ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ  ಕೇಂದ್ರ ಸಚಿವರಾದ ಶ್ರೀ ಗೌಡ ಅವರಿಂದ ಒಂದು ತಿಂಗಳ ವೇತನ ಮತ್ತು ಎಂ.ಪಿ.ಲ್ಯಾಡ್ ನಿಂದ 1 ಕೋಟಿ ರೂ ದೇಣಿಗೆ

ಪ್ರಕಟಣಾ ದಿನಾಂಕ: 30 MAR 2020 2:56PM by PIB Bengaluru

ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ  ಕೇಂದ್ರ ಸಚಿವರಾದ ಶ್ರೀ ಗೌಡ ಅವರಿಂದ ಒಂದು ತಿಂಗಳ ವೇತನ ಮತ್ತು ಎಂ.ಪಿ.ಲ್ಯಾಡ್ ನಿಂದ 1 ಕೋಟಿ ರೂ ದೇಣಿಗೆ


 
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವರಾದ ಶ್ರೀ ಸದಾನಂದ ಗೌಡ ಅವರು ತಮ್ಮ ಒಂದು ತಿಂಗಳ ವೇತನ ಮತ್ತು ಎಂಪಿಲ್ಯಾಡ್ ನ ನಿಧಿಯಿಂದ 1 ಕೋಟಿ ರೂ.ಗಳನ್ನು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಟದ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳುವ ಪರಿಹಾರ ಕಾರ್ಯಗಳಿಗಾಗಿ ಪ್ರಧಾನ ಮಂತ್ರಿ ಅವರ ಪರಿಹಾರ ನಿಧಿಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡುವುದು ಈ ಸಂದರ್ಭದ ತುರ್ತು ಆವಶ್ಯಕತೆಯಾಗಿರುವುದರಿಂದ , ನಾನು ನನ್ನ ಒಂದು ತಿಂಗಳ ವೇತನ ಮತ್ತು ನನ್ನ ಎಂಪಿಲ್ಯಾಡ್ ನಿಧಿಯಿಂದ 1 ಕೋಟಿ ರೂ.ಗಳನ್ನು ರೋಗ ತಡೆ ಮತ್ತು ಚಿಕಿತ್ಸೆಗಾಗಿ ಪ್ರಧಾನ ಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡುತ್ತಿರುವುದಾಗಿ ಶ್ರೀ ಗೌಡ ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರಕಾರ ಕಾಲ ಕಾಲಕ್ಕೆ ತ್ವರಿತವಾದ ಅವಶ್ಯವಾದ ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದೆ  ಎಂದೂ ಶ್ರೀ ಗೌಡ ಹೇಳಿದ್ದಾರೆ. ಪರಿಹಾರ ಕ್ರಮಗಳು ಸಾಮಾನ್ಯ ಜನತೆಗೆ ಅದರಲ್ಲೂ ಬಡವರು ಮತ್ತು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷೆಗೆ ಸಾಧ್ಯ ಇರುವ ಅತ್ಯುತ್ತಮ ಕ್ರಮಗಳನ್ನು ಖಾತ್ರಿಪಡಿಸುತ್ತವೆ  ಎಂಬುದನ್ನವರು ಒತ್ತಿ ಹೇಳಿದ್ದಾರೆ.


(ಪ್ರಕಟಣೆ ಐ.ಡಿ.: 1609553) ವಿಸಿಟರ್ ಕೌಂಟರ್ : 82
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Bengali , Punjabi , Gujarati , Tamil , Telugu