ಪ್ರಧಾನ ಮಂತ್ರಿಯವರ ಕಛೇರಿ

ಕೊರೋನಾ ವೈರಸ್ ಆಧರಿಸಿದ ಗೀತೆಗಳನ್ನು ಹಾಡಿದ ಗಾಯಕರಿಗೆ ಪ್ರಧಾನಿ ಮೆಚ್ಚುಗೆ ‘ಜನತಾ ಕರ್ಫ್ಯೂ’ ಸಂದೇಶ ಪಸರಿಸಿದ ಗಣ್ಯ ವ್ಯಕ್ತಿಗಳ ಬಗ್ಗೆ ಪ್ರಧಾನಿ ಶ್ಲಾಘನೆ

Posted On: 22 MAR 2020 2:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೊರೋನಾ ವೈರಸ್ ಆಧರಿಸಿದ ಗೀತೆಗಳನ್ನು ಹಾಡಿದ ಗಾಯಕರಾದ ಮಾಲಿನಿ ಅವಸ್ಥಿ ಮತ್ತು ಪ್ರೀತಮ್ ಭರ್ತವಾನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಾಡನ್ನು ಶೇರ್ ಮಾಡಿ, ಹೀಗೆ ಬರೆದಿದ್ದಾರೆ. “जनता कर्फ्यू को लेकर हर कोई अपनी-अपनी तरह से योगदान देने में जुटा है। लोक गायिका @maliniawasthi जी अपने अंदाज में लोगों को प्रेरित कर रही हैं... #JantaCurfew”, “जनता कर्फ्यू को लेकर लोक गायक प्रीतम भरतवाण जी ने एक अनोखा और बेहद सुरीला संदेश दिया है... #JantaCurfew”.

ಪ್ರಧಾನಮಂತ್ರಿ ಅವರು, ಜನತೆಗೆ ಸರಿಯಾಗಿ ಮಾಹಿತಿಯನ್ನು ವಿನಿಮಯ ಮಾಡಿದ್ದಕ್ಕೆ ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಮಾಧ್ಯಮ ಸಮುದಾಯವನ್ನು ಶ್ಲಾಘಿಸಿದ್ದಾರೆ. ಅವರು ಭರವಸೆ ಮತ್ತು ಸಕಾರಾತ್ಮಕ ಸಂದೇಶವನ್ನು ಪ್ರಸಾರ ಮಾಡಿದ್ದಕ್ಕಾಗಿ ಮಾಧ್ಯಮಗಳನ್ನು ಅಭಿನಂದಿಸಿದ್ದಾರೆ. ಅಲ್ಲದೆ, ‘ಜನತಾ ಕರ್ಫ್ಯೂ’ ಸಂದೇಶವನ್ನು ಪಸರಿಸಿದ ಖ್ಯಾತ ಗಣ್ಯ ವ್ಯಕ್ತಿಗಳನ್ನು ಶ್ಲಾಘಿಸಿದ್ದಾರೆ. ಸರಣಿ ಟ್ವೀಟ್ ಗಳಲ್ಲಿ ಅವರು ಹೀಗೆ ಹೇಳಿದ್ದಾರೆ. “ಕೊರೋನಾ ವಿರುದ್ಧ ಹೋರಾಟಕ್ಕಾಗಿ ಭಾನುವಾರ ಮನೆಯಲ್ಲೇ ಉಳಿಯುವಂತೆ ಗಣ್ಯ ವ್ಯಕ್ತಿಗಳು ಪ್ರೇರೇಪಿಸಿದ್ದಾರೆ ಮತ್ತು ಜನರು ಅದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ”.

ಪ್ರಧಾನಮಂತ್ರಿ ಅವರು, ಇಂದಿನ ‘ಜನತಾ ಕರ್ಫ್ಯೂ’ನ ಭಾಗವಾಗುವಂತೆ ಜನರಿಗೆ ಕರೆ ನೀಡಿದ್ದಾರೆ ಮತ್ತು ಇದರಿಂದ ಕೋವಿಡ್-19 ಪಿಡುಗಿನ ಹೋರಾಟಕ್ಕೆ ಅದ್ಭುತ ಶಕ್ತಿ ದೊರಕಲಿದೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಜನರು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ, ಟಿವಿ ವೀಕ್ಷಿಸಿ ಮತ್ತು ಒಳ್ಳೆಯ ಆಹಾರವನ್ನು ಸೇವಿಸಿ ಎಂದು ಹೇಳಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಪ್ರತಿಯೊಬ್ಬರೂ ಮೌಲ್ಯಯುತ ಯೋಧರಂತೆ ಹೋರಾಡಬೇಕಿದೆ. ನಾವು ಎಚ್ಚರಿಕೆ ಮತ್ತು ಗಂಭೀರದಿಂದ ನಡೆದುಕೊಳ್ಳುವುದರಿಂದ ಲಕ್ಷಾಂತರ ಇತರ ಜೀವಿಗಳಿಗೆ ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ. ಬೀದಿಗಳು ಖಾಲಿ ಇದ್ದರೂ ಕೋವಿಡ್-19 ವಿರುದ್ಧದ ಹೋರಾಟ ಸಂಪೂರ್ಣವಾಗಿರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
 



(Release ID: 1607686) Visitor Counter : 135