ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು ಮತ್ತು ಹೈಕಮಿಷನರ್ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಸಂವಾದ

Posted On: 30 MAR 2020 7:28PM by PIB Bengaluru

ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು ಮತ್ತು ಹೈಕಮಿಷನರ್ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಸಂವಾದ


 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಸಂಜೆ 5 ಗಂಟೆಗೆ ವಿಶ್ವವ್ಯಾಪಿ ಇರುವ ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು ಹಾಗೂ ಹೈಕಮಿಷನರ್ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಇದೇ ಮೊದಲ ಬಾರಿ ವಿಶ್ವವ್ಯಾಪಿ ಇರುವ ಭಾರತೀಯ ದೂತವಾಸ ಕಚೇರಿಗಳ ನಡುವೆ ಜಾಗತಿಕ ಪಿಡುಗಾಗಿರುವ ಕೋವಿಡ್-19 ಬಗ್ಗೆ ಚರ್ಚಿಸಲು ಹಾಗೂ ಪ್ರತಿಕ್ರಿಯೆ ಪಡೆಯಲು ಈ ವಿಡಿಯೋ ಕಾನ್ಫರೆನ್ಸ್ ಆಯೋಜಿಸಲಾಗಿತ್ತು.
ಪ್ರಧಾನಮಂತ್ರಿಗಳು, ಇದೊಂದು ಅಸಮಾನ್ಯ ಕಾಲವಾಗಿದ್ದು, ಇಂದಿನ ಜಾಗತಿಕ ಯುಗದಲ್ಲಿ ಅಸಾಮಾನ್ಯ ಪರಿಹಾರಗಳ ಅಗತ್ಯವಿದೆ. ಬಹುತೇಕ ಜಗತ್ತು ತನ್ನಷ್ಟಕ್ಕೆ ತಾನೇ ಕ್ವಾರಂಟೈನ್ ನಲ್ಲಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದೊಂದು ತಪ್ಪಿಸಿಕೊಳ್ಳಲಾಗದ ಕ್ರಮವಾಗಿದೆ. ಆದರೆ ಇಡೀ ವಿಶ್ವದ ವ್ಯವಸ್ಥೆ ಮುಚ್ಚಿರುವ ಸಂದರ್ಭದಲ್ಲಿ, ಅದರಿಂದ ಅಂತಾರಾಷ್ಟ್ರೀಯ ಸಾರಿಗೆ ವ್ಯವಸ್ಥೆ, ಹಣಕಾಸು ಮಾರುಕಟ್ಟೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ದೂರಗಾಮಿ ಮತ್ತು ವ್ಯಾಪಕ ಪರಿಣಾಮಗಳು ಉಂಟಾಗುತ್ತಿವೆ ಎಂದು ಹೇಳಿದರು.
ಪ್ರಧಾನಮಂತ್ರಿ ಅವರು ಈ ವರ್ಷದ ಜನವರಿ ಮಧ್ಯಂತರ ಭಾಗದಿಂದಲೇ ಸಾಂಕ್ರಾಮಿಕ ರೋಗ ತಡೆಗೆ ಭಾರತ ಅನಿರೀಕ್ಷಿತ ಹಾಗೂ ತ್ವರಿತ ಕ್ರಮಗಳನ್ನು ಕೈಗೊಂಡಿದೆ ಮತ್ತು ಸೋಂಕಿನ ಆಮದು ತಡೆ ಅಪಾಯವನ್ನು ಸಾಕಷ್ಟು ತಗ್ಗಿಸಿದೆ ಹಾಗೂ ಆನಂತರ ಸೋಂಕು ಹರಡುವುದನ್ನು ಬಹುಮಟ್ಟಿಗೆ ನಿಯಂತ್ರಿಸಿದೆ ಎಂದರು. ವಿಶ್ವದ ಅತಿ ದೊಡ್ಡ ಕ್ವಾರಂಟೈನ್ ಮತ್ತು ಲಾಕ್ ಡೌನ್ ಅನ್ನು ಜಾರಿಗೊಳಿಸುವ ಕ್ರಮವನ್ನೂ ಭಾರತ ಕೈಗೊಂಡಿದೆ ಎಂದರು.
ಪ್ರಧಾನಮಂತ್ರಿಗಳು, ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸೋಂಕಿಗೆ ಬಾಧಿತರಾಗಿ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಪ್ರಯತ್ನಗಳಲ್ಲಿ ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಐದು ವಿಶೇಷ ಅಂಶಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪ್ರೇರೇಪಿಸಿದರು.
 
        i.            ತಮ್ಮದೇ ಆರೋಗ್ಯ ಮತ್ತು ಸುರಕ್ಷತೆ ಖಾತ್ರಿಪಡಿಸುವುದು ಮತ್ತು ತಂಡ ಹಾಗು ಕುಟುಂಬಗಳ ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳುವುದು.
      ii.            ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳು ಮುಂದುವರಿದಿರುವುದರಿಂದ ಉಂಟಾಗಿರುವ ಅನಿಶ್ಚಿತತೆಯ ನಡುವೆಯೇ ನಾನಾ ವಿದೇಶಗಳಲ್ಲಿ ಉಳಿದಿದ್ದ ಭಾರತೀಯರಿಗೆ ಸ್ಪಂದಿಸಿರುವುದು. ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು, ವಿದೇಶಗಳಲ್ಲಿರುವ ತಮ್ಮವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿ, ವಿದೇಶದಲ್ಲಿ ಯೋಜನೆ ಇಲ್ಲದೆ ವಾಸ್ತವ್ಯ ಹೂಡಲು ಸಾಧ್ಯವಾಗದಿದ್ದಂತಹ ಸಂದರ್ಭದಲ್ಲಿ ಅಂತಹ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುವುದು ಮತ್ತು ಸರ್ಕಾರ ಆತಿಥ್ಯವಹಿಸಿ, ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ವಾಸ್ತವ್ಯ ಕೊಡಿಸುವುದು.
    iii.            ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಮೂಲವಾಗಿ ಮತ್ತು ವೈಜ್ಞಾನಿಕ ಬೆಳವಣಿಗೆಗಳು, ಆವಿಷ್ಕಾರಗಳು, ಮಾನ್ಯತೆ ಪಡೆದಿರುವ ಉತ್ತಮ ಪದ್ಧತಿಗಳನ್ನು ಆಯಾ ದೇಶಗಳಿಂದ ಗುರುತಿಸಿ ಎಚ್ಚರಿಕೆಯಿಂದ ದೇಶಕ್ಕೆ ಮಾಹಿತಿ ನೀಡಿರುವುದು. ಅಲ್ಲದೆ ಪ್ರಧಾನಿ ಅವರು ವಿದೇಶಗಳಲ್ಲಿ ದೇಣಿಗೆಯನ್ನು ಸಂಗ್ರಹಿಸಲು ಹೊಸದಾಗಿ ಸ್ಥಾಪಿಸಿರುವ ಪಿಎಂ-ಕೇರ್ಸ್ ನಿಧಿಯ ಬಗ್ಗೆ ಸೂಕ್ತ ರೀತಿಯಲ್ಲಿ ಪ್ರಚಾರ ಮಾಡಲು ರಾಯಭಾರ ಕಚೇರಿಗಳ ಮುಖ್ಯಸ್ಥರು ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.
    iv.            ಬಿಕ್ಕಟ್ಟು ಆರ್ಥಿಕತೆಯ ಮೇಲೂ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರು, ವಿದೇಶಿ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅಗತ್ಯ ಪೂರೈಕೆಗಳು, ಸಾರಿಗೆ ಸಂಚಾರ ಮತ್ತು ಪಾವತಿಗಳು ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಖಾತ್ರಿಪಡಿಸಲು ರಾಯಭಾರ ಕಚೇರಿಗಳ ಮುಖ್ಯಸ್ಥರು ಮುಂದಾಗಬೇಕು ಎಂದು ಕರೆ ನೀಡಿದರು.
      v.            ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶೇಷವಾಗಿ ಆರ್ಥಿಕ ಸ್ಥಿತಿ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ವ್ಯವಸ್ಥೆಯ ಬೆಳವಣಿಗೆಗಳ ಬಗ್ಗೆ ನಿಕಟ ನಿಗಾ ಇಡುವಂತೆ ಅವರು ಕರೆ ನೀಡಿದರು.
 
ಇದಕ್ಕೆ ಪ್ರತಿಯಾಗಿ ಬೀಜಿಂಗ್, ವಾಷಿಂಗ್ಟನ್ ಡಿಸಿ, ಟೆಹ್ರಾನ್, ರೋಮ್, ಬರ್ಲಿನ್, ಕಠ್ಮಂಡು, ಅಬುದಬಿ, ಕಾಬೂಲ್, ಮಾಲೆ, ಸಿಯೋಲ್ – ಈ ಹತ್ತು ರಾಯಭಾರ ಕಚೇರಿಗಳ ಮುಖ್ಯಸ್ಥರು ಪ್ರಧಾನಮಂತ್ರಿ ಅವರಿಗೆ ತಮ್ಮ ಮುನ್ನೋಟವನ್ನು ಹಂಚಿಕೊಂಡರು ಮತ್ತು ಉಳಿದವರು ಆಯಾ ರಾಷ್ಟ್ರಗಳಲ್ಲಿನ ಸ್ಥಿತಿಗತಿ ಹಂಚಿಕೊಂಡರು ಮತ್ತು ಸಾಂಕ್ರಾಮಿಕದ ವಿರುದ್ಧ ಭಾರತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
 ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕೂಲಿಕಾರರನ್ನು ರಕ್ಷಿಸಲು ಕೈಗೊಂಡಿರುವ ಪ್ರಯತ್ನಗಳನ್ನು ರಾಯಭಾರ ಕಚೇರಿಗಳ ಮುಖ್ಯಸ್ಥರು ವಿವರಿಸಿದರು. ಔಷಧ, ವೈದ್ಯಕೀಯ ಉಪಕರಣಗಳು, ತಂತ್ರಜ್ಞಾನ, ಸಂಶೋಧನೆ ಮತ್ತು ಇತರೆ ಕ್ರಮಗಳಿಗಾಗಿ ಕೈಗೊಂಡ ಪ್ರಯತ್ನಗಳನ್ನು ಅವರು ವಿವರಿಸಿದರು ಮತ್ತು ಈ ಕ್ರಮಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಕಾರಿಯಾಗಬಹುದು ಎಂದು ಹೇಳಿದರು. ಕೋವಿಡ್-19 ವಿರುದ್ಧ ಜಾಗತಿಕ ಸಮರದಲ್ಲಿ ಇತರೆ ರಾಷ್ಟ್ರಗಳು ಕಲಿಯುತ್ತಿರುವ ಪಾಠಗಳು ಮತ್ತು ಅವುಗಳ ಉತ್ತಮ ಪದ್ಧತಿಯ ಬಗ್ಗೆ ರಾಯಭಾರ ಕಚೇರಿಯ ಮುಖ್ಯಸ್ಥರು ವಿವರಿಸಿದರು.
ನೆರೆಹೊರೆಯ ರಾಷ್ಟ್ರಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ರಾಯಭಾರ ಕಚೇರಿಯ ಮುಖ್ಯಸ್ಥರು, ಕೋವಿಡ್-19 ಎದುರಿಸಲು ಸಾರ್ಕ್ ರಾಷ್ಟ್ರಗಳಲ್ಲಿ ಭಾರತದ ನೇತೃತ್ವದಲ್ಲಿ ಆರಂಭಿಸಿರುವ ವಿಶೇಷ ನಿಧಿ ಬಳಸಿಕೊಂಡು ಕೈಗೊಂಡಿರುವ ಕ್ರಮಗಳನ್ನು ತಿಳಿಸಿದರು. ಪ್ರಧಾನಮಂತ್ರಿ ಅವರ ಸ್ಫೂರ್ತಿದಾಯಕ ಮತ್ತು ಮಾರ್ಗದರ್ಶನದ ಈ ಕಾರ್ಯಕ್ಕೆ ರಾಯಭಾರ ಕಚೇರಿಗಳ ಮುಖ್ಯಸ್ಥರು ಕೃತಜ್ಞತೆಗಳನ್ನು ಸಲ್ಲಿಸಿದರು.
ಪ್ರಧಾನಮಂತ್ರಿಗಳು ಭಾರತೀಯ ರಾಯಭಾರ ಕಚೇರಿಗಳ ಸಿಬ್ಬಂದಿ ವಿದೇಶದಲ್ಲಿ ತಮ್ಮ ಸ್ವಂತ ಊರುಗಳಿಂದ ಸಾಕಷ್ಟು ದೂರದಲ್ಲಿದ್ದರೂ ಅವರು ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಸಮರದಲ್ಲಿ ಸಂಪೂರ್ಣ ಭಾಗಿಯಾಗಿ ಮುಂದುವರಿದಿದ್ದಾರೆ ಎಂದು ಪ್ರತಿಪಾದಿಸಿದರು. ಎಲ್ಲಾ ಭಾರತೀಯರ ಮುಂಜಾಗ್ರತೆ ಮತ್ತು ಐಕ್ಯತೆ ಈ ದೇಶದ ಭವಿಷ್ಯವನ್ನು ರಕ್ಷಿಸಲು ಸಹಾಯ ಮಾಡಲಿದೆ ಎಂದು ಅವರು ಪ್ರತಿಪಾದಿಸಿದರು.


 
****



(Release ID: 1609408) Visitor Counter : 241