ಚುನಾವಣಾ ಆಯೋಗ
ಚುನಾವಣಾ ನಿರ್ವಹಣೆಯ ವಿವಿಧ ಅಂಶಗಳ ಕುರಿತು ಇಸಿಐ ಸ್ಥಾಪಿಸಿರುವ ತಂಡಗಳ ಮುಖ್ಯ ಶಿಫಾರಸ್ಸುಗಳ ಕುರಿತ ಟಿಪ್ಪಣಿ/ ಸಲಹೆಗಳನ್ನು ಸಲ್ಲಿಸಲು ದಿನಾಂಕದ ವಿಸ್ತರಣೆ
ಪ್ರಕಟಣಾ ದಿನಾಂಕ:
02 APR 2020 1:39PM by PIB Bengaluru
ಚುನಾವಣಾ ನಿರ್ವಹಣೆಯ ವಿವಿಧ ಅಂಶಗಳ ಕುರಿತು ಇಸಿಐ ಸ್ಥಾಪಿಸಿರುವ ತಂಡಗಳ ಮುಖ್ಯ ಶಿಫಾರಸ್ಸುಗಳ ಕುರಿತ ಟಿಪ್ಪಣಿ/ ಸಲಹೆಗಳನ್ನು ಸಲ್ಲಿಸಲು ದಿನಾಂಕದ ವಿಸ್ತರಣೆ
ಭಾರತದ ಚುನಾವಣಾ ಆಯೋಗವು ಮಾರ್ಚ್ 7, 2020 ರಂದು ಚುನಾವಣಾ ನಿರ್ವಹಣೆಯ ವಿವಿಧ ಅಂಶಗಳ ಕುರಿತು ಕೆಲಸ ಮಾಡುವ ತಂಡಗಳ ಮುಖ್ಯ ಶಿಫಾರಸ್ಸುಗಳ ಕುರಿತು ಟಿಪ್ಪಣೆಗಳನ್ನು/ ಸಲಹೆಗಳನ್ನು ಮಾರ್ಚ್ 31, 2020 ರೊಳಗೆ ಸಲ್ಲಿಸಲು ಕೋರಿತ್ತು,
ದೇಶದಲ್ಲಿ ಕೋವಿಡ್ – 19 ಸಾಂಕ್ರಾಮಿಕ ರೋಗತಡೆಗೆ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಅವಧಿಯನ್ನು ವಿಸ್ತರಿಸುವಂತೆ ಕೆಲವು ಮನವಿಗಳನ್ನು ಸ್ವೀಕರಿಸಲಾಗಿದೆ. ಇದನ್ನು ಪರಿಗಣಿಸಿದ ಆಯೋಗ ಸಲಹೆಗಳನ್ನು ಸ್ವೀಕರಿಸುವ ದಿನಾಂಕವನ್ನು 30 ಏಪ್ರಿಲ್ 2020 ರವರೆಗೆ ವಿಸ್ತರಿಸಿದೆ.
Click here to see the link
****
(ಪ್ರಕಟಣೆ ಐ.ಡಿ.: 1610273)
ವಿಸಿಟರ್ ಕೌಂಟರ್ : 192