ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ವಿರುದ್ಧದ ಲಾಕ್ ಡೌನ್ ವೇಳೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡನಾ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ರಾಜ್ಯಗಳಿಗೆ ಎಂ ಎಚ್ ಎ  ಪತ್ರ

Posted On: 02 APR 2020 4:29PM by PIB Bengaluru

ಕೋವಿಡ್-19 ವಿರುದ್ಧದ ಲಾಕ್ ಡೌನ್ ವೇಳೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡನಾ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ರಾಜ್ಯಗಳಿಗೆ ಎಂ ಎಚ್   ಪತ್ರ

 ಲಾಕ್ ಡೌನ್ ಕ್ರಮಗಳನ್ನು ಉಲ್ಲಂಘಿಸುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು: ರಾಜ್ಯಗಳಿಗೆ ಎಂಎಚ್ಎ ಕರೆ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ), ದೇಶದಲ್ಲಿ ಕೋವಿಡ್-19 ಹರಡುವ ಸರಪಳಿಯನ್ನು ಕತ್ತರಿಸಲು ಘೋಷಿಸಲಾಗಿರುವ ಲಾಕ್ ಡೌನ್ ವೇಳೆ ಭಾರತ ಸರ್ಕಾರದ ಸಚಿವಾಲಯ/ಇಲಾಖೆಗಳು/ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು/ಆಡಳಿತಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಎಂಎಚ್ಎ, ಈ ಮೊದಲು ಎಲ್ಲಾ ರಾಜ್ಯಗಳಿಗೆ ಪತ್ರವನ್ನು ಬರೆದು, ಕೋವಿಡ್-19 ಎದುರಿಸಲು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಲಭ್ಯವಿರುವ ಅಧಿಕಾರ ಬಳಸಿ, ಲಾಕ್ ಡೌನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಕ್ಷರಶಃ ಪಾಲಿಸುವಂತೆ ಮನವಿ ಮಾಡಿತ್ತು.  

ಈ ಸಂದೇಶವನ್ನು ಮತ್ತೆ ಪುನರುಚ್ಚರಿಸಿರುವ ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ, ಎಲ್ಲ ರಾಜ್ಯಗಳಿಗೆ ಮತ್ತೆ ಪತ್ರ ಬರೆದು, ಕೋವಿಡ್-19 ಎದುರಿಸಲು ಕೈಗೊಂಡಿರುವ ಲಾಕ್ ಡೌನ್ ಕ್ರಮಗಳನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡಸಂಹಿತೆ ಮತ್ತು ಡಿಎಂ ಕಾಯ್ದೆ ಅಡಿ ದಂಡನಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಆ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರವನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಲಾಕ್ ಡೌನ್ ಕ್ರಮಗಳನ್ನು ಉಲ್ಲಂಘಿಸುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಲವಾಗಿ ಪ್ರತಿಪಾದಿಸಲಾಗಿದೆ.

 

ರಾಜ್ಯಗಳಿಗೆ ಕಳುಹಿಸಿರುವ  ಸಂಪರ್ಕ ಸೂಚನೆಗೆ ಇಲ್ಲಿ  ಕ್ಲಿಕ್ ಮಾಡಿ

 

ದಂಡನಾ ಕ್ರಮಗಳ ಕುರಿತು ಇಲ್ಲಿ ಕ್ಲಿಕ್ ಮಾಡಿ

 

************



(Release ID: 1610405) Visitor Counter : 115