ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಅಬುದಬಿಯ ದೊರೆ ನಡುವೆ ದೂರವಾಣಿ ಸಮಾಲೋಚನೆ

Posted On: 26 MAR 2020 10:31PM by PIB Bengaluru

ಪ್ರಧಾನಮಂತ್ರಿ ಮತ್ತು ಅಬುದಬಿಯ ದೊರೆ ನಡುವೆ ದೂರವಾಣಿ ಸಮಾಲೋಚನೆ
 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಬುದಬಿಯ ದೊರೆ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜೈಯದ್ ಅಲ್ ನಹ್ಯಾನ್ ಅವರೊಂದಿಗೆ ಇಂದು ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಉಭಯ ನಾಯಕರು ಎರಡೂ ದೇಶಗಳಲ್ಲಿನ ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸಕ್ತ ಸ್ಥಿತಿಗತಿ ಕುರಿತು ಮತ್ತು ಆಯಾ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಹಾಗೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಸೋಂಕು ಹರಡುವುದನ್ನು ತಡೆಯಲು ಮುಂದಿನ ಕೆಲವು ವಾರ ಅತ್ಯಂತ ಕಠಿಣವಾದುದು ಎಂಬುದನ್ನು ಒಪ್ಪಿಕೊಂಡ ನಾಯಕರು, ಆ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳ ನಡುವೆ ಸಮಗ್ರ ಮತ್ತು ಸಮನ್ವಯಿತ ಪ್ರಯತ್ನಗಳು ಅತ್ಯಗತ್ಯ ಎಂದರು. ಆ ನಿಟ್ಟಿನಲ್ಲಿ ಇದಕ್ಕೂ ಮುನ್ನ ಸಾಂಕ್ರಾಮಿಕ ರೋಗದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಜಿ-20 ನಾಯಕರ ವಸ್ತುಶಃ(ವರ್ಚ್ಯುಯಲ್) ಶೃಂಗಸಭೆ ನಡೆಸಿದ್ದಕ್ಕೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಶ್ರೀಮಂತಿಕೆ ಮತ್ತು ಸಾಮರ್ಥ್ಯದ ಪ್ರಾಮುಖ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಪ್ರಸಕ್ತ ಸ್ಥಿತಿಗತಿಯಲ್ಲಿ ಎರಡೂ ದೇಶಗಳ ನಡುವೆ ಪೂರೈಕೆ ಮಾರ್ಗದ ಸಾರಿಗೆ ಸಂಚಾರದಲ್ಲಿ ನಿರಂತರವಾಗಿ ಮುಂದುವರಿಸಲು ಅಧಿಕಾರಿಗಳ ಜೊತೆ ನಿರಂತರ ಸಮಾಲೋಚನೆ ಕಾಯ್ದುಕೊಳ್ಳಲು ಉಭಯ ದೇಶಗಳು ಒಪ್ಪಿದವು.
ಗೌರವಾನ್ವಿತ ದೊರೆ ಅವರು, ಯುಎಇಯಲ್ಲಿರುವ ಮತ್ತು ಅಲ್ಲಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ಸುಮಾರು 2 ಮಿಲಿಯನ್ ಭಾರತೀಯರ ಕಲ್ಯಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಪ್ರಧಾನಮಂತ್ರಿ ಅವರಿಗೆ ಭರವಸೆ ನೀಡಿದರು. ಅದಕ್ಕೆ ಪ್ರಧಾನಮಂತ್ರಿಯವರು, ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯರ ಸುರಕ್ಷತೆ ಮತ್ತು ಆರೋಗ್ಯದ ಕಡೆ ವೈಯಕ್ತಿಕವಾಗಿ ಗಮನಹರಿಸುತ್ತಿರುವುದಕ್ಕೆ ದೊರೆಗೆ ಧನ್ಯವಾದಗಳನ್ನು ಹೇಳಿದರು.
ಪ್ರಧಾನಮಂತ್ರಿ ಅವರು, ಸಂಯುಕ್ತ ಅರಬ್ ಎಮಿರೇಟ್ಸ್ ನ ಇಡೀ ರಾಜಮನೆತನ ಮತ್ತು ಎಮಿರೇಟ್ಸ್ ನ ನಾಗರಿಕರಿಗೆ ಉತ್ತಮ ಆರೋಗ್ಯ ಲಭಿಸಲಿ ಎಂದು ಶುಭ ಕೋರಿದರು. ದೊರೆ ಅವರು ಈ ಶುಭಾಶಯಗಳಿಗೆ ಆತ್ಮೀಯವಾಗಿ ಸ್ಪಂದಿಸಿದರು.


 
***


(Release ID: 1608481) Visitor Counter : 152