ಗೃಹ ವ್ಯವಹಾರಗಳ ಸಚಿವಾಲಯ
ಭಾರತದಲ್ಲಿ ಪ್ರವಾಸಿ ವೀಸಾದಲ್ಲಿದ್ದು ತಬ್ಲಿಗಿ ಜಮಾತ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 960 ವಿದೇಶಿಯರನ್ನು ಗೃಹ ಸಚಿವಾಲಯ ಕಪ್ಪುಪಟ್ಟಿಗೆ ಸೇರಿಸಿದ್ದು ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು
Posted On:
02 APR 2020 7:38PM by PIB Bengaluru
ಭಾರತದಲ್ಲಿ ಪ್ರವಾಸಿ ವೀಸಾದಲ್ಲಿದ್ದು ತಬ್ಲಿಗಿ ಜಮಾತ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 960 ವಿದೇಶಿಯರನ್ನು ಗೃಹ ಸಚಿವಾಲಯ ಕಪ್ಪುಪಟ್ಟಿಗೆ ಸೇರಿಸಿದ್ದು ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರ ನಿರ್ದೇಶನದ ಮೇರೆಗೆ, ಭಾರತದಲ್ಲಿ ಪ್ರವಾಸಿ ವೀಸಾಗಳಲ್ಲಿದ್ದು ತಬ್ಲಿಗಿ ಜಮಾತ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 960 ವಿದೇಶಿಯರನ್ನು ಗೃಹ ಸಚಿವಾಲಯ (ಎಂಎಚ್ಎ) ಕಪ್ಪುಪಟ್ಟಿಗೆ ಸೇರಿಸಿದೆ.
ವಿದೇಶಿಯರ ಕಾಯ್ದೆ, 1946 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಅಡಿಯಲ್ಲಿ, ಆದ್ಯತೆಯ ಮೇರೆಗೆ, ಕಾಯ್ದೆ ಉಲ್ಲಂಘಿಸಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವಾಲಯವು ಎಲ್ಲಾ ಸಂಬಂಧಪಟ್ಟ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
(Release ID: 1610541)
Visitor Counter : 202