಸಿರುವಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ’ (ಪಿಎಂ ಕೇರ್ಸ್ ಫಂಡ್) ಗೆ 925 ಕೋಟಿ ರೂ.ದೇಣಿಗೆ ನೀಡಿವೆ.

ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಆರ್.ಕೆ.ಸಿಂಗ್ ಅವರು ತಮ್ಮ ಸಚಿವಾಲಯಗಳ ಅಡಿಯಲ್ಲಿ ಬರುವ ಸಾರ್ವಜನಿಕ ಉದ್ಯಮಗಳ ಕೊಡುಗೆಯ ಬಗ್ಗೆ ಟ್ವೀಟ್ ಮಾಡಿ, “ಇಂಧನ ಮತ್ತು ಎಂಎನ್ಆರ್ ಸಚಿವಾಲಯದ ಸಾರ್ವಜನಿಕ ವಲಯದ ಸಂಸ್ಥೆಗಳು ಪಿಎಂ-ಕೇರ್ಸ್ ನಿಧಿಗೆ 925 ಕೋ.ರೂ. ದಣಿಗೆ ನೀಡಲು ನಿರ್ಧರಿಸಿದ್ದು, ಇದರಲ್ಲಿ 445 ಕೋ.ರೂ.ಗಳನ್ನು ಮಾರ್ಚ್ 31 ರಂದು ಠೇವಣಿ ಮಾಡಲಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಉಳಿದಿದೆ ಮೊತ್ತವನ್ನು ನೀಡಲಿವೆ ಎಂಬುದನ್ನು ಹಂಚಿಕೊಳ್ಳಲು ಹೆಮ್ಮೆಯಾಗುತ್ತಿದೆಎಂದು ತಿಳಿಸಿದ್ದಾರೆ. 925 ಕೋ.ರೂಗಳಲ್ಲಿ. ಇಂಧನ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಉದ್ಯಮಗಳಿಂದ 905 ಕೋ.ರೂ. ಮತ್ತು ಎಂಎನ್ಆರ್ ಅಡಿಯಲ್ಲಿ ಬರುವ ಪಿಎಸ್ಯುಗಳಿಂದ 20 ಕೋ.ರೂ.ಗಳನ್ನು ನೀಡಲಾಗುತ್ತಿದೆ.

"ಕೋವಿಡ್ -19, ತೀವ್ರ ಸಾಂಕ್ರಾಮಿಕ ರೋಗವಾಗಿದ್ದು ಇಡೀ ಜಗತ್ತಿಗೆ ಹರಡಿದೆ. ಭಾರತದಲ್ಲಿಯೂ ಸಾಂಕ್ರಾಮಿಕ ರೋಗವು ತೀವ್ರ ಅಪಾಯವನ್ನುಂಟುಮಾಡುತ್ತಿದೆ, ಇದರಿಂದಾಗಿ ಇಡೀ ರಾಷ್ಟ್ರವು ಒಟ್ಟಾಗಿ ನಿಲ್ಲಬೇಕು" ಎಂದು ಶ್ರೀ ಸಿಂಗ್ ಹೇಳಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮನವಿಗೆ ಸ್ಪಂದಿಸಿ ಅವರು ಪಿಎಂ ಕೇರ್ಸ್ ಫಂಡ್ಗೆ ಮುಕ್ತ ಮನಸ್ಸಿನಿಂದ ಕೊಡುಗೆ ನೀಡುತ್ತಿರುವ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಕೊಡುಗೆಯ ವಿವರಗಳು ಹೀಗಿವೆ:

PM-CARES ನಿಧಿಗೆ ಇಂಧನ ಸಚಿವಾಲಯದ ಸಿಪಿಎಸ್ಇಗಳ ಕೊಡುಗೆ

ಕ್ರ.ಸಂ

ಸಿಪಿಎಸ್ಇ ಹೆಸರು

ಮಾರ್ಚ್ 31, 2020ರಲ್ಲಿ ಕೊಡುಗೆ

2020-21 ಸಿಎಸ್ಆರ್ ನಲ್ಲಿ ನೀಡಲು ಪ್ರಸ್ತಾಪಿರುವ ಮೊತ್ತ

ಸಿಬ್ಬಂದಿಯ ವೇತನ

ಒಟ್ಟು

(ಕೋ.ರೂಗಳಲ್ಲಿ).

1

ಎನ್ಟಿಪಿಸಿ

-

250

7.5

257.50

2

ಪಿಜಿಸಿಐಎಲ್

130

70

2.47

202.47

3

ಪಿಎಫ್ಸಿ

181

19

0.18

200.18

4

ಆರ್ಇಸಿ ಲಿಮಿಟೆಡ್

100

50

0.15

150.15

5

ಎನ್ಎಚ್ಪಿಸಿ

20

30

1.9

51.90

6

ಎಸ್ಜೆವಿಎನ್ ಲಿಮಿಟೆಡ್

5

20

0.31

25.32

7

ಟಿಎಚ್ಡಿಸಿ

2.0

7.4

0.60

10.00

8

ಬಿಬಿಎಂಬಿ

-

-

2.50

2.50

9

ಪೊಸೊಕೊ

0.27

0.3

0.17

0.74

10

ನೀಪ್ಕೊ

2.56

1.50

0.60

4.66

 

 

440.83

448.20

16.39

 

 ಒಟ್ಟು ಮೊತ್ತ 905.42

 

PM-CARES ನಿಧಿಗೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಿಪಿಎಸ್ಇಗಳ ಕೊಡುಗೆ

ಕ್ರ.ಸಂ

ಸಿಪಿಎಸ್ಇ ಹೆಸರು

ಕೊಡುಗೆ ನೀಡುವ ಮೊತ್ತ (ಕೋ.ರೂ.ಗಳಲ್ಲಿ)

1

ಆರ್ ಡಿ

15

2

ಎಸ್ಇಸಿಐ

20

 

 


(Release ID: 1610764) Visitor Counter : 242