ಕೃಷಿ ಸಚಿವಾಲಯ

ಕೋವಿಡ್ -19 ಲಾಕ್ಡೌನ್ ಕಾರಣಕ್ಕಾಗಿ ರೈತರಿಗೆ ಬೆಳೆ ಸಾಲ ಮರುಪಾವತಿಗೆ ಸವಲತ್ತುಗಳನ್ನು ನೀಡಿದ ಸರಕಾರ

Posted On: 30 MAR 2020 4:51PM by PIB Bengaluru

ಕೋವಿಡ್ -19 ಲಾಕ್ಡೌನ್ ಕಾರಣಕ್ಕಾಗಿ ರೈತರಿಗೆ ಬೆಳೆ ಸಾಲ ಮರುಪಾವತಿಗೆ ಸವಲತ್ತುಗಳನ್ನು ನೀಡಿದ ಸರಕಾರ
 


ಮಾರ್ಚ್ 1 ರಿಂದ ಮೇ ತಿಂಗಳ 31 ರ ನಡುವಿನ ಅವಧಿಯಲ್ಲಿ ವಾಯಿದೆಯಾಗುವ ಬ್ಯಾಂಕುಗಳು ನೀಡಿರುವ 3 ಲಕ್ಷ ರೂಪಾಯಿಗಳವರೆಗಿನ ಎಲ್ಲಾ ಬೆಳೆ ಸಾಲಗಳಿಗೆ 2020 ರ ಮೇ 31 ರವರೆಗೆ ಬ್ಯಾಂಕುಗಳಿಗೆ 2 % ಬಡ್ಡಿ  ಸಹಾಯಧನ (ಐ.ಎಸ್.)  ಮತ್ತು ಎಲ್ಲಾ ರೈತರಿಗೆ 3 % ಸಕಾಲದಲ್ಲಿ ಮರುಪಾವತಿ ಸಹಾಯಧನ (ಪಿ.ಆರ್.ಐ.)  ಸವಲತ್ತುಗಳ ವಿಸ್ತರಣೆ.
ಈಗಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ವಿರುದ್ದದ ಲಾಕ್ಡೌನ್ ಹಿನ್ನೆಲೆಯಲ್ಲಿ ಸರಕಾರವು ಬ್ಯಾಂಕುಗಳಿಗೆ 2% ಬಡ್ಡಿ ಮರುಪಾವತಿ ಸಹಾಯಧನ (ಐ.ಎಸ್.) ಮತ್ತು ಎಲ್ಲಾ ರೈತರಿಗೆ 2020 ರ ಮೇ 31 ರವರೆಗೆ ಸಕಾಲದಲ್ಲಿ ಮರುಪಾವತಿ ಪ್ರೋತ್ಸಾಹಧನ (ಪಿ.ಆರ್.ಐ.) ವನ್ನು ನೀಡಲು ಕ್ರಮವಹಿಸಿದೆ. 2020ರ ಮಾರ್ಚ್ 1 ಮತ್ತು 2020ರ ಮೇ 31 ರ ನಡುವೆ ವಾಯಿದೆಯಾಗುವ , ಬ್ಯಾಂಕುಗಳಿಂದ ಪಡೆದಿರುವ 3 ಲಕ್ಷ ರೂಪಾಯಿವರೆಗಿನ ಬೆಳೆ ಸಾಲಕ್ಕೆ ಈ ಸೌಲಭ್ಯ ಒದಗಲಿದೆ. 
ಜನತೆಯ ಚಲನವಲನದ ಮೇಲೆ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ , ಹಲವು ರೈತರಿಗೆ ಬ್ಯಾಂಕ್ ಶಾಖೆಗಳಿಗೆ ತೆರಳಿ ಅವರ ಅಲ್ಪಾವಧಿ ಬೆಳೆ ಸಾಲ ಮರುಪಾವತಿ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇದಲ್ಲದೆ ಜನತೆಯ ಚಲನ ವಲನಗಳ ಮೇಲೆ ನಿರ್ಬಂಧ ಇರುವುದರಿಂದ ಸಕಾಲದಲ್ಲಿ ಅವರ ಉತ್ಪಾದನೆಗಳ ಮಾರಾಟ ಮತ್ತು ಅದರ ಬೆಲೆ ಪಾವತಿ  ಲಭಿಸಿರುವುದಿಲ್ಲ. ಇದರಿಂದಾಗಿ ರೈತರು ಈ ಅವಧಿಯಲ್ಲಿ ಬರುವ ಅವರ ಅಲ್ಪಾವಧಿ ಬೆಳೆ ಸಾಲ ಮರುಪಾವತಿ ಮಾಡುವಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರಬಹುದು.
ರೈತರು ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಬಡ್ಡಿ ಮರುಪಾವತಿ ಸಹಾಯಧನ (ಐ.ಎಸ್.) ಮತ್ತು ಸಕಾಲದಲ್ಲಿ ಮರುಪಾವತಿ ಸಹಾಯಧನ(ಪಿ.ಆರ್.ಐ.) ಪ್ರಯೋಜನಗಳನ್ನು 2020 ರ ಮೇ 31 ರವರೆಗೆ ವಿಸ್ತರಿಸಲಾಗಿದೆ. ರೂಪಾಯಿ 3 ಲಕ್ಷದವರೆಗಿನ 2020ರ ಮೇ 31 ರವರೆಗೆ ಪಾವತಿಗೆ ವಾಯಿದೆಯಾಗುವ ಅಲ್ಪಾವಧಿ  ಬೆಳೆ ಸಾಲಗಳಿಗೆ ಈ ಸೌಲಭ್ಯ ದೊರೆಯಲಿದೆ, ಇದು ರೈತರಿಗೆ ಇಂತಹ ಅಲ್ಪಾವಧಿ ಸಾಲವನ್ನು ಯಾವುದೇ ದಂಡವಿಲ್ಲದೆ 4% ಬಡ್ಡಿದರದಲ್ಲಿ 2020 ರ ಮೇ 31 ರವರೆಗೆ ವಿಸ್ತರಿತ ಅವಧಿಯಲ್ಲಿ ಪಾವತಿ ಮಾಡಲು ಅವಕಾಶ ಒದಗುತ್ತದೆ.
ಸರಕಾರವು ರೈತರಿಗೆ ಬ್ಯಾಂಕುಗಳ ಮೂಲಕ ರಿಯಾಯತಿ ದರದಲ್ಲಿ ಬೆಳೆ ಸಾಲವನ್ನು ಒದಗಿಸುತ್ತಿದೆ. ಬ್ಯಾಂಕುಗಳಿಗೆ ವಾರ್ಷಿಕ 2% ಬಡ್ಡಿ ಸಹಾಯಧನ ಮತ್ತು ರೈತರಿಗೆ ಸಕಾಲದಲ್ಲಿ ಮರುಪಾವತಿ ಮಾಡಿದರೆ 3 % ಹೆಚ್ಚುವರಿ ಪ್ರಯೋಜನವನ್ನು ಒದಗಿಸುತ್ತಿದೆ. ಈ ಮೂಲಕ ಅದು ರೈತರಿಗೆ 3 ಲಕ್ಷ ರೂಪಾಯಿವರೆಗೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ 4% ವಾರ್ಷಿಕ ಬಡ್ಡಿ ದರದಲ್ಲಿ ಒದಗಿಸುತ್ತಿದೆ.(Release ID: 1609571) Visitor Counter : 151