ರಕ್ಷಣಾ ಸಚಿವಾಲಯ

ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಜ್ಜಾದ ಮಾಜಿ ಸೈನಿಕರು

Posted On: 02 APR 2020 10:25AM by PIB Bengaluru

ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಜ್ಜಾದ ಮಾಜಿ ಸೈನಿಕರು

ಸ್ವಯಂ ಮೊದಲು ಸೇವೆಎಂಬ ಧ್ಯೇಯವಾಕ್ಯದೊಂದಿಗೆ ಹೋರಾಟಕ್ಕೆ ಮುಂದಾದ ಇ ಎಸ್‌ ಎಂ

 

ಕೊವಿಡ್-19 ಸೋಂಕಿನ ಸವಾಲುಗಳ ವಿರುದ್ಧ ಇಡೀ ರಾಷ್ಟ್ರವು ಹೋರಾಡುತ್ತಿದೆ. ನಿಟ್ಟಿನಲ್ಲಿ ಮಾಜಿ ಸೈನಿಕರ ಕಲ್ಯಾಣ ಇಲಾಖೆ (ESW), ರಕ್ಷಣಾ ಸಚಿವಾಲಯ (MoD) ಮಾಜಿ ಸೈನಿಕರ (ESM) ಸಮುದಾಯವು ಸೇವೆಗಳನ್ನು ನೀಡಲು ಸಿದ್ಧವಾಗಿದೆ. ಅಗತ್ಯವಿರುವ ಕಡೆ ರಾಜ್ಯ ಮತ್ತು ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ಅಮೂಲ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸಲಿದೆ.

ಸಂಪರ್ಕ ಪತ್ತೆಹಚ್ಚುವಿಕೆ, ಸಮುದಾಯ ಕಣ್ಗಾವಲು, ಕ್ವಾರಂಟೈನ್ಸೌಲಭ್ಯಗಳ ನಿರ್ವಹಣೆ ಅಥವಾ ನಿಯೋಜಿತವಾದ ಯಾವುದೇ ಸಾರ್ವಜನಿಕ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ರಾಜ್ಯ ಮತ್ತು ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ಗರಿಷ್ಠ ಇಎಸ್ಎಂ ಸ್ವಯಂಸೇವಕರನ್ನು ಗುರುತಿಸಲು ಮತ್ತು ಸಿದ್ಧಗೊಳಿಸಲು ರಾಜ್ಯ ಸೈನಿಕ್, ಜಿಲ್ಲಾ ಸೈನಿಕ್ ಮಂಡಳಿಗಳು ಕ್ರಿಯಾತ್ಮಕ ಪಾತ್ರ ವಹಿಸುತ್ತಿವೆ.

ರಾಷ್ಟ್ರದಿಂದ ಸಹಾಯಕ್ಕೆ ಕರೆ ಬಂದಿದ್ದು, ಅನನ್ಯ ಸವಾಲನ್ನು ಎದುರಿಸುವ ಉದ್ದೇಶದೊಂದಿಗೆಸ್ವಯಂ ಸೇವೆಗೆ ಮೊದಲುಎಂಬ ಧ್ಯೇಯವಾಕ್ಯದೊಂದಿಗೆ ಇಎಸ್ಎಂ ದೇಶದಾದ್ಯಂತ ಮುಂದುವರೆಯುತ್ತಿರುವುದು ಹೃದಯಸ್ಪರ್ಶಿಯಾದ ಸಂಗತಿಯಾಗಿದೆ. ಮಾಜಿ ಸೈನಿಕರು ಶಿಸ್ತುಬದ್ಧ, ಪ್ರೇರಿತ ಮತ್ತು ಪ್ರತಿಕೂಲ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಉತ್ತಮ ತರಬೇತಿ ಹೊಂದಿದ್ದು, ಅವರು ದೇಶಾದ್ಯಂತ ಎಲ್ಲ ಜಿಲ್ಲೆಗಳು ಮತ್ತು ಹಳ್ಳಿಗಳಲ್ಲಿ ಉಪಸ್ಥಿತರಿರುತ್ತಾರೆ.

ಪಂಜಾಬ್ ರಾಜ್ಯದಲ್ಲಿ 4,200 ಇಎಸ್ಎಂ ಸ್ವಯಂಸೇವಕರನ್ನು ಒಳಗೊಂಡಿರುವಗಾರ್ಡಿಯನ್ಸ್ ಆಫ್ ಗವರ್ನೆನ್ಸ್ಎಂಬ ಸಂಘಟನೆಯು ಎಲ್ಲ ಹಳ್ಳಿಗಳಿಂದ ಮಾಹಿತಿ ಸಂಗ್ರಹಿಸಲು ಸಹಾಯ ಮಾಡುತ್ತಿದೆ. ಪೊಲೀಸರಿಗೆ ಸಹಾಯ ಮಾಡುವ ಉದ್ದೇಶದಿಂದ ಛತ್ತೀಸ್ಘಡ ಸರ್ಕಾರವು ಕೆಲವು ಇಎಸ್ಎಂಗಳನ್ನು ನೇಮಿಸಿಕೊಂಡಿದೆ. ಅದೇ ರೀತಿ ಆಂಧ್ರಪ್ರದೇಶದಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಇಎಸ್ಎಂ ಸ್ವಯಂಸೇವಕರ ಸಹಾಯ ಕೋರಿದ್ದಾರೆ. ಉತ್ತರಪ್ರದೇಶದಲ್ಲಿ, ಜಿಲ್ಲಾ ಸೈನಿಕ್ ಕಲ್ಯಾಣ್ ಎಲ್ಲ ಅಧಿಕಾರಿಗಳು ಜಿಲ್ಲಾ ನಿಯಂತ್ರಣ ಕೊಠಡಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ನಿವೃತ್ತ ಸೇನಾ ವೈದ್ಯಕೀಯ ದಳದ ಸಿಬ್ಬಂದಿಗಳನ್ನು ಗುರುತಿಸಿ ಸಿದ್ಧವಾಗಿರಿಸಲಾಗಿದೆ. ಇದಲ್ಲದೆ, ಅಗತ್ಯವಿದ್ದಲ್ಲಿ ಪ್ರತ್ಯೇಕ / ಕ್ವಾರಂಟೈನ್ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಉತ್ತರಾಖಂಡದಲ್ಲಿ ಸೈನಿಕ್ ರೆಸ್ಟ್ ಹೌಸ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಗೋವಾದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಸ್ಥಳೀಯ ಆಡಳಿತಕ್ಕೆ ಯಾವುದೇ ಸಹಾಯವನ್ನು ಒದಗಿಸಲು, ಯಾವುದೇ ಸಂದರ್ಭದಲ್ಲಿ ಕರ್ತವ್ಯ ನಿಯೋಜನೆಗೆ ಇಎಸ್ಎಂ ಸ್ವಯಂಸೇವಕರನ್ನು ಉಳಿಯುವಂತೆ ಕೋರಲಾಗಿದೆ.

 

***



(Release ID: 1610228) Visitor Counter : 117