ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಮತ್ತು ಜರ್ಮನಿಯ ಚಾನ್ಸಲರ್ ನಡುವೆ ದೂರವಾಣಿ ಸಂಭಾಷಣೆ

Posted On: 02 APR 2020 8:03PM by PIB Bengaluru

ಪ್ರಧಾನಿ ಮತ್ತು ಜರ್ಮನಿಯ ಚಾನ್ಸಲರ್ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಜರ್ಮನಿಯ ಚಾನ್ಸಲರ್ ಡಾ. ಏಂಜೆಲಾ ಮರ್ಕೆಲ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

COVID -19 ಸಾಂಕ್ರಾಮಿಕ ರೋಗ, ತಮ್ಮ ದೇಶಗಳಲ್ಲಿನ ಪರಿಸ್ಥಿತಿ ಮತ್ತು ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಅಂತರರಾಷ್ಟ್ರೀಯ ಸಹಯೋಗದ ಮಹತ್ವದ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅಗತ್ಯವಿರುವ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಅಸಮರ್ಪಕ ಲಭ್ಯತೆಯ ಬಗ್ಗೆ ಅವರು ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ನಿಟ್ಟಿನಲ್ಲಿ ಸಹಕಾರದ ಮಾರ್ಗಗಳನ್ನು ಹುಡುಕಲು ಸಮ್ಮತಿಸಿದರು.

COVID-19 ಸಾಂಕ್ರಾಮಿಕವು ಆಧುನಿಕ ಇತಿಹಾಸದಲ್ಲಿ ಒಂದು ಪ್ರಮುಖ ತಿರುವು ಹಾಗೂ ಮಾನವೀಯ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸಿದ ಜಾಗತೀಕರಣದ ಹೊಸ ದೃಷ್ಟಿಯನ್ನು ರೂಪಿಸುವ ಅವಕಾಶವನ್ನು ಇದು ನೀಡಿದೆ ಎಂಬ ಪ್ರಧಾನಿಯವರ ಅಭಿಪ್ರಾಯಕ್ಕೆ ಜರ್ಮನ್ ಚಾನ್ಸೆಲರ್ ಸಹಮತ ವ್ಯಕ್ತಪಡಿಸಿದರು.

ವಿಶ್ವದ ಜನರಿಗೆ ಸರಳ ಯೋಗ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುರ್ವೇದ ಪರಿಹಾರಗಳ ಇತ್ತೀಚಿನ ಭಾರತೀಯ ಉಪಕ್ರಮಗಳ ಬಗ್ಗೆ ಪ್ರಧಾನಿಯವರು ಚಾನ್ಸಲರ್ ಅವರಿಗೆ ಮಾಹಿತಿ ನೀಡಿದರು. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಲು ವಿಶೇಷವಾಗಿ ಪ್ರಸ್ತುತ ಲಾಕ್ ಡೌನ್ ಪರಿಸ್ಥಿತಿಗಳಲ್ಲಿ ಇಂತಹ ಅಭ್ಯಾಸಗಳು ಬಹಳ ಪ್ರಯೋಜನಕಾರಿ ಎಂದು ಚಾನ್ಸಲರ್ ಒಪ್ಪಿಕೊಂಡರು.



(Release ID: 1610539) Visitor Counter : 165