ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್ – 19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದ, 2021 ರ ಮೊದಲ ಹಂತದ ಗಣತಿ ಮತ್ತು ಎನ್ ಪಿ ಆರ್ ನವೀಕರಣವನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ

Posted On: 25 MAR 2020 4:18PM by PIB Bengaluru

ಕೋವಿಡ್ – 19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದ, 2021 ರ ಮೊದಲ ಹಂತದ ಗಣತಿ ಮತ್ತು ಎನ್ ಪಿ ಆರ್ ನವೀಕರಣವನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ

 

2021 ರ ಗಣತಿಯನ್ನು 2 ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. (ಎ) ಮೊದಲ ಹಂತ ಅಂದರೆ 2020 ರ ಏಪ್ರಿಲ್ – ಸೆಪ್ಟೆಂಬವರೆಗೆ ಮನೆಗಳನ್ನು ಪಟ್ಟಿ ಮಾಡುವುದು ಮತ್ತು ಮನೆಗಳ ಗಣತಿ, ಮತ್ತು (ಬಿ) 2 ನೇ ಹಂತ ಅಂದರೆ 2021 ರ ಫೆಬ್ರವರಿ 9- 28 ರವರೆಗೆ ಜನಸಂಖ್ಯೆ ಎಣಿಕೆ. ಅಸ್ಸಾಂ ಹೊರತುಪಡಿಸಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್ ಪಿ ಆರ್ ನವೀಕರಣದ ಜೊತೆಗೆ 2021 ರ ಗಣತಿಯ ಮೊದಲ ಹಂತವನ್ನು ಮುಗಿಸುವ ಕುರಿತು ಪ್ರಸ್ತಾಪಿಸಲಾಗಿತ್ತು.   

ಕೋವಿಡ್ – 19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದ, ಭಾರತ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹೈ ಅಲರ್ಟ್ ಘೋಷಿಸಿವೆ. 24 ಮಾರ್ಚ್ 2020 ರಂದು ಗೃಹ ಸಚಿವಾಲಯ ನೀಡಿದ ವಿಸ್ತೃತ ಆದೇಶದಲ್ಲಿ ಕೋವಿಡ್ – 19 ವಿರುದ್ಧ ಹೋರಾಡಲು ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ನಿರ್ದೇಶನಗಳನ್ನು ನೀಡಿದೆ. ಹಲವು  ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೂ ಸೇರಿದಂತೆ ಹಲವಾರು ಮುಂಜಾಗೃತ ಕ್ರಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದೆ.    

ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2020 ರ ಏಪ್ರಿಲ್ 1 ರಂದು ಆರಂಭಗೊಂಡು ವಿವಿಧ ದಿನಾಂಕಗಲ್ಲಿ ಮುಂದುವರಿಸಲು  ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಿರ್ಧರಿಸಿದ್ದ 2021 ರ ಜನಗಣತಿ ಮತ್ತು ಎನ್ ಪಿ ಆರ್ ನವೀಕರಣ ಹಾಗೂ ಸಂಬಂಧಿತ ವಿವಿಧ ಕ್ಷೇತ್ರಗಳ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.     


*******(Release ID: 1608262) Visitor Counter : 221