ಹಣಕಾಸು ಸಚಿವಾಲಯ
COVID-19 ಸಾಂಕ್ರಾಮಿಕ ಹಿನ್ನೆಲೆ ಹಲವು ಕ್ಷೇತ್ರಗಳ ಶಾಸನಾತ್ಮಕ ಮತ್ತು ನಿಯಂತ್ರಕಗಳಿಗೆ ಸಂಬಂಧಿಸಿದಂತೆ ಹಣಕಾಸು ಸಚಿವರಿಂದ ಪರಿಹಾರ ಕ್ರಮಗಳ ಪ್ರಕಟಣೆ
Posted On:
24 MAR 2020 5:10PM by PIB Bengaluru
COVID-19 ಸಾಂಕ್ರಾಮಿಕ ಹಿನ್ನೆಲೆ ಹಲವು ಕ್ಷೇತ್ರಗಳ ಶಾಸನಾತ್ಮಕ ಮತ್ತು ನಿಯಂತ್ರಕಗಳಿಗೆ ಸಂಬಂಧಿಸಿದಂತೆ ಹಣಕಾಸು ಸಚಿವರಿಂದ ಪರಿಹಾರ ಕ್ರಮಗಳ ಪ್ರಕಟಣೆ
COVID-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೈಗೊಂಡ ಹಲವಾರು ಪ್ರಮುಖ ಪರಿಹಾರ ಕ್ರಮಗಳನ್ನು ವಿಶೇಷವಾಗಿ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಶಾಸನಾತ್ಮಕ ಮತ್ತು ನಿಯಂತ್ರಕ ಅನುಸರಣೆ ವಿಷಯಗಳ ಕುರಿತು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಪ್ರಕಟಿಸಿದರು. ಇಂದು ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ಸೀತಾರಾಮನ್ ಅವರು, ಆದಾಯ ತೆರಿಗೆ, ಜಿ ಎಸ್ ಟಿ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ, ಕಾರ್ಪೊರೇಟ್ ವ್ಯವಹಾರಗಳು, ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಮೀನುಗಾರಿಕೆ, ಬ್ಯಾಂಕಿಂಗ್ ಕ್ಷೇತ್ರ ಮತ್ತು ವಾಣಿಜ್ಯ ಕ್ಷೇತ್ರಗಳಲ ಪರಿಹಾರ ಕ್ರಮಗಳನ್ನು ಘೋಷಿಸಿದರು.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹಣಕಾಸು ಕಾರ್ಯದರ್ಶಿ ಶ್ರೀ ಎ.ಬಿ. ಪಾಂಡೆ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀ ಅತನು ಚಕ್ರವರ್ತಿ ಹಾಜರಿದ್ದರು.
ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಶಾಸನಾತ್ಮಕ ಮತ್ತು ನಿಯಂತ್ರಕ ಅನುಸರಣೆ ವಿಷಯಗಳಿಗೆ ಸಂಬಂಧಿಸಿದ ನಿರ್ಧಾರಗಳು ಈ ಕೆಳಗಿನಂತಿವೆ: -
ಆದಾಯ ತೆರಿಗೆ
1 ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ (ಹಣಕಾಸು ವರ್ಷ 20119) ಕೊನೆಯ ದಿನಾಂಕವನ್ನು ಮಾರ್ಚ್ 31, 2020 ರಿಂದ ಜೂನ್ 30,2020. ರವರೆಗೆ ವಿಸ್ತರಿಸಲಾಗಿದೆ.
2. ಆಧಾರ್-ಪ್ಯಾನ್ ಲಿಂಕ್ ಮಾಡುವ ದಿನಾಂಕವನ್ನು ಮಾರ್ಚ್ 31, 2020 ರಿಂದ ಜೂನ್ 30 , 2020 ರವರೆಗೆ ವಿಸ್ತರಿಸಲಾಗುವುದು
3. ವಿವಾದ್ ಸೆ ವಿಶ್ವಾಸ್ ಯೋಜನೆ - 2020 ರ ಜೂನ್ 30 ರೊಳಗೆ ಪಾವತಿ ಮಾಡಿದರೆ ಹೆಚ್ಚುವರಿ ಶೇ.10 ಮೊತ್ತವಿರುವುದಿಲ್ಲ.
4. ನೋಟಿಸ್, ಮಾಹಿತಿ, ಅಧಿಸೂಚನೆ, ಅನುಮೋದನೆ ಆದೇಶ, ಮೇಲ್ಮನವಿ ಸಲ್ಲಿಸುವುದು, ರಿಟರ್ನ್ ಸಲ್ಲಿಕೆ, ಸ್ಟೇಟ್ಮೆಂಟ್, ಅರ್ಜಿಗಳು, ವರದಿಗಳು, ಇನ್ನಾವುದೇ ದಾಖಲೆಗಳು ಮತ್ತು ಸಮಯದ ಮಿತಿಯನ್ನು ನೀಡುವ ದಿನಾಂಕಗಳು, ಪ್ರಾಧಿಕಾರದ ನಡಾವಳಿಗಳನ್ನು ಪೂರ್ಣಗೊಳಿಸುವುದು ಮತ್ತು ಆದಾಯ ತೆರಿಗೆ ಕಾಯ್ದೆ, ಸಂಪತ್ತು ತೆರಿಗೆ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ, ಕಪ್ಪು ಹಣ ಕಾಯ್ದೆ, ಎಸ್‌ಟಿಟಿ ಕಾನೂನು, ಸಿಟಿಟಿ ಕಾನೂನು, ಸಮೀಕರಣ ಲೆವಿ ಕಾನೂನು, ವಿವಾದ್ ಸೆ ವಿಶ್ವಾಸ್ ಕಾನೂನು ಅಡಿಯಲ್ಲಿ ಬಂಡವಾಳ ಲಾಭದ ಲಾಭಕ್ಕಾಗಿ ಹೂಡಿಕೆ ಅಥವಾ ಹೂಡಿಕೆ ಸೇರಿದಂತೆ ಹೂಡಿಕೆದಾರರ ಯಾವುದೇ ಅನುಸರಣೆಯನ್ನು ಮಾರ್ಚ್ 20, 2020 ರಿಂದ ಜೂನ್ 29, 2020 ರವರೆಗೆ ಮುಕ್ತಾಯವಾಗುವ ಅವಧಿಯನ್ನು ಜೂನ್ 30, 2020 ಕ್ಕೆ ವಿಸ್ತರಿಸಲಾಗುವುದು.
5. ಮುಂಗಡ ತೆರಿಗೆ, ಸ್ವ-ಮೌಲ್ಯಮಾಪನ ತೆರಿಗೆ, ನಿಯಮಿತ ತೆರಿಗೆ, ಟಿಡಿಎಸ್, ಟಿಸಿಎಸ್, ಈಕ್ವಲೈಸೇಶನ್ ಲೆವಿ, ಎಸ್‌ಟಿಟಿ, ಸಿಟಿಟಿ 20 ಮಾರ್ಚ್ 2020 ಮತ್ತು 30 ಜೂನ್, 2020 ರ ನಡುವೆ ಮಾಡಿದ ವಿಳಂಬ ಪಾವತಿಗಳಿಗಾಗಿ ಬಡ್ಡಿದರವನ್ನು ವಾರ್ಷಿಕ ಶೇ.12 / 18ರ ಬದಲು (ಅಂದರೆ ತಿಂಗಳಿಗೆ 1 / 1.5 ಪ್ರತಿಶತದ ಬದಲು ತಿಂಗಳಿಗೆ 0.75%) ಶೇ.9 ಕ್ಕೆ ಇಳಿಸಲಾಗಿದೆ. ಈ ಅವಧಿಗೆ ಸಂಬಂಧಿಸಿದ ವಿಳಂಬಕ್ಕಾಗಿ ಯಾವುದೇ ತಡವಾದ ಶುಲ್ಕ ಅಥವಾ ದಂಡವನ್ನು ವಿಧಿಸಲಾಗುವುದಿಲ್ಲ.
6. ಮೇಲಿನ ಪರಿಹಾರವನ್ನು ಜಾರಿಗೆ ತರಲು ಅಗತ್ಯವಾದ ಕಾನೂನು ಸುತ್ತೋಲೆಗಳು ಮತ್ತು ಶಾಸಕಾಂಗ ತಿದ್ದುಪಡಿಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.
ಜಿ ಎಸ್ ಟಿ / ಪರೋಕ್ಷ ತೆರಿಗೆ
1. 5 ಕೋಟಿ ರೂ.ಗಳಿಗಿಂತ ಕಡಿಮೆ ಒಟ್ಟು ವಾರ್ಷಿಕ ವಹಿವಾಟು ಹೊಂದಿರುವವರು 2020 ರ ಜೂನ್ ಕೊನೆಯ ವಾರದೊಳಗೆ ಮಾರ್ಚ್, ಏಪ್ರಿಲ್ ಮತ್ತು ಮೇ 2020 ರಲ್ಲಿ ಜಿಎಸ್ಟಿಆರ್ -3 ಬಿ ಸಲ್ಲಿಸಬಹುದು. ಯಾವುದೇ ಬಡ್ಡಿ, ತಡವಾದ ಶುಲ್ಕ ಮತ್ತು ದಂಡ ವಿಧಿಸಲಾಗುವುದಿಲ್ಲ.
2. ಇತರರು ಮಾರ್ಚ್ 2020 ರ ಕೊನೆಯ ವಾರದೊಳಗೆ ಮಾರ್ಚ್, ಏಪ್ರಿಲ್ ಮತ್ತು ಮೇ 2020 ರಲ್ಲಿ ರಿಟರ್ನ್ಸ್ ಸಲ್ಲಿಸಬಹುದು. ಆದರೆ ನಿಗದಿತ ದಿನಾಂಕದ 15 ದಿನಗಳ ನಂತರವೂ ಅದೇ ಬಡ್ಡಿ ದರ ವಾರ್ಷಿಕ 9% ವಿಧಿಸಲಾಗುತ್ತದೆ (ಪ್ರಸ್ತುತ ಬಡ್ಡಿದರವು ವರ್ಷಕ್ಕೆ 18%). 2020 ರ ಜೂನ್ 30 ರವರೆಗೆ ಪಾಲಿಸಿದರೆ ತಡವಾದ ಶುಲ್ಕ ಮತ್ತು ದಂಡ ವಿಧಿಸಲಾಗುವುದಿಲ್ಲ.
3. ಕಂಪೋಸಿಷನ್ ಸ್ಕೀಂ ಆಯ್ಕೆ ಮಾಡುವ ದಿನಾಂಕವನ್ನು 2020 ರ ಜೂನ್ ಕೊನೆಯ ವಾರದವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ, 2020 ರ ಮಾರ್ಚ್ 31 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಪಾವತಿ ಮಾಡಲು ಮತ್ತು ಕಂಪೋಸಿಷನ್ ಡೀಲರ್ ಗಳು 2019-20ಕ್ಕೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ 2020ರ ಜೂನ್ ಕೊನೆಯ ವಾರದವರೆಗೆ ವಿಸ್ತರಿಸಲಾಗುವುದು.
4. 2018-19ರ ಹಣಕಾಸು ವರ್ಷದ ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು 2020 ರ ಮಾರ್ಚ್ 31 ರಿಂದ ಜೂನ್ 2020 ರ ಕೊನೆಯ ವಾರದವರೆಗೆ ವಿಸ್ತರಿಸಲಾಗಿದೆ.
5. ನೋಟಿಸ್, ಅಧಿಸೂಚನೆ, ಅನುಮೋದನೆ ಆದೇಶ, ಮಂಜೂರಾತಿ ಆದೇಶ, ಮೇಲ್ಮನವಿ ಸಲ್ಲಿಸುವುದು, ರಿಟರ್ನ್ ಸಲ್ಲಿಕೆ, ಹೇಳಿಕೆಗಳು, ಅರ್ಜಿಗಳು, ವರದಿಗಳು, ಇತರ ಯಾವುದೇ ದಾಖಲೆಗಳು, ಜಿಎಸ್ಟಿ ಕಾನೂನುಗಳಡಿ ಯಾವುದೇ ಅನುಸರಣೆಗೆ 2020 ರ ಮಾರ್ಚ್ 20 ರಿಂದ 29 ಜೂನ್ 2020 ರವರೆಗೆ ಮುಕ್ತಾಯಗೊಳ್ಳುವ ಸಮಯ ಮಿತಿಯನ್ನು 2020 ರ ಜೂನ್ 30 ರವರೆಗೆ ವಿಸ್ತರಿಸಲಾಗುವುದು.
6. ಮೇಲಿನ ಜಿಎಸ್ಟಿ ಪರಿಹಾರವನ್ನು ಜಾರಿಗೆ ತರಲು ಅಗತ್ಯವಾದ ಕಾನೂನು ಸುತ್ತೋಲೆಗಳು ಮತ್ತು ಶಾಸಕಾಂಗ ತಿದ್ದುಪಡಿಗಳು ಜಿಎಸ್ಟಿ ಕೌನ್ಸಿಲ್ ಅನುಮೋದನೆಯ ನಂತರ ಪ್ರಕಟವಾಗಲಿವೆ.
7. ಸಬ್ಕಾ ವಿಶ್ವಾಸ್ ಯೋಜನೆಯಡಿ ಪಾವತಿ ದಿನಾಂಕವನ್ನು ಜೂನ್ 30, 2020 ಕ್ಕೆ ವಿಸ್ತರಿಸಲಾಗುವುದು. 2020 ರ ಜೂನ್ 30 ರೊಳಗೆ ಪಾವತಿಸಿದರೆ ಈ ಅವಧಿಗೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.
ಕಸ್ಟಮ್ಸ್
8. 24 X 7 ಕಸ್ಟಮ್ ಕ್ಲಿಯರೆನ್ಸ್ ಜೂನ್ 30, 2020 ರ ತನಕ
9. ನೋಟಿಸ್, ಅಧಿಸೂಚನೆ, ಅನುಮೋದನೆ ಆದೇಶ, ಮಂಜೂರಾತಿ ಆದೇಶ, ಮೇಲ್ಮನವಿ ಸಲ್ಲಿಸುವುದು, ಅರ್ಜಿಗಳನ್ನು ಸಲ್ಲಿಸುವುದು, ವರದಿಗಳು, ಇನ್ನಾವುದೇ ದಾಖಲೆಗಳು ಇತ್ಯಾದಿ, ಕಸ್ಟಮ್ಸ್ ಕಾಯ್ದೆಯಡಿ ಯಾವುದೇ ಅನುಸರಣೆಗೆ ಸಮಯ ಮಿತಿ ಮತ್ತು ಮಾರ್ಚ್ 20, 2020 ರಿಂದ 29 ಜೂನ್ 2020 ರ ನಡುವೆ ಅವಧಿ ಮುಕ್ತಾಯಗೊಳ್ಳುವ ಇತರ ಸಂಬಂಧಿತ ಕಾನೂನುಗಳನ್ನು 2020 ರ ಜೂನ್ 30 ಕ್ಕೆ ವಿಸ್ತರಿಸಲಾಗುವುದು.
ಹಣಕಾಸು ಸೇವೆಗಳು
1. ಡೆಬಿಟ್ ಕಾರ್ಡ್‌ಹೋಲ್ಡರ್‌ಗಳು ಯಾವುದೇ ಬ್ಯಾಂಕುಗಳ ಎಟಿಎಂನಿಂದ 3 ತಿಂಗಳವರೆಗೆ ಉಚಿತವಾಗಿ ಹಣವನ್ನು ಹಿಂಪಡೆಯಬಹುದು. 3 ತಿಂಗಳವರೆಗೆ ಕನಿಷ್ಠ ಬ್ಯಾಲೆನ್ಸ್ ಶುಲ್ಕವನ್ನು ಮನ್ನಾ ಮಾಡಲಾಗುವುದು. ಎಲ್ಲಾ ವ್ಯಾಪಾರ ಹಣಕಾಸು ಗ್ರಾಹಕರಿಗೆ ಡಿಜಿಟಲ್ ವ್ಯಾಪಾರ ವಹಿವಾಟಿನ ಬ್ಯಾಂಕ್ ಶುಲ್ಕವನ್ನು ಕಡಿಮೆ ಮಾಡಲಾಗಿದೆ
ಕಾರ್ಪೋರೇಟ್ ವ್ಯವಹಾರಗಳು
1. ಎಂಸಿಎ -21 ರಲ್ಲಿ ಸಲ್ಲಿಸಬೇಕಾದ ಯಾವುದೇ ದಾಖಲೆ, ರಿಟರ್ನ್, ಸ್ಟೇಟ್ಮೆಂಟ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ 2020 ರ ಏಪ್ರಿಲ್ 01 ರಿಂದ ಸೆಪ್ಟೆಂಬರ್ 30 ರವರೆಗಿನ ನಿಷೇಧದ ಅವಧಿಯಲ್ಲಿ ತಡವಾಗಿ ಸಲ್ಲಿಸಲು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.. ನೋಂದಾವಣೆ, ಇದು ಕಂಪೆನಿಗಳು / ಎಲ್‌ಎಲ್‌ಪಿಗಳ ಹಣಕಾಸಿನ ಹೊರೆ ಸೇರಿದಂತೆ ಅನುಸರಣೆ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ದೀರ್ಘಕಾಲದವರೆಗೆ ಅನುಸರಿಸದ ಕಂಪನಿಗಳು / ಎಲ್‌ಎಲ್‌ಪಿಗಳು ‘ಹೊಸದಾಗಿ ಪ್ರಾರಂಭಿಸಲು’ ನೆರವಾಗುತ್ತದೆ.
2. ಕಂಪೆನಿಗಳ ಕಾಯ್ದೆ (120 ದಿನಗಳು), 2013 ರಂತೆ, ನಿಗದಿತ ಅವಧಿಗಳಲ್ಲಿ ಕಂಪನಿಗಳ ಮಂಡಳಿ ಸಭೆಗಳನ್ನು ನಡೆಸುವ ಕಡ್ಡಾಯ ಅವಶ್ಯಕತೆಯನ್ನು ಮುಂದಿನ ಎರಡು ತ್ರೈಮಾಸಿಕಗಳವರೆಗೆ 60 ದಿನಗಳು ಅಂದರೆ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗುವುದು,
3. ಕಂಪೆನಿಗಳ ಅನ್ವಯಿಸುವಿಕೆ (ಲೆಕ್ಕಪರಿಶೋಧಕರ ವರದಿ) ಆದೇಶ, 2020 ಅನ್ನು ಮೊದಲೇ ಸೂಚಿಸಲಾದ 2019-2020ರ ಬದಲು 2020-2021ರ ಆರ್ಥಿಕ ವರ್ಷದಿಂದ ಅನ್ವಯಿಸಲಾಗುವುದು. ಇದು ಕಂಪನಿಗಳು ಮತ್ತು ಅವರ ಲೆಕ್ಕಪರಿಶೋಧಕರಿಗೆ 2019-20ನೇ ಸಾಲಿನಲ್ಲಿ ಗಮನಾರ್ಹವಾಗಿ ಹೊರೆಯನ್ನು ಕಡಿಮೆಗೊಳಿಸುತ್ತದೆ.
4. ಕಂಪೆನಿ ಕಾಯ್ದೆ, 2013 ರ ವೇಳಾಪಟ್ಟಿ 4 ರ ಪ್ರಕಾರ, ಸ್ವತಂತ್ರ ನಿರ್ದೇಶಕರು ಸ್ವತಂತ್ರೇತರ ನಿರ್ದೇಶಕರು ಮತ್ತು ನಿರ್ವಹಣಾ ಸದಸ್ಯರ ಹಾಜರಾತಿ ಇಲ್ಲದೆ ಕನಿಷ್ಠ ಒಂದು ಸಭೆಯನ್ನು ನಡೆಸಬೇಕಾಗುತ್ತದೆ. 2019-20 ನೇ ವರ್ಷಕ್ಕೆ ಕಂಪನಿಯ ಸ್ವತಂತ್ರ ನಿರ್ದೇಶಕರು ಒಂದು ಸಭೆಯನ್ನು ಸಹ ನಡೆಸಲು ಸಾಧ್ಯವಾಗದಿದ್ದರೆ, ಅದನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ.
5. 2020-21ರ ಹಣಕಾಸು ವರ್ಷದಲ್ಲಿ 2020 ರ ಏಪ್ರಿಲ್ 30 ರ ಮೊದಲು ಪಕ್ವವಾಗುವ ಠೇವಣಿಗಳ ಮೇಲೆ ಶೇ. 20 ಠೇವಣಿ ಮೀಸಲು ಸೃಷ್ಟಿಸುವ ಅವಶ್ಯಕತೆಯನ್ನು 2020 ರ ಜೂನ್ 30 ರವರೆಗೆ ಪಾಲಿಸಲು ಅನುಮತಿಸಲಾಗುವುದು.
6. 30 ಏಪ್ರಿಲ್ 2020 ರ ಮೊದಲು ನಿರ್ದಿಷ್ಟ ವರ್ಷದಲ್ಲಿ 15% ಡಿಬೆಂಚರ್‌ಗಳನ್ನು ನಿರ್ದಿಷ್ಟ ಸಾಧನಗಳಲ್ಲಿ ಹೂಡಿಕೆ ಮಾಡುವ ಅವಶ್ಯಕತೆಯಿರುತ್ತದೆ, ಇದನ್ನು 2020 ರ ಜೂನ್ 30 ರ ಮೊದಲು ಮಾಡಬಹುದು.
7. ಹೊಸದಾಗಿ ಆರಂಬವಾದ ಕಂಪನಿಗಳು 6 ತಿಂಗಳೊಳಗೆ ವ್ಯವಹಾರ ಪ್ರಾರಂಭಕ್ಕಾಗಿ ಘೋಷಣೆ ಸಲ್ಲಿಸಬೇಕಾಗುತ್ತದೆ. ಇವುಗಳಿಗೆ ಇನ್ನೂ 6 ತಿಂಗಳ ಹೆಚ್ಚುವರಿ ಸಮಯವನ್ನು ನೀಡಲಾಗುವುದು.
8. ಕಂಪೆನಿ ಕಾಯ್ದೆಯ ಸೆಕ್ಷನ್ 149 ರ ಪ್ರಕಾರ, ಪ್ರತಿ ಕಂಪನಿಯ ಕನಿಷ್ಠ ಒಬ್ಬ ನಿರ್ದೇಶಕರಿಂದ ಕನಿಷ್ಠ 182 ದಿನಗಳವರೆಗೆ ಭಾರತದಲ್ಲಿ ಕನಿಷ್ಠ ವಾಸವನ್ನು ಅನುಸರಿಸದಿರುವುದನ್ನು ಉಲ್ಲಂಘನೆಯೆಂದು ಪರಿಗಣಿಸಲಾಗುವುದಿಲ್ಲ.
9. COVID 19 ನಿಂದ ಉಂಟಾಗಿರುವ ಹೆಚ್ಚಿನ ಕಂಪನಿಗಳು ಎದುರಿಸುತ್ತಿರುವ ದೊಡ್ಡ ಪ್ರಮಾಣದ ಆರ್ಥಿಕ ತೊಂದರೆಯಿಂದಾಗಿ, ಐಬಿಸಿ 2016 ರ ಸೆಕ್ಷನ್ 4 ರ ಅಡಿಯಲ್ಲಿ ಡೀಫಾಲ್ಟ್ ಮಿತಿಯನ್ನು 1 ಕೋಟಿ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ (ಅಸ್ತಿತ್ವದಲ್ಲಿರುವ ಮಿತಿ 1 ಲಕ್ಷ ರೂ.) ಇದು ಎಂಎಸ್‌ಎಂಇಗಳ ವಿರುದ್ಧ ದಿವಾಳಿತನ ಪ್ರಕ್ರಿಯೆಯನ್ನು ತಡೆಯುತ್ತದೆ. ಪ್ರಸ್ತುತ ಪರಿಸ್ಥಿತಿ 30 ಏಪ್ರಿಲ್ 2020 ರಿಂದಾಚೆಗೆ ಮುಂದುವರಿದರೆ ಐಬಿಸಿ 2016 ರ ಸೆಕ್ಷನ್ 7, 9 ಮತ್ತು 10 ಗಳನ್ನು 6 ತಿಂಗಳ ಅವಧಿಗೆ ಅಮಾನತುಗೊಳಿಸುವುದನ್ನು ನಾವು ಪರಿಗಣಿಸಬಹುದು, ಇದರಿಂದಾಗಿ ಕಂಪೆನಿಗಳು ಅಂತಹ ಬಲವಂತದ ದಿವಾಳಿತನ ಪ್ರಕ್ರಿಯೆಗೆ ಒತ್ತಾಯಿಸದಂತೆ ತಡೆಯುತ್ತದೆ.
10. ಈ ನಿಟ್ಟಿನಲ್ಲಿ ವಿವರವಾದ ಅಧಿಸೂಚನೆಗಳು / ಸುತ್ತೋಲೆಗಳನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಪ್ರತ್ಯೇಕವಾಗಿ ನೀಡಲಿದೆ.
ಮೀನುಗಾರಿಕೆ ಇಲಾಖೆ
1. ಎಸ್‌ಪಿಎಫ್ ಸೀಗಡಿ ಬ್ರೂಡ್‌ಸ್ಟಾಕ್ ಮತ್ತು ಇತರ ಕೃಷಿ ಸಂಬಧಿ ಆಮದುಗಾಗಿ ಎಲ್ಲಾ 01.03.2020 ರಿಂದ 15.04.2020 ರ ನಡುವೆ ಕೊನೆಗೊಳ್ಳುವ ನೈರ್ಮಲ್ಯ ಪರವಾನಗಿಗಳನ್ನು (ಎಸ್‌ಐಪಿಗಳು) 3 ತಿಂಗಳು ವಿಸ್ತರಿಸಲಾಗಿದೆ.
2. ಸರಕುಗಳ ಆಗಮನಕ್ಕೆ 1 ತಿಂಗಳವರೆಗೆ ವಿಳಂಬಕ್ಕೆ ಅವಕಾಶ.
3. ಹೆಚ್ಚುವರಿ ಬುಕಿಂಗ್ ಶುಲ್ಕವಿಲ್ಲದೆ ಚೆನ್ನೈನ ಅಕ್ವಾಟಿಕ್ ಕ್ಯಾರೆಂಟೈನ್ ಫೆಸಿಲಿಟಿ (ಎಕ್ಯೂಎಫ್) ಯಲ್ಲಿ ರದ್ದಾದ ಕ್ಯಾರೆಂಟೈನ್ ಕ್ಯುಬಿಕಲ್ಸ್ ರವಾನೆಗಳ ರೀಬುಕಿಂಗ್.
4. ದಾಖಲೆಗಳ ಪರಿಶೀಲನೆ ಮತ್ತು ಕ್ವಾರಂಟೈನ್ ಎನ್‌ಒಸಿ ಅನುದಾನ ನೀಡುವುನ್ನು 7 ದಿನಗಳಿಂದ 3 ದಿನಗಳವರೆಗೆ ಸಡಿಲಿಸಲಾಗುತ್ತದೆ
ವಾಣಿಜ್ಯ ಇಲಾಖೆ
1. ವಿವಿಧ ಅನುಸರಣೆ ಮತ್ತು ಕಾರ್ಯವಿಧಾನಗಳಿಗಾಗಿ ಅವಧಿ ವಿಸ್ತರಣೆಯನ್ನು ನೀಡಲಾಗುವುದು. ವಿವರವಾದ ಅಧಿಸೂಚನೆಗಳನ್ನು ವಾಣಿಜ್ಯ ಸಚಿವಾಲಯ ಪ್ರಕಟಿಸಲಿದೆ.
(Release ID: 1608006)
Visitor Counter : 429