ರಕ್ಷಣಾ ಸಚಿವಾಲಯ

ಯುದ್ಧೋಪಕರಣ ಕಾರ್ಖಾನೆ ಮಂಡಳಿ ಕೋವಿಡ್-19 ಪ್ರತ್ಯೇಕ ವಾರ್ಡ್ ಗಳಿಗೆಂದೇ 285 ಹಾಸಿಗೆಗಳನ್ನು ನಿಗದಿಪಡಿಸಿದೆ

Posted On: 25 MAR 2020 1:53PM by PIB Bengaluru

ಯುದ್ಧೋಪಕರಣ ಕಾರ್ಖಾನೆ ಮಂಡಳಿ ಕೋವಿಡ್-19 ಪ್ರತ್ಯೇಕ ವಾರ್ಡ್ ಗಳಿಗೆಂದೇ 285 ಹಾಸಿಗೆಗಳನ್ನು ನಿಗದಿಪಡಿಸಿದೆ


ಕೊರೊನಾ ವೈರಸ್ (ಕೋವಿಡ್-19) ಪ್ರಕರಣಗಳನ್ನು ನಿಯಂತ್ರಿಸಲು, ಯುದ್ಧೋಪಕರಣಗಳ ಕಾರ್ಖಾನೆ ಮಂಡಳಿ (ಒ ಎಫ್ ಬಿ) ಪ್ರತ್ಯೇಕ ವಾರ್ಡ್ ಗಳಿಗೆಂದೇ 285 ಹಾಸಿಗೆಗಳನ್ನು ನಿಗದಿಪಡಿಸಿದೆ. ಜಬಲ್ ಪೂರ್ ನ ವಾಹನ ತಯಾರಕ ಕಾರ್ಖಾನೆಯ ಆಸ್ಪತ್ರೆಯಲ್ಲಿ 40 ಹಾಸಿಗೆಗಳು, ಇಶಾಪೂರ್ ನ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕೊಸ್ಸಿಪೂರ್ ನ ಬಂದೂಕು ಮತ್ತು ಗುಂಡಿನ ಕಾರ್ಖಾನೆ, ಖಡ್ಕಿ ಯ ಸ್ಫೋಟಕ ತಯಾರಿಕೆ ಕಾರ್ಖಾನೆ, ಕಾನ್ಪೂರ್ ನ ಯುದ್ಧೋಪಕರಣಗಳ ಕಾರ್ಖಾನೆ, ಖಮರಿಯಾದ ಯುದ್ಧೋಪಕರಣಗಳ ಕಾರ್ಖಾನೆ, ಅಂಬಜ್ ಹರಿ ಯ ಯುದ್ಧೋಪಕರಣಗಳ ಕಾರ್ಖಾನೆಗಳಲ್ಲಿ ತಲಾ 30 ಹಾಸಿಗೆಗಳು, ಅಂಬರ್ ನಾಥ್ ನ ಯುದ್ಧೋಪಕರಣಗಳ ಕಾರ್ಖಾನೆಯಲ್ಲಿ 25 ಹಾಸಿಗೆಗಳು ಮತ್ತು ಅವದಿಯ ಭಾರಿ ವಾಹನ ಕಾರ್ಖಾನೆಯಲ್ಲಿ ಹಾಗೂ ಮೆಡಕ್ ನ ಯುದ್ಧೋಪಕರಣಗಳ ಕಾರ್ಖಾನೆಗಳಲ್ಲಿ ತಲಾ 20 ಹಾಸಿಗೆಗಳನ್ನು ನಿಗದಿಪಡಿಸಿದೆ.
ಒ ಎಫ್ ಬಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳು ಮತ್ತು ಅವಶ್ಯಕವಿರುವ ಹಾಸಿಗೆಗಳನ್ನು ಸಿದ್ಧಪಡಿಸುವುದು. ನಿನ್ನೆ ನಡೆದ ಕ್ಯಾಬಿನೆಟ್ ಕಾರ್ಯದರ್ಶಿಗಳ ಸಭೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಂ ಒ ಹೆಚ್ ಎಫ್ ಡಬ್ಲ್ಯೂ) ಆದೇಶದಂತೆ ಒ ಎಫ್ ಬಿ ಅಧ್ಯಕ್ಷರು ಇದನ್ನು ಮಾಡಿದ್ದಾರೆ. ಎಂ ಒ ಹೆಚ್ ಎಫ್ ಡಬ್ಲ್ಯೂ ಅಡಿಯಲ್ಲಿ ಖಾಸಗಿ ವಲಯದ ನಿರ್ವಹಣೆಯ, ಹೆಚ್ ಎಲ್ ಎಲ್ ಲೈಫ್ ಕೇರ್ ಲಿಮಿಟೆಡ್ (ಹೆಚ್ ಎಲ್ ಎಲ್) ಬೇಡಿದ ಪೈಲಟ್ ಕಟ್ಟಳೆ ಪ್ರಮಾಣಕ್ಕೆ ಅನುಗುಣವಾಗಿ, ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಫೇಸ್ ಮಾಸ್ಕ್ ಗಳನ್ನು ತಯಾರಿಸುವ ಪ್ರಯತ್ನವನ್ನೂ ಒ ಎಫ್ ಬಿ ಮಾಡುತ್ತಿದೆ.

***



(Release ID: 1608253) Visitor Counter : 148