ರಕ್ಷಣಾ ಸಚಿವಾಲಯ

ಕೋವಿಡ್-19 ಎದುರಿಸಲು ರಕ್ಷಣಾ ಸಚಿವಾಲಯದ ಕ್ರಿಯಾ ಯೋಜನೆಯನ್ನು ಪರಿಶೀಲಿಸಿದ ರಕ್ಷಣಾ ಸಚಿವ  ಶ್ರೀ ರಾಜನಾಥ್ ಸಿಂಗ್

Posted On: 26 MAR 2020 2:23PM by PIB Bengaluru

ಕೋವಿಡ್-19 ಎದುರಿಸಲು ರಕ್ಷಣಾ ಸಚಿವಾಲಯದ ಕ್ರಿಯಾ ಯೋಜನೆಯನ್ನು ಪರಿಶೀಲಿಸಿದ ರಕ್ಷಣಾ ಸಚಿವ  ಶ್ರೀ ರಾಜನಾಥ್ ಸಿಂಗ್


ಸಶಸ್ತ್ರ ಪಡೆಗಳು, ಸಾರ್ವಜನಿಕ ವಲಯದ ರಕ್ಷಣಾ ಉದ್ಯಮಗಳು   ಮತ್ತು ಇತರ ಸಂಸ್ಥೆಗಳಿಗೆ ಸನ್ನದ್ಧತೆಯನ್ನು ಸಜ್ಜುಗೊಳಿಸಲು ಮತ್ತು ನಾಗರಿಕ ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ತಿಳಿಸಿದರು.
ಕೋವಿಡ್ -19 ಪರಿಸ್ಥಿತಿಯನ್ನು ಎದುರಿಸಲು ಸಚಿವಾಲಯದ ಕ್ರಿಯಾ ಯೋಜನೆ ಕುರಿತು ರಕ್ಷಾ ಸಚಿವ ಶ್ರೀ ರಾಜನಾಥ್ ಸಿಂಗ್ ರವರು ಇಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.  ಸಭೆಯಲ್ಲಿ ರಕ್ಷಾ ಸಚಿವರು ಭಾರತೀಯ ನಾಗರಿಕರನ್ನು ಮತ್ತು   ಕೋವಿಡ್-19 ಪೀಡಿತ ದೇಶಗಳ ವಿದೇಶಿಯರನ್ನು ಸ್ಥಳಾಂತರಿಸುವಲ್ಲಿ ಸಶಸ್ತ್ರ ಪಡೆ ಮತ್ತು  ರಕ್ಷಣಾ ಮಂತ್ರಾಲಯದ ವಿವಿಧ ಇಲಾಖೆಗಳು ನಿರ್ವಹಿಸಿರುವ ಪೂರ್ವಭಾವಿ ಪಾತ್ರದ ಬಗ್ಗೆ ಮತ್ತು ವಿವಿಧ  ಕ್ವಾರಂಟೈನ್  ಸೌಲಭ್ಯಗಳಲ್ಲಿ ಅವರಿಗೆ ಸರಿಯಾದ ಆರೈಕೆ ಸಿಗುವುದನ್ನು  ಖಾತ್ರಿಪಡಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಶಸ್ತ್ರ ಪಡೆ ಮತ್ತು ಇತರ ಇಲಾಖೆಗಳು ತಮ್ಮ ಸನ್ನದ್ಧತೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ನಾಗರಿಕ ಆಡಳಿತಕ್ಕೆ ವಿವಿಧ ಹಂತಗಳಲ್ಲಿ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಅಧಿಕಾರಿಗಳು ಶ್ರೀ ರಾಜನಾಥ್ ಸಿಂಗ್ ಅವರಿಗೆ ಇದುವರೆಗೆ ನೀಡಲಾದ ವಿವಿಧ ಕ್ರಮಗಳನ್ನು ಕೈಗೊಂಡ ಬಗೆಯನ್ನು  ಮತ್ತು ಸಹಾಯಗಳ ಬಗ್ಗೆ ವಿವರಿಸಿದರು.  ಚೀನಾ, ಜಪಾನ್ ಮತ್ತು ಇರಾನ್‌ನ ಪೀಡಿತ ಪ್ರದೇಶಗಳಿಂದ ಭಾರತೀಯ ವಾಯುಪಡೆಯು ಹಲವಾರು  ಪಯಣಗಳನ್ನು ಮಾಡಿದೆ ಮತ್ತು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದೆ.
ಸಶಸ್ತ್ರ ಪಡೆಗಳ ವಿವಿಧ ಸಂಪರ್ಕತಡೆ (ಕ್ವಾರಂಟೈನ್) ಸೌಲಭ್ಯಗಳು ಇಲ್ಲಿಯವರೆಗೆ 1,462 ಸ್ಥಳಾಂತರಿಸುವವರನ್ನು ನಿಭಾಯಿಸಿದೆ ಮತ್ತು 389 ಜನರನ್ನು ಬಿಡುಗಡೆ ಮಾಡಲಾಗಿದೆ.  ಪ್ರಸ್ತುತ, 1,073 ಜನರಿಗೆ ಮಾನೇಸರ್, ಹಿಂದಾನ್, ಜೈಸಲ್ಮೇರ್, ಜೋಧ್ ಪುರ್ ಮತ್ತು ಮುಂಬೈಗಳಲ್ಲಿನ ಸೌಲಭ್ಯಗಳಲ್ಲಿ ಆರೈಕೆ ನೀಡಲಾಗುತ್ತಿದೆ.  ಹೆಚ್ಚುವರಿ  950 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಸಂಪರ್ಕತಡೆ ಸೌಲಭ್ಯಗಳ ಪರ್ಯಾಯ ವ್ಯವಸ್ಥೆಯೂ ಇದೆ .
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯಗಳು 20,000 ಲೀಟರ್ ಸ್ಯಾನಿಟೈಜರ್ ತಯಾರಿಸಿ ದೆಹಲಿ ಪೊಲೀಸರಿಗೆ 10,000 ಲೀಟರ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸರಬರಾಜು ಮಾಡಿವೆ. ಡಿಆರ್‌ಡಿಒ ದೆಹಲಿ ಪೊಲೀಸ್ ಸಿಬ್ಬಂದಿಗೆ 10,000 ಮುಖವಾಡಗಳನ್ನು ಪೂರೈಸಿದೆ. ಬಾಡಿ ಸೂಟ್‌ಗಳು ಮತ್ತು ವೆಂಟಿಲೇಟರ್‌ಗಳಂತಹ ವೈಯಕ್ತಿಕ ರಕ್ಷಣಾ ಸಾಧನಗಳನ್ನು ತಯಾರಿಸಲು ಇದು ಕೆಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ.
ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ಸ್ಯಾನಿಟೈಜರ್‌ಗಳು, ಮುಖವಾಡಗಳು ಮತ್ತು ಬಾಡಿ ಸೂಟ್‌ಗಳ ಉತ್ಪಾದನೆಯನ್ನು ಹೆಚ್ಚಿಸಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಹ ವೆಂಟಿಲೇಟರ್ ತಯಾರಿಕೆಯಲ್ಲಿ ತೊಡಗಿದೆ.
ಮಾಲ್ಡೀವ್ಸ್ ನಲ್ಲಿ ನಿಯೋಜಿಸಲಾದ ಸೈನ್ಯದ ವೈದ್ಯಕೀಯ ತಂಡಗಳು ತಮ್ಮ ಉದ್ದೇಶಿತ ಕಾರ್ಯ ಮುಗಿದ ನಂತರ ಮರಳಿದ್ದಾರೆ.  ನೆರೆಹೊರೆಯ ಸ್ನೇಹಪರ ದೇಶಗಳಿಗೆ ಅಗತ್ಯವಾದ ನೆರವು ನೀಡಲು ಸೇನೆಯ ವೈದ್ಯಕೀಯ ತಂಡಗಳು ಮತ್ತು ನೌಕಾಪಡೆಯ ಎರಡು ಹಡಗುಗಳು ಸಿದ್ಧವಾಗಿವೆ.
ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್.ಭೌರಿಯಾ, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ರಾಜ್ ಕುಮಾರ್ , ಕಾರ್ಯದರ್ಶಿ (ಮಾಜಿ ಸೈನಿಕರ ಕಲ್ಯಾಣ) ಶ್ರೀಮತಿ ಸಂಜೀವನಿ ಕುಟ್ಟಿ ಮತ್ತು ರಕ್ಷಣಾ ಇಲಾಖೆ ಆರ್ & ಡಿ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು.



(Release ID: 1608368) Visitor Counter : 199