ರಕ್ಷಣಾ ಸಚಿವಾಲಯ

ಕೋವಿಡ್ – 19 ವಿರುದ್ಧದ ದೀರ್ಘಾವಧಿಯ ಹೋರಾಟಕ್ಕೆ ದಕ್ಷಿಣ ನೌಕಾಪಡೆಯ ಕಮಾಂಡ್ ಸಜ್ಜು

Posted On: 27 MAR 2020 12:25PM by PIB Bengaluru

ಕೋವಿಡ್ – 19 ವಿರುದ್ಧದ ದೀರ್ಘಾವಧಿಯ ಹೋರಾಟಕ್ಕೆ ದಕ್ಷಿಣ ನೌಕಾಪಡೆಯ ಕಮಾಂಡ್ ಸಜ್ಜು

 

21 ದಿನಗಳ ರಾಷ್ಟ್ರೀಯ ಲಾಕ್ ಡೌನ್ ಘೋಷಿಸಿರುವ ಸಂದರ್ಭದಲ್ಲಿ ದಕ್ಷಿಣ ನೌಕಾಪಡೆಯ ಕಮಾಂಡ್ (ಎಸ್ ಎನ್ ಸಿ) ರಾಜ್ಯ ಸರ್ಕಾರ ಮತ್ತು ನೌಕಾಪಡೆಯ ಮುಖ್ಯ ಕಚೇರಿಯೊಂದಿಗೆ ಸಮಾಲೋಚಿಸಿ, ಕೋವಿಡ್ – 19 ಹರಡುವಿಕೆಯನ್ನು ಹತೋಟಿಗೆ ತರಲು 2 ರಣ ನೀತಿಗಳನ್ನು ರಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವು ನಾಗರಿಕ ಸಮಾಜ ಈ ರೋಗದ ವಿರುದ್ಧ ಹೋರಾಟಕ್ಕೆ ಸಿದ್ಧಗೊಳ್ಳಲು ಮತ್ತು ಸನ್ನದ್ಧರಾಗಲು ಸಹಾಯ ಮಾಡುವುದು ಮತ್ತು ಜೊತೆ ಜೊತೆಗೆ ತಮ್ಮ ಸಿಬ್ಬಂದಿಯನ್ನು ಸೋಂಕಿಗೆ ಒಳಗಾಗದಂತೆ ತಡೆಯುವುದನ್ನು ಖಚಿತಪಡಿಸಲು ಮತ್ತು ಅಗತ್ಯಕ್ಕೆ ತಕ್ಕಂತೆ ಎಲ್ಲ ಸೇವೆಗಳಿಗೆ ಲಭ್ಯವಿರುವುದನ್ನು ಖಚಿತಪಡಿಸುವುದಾಗಿದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರುವಂತಾದಲ್ಲಿ ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡಲು ವೈದ್ಯಕೀಯೇತರ ಸಿಬ್ಬಂದಿಯನ್ನು ಒಳಗೊಂಡಂತೆ ಬ್ಯಾಟಲ್ ಫೀಲ್ಡ್ ನರ್ಸಿಂಗ್ ಅಸಿಸ್ಟೆಂಟ್ಸ್ (BFNA) ಯ 10 ತಂಡಗಳನ್ನು ಕೊಚ್ಚಿಯಲ್ಲಿ ಸಿದ್ಧವಿರಿಸಲಾಗಿದೆ. ಜೊತೆಗೆ ಇಂತಹ ತಂಡಗಳನ್ನು ಎಸ್ ಎನ್ ಸಿ ಅಡಿಯಲ್ಲಿ ಇತರ ಕೇಂದ್ರಗಳಲ್ಲೂ ಸಿದ್ಧಗೊಳಿಸಲಾಗುತ್ತಿದೆ. ರಜೆಯಲ್ಲಿ ಅಥವಾ ತಾತ್ಕಾಲಿಕ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗೆ “ಎಲ್ಲಿದ್ದೀರೋ ಅಲ್ಲೇ ಇರಿ, ಪ್ರಯಾಣಿಸಬೇಡಿ” ಎಂಬ ನೀತಿಯನ್ನು ಭಾರತೀಯ ನೌಕಾಪಡೆ ಜಾರಿಗೆ ತಂದಿದೆ. 
ಸರ್ಕಾರಿ ನಿರ್ದೇಶನದಂತೆ ವಿಶ್ವದ ವಿವಿಧ ಭಾಗಗಳಲ್ಲಿರುವ 200 ಭಾರತೀಯ ನಾಗರಿಕರನ್ನು ಭಾರತ ಸರ್ಕಾರ ವಿಮಾನಗಳ ಮೂಲಕ ವಾಪಸ್ ಭಾರತಕ್ಕೆ ಕರೆತಂದಿದ್ದು, ಅವರಿಗಾಗಿ ದಕ್ಷಿಣ ನೌಕಾಪಡೆಯ ಕಮಾಂಡ್ ಮುಖ್ಯ ಕಚೇರಿ ಕೊಚ್ಚಿಯಲ್ಲಿರುವಂತಹ ತರಬೇತಿ ಘಟಕಗಳನ್ನು ಕೊರೊನಾ ಸೇವಾ ಕೇಂದ್ರ (ಸಿಸಿಸಿ) ಆಗಿ ಪರಿವರ್ತಿಸಿದೆ. ಒಂದು ವೇಳೆ ಸೇವೆಯಲ್ಲಿರುವ ಸಿಬ್ಬಂದಿಗೆ ಈ ಸೋಂಕು ತಗುಲಿದರೆ ಆ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗಾಗಿ ಹೆಚ್ಚುವರಿ 200 ಸಿಬ್ಬಂದಿ ಮಿತಿಯ ಪ್ರತ್ಯೇಕ ಸಿಸಿಸಿ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ. ಮೀಸಲಿರಿಸಲಾದ ಈ ಎರಡೂ ಸೌಲಭ್ಯಗಳನ್ನು ಪ್ರಸ್ತುತ ಜಾರಿಯಲ್ಲಿರುವ ನಿರ್ದೇಶನದಂತೆ ಪ್ರತ್ಯೇಕ ಆಹಾರ, ಶೌಚಾಲಯಗಳು, ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಮತ್ತು ಮನರಂಜನಾ ವ್ಯವಸ್ಥೆಯನ್ನು 14 ದಿನಗಳವರೆಗಾಗಿ ಸಿದ್ಧಪಡಿಸಲಾಗಿದೆ. ಈ ಸಿಸಿಸಿಯು ಸಮರ್ಪಿತ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡದಿಂದ ನಿರ್ವಹಿಸಲ್ಪಡುತ್ತದೆ. ಜೊತೆಗೆ ಪ್ರತ್ಯೇಕ ಭಾರತೀಯ ನೌಕಾಪಡೆಯ ವೈದ್ಯರು ಮತ್ತು ಸುಶ್ರೂಷಕ ಸಿಬ್ಬಂದಿಯನ್ನು ಒಳಗೊಂಡ ವೈದ್ಯಕೀಯ ಸೇವಾ ಕೇಂದ್ರವನ್ನು ಒಳಗೊಂಡಿರುತ್ತದೆ. ಇವರು ರೋಗಿಗಳ ವಿವಿಧ ವೈದ್ಯಕೀಯ ತಪಾಸಣೆ ನಡೆಸುತ್ತಾರೆ. ಆರೋಗ್ಯ ಸಚಿವಾಲಯ ಘೋಷಿಸಿದ ವೈದ್ಯಕೀಯ ನಿಬಂಧನೆಗಳನ್ನು ಇಲ್ಲಿ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ.
ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಒಳಗೊಂಡಂತೆ ಸಾರ್ವಜನಿಕ ಪ್ರದೇಶಗಳಲ್ಲಿ ವಿಶೇಷ ನೈರ್ಮಲ್ಯೀಕರಣ ಪ್ರಚಾರ ಮತ್ತು ಅದರ ಕುರಿತಾದ ಶಿಕ್ಷಣವನ್ನು ನೀಡಲಾಗುತ್ತಿದೆ. 


***



(Release ID: 1608517) Visitor Counter : 121