ಪ್ರಧಾನ ಮಂತ್ರಿಯವರ ಕಛೇರಿ

ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಮತ್ತು ಅನಗತ್ಯ ಪ್ರಯಾಣ ತಪ್ಪಿಸಲು ಪ್ರಧಾನಮಂತ್ರಿ ಕರೆ ವೈದ್ಯರ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಿ ಎಂದು ಪ್ರಧಾನಿ ಕರೆ: ಸಹ ನಾಗರಿಕರಿಗಾಗಿ ಸೇವೆ ಸಲ್ಲಿಸುತ್ತಿರುವ ಐಟಿ ವೃತ್ತಿಪರರು ಮತ್ತು ನೌಕರರ ಕಾರ್ಯಕ್ಕೆ ಮೆಚ್ಚುಗೆ

Posted On: 21 MAR 2020 7:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶದ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ ಅವರು ವೈದ್ಯರು ನೀಡುವ ಸಲಹೆಗಳನ್ನು ಪ್ರತಿಯೊಬ್ಬರೂ ಆಲಿಸಬೇಕು ಮತ್ತು ವೈದ್ಯರು ಯಾರಿಗೆ ಗೃಹ ನಿಗಾ(ಕ್ವಾರಂಟೈನ್) ಪಾಲಿಸಲು ನಿರ್ದೇಶಿಸಿದ್ದಾರೊ ಅವರು ಮನೆಯಲ್ಲಿಯೇ ಇರಬೇಕು ಎಂದು ಕೋರಿದ್ದಾರೆ.

ಸರಣಿ ಟ್ವೀಟ್ ಗಳಲ್ಲಿ ಪ್ರಧಾನಮಂತ್ರಿ ಅವರು, “ಮುಂಜಾಗ್ರತಾ ಕ್ರಮಗಳಿಂದಾಗಿ ಆತಂಕ ಪಡಬೇಕಾಗಿಲ್ಲ – ಎಂದಿಗೂ ಮರೆಯದಿರಿ, ಕೇವಲ ಜನರು ಮನೆಗಳಲ್ಲಿರುವುದೇ ಮುಖ್ಯವಲ್ಲ, ಅವರು ಯಾವ ನಗರ/ಪಟ್ಟಣದಲ್ಲಿ ವಾಸಿಸುತ್ತಾರೋ ಅಲ್ಲಿಯೇ ಇರಬೇಕು, ಅನಗತ್ಯ ಪ್ರಯಾಣದಿಂದ ನಿಮಗೂ ಅಥವಾ ಇತರರಿಗೂ ಪ್ರಯೋಜನವಾಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ಸಣ್ಣ ಪ್ರಯತ್ನಗಳೂ ಸಹ ದೊಡ್ಡ ಪರಿಣಾಮಗಳನ್ನು ಬೀರುತ್ತವೆ.

ಇಂತಹ ಸಮಯದಲ್ಲಿ ನಾವು ವೈದ್ಯರು ಮತ್ತು ಇನ್ನಿತರ ಅಧಿಕಾರಿಗಳು ನೀಡುವ ಸಲಹೆಗಳನ್ನು ಆಲಿಸಬೇಕಾಗಿದೆ. ಯಾರಿಗೆ ಗೃಹ ಬಂಧನದಲ್ಲಿ(ಕ್ವಾರಂಟೈನ್)ನಲ್ಲಿ ಇರಲು ಹೇಳಿದ್ದಾರೋ ಅವರುಗಳು ದಯವಿಟ್ಟು ಮಾರ್ಗಸೂಚನೆಗಳನ್ನು ಪಾಲಿಸುವಂತೆ ಕರೆ ನೀಡುತ್ತೇನೆ. ಇದು ನಿಮ್ಮನ್ನು ಮಾತ್ರವಲ್ಲ, ನಿಮ್ಮ ಸ್ನೇಹಿತರು ಮತ್ತು ಕುಟುಂಬಗಳನ್ನೂ ಸಹ ರಕ್ಷಿಸುತ್ತದೆ” ಸಹ ನಾಗರಿಕರಿಗೆ ಸೇವೆಗಳನ್ನು ಒದಗಿಸುತ್ತಿರುವ ಐಟಿ ವೃತ್ತಿಪರರು ಮತ್ತು ನೌಕರರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಅವರು, ಕೋವಿಡ್-19 ವಿರುದ್ಧ ಹೋರಾಟದಲ್ಲಿ ಅವರು ವಹಿಸುತ್ತಿರುವ ಮಹತ್ವದ ಪಾತ್ರ ಹಲವು ವರ್ಷಗಳ ಕಾಲ ನೆನಪಿನಲ್ಲಿರುತ್ತದೆ ಎಂದರು.

ಟ್ವೀಟ್ ಒಂದರಲ್ಲಿ ಪ್ರಧಾನಮಂತ್ರಿ, “ಅವರು ನಮ್ಮ ನಾಯಕರು(ಹೀರೋಗಳು) ಅವರುಗಳು ಅಪ್ರತಿಮ ವ್ಯಕ್ತಿಗಳು, ಅವರುಗಳ ಮಹತ್ವದ ಪಾತ್ರ ಹಲವು ವರ್ಷಗಳ ಕಾಲ ಸ್ಮರಿಸಬೇಕಾಗುತ್ತದೆ” ಎಂದರು.

ಖಂಡಿತ ಸರಿ ಇದೆ. ಸಹ ನಾಗರಿಕರಿಗೆ ಸೇವೆಗಳನ್ನು ಒದಗಿಸಲು ಕಠಿಣ ಪರಿಶ್ರಮ ಪಡುತ್ತಿರುವ ನಮ್ಮ ಐಟಿ ವೃತ್ತಿಪರರ ಬಗ್ಗೆ ಭಾರತಕ್ಕೆ ಖಂಡಿತ ಹೆಮ್ಮೆ ಇದೆ. ಈ ಆವಿಷ್ಕಾರ ಮತ್ತು ಉದ್ಯಮಶೀಲ ಸಮುದಾಯ ಕೋವಿಡ್-19 ಎದುರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ”. #IndiaFightsCorona



(Release ID: 1607694) Visitor Counter : 145