ರಕ್ಷಣಾ ಸಚಿವಾಲಯ

ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಂದ ಕೋವಿಡ್ 19 ವಿರುದ್ಧ ಹೋರಾಡಲು ರಕ್ಷಣಾ ಸಚಿವಾಲಯ ಕೈಗೊಂಡ ಪ್ರಯತ್ನಗಳನ್ನು ಅವಲೋಕನ

Posted On: 01 APR 2020 3:25PM by PIB Bengaluru

ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಂದ ಕೋವಿಡ್ 19 ವಿರುದ್ಧ ಹೋರಾಡಲು ರಕ್ಷಣಾ ಸಚಿವಾಲಯ ಕೈಗೊಂಡ ಪ್ರಯತ್ನಗಳನ್ನು ಅವಲೋಕನ

 

ನಾಗರಿಕ ಸೇವಾ ಅಧಿಕಾರಿಗಳಿಗೆ ಸಹಾಯ ಮಾಡುವ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸುವಂತೆ ಎಲ್ಲ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ.

ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ರಕ್ಷಣಾ ಸಚಿವಾಲಯದ ವಿವಿಧ ಸಂಸ್ಥೆಗಳು ಕೋವಿಡ್ 19 ರ ವಿರುದ್ಧ ಹೋರಾಡಲು ನೀಡುತ್ತಿರುವ ನೆರವಿನ ಅವಲೋಕನಗೈದರು. ರಕ್ಷಣಾ ಸಚಿವಾಲಯದ ಸಹಾಯಕ ಸಚಿವ ಶ್ರೀ ಶ್ರೀಪಾದ್ ನಾಯಕ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆ ಮುಖ್ಯಸ್ಥ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್, ಕಾರ್ಯದರ್ಶಿಗಳು (ರಕ್ಷಣಾ ಉತ್ಪಾದನೆ) ಶ್ರೀ ರಾಜ್ ಕುಮಾರ್, ಕಾರ್ಯದರ್ಶಿಗಳು (ಮಾಜಿ ಸೈನಿಕರ ಕಲ್ಯಾಣ) ಶ್ರೀಮತಿ ಸಂಜೀವನಿ ಕುಟ್ಟಿ, ಕಾರ್ಯದರ್ಶಿಗಳು (ರಕ್ಷಣಾ ಹಣಕಾಸು) ಶ್ರೀಮತಿ ಗಾರ್ಗಿ ಕೌಲ್, ರಕ್ಷಣಾ ಆರ್ & ಡಿ ಇಲಾಖೆಯ ಕಾರ್ಯದರ್ಶಿಗಳು ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಧ್ಯಕ್ಷರು ಡಾ. ಜಿ ಸತೀಶ್ ರೆಡ್ಡಿ, ಸೇನಾ ವೈದ್ಯಕೀಯ ಸೇವೆಗಳ ಮಹಾ ನಿರ್ದೇಶಕರು (AFMS) ಲೆಫ್ಟಿನೆಂಟ್ ಜನರಲ್ ಅನೂಪ್ ಬ್ಯಾನರ್ಜಿ, ರಕ್ಷಣಾ ಖಾಸಗಿ ವಲಯಗಳ ಮುಖ್ಯಸ್ಥರು(DPSUs) ಮತ್ತು ಇತರ ಹಿರಿಯ ನಾಗರಿಕ ಹಾಗೂ ಮಿಲಿಟರಿ ಅಧಿಕಾರಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ  ಸಭೆಯಲ್ಲಿ ಭಾಗವಹಿಸಿದರು.

ಸ್ಥಳಾಂತರಿಸುವುದು, ಪ್ರತ್ಯೇಕ ಸೌಲಭ್ಯಗಳಲ್ಲಿ ವೈದ್ಯಕೀಯ ಸೇವೆ ಒದಗಿಸುವುದು ಮತ್ತು ಸಂಶೋಧನೆ ಹಾಗೂ ಸ್ಯಾನಿಟೈಸರ್ ಗಳು, ಫೇಸ್ ಮಾಸ್ಕ್ ಗಳು ಮತ್ತು ವಯಕ್ತಿಕ ರಕ್ಷಣಾ ಸಾಧನಗಳು (PPE) ನಂತಹ ವೈದ್ಯಕೀಯ ಪರಿಕರಗಳ ಉತ್ಪಾದನೆಗಳಲ್ಲಿ ಸಹಕಾರ ನೀಡಿದಂತಹ ಎಲ್ಲ ಸಂಘ ಸಂಸ್ಥೆಗಳು ಮತ್ತು ರಕ್ಷಣಾ ಖಾಸಗಿ ವಲಯಗಳು ಹಲವಾರು ಸೇವೆಗಳನ್ನು ಒದಗಿಸಲು ಮಾಡಿದಂತಹ ಪ್ರಯತ್ನಗಳನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಲ್ಲ ಸಚಿವಾಲಯಗಳು / ಸಂಸ್ಥೆಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಮತ್ತು ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕು ಎಂದು ಎಲ್ಲ ಸಂಸ್ಥೆಗಳಿಗೆ ಅವರು ನಿರ್ದೇಶಿಸಿದರು. ಕೋವಿಡ್ – 19 ರ ಪ್ರಕರಣಗಳನ್ನು ನಿಭಾಯಿಸಲೆಂದೇ ಪ್ರತ್ಯೇಕ ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಮತ್ತು 9000 ಕ್ಕೂ ಹೆಚ್ಚು ಆಸ್ಪತ್ರೆ ಬೆಡ್ ಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ  ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್  ರಾಜ್ ನಾಥ್ ಸಿಂಗ್ ಅವರಿಗೆ ತಿಳಿಸಿದರು. ಜೈಸಲ್ಮೇರ್, ಜೋಧಪುರ್, ಚೆನ್ನೈ, ಮನೇಸರ್, ಹಿಂದನ್ ಮತ್ತು ಮುಂಬೈ ನಗರಗಳಲ್ಲಿ 1000 ಕ್ಕೂ ಹೆಚ್ಚು ಸ್ಥಳಾಂತರಿತ ಜನರನ್ನು ಕ್ವಾರೆಂಟೈನ್ ಸೌಲಭ್ಯಗಳಲ್ಲಿ ಇರಿಸಲಾಗಿದೆ. ಅವರ ಕ್ವಾರೆಂಟೈನ್ ಅವಧಿ ಏಪ್ರಿಲ್ 7 2020 ಕ್ಕೆ ಮುಕ್ತಾಯಗೊಳ್ಳಲಿದೆ. 

ಯಾವುದೇ ಅವಶ್ಯಕ ನೆರವಿಗಾಗಿ ನೌಕಾಪಡೆ ಹಡಗುಗಳು ಸಿದ್ಧವಾಗಿವೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ರಕ್ಷಣಾ ಸಚಿವರಿಗೆ ತಿಳಿಸಿದ್ದಾರೆ. ಸ್ಥಳೀಯ ನಾಗರಿಕ ಆಡಳಿತದ ಅವಶ್ಯಕತೆಗೆ ತಕ್ಕಂತೆಯೂ ನೌಕಾಪಡೆ ತಮ್ಮ ನೆರವನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಕಳೆದ 5 ದಿನಗಳಲ್ಲಿ ಹಲವಾರು ಬಾರಿ ವಾಯು ಯಾನದ ಮೂಲಕ ವಾಯುಪಡೆಯ ವಿಮಾನಗಳು 25 ಟನ್ ಗಳಿಗೂ ಹೆಚ್ಚು ಔಷಧಿಗಳ ಸರಬರಾಜು ಮಾಡಿವೆ ಎಂದು ವಾಯುಪಡೆ ಮುಖ್ಯಸ್ಥ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ತಿಳಿಸಿದ್ದಾರೆ. ಎಲ್ಲ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಖಾತರಿಪಡಿಸುವುದರ ಜೊತೆಗೆ ತೀವ್ರ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದರು.

ನಾಗರಿಕ ಡಳಿತಕ್ಕೆ ಅಗತ್ಯ ನೆರವು ನೀಡಲು 8500 ಕ್ಕೂ ಹೆಚ್ಚು ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಲಭ್ಯವಿದ್ದಾರೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ರಕ್ಷಣಾ ಸಚಿವರಿಗೆ ತಿಳಿಸಿದ್ದಾರೆ. ನೆರೆಯ ರಾಷ್ಟ್ರಗಳಿಗೆ ಸಹಾಯ ಒದಗಿಸಬೇಕು ಎಂಬ ಶ್ರೀ ರಾಜ್ ನಾಥ್ ಸಿಂಗ್ ಅವರ ನಿರ್ದೇಶನವನ್ನು ಉಲ್ಲೇಖಿಸಿ, ವೈದ್ಯಕೀಯ ಉಪಕರಣಗಳ ರೂಪದಲ್ಲಿ ನೇಪಾಳಕ್ಕೆ ಶೀಘ್ರದಲ್ಲೇ ಸಹಾಯ ದಗಿಸಲಾಗುವುದು ಎಂದು ಅವರು ಹೇಳಿದರು.

ಡಿ ಆರ್ ಡಿ ಒ  ಪ್ರಯೋಗಾಲಯಗಳು ತಯಾರಿಸಿದ 50,000 ಲೀಟರ್ ಸ್ಯಾನಿಟೈಸರ್ ಗಳನ್ನು ದೆಹಲಿ ಪೋಲಿಸ್ ಗೆ ಸೇರಿದಂತೆ ಹಲವಾರು ಭದ್ರತಾ ಘಟಕಗಳಿಗೆ ಸರಬರಾಜು ಮಾಡಲಾಗಿದೆ ಮತ್ತು ದೇಶದ ಇತರ ಭಾಗಗಳಿಗೆ 1 ಲಕ್ಷ ಲೀಟರ್ ಸರಬರಾಜು ಮಾಡಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಧ್ಯಕ್ಷರು ಮತ್ತು ರಕ್ಷಣಾ ಆರ್ & ಡಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಜಿ ಸತೀಶ್ ರೆಡ್ಡಿಯವರು ರಾಜ್ ನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದರು. ಯುದ್ಧೋಪಾದಿಯಲ್ಲಿ ನ್ಯಾನೋ ತಂತ್ರಜ್ಞಾನದ 5 ಪದರಗಳುಳ್ಳ ಎನ್ 99 ಮಾಸ್ಕ್ ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ 10,000 ಲಯಾರಿಸಲಾಗಿದ್ದು ಶೀಘ್ರದಲ್ಲೇ ದಿನದ ತ್ಪಾದನೆಯನ್ನು 20,000 ಕ್ಕೆ ಹೆಚ್ಚಿಸಲಿದ್ದೇವೆ. ಡಿ ಆರ್ ಡಿ ಓ ಪ್ರಯೋಗಾಲಯ ಇತರ 40,000 ಮಾಸ್ಕ್ ಗಳನ್ನು ದೆಹಲಿ ಪೋಲಿಸರಿಗೆ ಸರಬರಾಜು ಮಾಡಿದೆ. ಡಿ ಆರ್ ಡಿ ಓ ಕಾರ್ಯದರ್ಶಿಗಳು, ಇತರೆ ಸಬಲ ಕಾರ್ಯದರ್ಶಿಗಳ ಸಮೂಹದ ಸದಸ್ಯರಾಗಿರುವುದರಿಂದ ವೈದ್ಯಕೀಯ ಪಕರಣಗಳ ಅವಶ್ಯಕತೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಡಿ ಆರ್ ಡಿ ಓ ದ ಮತ್ತೊಂದು  ಪ್ರಯೋಗಾಲಯ ಪ್ರತಿದಿನ 20,000 PPE ಗಳ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಒಂದು ಮಶೀನ್ ಒಂದೇ ಬಾರಿಗೆ ನಾಲ್ಕು ರೋಗಿಗಳಿಗೆ ನೆರವು ಒದಗಿಸಲು ಸಾಧ್ಯವಾಗುವಂತೆ ವೆಂಟಿಲೇಟರ್ ಗಳ ಅಲ್ಪ ಸ್ವಲ್ಪ ಬದಲಾವಣೆಗೂ ಡಿ ಆರ್ ಡಿ ಓ ಮುಂದಾಗಿದೆ.           

ಅವಶ್ಯಕ ಉಪಕರಣಗಳನ್ನು ಸಂಗ್ರಹಿಸಿ ವಿವಿಧ ಸ್ಪತ್ರೆಗಳೊಇಗೆ ರವಾನೆ ಮಾಡಲಾಗಿದೆ ಎಂದು  ಸೇನಾ ವೈದ್ಯಕೀಯ ಸೇವೆಗಳ ಮಹಾ ನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಅನೂಪ್ ಬ್ಯಾನರ್ಜಿ ರಕ್ಷಣಾ ಸಚಿವರಿಗೆ ತಿಳಿಸಿದ್ದಾರೆ. ನಿವೃತ್ತ ರೋಗ್ಯ ಸಿಬ್ಬಂದಿಯೂ ಸಹ ಸ್ವಯಂ ಸೇವಕರಾಗಿ ಸೇವೆ ಒದಗಿಸಲು ಸಿದ್ಧರಾಗಿದ್ದಾರೆ. ಸ್ಥಳೀಯವಾಗಿ ನೆರವು ನೀಡಲು ಸುಮಾರು 25,000 ರಾಷ್ಟ್ರೀಯ ಕೆಡೆಟ್ ಕಾರ್ಪ್ (NCC) ಗಳನ್ನು ಸಜ್ಜುಗೊಳಿಸಲಾಗುತ್ತಿದೆ.   

DPSU ಗಳಾದ ಹಿಂದೂಸ್ತಾನ್ ಏರಾನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್) ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಮಿಶ್ರಧಾತು ನಿಗಮ ನಿಯಮಿತ (MIDHANI) ಭಾರತ ಡೈನಾಮಿಕ್ಸ್ ಲಿಮಿಟೆಡ್ (BDL) ಭಾರತ ಅರ್ಥ ಮೂವರ್ಸ್ ಲಿಮಿಟೆಡ್ (BEML), ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ (HSL) ಮತ್ತು ಗೋವಾ ಶಿಪ್ ಯಾರ್ಡ್ ಲಿಮಿಟೆಡ್ (GSL) ಗಳು ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿ (CSR)ಯಿಂದ ಪ್ರಧಾನ ಮಂತ್ರಿ ತುರ್ತು ಪರಿಸ್ಥಿತಿಯಲ್ಲಿ ನಾಗರಿಕ ಸಹಾಯ ಮತ್ತು ಪರಿಹಾರ ನಿಧಿ (PM-CARES) ಗೆ 40 ಕೋಟಿ ರೂಪಾಯಿ ನೆರವು ಒದಗಿಸಿದೆ. ರಕ್ಷಣಾ ಸಚಿವರ ನಿರ್ದೇಶನದ ಮೇರೆಗೆ DPSU ಗಳು ಎಲ್ಲ ಹಂಗಾಮಿ ಸಿಬ್ಬಂದಿ ಮತ್ತು ಗುತ್ತಿಗೆ ಕೆಲಸಗಾರರಿಗೆ ಸಂಬಳವನ್ನು ನೀಡಲಾಗಿದೆ ಎಂದು ಅವರಿಗೆ ತಿಳಿಸಿದ್ದಾರೆ.

ಆರ್ಡಿನನ್ಸ್ ಫಾಕ್ಟರಿ ಬೋರ್ಡ್ (OFB) ಕೂಡಾ ಸ್ಯಾನಿಟೈಸರ್ ಗಳು, ಮಾಸ್ಕ್ ಗಳು ಮತ್ತು ಪಿಪಿಇ ತಯಾರಿಕೆಯಲ್ಲಿ ತೊಡಗಿದೆ.     



(Release ID: 1610040) Visitor Counter : 252