ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಡಾ. ಜಿತೇಂದ್ರ ಸಿಂಗ್ ಅವರಿಂದ ದೇಶದ 410 ಜಿಲ್ಲೆಗಳಲ್ಲಿ ನಡೆಸಿದ ರಾಷ್ಟ್ರೀಯ ಕರೊನಾ ಸಮೀಕ್ಷೆಯ ಬಿಡುಗಡೆ

Posted On: 02 APR 2020 3:17PM by PIB Bengaluru

ಡಾ. ಜಿತೇಂದ್ರ ಸಿಂಗ್ ಅವರಿಂದ ದೇಶದ 410 ಜಿಲ್ಲೆಗಳಲ್ಲಿ ನಡೆಸಿದ ರಾಷ್ಟ್ರೀಯ ಕರೊನಾ ಸಮೀಕ್ಷೆಯ ಬಿಡುಗಡೆ

 

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ  ಖಾತೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಇಂದು  ಕೋವಿಡ್ 19 ಕುರಿತು ರಾಷ್ಟ್ರೀಯ ಪೂರ್ವಸಿದ್ಧತಾ ಸಮೀಕ್ಷೆಯನ್ನು - ಜಿಲ್ಲಾಧಿಕಾರಿಗಳು ಮತ್ತು ಐಎಎಸ್ ಅಧಿಕಾರಿಗಳ ಪ್ರತಿಕ್ರಿಯೆಗಳು (2014-2018 ಬ್ಯಾಚ್ಗಳು)ವರದಿಯನ್ನು  ಬಿಡುಗಡೆ ಮಾಡಿದರು. ವರದಿಯ ಪ್ರತಿ https://darpg.gov.in ನಲ್ಲಿ ಲಭ್ಯವಿದೆ.

ಸ್ವಾತಂತ್ರ್ಯದ ನಂತರ ಭಾರತ ಎದುರಿಸುತ್ತಿರುವ ಅತಿದೊಡ್ಡ ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸುವಾಗ ರಾಷ್ಟ್ರದ ಆಡಳಿತ ಎದುರಿಸುವ ಸವಾಲುಗಳ ಬಗ್ಗೆ ಪಕ್ಷಿನೋಟವನ್ನು  ಪಡೆಯಲು ಕೋವಿಡ್-19  ರಾಷ್ಟ್ರೀಯ ಸನ್ನದ್ಧತೆ ಸಮೀಕ್ಷೆ 2020 ಅನ್ನು ದೇಶದ 410 ಜಿಲ್ಲೆಗಳಲ್ಲಿ 3 ದಿನಗಳಲ್ಲಿ ನಡೆಸಲಾಯಿತು.

ಈ ಸನ್ನದ್ಧತೆಯ ಸಮೀಕ್ಷೆಯ ಉದ್ದೇಶಗಳು ಹೀಗಿವೆ:

  • ರಾಜ್ಯಗಳಾದ್ಯಂತ ಕೋವಿಡ್-19ರ ಸನ್ನದ್ಧತೆಯ ತುಲನಾತ್ಮಕ ವಿಶ್ಲೇಷಣೆಯನ್ನು ಅಭಿವೃದ್ಧಿಪಡಿಸುವುದು;
  • ಕ್ಷೇತ್ರದಲ್ಲಿ ಕೆಲಸ ಮಾಡುವ ನಾಗರಿಕ ಸೇವಾ ಅಧಿಕಾರಿಗಳು ಗ್ರಹಿಸಲ್ಪಟ್ಟಂತೆ ಕೋವಿಡ್ 19ರ ಸನ್ನದ್ಧತೆಯ ಮುಖ್ಯ ಆದ್ಯತೆಗಳು ಮತ್ತು ನಿರ್ಬಂಧಗಳನ್ನು ಎತ್ತಿ   ತೋರುವುದು;   
  • ಸಾಂಸ್ಥಿಕ/ ಸಾರಿಗೆ/ ಆಸ್ಪತ್ರೆ ಸಿದ್ಧತೆ ಇತ್ಯಾದಿಗಳನ್ನು ಸಿದ್ದಪಡಿಸುವ ಅಂಶಗಳು ಸಿಗುವುದನ್ನು ಸಕ್ರಿಯಗೊಳಿಸಲು;
  • ಭಾರತದ ಜಿಲ್ಲೆಗಳಲ್ಲಿ ಕೋವಿಡ್-19 ಎದುರಿಸುವಲ್ಲಿ ವ್ಯವಸ್ಥಿತ ಮತ್ತು ಪ್ರಕ್ರಿಯೆಗೆ ಸಂಬಂಧಿಸಿದ ನ್ಯೂನತೆಗಳನ್ನು ಗುರುತಿಸುವ ಪ್ರವೃತ್ತಿಯನ್ನು ಕಂಡುಹಿಡಿಯಲು.

ಕ್ಷೇತ್ರ ಮಟ್ಟದ ಮಾಹಿತಿಯನ್ನು ನೀಡುತ್ತಿರುವ 410 ನಾಗರಿಕ ಸೇವಾ ಅಧಿಕಾರಿಗಳ ಪ್ರತಿಕ್ರಿಯೆಯೊಂದಿಗೆ  ಕೋವಿಡ್=19  ಪೂರ್ವಸಿದ್ಧತಾ ಸಮೀಕ್ಷೆಯನ್ನು ಭಾರತದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಯಿತು,   ಭಾರತ ಸರ್ಕಾರದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಜಿಲ್ಲಾಧಿಕಾರಿಗಳು ಮತ್ತು 2014-2018 ಬ್ಯಾಚ್‌ಗಳ ಐಎಎಸ್ ಅಧಿಕಾರಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.  ಮಾರ್ಚ್ 25, 2020 ರಿಂದ ಮೂರು ದಿನಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿತೇಂದ್ರ ಸಿಂಗ್, ಮಾರ್ಚ್ 19, 2020 ಮತ್ತು ಮಾರ್ಚ್ 24, 2020 ರಂದು ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತೀಯರು ತಮ್ಮಲ್ಲಿರುವ ಪ್ರತಿಯೊಂದು  ಸಂಪನ್ಮೂಲವನ್ನು ಉಪಯೋಗಿಸಿ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಹೋರಾಡಬೇಕೆಂದು ಕರೆಕೊಟ್ಟಿದ್ದರು.   ಭಾರತದಲ್ಲಿ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಧಾನ ಮಂತ್ರಿಯ ಬದ್ಧತೆಗೆ ಜನರು ಅಮೋಘವಾಗಿ ಪ್ರತಿಕ್ರಿಯಿಸಿದರು, ಈ ಅವಧಿಯಲ್ಲಿ ಮಾರ್ಚ್ 22, 2020ರಿಂದ ಇಲ್ಲಿಯವರೆಗೆ ಉಪಖಂಡದ ಉದ್ದ ಮತ್ತು ಅಗಲದಾದ್ಯಂತ ಲಕ್ಷಾಂತರ ನಾಗರಿಕ ಸೇವಕರು, ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಸಾಮಾನ್ಯ ಜನರು  ಭಾಗವಹಿಸುತ್ತಿದ್ದಾರೆ.

ಡಾ. ಜಿತೇಂದ್ರ ಸಿಂಗ್ ಅವರು ಕೋವಿಡ್-19ರ ರಾಷ್ಟ್ರೀಯ ಪೂರ್ವಸಿದ್ಧತಾ ಸಮೀಕ್ಷೆಯು ಭಾರತದ ಪ್ರತಿಕ್ರಿಯೆಯು ಸುಸಂಬದ್ಧ, ಉದ್ದೇಶಪೂರ್ವಕ ಮತ್ತು ದೃಢ ನಿಶ್ಚಯವನ್ನು ಹೊಂದಿದೆ ಎನ್ನುವುದನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ.  ಸಾಂಕ್ರಾಮಿಕ ರೋಗವನ್ನು ಎದುರಿಸಲು ಪರಿಣಾಮಕಾರಿಯಾದ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಸಮನ್ವಯವಿತ್ತು.  ಸರ್ಕಾರದ ನೀತಿ ಕ್ರಮಗಳಾದ  ಜನತಾ ಕರ್ಫ್ಯೂ, ನ್ಯಾಷನಲ್ ಲಾಕ್ಡೌನ್, ರೂ. 1.7 ಶತಕೋಟಿಯ  ಆರ್ಥಿಕ ಪ್ಯಾಕೇಜ್  , ಆರ್ಬಿಐ ಪ್ರಕಟಣೆಗಳು ಹೆಚ್ಚಿನ ಬೆಂಬಲವನ್ನು ಪಡೆದ ಹೆಜ್ಜೆಗಳಾಗಿವೆ.

ಡಾ. ಜಿತೇಂದ್ರ ಸಿಂಗ್ ಅವರು ರಾಷ್ಟ್ರೀಯ ಲಾಕ್ಡೌನ್ ಅನುಷ್ಠಾನದಲ್ಲಿ ಪೌರಕಾರ್ಮಿಕರು, ನಾಗರಿಕ ಸೇವಾ ಆಧಿಕಾರಿಗಳು ವೈದ್ಯರು, ದಾದಿಯರು, ಆರೋಗ್ಯ ವಲಯದ ತಜ್ಞರು, ಪೊಲೀಸ್ ಅಧಿಕಾರಿಗಳ ಅಪಾರ ಶ್ರಮವನ್ನು ಶ್ಲಾ ಘಿಸಿದರು.  ಭಾರತದ ನಾಗರಿಕರು ಜವಾಬ್ದಾರಿಯುತ ಮತ್ತು ಸುಸಂಬದ್ಧರಾಗಿದ್ದಾರೆ ಮತ್ತು ಅವರು ಕೋವಿಡ್-19ರ ಮಾರ್ಗಸೂಚಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಅವರು ಎತ್ತಿ ತೋರಿಸಿದರು.

ಈ ಸಮೀಕ್ಷೆಯು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನೀತಿ ರೂಪಿಸುವವರಿಗೆ  ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಡಾ.ಜಿತೇಂದ್ರ ಸಿಂಗ್ ಅವರು ಈ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಮಂತ್ರಿಯವರ ನಾಯಕತ್ವಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮುಂದಿನ ದಿನಗಳಲ್ಲಿ ಭಾರತ ಎದುರಿಸುತ್ತಿರುವ ಬಿಕ್ಕಟ್ಟು ಭಾರತದ ನಾಗರಿಕರು ಮತ್ತು ಸರ್ಕಾರದ ದೃಢ ನಿಶ್ಚಯದ ಪ್ರಯತ್ನಗಳಿಂದ ಶಮನಗೊಳ್ಳುವುದು ಎಂದು ಆಶಿಸಿದರು.

ಕಾರ್ಯದರ್ಶಿ ಡಿಎಆರ್ಪಿಜಿ, ಡಾ.ಕ್ಷತ್ರಪತಿ ಶಿವಾಜಿ, ಹೆಚ್ಚುವರಿ ಕಾರ್ಯದರ್ಶಿ ಡಿಎಆರ್ಪಿಜಿ ವಿ.ಶ್ರೀನಿವಾಸ್, ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಜಯಾ ದುಬೆ. ಎನ್.ಬಿ.ಎಸ್.ರಾಜಪುತ್  ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ  ನಡೆದ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 


(Release ID: 1610436)