ರಕ್ಷಣಾ ಸಚಿವಾಲಯ

ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಾಯುಪಡೆ ಸಹಾಯವನ್ನು ಮುಂದುವರೆಸಿದೆ

Posted On: 26 MAR 2020 6:22PM by PIB Bengaluru

ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಾಯುಪಡೆ ಸಹಾಯವನ್ನು ಮುಂದುವರೆಸಿದೆ

 

ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಭಾರತೀಯ ವಾಯುಪಡೆ, ನಾಗರಿಕ ಆಡಳಿತಕ್ಕೆ ದೇಶಾದ್ಯಂತ ಸಾಧ್ಯವಾದ ಸಹಕಾರವನ್ನು ನೀಡಲು ಎಲ್ಲ ಕ್ರಮಗಳನ್ನೂ ಮುಂದುವರೆಸಿದೆ.

ದೇಶಾದ್ಯಂತದ ತನ್ನ ನೋಡಲ್ ವಾಯುಪಡೆ ನೆಲೆಗಳಲ್ಲಿ, ಪ್ರತಿಯೊಂದರಲ್ಲೂ 200-300 ಸಿಬ್ಬಂದಿಗಳುಲ್ಲ 09 ಪ್ರತ್ಯೇಕ ವ್ಯವಸ್ಥೆಗಳನ್ನು ನಿರ್ಮಿಸಿದೆ

ಬೆಂಗಳೂರಿನ ಕಮಾಂಡ್ ವಾಯು ಪಡೆ ಆಸ್ಪತ್ರೆಯನ್ನು (ಸಿ ಎಚ್ ಎ ಎಫ್ ಬಿ) ಕೋವಿಡ್-19 ರ ಪರೀಕ್ಷೆ ನಡೆಸಲು ಭಾರತೀಯ ವಾಯುಪಡೆಯ ಪ್ರಥಮ ಪ್ರಯೋಗಾಲಯವನ್ನಾಗಿ ಸೂಚಿಸಲಾಗಿದೆ. ಇದು ಈ ಪ್ರಾಂತ್ಯದಲ್ಲಿನ ಶಂಕಿತ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪರೀಕ್ಷಿಸಲು ಸಹಾಯಮಾಡುತ್ತದೆ ಮತ್ತು ಅಗತ್ಯವಿದ್ದಲ್ಲಿ ಸಕಾಲಿಕ ಮತ್ತು ಸಮಯೋಚಿತ ಹಸ್ತಕ್ಷೇಪಕ್ಕೆ ಅನುಮತಿಸುತ್ತದೆ.

ಸದ್ಯದ ಪರಿಸ್ಥಿತಿಯನ್ನು ಪರಿವೀಕ್ಷಿಸಲು ಮತ್ತು ತಕ್ಷಣ ಅಗತ್ಯವಿರುವ ಪ್ರತಿಕ್ರಿಯೆ ಹಾಗೂ ನೆರವನ್ನು ಒದಗಿಸಲು, ವಿವಿಧ ಕಮಾಂಡ್ ಕೇಂದ್ರ ಕಚೇರಗಳಲ್ಲಿ ಮತ್ತು ವಾಯುಪಡೆಯ ಮುಖ್ಯ ಕಚೇರಗಳಲ್ಲಿ 24x7 ಬಿಕ್ಕಟ್ಟು ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಐಎಎಫ್ ವಿಮಾನಗಳು ವೈದ್ಯಕೀಯ ಸಾಮಗ್ರಿಗಳನ್ನು ಮತ್ತು ವೈದ್ಯರನ್ನು ಲೇಹ್ ಗೆ ಕೊಂಡೊಯ್ಯುವುದು ಮತ್ತು ಕೋವಿಡ್ ಪರೀಕ್ಷೆಗಾಗಿ ಚಂದಿಘಡ್ ಮತ್ತು ದೆಹಲಿಗೆ ರಕ್ತ ಮಾದರಿಗಳನ್ನು ಕೊಂಡೊಯ್ಯುವ ಕಾರ್ಯವನ್ನು ಮುಂದುವರೆಸಿವೆ. 

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಹೊರಡಿಸಿದ ಎಲ್ಲ ಕ್ರಮಗಳು ಮತ್ತು ನಿರ್ದೇಶನಗಳನ್ನು ಎಲ್ಲ ಐಎಎಫ್ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಈ ಹೋರಾಟದಲ್ಲಿ ಭಾರತೀಯ ವಾಯುಪಡೆ ಸರ್ಕಾರದೊಂದಿಗೆ ನಿಂತಿದೆ ಮತ್ತು ಭಾರತೀಯ ನಾಗರಿಕರಿಗೆ ಸಾಧ್ಯವಾದ ಎಲ್ಲ ಸಹಾಯವನ್ನೂ ಒದಗಿಸುತ್ತಿದೆ.

 

***



(Release ID: 1608427) Visitor Counter : 104