ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡ್-19 ಪ್ರತಿಸ್ಪಂದನಾ ಚಟುವಟಿಕೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಸಾರ್ವಜನಿಕ ಕುಂದು ಕೊರತೆಗಳು ಮತ್ತು ಸಲಹೆಗಳ ಕುರಿತು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ರಚಿಸಲಾದ ಹತ್ತು ಅಧಿಕಾರಿಗಳ ಉನ್ನತಾಧಿಕಾರ ಸಮಿತಿ ನಿರ್ಣಯಗಳು

Posted On: 31 MAR 2020 3:57PM by PIB Bengaluru

ಕೋವಿಡ್-19 ಪ್ರತಿಸ್ಪಂದನಾ ಚಟುವಟಿಕೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಸಾರ್ವಜನಿಕ ಕುಂದು ಕೊರತೆಗಳು ಮತ್ತು ಸಲಹೆಗಳ ಕುರಿತು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ರಚಿಸಲಾದ ಹತ್ತು ಅಧಿಕಾರಿಗಳ ಉನ್ನತಾಧಿಕಾರ ಸಮಿತಿ ನಿರ್ಣಯಗಳು


 
          ಕೋವಿಡ್-19 ವಿರುದ್ಧದ ಪ್ರತಿಸ್ಪಂದನಾ ಚಟುವಟಿಕೆಗಳನ್ನು ಸಕಾಲದಲ್ಲಿ ಜಾರಿಗೊಳಿಸುವ ಸಲುವಾಗಿ ಸಾರ್ವಜನಿಕ ಕುಂದು ಕೊರತೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿಯಲ್ಲಿ ರಚಿಸಲಾಗಿರುವ ಹತ್ತು ಅಧಿಕಾರಿಗಳ ಉನ್ನತಾಧಿಕಾರ ಸಮಿತಿ 2020ರ ಮಾರ್ಚ್ 31ರಂದು ಸಭೆ ಸೇರಿತ್ತು ಮತ್ತು ಈ ಕೆಳಗಿನ ವಲಯಗಳ ಸಮಸ್ಯೆಗಳನ್ನು ಗುರುತಿಸಲು ನಿರ್ಣಯಗಳನ್ನು ಕೈಗೊಂಡಿತು. ನೀತಿಗಳನ್ನು ಸಿದ್ಧಪಡಿಸುವುದ, ಯೋಜನೆ ರೂಪಿಸುವುದು ಮತ್ತು ನಿರ್ಣಯಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಸಭೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಡಿಎಆರ್ ಪಿ ಜಿ ಕಾರ್ಯದರ್ಶಿ ಡಾ. ಕ್ಷತ್ರಪತಿ ಶಿವಾಜಿ, ಎಂಎಚ್ಎ ಕಾರ್ಯದರ್ಶಿ ಅಶುತೋಶ್ ಅಗ್ನಿಹೋತ್ರಿ, ಸಂಪುಟ ಸಚಿವಾಲಯದ ನಿರ್ದೇಶಕರಾದ ಶ್ರೀಮತಿ ಮೀರಾ ಮೊಹಂತಿ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಾರ್ವಜನಿಕ ಕುಂದು ಕೊರತೆಗಳು:
            ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದು ಕೊರತೆಗಳ ಇಲಾಖೆಯ ಧ್ಯೇಯೋದ್ದೇಶದಂತೆ ಕೋವಿಡ್-19 ಕುರಿತ ದೈನಂದಿನ ವರದಿಗಳನ್ನು ಸಿದ್ಧಪಡಿಸಲು ಐದು ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ತಂಡವನ್ನು ರಚಿಸುವುದು, ಅದರಲ್ಲಿ ಸಿಪಿಜಿಆರ್ ಎಎಂಎಸ್ ಪೋರ್ಟಲ್ ನಲ್ಲಿ ಸ್ವೀಕರಿಸುವ ಸಾರ್ವಜನಿಕ ಕುಂದು ಕೊರತೆಗಳು ಮತ್ತು ಸಲಹೆಗಳನ್ನು ಪಟ್ಟಿ ಮಾಡುವುದು, ಸಂಕ್ಷಿಪ್ತ ವಿವರಣೆ ಸಿದ್ಧಪಡಿಸುವುದು ಮತ್ತು ಇತ್ಯರ್ಥಪಡಿಸುವ ಕೆಲಸವನ್ನು ಸಮಿತಿ ಮಾಡಬೇಕಾಗುತ್ತದೆ.
        ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದು ಕೊರತೆಗಳ ಇಲಾಖೆ ಎಲ್ಲ ಕೇಂದ್ರ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳಿಗೆ ಕೋವಿಡ್-19 ನಿಗಾವ್ಯವಸ್ಥೆ ಸುಧಾರಣೆ ಬಗ್ಗೆ ಸಾರ್ವಜನಿಕ ದೂರು ಪ್ರಕರಣಗಳ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಹೊರಡಿಸಲಿದೆ. ಪ್ರತಿಯೊಂದು ಇಲಾಖೆ/ಸಚಿವಾಲಯ ಕೋವಿಡ್-19 ಕುರಿತ ಸಾರ್ವಜನಿಕ ಕುಂದು ಕೊರತೆಗಳ ನಿರ್ವಹಣೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸುವುದು.  ಆ ಅಧಿಕಾರಿಯ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಇಲಾಖೆ/ಸಚಿವಾಲಯದ ವೆಬ್ ಸೈಟ್ ನಲ್ಲಿ ಪ್ರಕಟಿಸುವುದು. ಪ್ರತಿಯೊಂದು ಇಲಾಖೆ/ಸಚಿವಾಲಯ ವೆಬ್ ಸೈಟ್ ನಲ್ಲಿ ಕೋವಿಡ್-19 ದೂರುಗಳ ಕುರಿತು ವ್ಯವಹರಿಸಲು, ನಿಗಾವಹಿಸಲು, ನಿರ್ವಹಿಸಲು ಮತ್ತು ಅವುಗಳನ್ನು ವಿಲೇವಾರಿ ಮಾಡಲು ಪ್ರತ್ಯೇಕ ಸಿಪಿಜಿಆರ್ ಎಎಂಎಸ್ ವ್ಯವಸ್ಥೆ ಮಾಡುವುದು. ಪ್ರತಿಯೊಂದು ಇಲಾಖೆ ಮತ್ತು ಸಚಿವಾಲಯ ತಮ್ಮ ತಮ್ಮ ಡ್ಯಾಷ್ ಬೋರ್ಡ್ ಗಳಲ್ಲಿ ಕೋವಿಡ್-19 ಕುರಿತ ಸಾರ್ವಜನಿಕ ಕುಂದು ಕೊರತೆಗಳನ್ನು ಪರಿಹರಿಸಲು ನಿರಂತರ ನಿಗಾ ವಹಿಸುವುದು. ಯಾವ ಇಲಾಖೆಗಳು/ಸಚಿವಾಲಯಗಳು ಈಗಾಗಲೇ ಸಿಪಿಜಿಆರ್ ಎಎಂಎಸ್ ವರ್ಷನ್ 7.0 ಅನುಷ್ಠಾನಗೊಳಿಸಿವಯೋ ಅವು ದೂರುಗಳನ್ನು ಪರಿಶೀಲಿಸಿ ದೂರು ಇತ್ಯರ್ಥ ಅಧಿಕಾರಿಗಳಿಗೆ ವಹಿಸಿ ಕೊಡಬೇಕು. ಕೋವಿಡ್-19 ಕುರಿತ ದೂರುಗಳ ಇತ್ಯರ್ಥದ ತುರ್ತು ಅಗತ್ಯತೆಯನ್ನು ಪರಿಗಣಿಸಿ, ಪ್ರತಿಯೊಂದು ಸಚಿವಾಲಯ/ಇಲಾಖೆ ಆದಷ್ಟು ಶೀಘ್ರ ಅಂದರೆ ಕನಿಷ್ಠ ಮೂರು ದಿನಗಳ ಅವಧಿಯೊಳಗೆ ದೂರುಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು.
        ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ, ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವುದು.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ, ಆದಷ್ಟು ತ್ವರಿತವಾಗಿ ಕೋವಿಡ್-19 ರಾಷ್ಟ್ರೀಯ ಸಿದ್ಧತಾ ಸಮೀಕ್ಷೆ 2020ಅನ್ನು ಅಭಿವೃದ್ಧಿಪಡಿಸುವುದು. ಭಾರತ ಸರ್ಕಾರದಲ್ಲಿ ಕಳೆದ ಐದು ವರ್ಷಗಳಿಂದ ಸಹಾಯಕ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ 266 ಐಎಎಸ್ ಅಧಿಕಾರಿಗಳು 23 ಅಂಶಗಳ ಪ್ರಶ್ನೋತ್ತರಕ್ಕೆ ಪ್ರತಿಕ್ರಿಯಿಸಿದ್ದು, ಅದರಲ್ಲಿ ಹಾಟ್ ಸ್ಪಾಟ್ ಜಿಲ್ಲೆಗಳನ್ನು ಗುರುತಿಸಲಾಗಿದೆ ಮತ್ತು ಪೂರ್ವಭಾವಿ ಸಿದ್ಧತೆಗಳನ್ನು ಸುಧಾರಿಸಲು ಸಲಹೆಗಳನ್ನು ನೀಡಲಾಗಿದೆ.
 
ಕೋವಿಡ್-19 ಕುರಿತ ಸಲಹೆಗಳು:
 
ಸರ್ಕಾರ ಸ್ವೀಕರಿಸಿರುವ ಸಲಹೆಗಳನ್ನು MyGov.in ನಲ್ಲಿ ಕ್ರೂಢೀಕರಿಸುವುದು. ಮೈಗೌನಲ್ಲಿ ಸುಮಾರು 46000 ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲಾಗುವುದು.
 
 
****


(Release ID: 1609813) Visitor Counter : 182