ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಎಂ ಎಚ್ ಆರ್ ಡಿ ನ್ಯಾಷನಲ್ ಬುಕ್ ಟ್ರಸ್ಟ್ ನಿಂದ ಪುಸ್ತಕಗಳೊಂದಿಗೆ ಮನೆಯಲ್ಲೇ ಉಳಿಯಿರಿ ಅಭಿಯಾನ ಆರಂಭ

Posted On: 25 MAR 2020 9:14PM by PIB Bengaluru

ಎಂ ಎಚ್ ಆರ್ ಡಿ ನ್ಯಾಷನಲ್ ಬುಕ್ ಟ್ರಸ್ಟ್ ನಿಂದ ಪುಸ್ತಕಗಳೊಂದಿಗೆ ಮನೆಯಲ್ಲೇ ಉಳಿಯಿರಿ ಅಭಿಯಾನ ಆರಂಭ
ನೂರಕ್ಕೂ ಅಧಿಕ ಪುಸ್ತಕಗಳನ್ನು ಎನ್  ಬಿಟಿಯ ವೆಬ್ ಸೈಟ್ ನಿಂದ ಪಿಡಿಎಫ್ ಫಾರ್ಮೆಟ್ ನಲ್ಲಿ ಡೌನ್ ಲೋಡ್ ಗೆ ಅವಕಾಶ

 

ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಉಳಿಯುವುದನ್ನು ಪ್ರೋತ್ಸಾಹಿಸಲು ಎಂ ಎಚ್ ಆರ್ ಡಿ ಸಚಿವಾಲಯದ ನ್ಯಾಷನಲ್ ಬುಕ್ ಟ್ರಸ್ಟ್, ಜನರು ಮನೆಯಲ್ಲಿಯೇ ಕುಳಿತು ಹೆಚ್ಚಿನ ಪುಸ್ತಕಗಳನ್ನು ಓದುವುದನ್ನು ಉತ್ತೇಜಿಸಲು ಪುಸ್ತಕಗಳೊಂದಿಗೆ ಮನೆಯಲ್ಲೇ ಉಳಿಯಿರಿ ಅಭಿಯಾನ ಆರಂಭಿಸಿದೆ. ಸ್ಟೇ ಹೋಮ್ ಇಂಡಿಯಾ ವಿತ್ ಬುಕ್ಸ್ -  #StayHomeIndiaWithBooks! ಅಭಿಯಾನದ ಭಾಗವಾಗಿ ಉತ್ತಮವಾಗಿ ಮಾರಾಟವಾಗುತ್ತಿರುವ ಕೃತಿಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  
ನೂರಕ್ಕೂ ಅಧಿಕ ಪುಸ್ತಕಗಳ ಪಿಡಿಎಫ್ ಫಾರ್ಮೆಟ್ಅನ್ನು ಎನ್ ಬಿಟಿ ವೆಬ್ ಸೈಟ್ https://nbtindia.gov.in. ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಹಿಂದಿ, ಇಂಗ್ಲಿಷ್, ಅಸ್ಸಾಮಿ, ಬಾಂಗ್ಲಾ, ಗುಜರಾತಿ, ಮಲಯಾಳಂ, ಒರಿಯಾ, ಮರಾಠಿ, ಕೊಕಬೊರೊಕ್, ಮಿಝೋ, ಬೋಡೋ, ನೇಪಾಳಿ, ತಮಿಳು, ಪಂಜಾಬಿ, ತೆಲುಗು, ಕನ್ನಡ, ಉರ್ದು ಮತ್ತು ಸಂಸ್ಕೃತ ಪುಸ್ತಕಗಳು ಲಭ್ಯವಿದ್ದು, ಎಲ್ಲ ವಯೋಮಾನದವರಿಗೆ ಆಗುವಂತಹ ಕಾಲ್ಪನಿಕ ಕತೆಗಳು, ಜೀವನ ಚರಿತ್ರೆ, ಜನಪ್ರಿಯ ವಿಜ್ಞಾನ, ಶಿಕ್ಷಕರ ಕೈಪಿಡಿ ಮತ್ತು ಮಕ್ಕಳು ಹಾಗೂ ಯುವ ಜನತೆಗೆ ಅಗತ್ಯವಿರುವ ಪುಸ್ತಕಗಳು ಪ್ರಮುಖವಾಗಿ ಲಭ್ಯವಿವೆ. ಅಲ್ಲದೆ, ಠಾಗೋರ್ ಅವರ ಪುಸ್ತಕಗಳು, ಪ್ರೇಮ್ ಚಂದ್ ಮತ್ತು ಮಹಾತ್ಮ ಗಾಂಧೀಜಿ ಅವರ ಕುರಿತಾದ ಪುಸ್ತಕಗಳು ಲಭ್ಯವಿದ್ದು, ಇವು ಕುಟುಂಬದ ಪ್ರತಿಯೊಬ್ಬರು ಓದಿ ಆನಂದಿಸಬಹುದಾದ ಕೃತಿಗಳಾಗಿವೆ. ಹೆಚ್ಚಿನ ಪುಸ್ತಕಗಳನ್ನು ಪಟ್ಟಿಗೆ ಸೇರಿಸಲಾಗುವುದು.
ಕೆಲವು ಆಯ್ದ ಕೃತಿಗಳೆಂದರೆ ಹಾಲಿಡೇಸ್ ಹ್ಯಾವ್ ಕಮ್, ಅನಿಮಲ್ಸ್ ಯು ಕಾಂಟ್ ಫರ್ಗೆಟ್, ನೈನ್ ಲಿಟ್ಲ್ ಬರ್ಡ್ಸ್, ದಿ ಪಝಲ್, ಗಾಂಧಿ ತತ್ವ ಸತ್ಕಮ್, ಭಾರತದ ಮಹಿಳಾ ವಿಜ್ಞಾನಿಗಳು, ಚಟುವಟಿಕೆ ಆಧಾರಿತ ವಿಜ್ಞಾನ ಕಲಿಕೆ, ಎ ಟಚ್ ಆಫ್ ಗ್ಲಾಸ್, ಗಾಂಧಿ: ವಾರಿಯರ್ ಆಫ್ ನಾನ್ ವಯೋನೆಲ್ಸ್ ಮತ್ತಿತರ ಕೃತಿಗಳು ಸೇರಿವೆ.
ಪಿಡಿಎಫ್ ಫಾರ್ಮೆಟ್ ಕೇವಲ ಓದುವುದಕ್ಕೆ ಮಾತ್ರ ಸೀಮಿತವಾಗಿದ್ದು, ಅದನ್ನು ಯಾವುದೇ ಅನಧಿಕೃತ ಅಥವಾ ವಾಣಿಜ್ಯ ಬಳಕೆಗೆ ಅವಕಾಶವಿಲ್ಲ.
 


*****



(Release ID: 1608314) Visitor Counter : 221