ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಆರೋಗ್ಯಸೇತು: ಬಹುಪಯೋಗಿ ಸಂಪರ್ಕ ಸೇತುವೆ
Posted On:
02 APR 2020 4:21PM by PIB Bengaluru
ಆರೋಗ್ಯಸೇತು: ಬಹುಪಯೋಗಿ ಸಂಪರ್ಕ ಸೇತುವೆ
ಕೋವಿಡ್ -19 ವಿರುದ್ಧದ ಹೋರಾಟವನ್ನು ಒಟ್ಟಾಗಿ ಎದುರಿಸಲು ಭಾರತ ಸರ್ಕಾರ ಇಂದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿತು.
“ಆರೋಗ್ಯಸೇತು” ಎಂದು ಕರೆಯಲ್ಪಡುವ ಈ ಆಪ್ ಡಿಜಿಟಲ್ ಇಂಡಿಯಾದಡಿ ಆರೋಗ್ಯ ವಲಯಕ್ಕೆ ಮೀಸಲಾಗಿದ್ದು, ಅದು ಭಾರತದ ಪ್ರತಿಯೊಬ್ಬರ ಯೋಗಕ್ಷೇಮಕ್ಕೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಜನರು ತಮಗೆ ಕೊರೋನಾ ಸೋಂಕು ಹರಡುವ ಅಪಾಯ ಎಷ್ಟಿದೆ ಎಂಬುದನ್ನು ತಾವೇ ಮೌಲ್ಯಮಾಪನ ಅಂದಾಜು ಮಾಡಿಕೊಳ್ಳಬಹುದು. ಅದು ಬ್ಲೂಟೂತ್ ತಂತ್ರಜ್ಞಾನ, ಆಲ್ಗೋರಿತಮಸ್ ಮತ್ತು ಕೃತಕ ಬುದ್ಧಿಮತ್ತೆ ಬಳಸಿ, ಇತರರೊಡನೆ ಸಂವಾದ ನಡೆಸಿದ ಆಧಾರದ ಮೇಲೆ ಅದು ಲೆಕ್ಕಾಚಾರ ಹಾಕುತ್ತದೆ.
ಈ ಆಪ್ ಅನ್ನು ಒಮ್ಮೆ ಸ್ಮಾರ್ಟ್ ಫೋನ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡರೆ ಅದನ್ನು ಸುಲಭವಾಗಿ ಮತ್ತು ಬಳಕೆದಾರರ ಸ್ನೇಹಿಯಾಗಿ ಉಪಯೋಗಿಸಬಹುದು. ಅದು ಮೊಬೈಲ್ ಫೋನಿನ ವ್ಯಾಪ್ತಿಗೆ ಒಳಪಟ್ಟು, ಇತರೆ ಮೊಬೈಲ್ ಫೋನ್ ಗಳಲ್ಲಿ ಆರೋಗ್ಯಸೇತು ಆಪ್ ಇದ್ದರೆ ಅದನ್ನು ಪತ್ತೆಹಚ್ಚುತ್ತದೆ. ಈ ಆಪ್ ಆಧುನಿಕ ಮಾನದಂಡಗಳನ್ನು ಆಧರಿಸಿ ಯಾವುದಾದರೂ ಸಂಪರ್ಕಗಳು ಸೋಂಕು ತಗುಲಿದೆ ಎಂಬುದು ದೃಢಪಟ್ಟಿದ್ದರೆ ಅದನ್ನು ಆಧರಿಸಿ ಸೋಂಕಿನ ಅಪಾಯದ ಬಗ್ಗೆ ಲೆಕ್ಕಾಚಾರ ಹಾಕುತ್ತದೆ.
ಈ ಆಪ್, ಕೋವಿಡ್-19 ಸೋಂಕು ಹರಡದಂತೆ ಅಪಾಯದ ಮುನ್ನೆಚ್ಚರಿಕೆಯನ್ನು ಅರಿತು ಸಕಾಲದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನೆರವಾಗುತ್ತದೆ ಮತ್ತು ಎಲ್ಲೆಲ್ಲಿ ಐಸೋಲೇಶನ್ ಅಗತ್ಯವಿದೆ ಅದನ್ನು ಖಾತ್ರಿಪಡಿಸುತ್ತದೆ.
ಈ ಆಪ್ ಅನ್ನು ಖಾಸಗಿತನಕ್ಕೆ ಮೊದಲ ಆದ್ಯತೆ ನೀಡಿ, ವಿನ್ಯಾಸಗೊಳಿಸಲಾಗಿದೆ. ಆಪ್ ಸಂಗ್ರಹ ಮಾಡುವ ವೈಯಕ್ತಿಕ ದತ್ತಾಂಶ, ಅತ್ಯಾಧುನಿಕ ತಂತ್ರಜ್ಞಾನವನ್ನು ಆಧರಿಸಿ ಕ್ರೂಢೀಕರಿಸಿರುತ್ತದೆ ಮತ್ತು ಅದು ಅತ್ಯಂತ ಸುರಕ್ಷಿತವಾಗಿದ್ದು, ವೈದ್ಯಕೀಯ ಮಧ್ಯಪ್ರವೇಶದ ಅಗತ್ಯತೆ ಬಿದ್ದಾಗ ಪೂರಕವಾಗಿ ಸಹಾಯ ಮಾಡುತ್ತದೆ.
11 ಭಾಷೆಗಳಲ್ಲಿ ಈ ಆಪ್ ಲಭ್ಯವಿದ್ದು, ಆಪ್ಅನ್ನು ಮೊದಲ ದಿನದಿಂದಲೇ ಭಾರತದಾದ್ಯಂತ ಬಳಕೆಗೆ ಸಿದ್ಧಗೊಳಿಸಲಾಗಿದೆ ಮತ್ತು ಅದರ ವಿನ್ಯಾಸವನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.
ದೇಶದ ಯುವ ಪ್ರತಿಭೆ ಜಾಗತಿಕ ಸಂಕಷ್ಟದ ಸಮಯದಲ್ಲಿ ಪ್ರತಿಸ್ಪಂದಿಸಿ ಒಗ್ಗೂಡಿದರೆ ಸಂಪನ್ಮೂಲ ಕ್ರೂಢೀಕರಿಸಿ ಪ್ರಯತ್ನಪಟ್ಟು ಹೇಗೆ ಸಿದ್ಧಪಡಿಸಬಹುದು ಎಂಬುದಕ್ಕೆ ವಿಶಿಷ್ಟ ಉದಾಹರಣೆಯಾಗಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವಿನ ಸಂಪರ್ಕ ಸೇತುವೆಯಾಗಿದ್ದು, ಜೊತೆಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳ ವಿತರಣೆಗೆ ಹಾಗು ಭವಿಷ್ಯದಲ್ಲಿ ಆರೋಗ್ಯವಂತ ಭಾರತ ನಿರ್ಮಾಣ ಮತ್ತು ರೋಗರಹಿತ ದೇಶ ನಿರ್ಮಾಣಕ್ಕೆ ಯುವಕರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ.
मैंसुरक्षित।हमसुरक्षित।भारतसुरक्षित।
ಮೈ ಸುರಕ್ಷಿತ್, ಹಮ್ ಸುರಕ್ಷಿತ್, ಭಾರತ್ ಸುರಕ್ಷಿತ್
(Release ID: 1610398)
Visitor Counter : 606