ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಯಿಂದ 2020ರ ಮಾರ್ಚ್ 21 ರಿಂದ – ಏಪ್ರಿಲ್ 14ರ ವರೆಗಿನ ಅವಧಿಯಲ್ಲಿ ಎಲ್ಲ ಬಗೆಯ ಪ್ರಯಾಣ ಟಿಕೆಟ್ ಗಳಿಗೆ ಪೂರ್ಣ ಹಣ ಮರುಪಾವತಿ

Posted On: 28 MAR 2020 2:42PM by PIB Bengaluru

ಭಾರತೀಯ ರೈಲ್ವೆಯಿಂದ 2020ರ ಮಾರ್ಚ್ 21 ರಿಂದ – ಏಪ್ರಿಲ್ 14ರ ವರೆಗಿನ ಅವಧಿಯಲ್ಲಿ ಎಲ್ಲ ಬಗೆಯ ಪ್ರಯಾಣ ಟಿಕೆಟ್ ಗಳಿಗೆ ಪೂರ್ಣ ಹಣ ಮರುಪಾವತಿ
 
ಕೋವಿಡ್-19 ಹರಡುವುದನ್ನು ನಿಯಂತ್ರಿಸುವ ಸಲುವಾಗಿ 2020ರ ಏಪ್ರಿಲ್ 14ರ ವರೆಗೆ ಎಲ್ಲ ಬಗೆಯ ರೈಲು ಸಂಚಾರ ಮತ್ತು ಟಿಕೆಟ್ ಬುಕ್ಕಿಂಗ್ ಸೌಕರ್ಯ ರದ್ದು ಹಿನ್ನೆಲೆ ಈ ಕ್ರಮ


 
2020ರ ಏಪ್ರಿಲ್ 14ರ ವರೆಗೆ ಎಲ್ಲ ಬಗೆಯ ಪ್ರಯಾಣಿಕರ ರೈಲುಗಳು ಮತ್ತು ಟಿಕೆಟ್ ವಿತರಣೆಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ 2020ರ ಮಾರ್ಚ್ 21 ರಿಂದ ಏಪ್ರಿಲ್ 14ರ ನಡುವಿನ ಅವಧಿಯಲ್ಲಿ ಪಡೆದಿರುವ ಎಲ್ಲ ಟಿಕೆಟ್ ಗಳ ಪೂರ್ಣ ಹಣ ಮರುಪಾವತಿ ಮಾಡಲು ನಿರ್ಧರಿಸಿದೆ. 2020ರ ಮಾರ್ಚ್ 21ರಂದು ನೀಡಲಾಗಿದ್ದ ಮರುಪಾವತಿ ನಿಯಮಾವಳಿಗಳಲ್ಲಿ ಘೋಷಿಸಲಾಗಿದ್ದ ವಿನಾಯಿತಿಗಳನ್ನು ಮುಂದುವರಿಸಿ ಹೆಚ್ಚುವರಿಯಾಗಿ ಈ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆ ಈ ಕೆಳಗಿನಂತಿರಲಿದೆ.
 
1.        ಕೌಂಟರ್ ನಲ್ಲಿ ಬುಕ್ ಮಾಡಿದ ಪಿಆರ್ ಎಸ್ ಟಿಕೆಟ್ ಗಳು:

ಎ.        27.03.2020ಕ್ಕೂ ಮುಂಚೆ ರದ್ದಾದ ಟಿಕೆಟ್ ಗಳು: ಟಿಡಿಆರ್(ಟಿಕೆಟ್ ಠೇವಣಿ ಸ್ವೀಕೃತಿ) ಅನ್ನು ಪ್ರಯಾಣಿಕರು ಪ್ರಯಾಣದ ವಿವರಗಳನ್ನು ಭರ್ತಿಮಾಡಿ, ಮುಖ್ಯ ವಾಣಿಜ್ಯ ವ್ಯವಸ್ಥಾಪಕರು(ಸಿಸಿಎಂ) (ಕ್ಲೈಮ್ಸ್) (ಹಕ್ಕು) ಅಥವಾ ಮುಖ್ಯ ಕ್ಲೈಮ್ ಅಧಿಕಾರಿ (ಸಿಸಿಒ) ಯಾವುದೇ ವಲಯದ ರೈಲ್ವೆ ಕೇಂದ್ರ ಕಚೇರಿಗಳಲ್ಲಿ 2020ರ ಜೂನ್ 21ರ ವರೆಗೆ ಸಲ್ಲಿಸಿ, ಬಾಕಿ ಮರುಪಾವತಿ ಹಣವನ್ನು ಪಡೆದು ಕೊಳ್ಳಬಹುದು. ಅಂತಹ ಟಿಕೆಟ್ ಗಳ ಟಿಕೆಟ್ ಗಳನ್ನು ರದ್ದುಗೊಳಿಸುವ ವೇಳೆ ಕಡಿತಗೊಳಿಸಿ ಉಳಿದ ಬಾಕಿ ಮೊತ್ತವನ್ನು ಪ್ರಯಾಣಿಕರು ಪಡೆದುಕೊಳ್ಳಬಹುದು.
ಬಿ.        27.03.2020ಕ್ಕೂ ನಂತರ ರದ್ದಾದ ಟಿಕೆಟ್ ಗಳು: ಇಂತಹ ರದ್ದಾಗಿರುವ ಟಿಕೆಟ್ ಗಳಿಗೆ ಪೂರ್ತಿ ಹಣ ಮರುಪಾವತಿ ಮಾಡಲಾಗುವುದು.
 
2.        ಇ-ಟಿಕೆಟ್ ಗಳು :
 
ಎ.        27.03.2020ಕ್ಕೂ ಮುಂಚೆ ರದ್ದಾದ ಟಿಕೆಟ್ ಗಳು: ಕಾಯ್ದಿರಿಸಿದ ಟಿಕೆಟ್ ಗಳಿಗೆ ಬಾಕಿ ಮರುಪಾವತಿ ಹಣವನ್ನು ಪ್ರಯಾಣಿಕರ ಖಾತೆಗಳಿಗೆ ವರ್ಗಾಯಿಸುವುದು. ಐಆರ್ ಸಿಟಿಸಿ  ಬಾಕಿ ಹಣ ಮರುಪಾವತಿಗೆ ಸೂಕ್ತ ವ್ಯವಸ್ಥೆಯನ್ನು ಸಿದ್ಧಪಡಿಸಿಲಿದೆ.
 
ಬಿ.      27.03.2020ಕ್ಕೂ ನಂತರ ರದ್ದಾದ ಟಿಕೆಟ್ ಗಳು: ಈಗಾಗಲೇ ರದ್ದಾಗಿರುವ ಟಿಕೆಟ್ ಗಳಿಗೆ ಪೂರ್ತಿ ಹಣ ಮರುಪಾವತಿ ಮಾಡಲಾಗುವುದು, ಅದಕ್ಕಾಗಿ ಈಗಾಗಲೇ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.  
 
 
****



(Release ID: 1608908) Visitor Counter : 101