ವಾರ್ತಾ ಮತ್ತು ಪ್ರಸಾರ ಸಚಿವಾಲಯ
ನೊವೆಲ್ ಕೊರೊನಾವೈರಸ್ ಕಾಯಿಲೆ (ಕೋವಿಡ್ -19)ಗೆ ಹೆಚ್ಚುವರಿ ಸಲಹೆ
Posted On:
19 MAR 2020 6:02PM by PIB Bengaluru
ನೊವೆಲ್ ಕೊರೊನಾವೈರಸ್ ಕಾಯಿಲೆ (ಕೋವಿಡ್ -19)ಗೆ ಹೆಚ್ಚುವರಿ ಸಲಹೆ
- ಮಾರ್ಚ್ 22, 2020 ರಿಂದ ಒಂದು ವಾರದವರೆಗೆ ಯಾವುದೇ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳು ಭಾರತದಲ್ಲಿ ಆಗಮನಕ್ಕೆ (ಇಳಿಯಲು) ಅನುಮತಿ ನೀಡುವುದಿಲ್ಲ.
- ಜನ ಪ್ರತಿನಿಧಿಗಳು, ಸರ್ಕಾರಿ ಉದ್ಯೋಗಿಗಳು, ವೈದ್ಯಕೀಯ ವೃತ್ತಿಪರರನ್ನು ಹೊರತುಪಡಿಸಿ 65 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಗರಿಕರು (ವೈದ್ಯಕೀಯ ನೆರವಿಗೆ ಹೊರತುಪಡಿಸಿ). ಮನೆಯಲ್ಲಿಯೇ ಇರುವಂತೆ ಸೂಚಿಸಿ ರಾಜ್ಯ ಸರ್ಕಾರಗಳು ಸೂಕ್ತ ನಿರ್ದೇಶನಗಳನ್ನು ನೀಡುತ್ತವೆ,
- ಅದೇ ರೀತಿ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳು ಮನೆಯಿಂದ ಹೊರಬರದಂತೆ ಸೂಚಿಸಬೇಕು.
- ವಿದ್ಯಾರ್ಥಿಗಳು, ರೋಗಿಗಳು ಮತ್ತು ದಿವ್ಯಾಂಗರನ್ನು ಹೊರತುಪಡಿಸಿ ರೈಲ್ವೆ ಮತ್ತು ನಾಗರಿಕ ವಿಮಾನಯಾನವು ಎಲ್ಲಾ ರಿಯಾಯಿತಿ ಪ್ರಯಾಣವನ್ನು ಸ್ಥಗಿತಗೊಳಿಸುತ್ತದೆ.
- ತುರ್ತು/ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ಖಾಸಗಿ ವಲಯದ ನೌಕರರು ಮನೆಯಿಂದಲೇ ಕೆಲಸ ಮಾಡುವುದನ್ನು ಜಾರಿಗೆ ತರುವಂತೆ ರಾಜ್ಯಗಳನ್ನು ಕೋರಲಾಗಿದೆ.
- ಜನದಟ್ಟಣೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಎಲ್ಲಾ ಬಿ ಮತ್ತು ಸಿ ಗುಂಪು ನೌಕರರು ಪರ್ಯಾಯ ವಾರದಲ್ಲಿ ಹಾಗೂ ವಿವಿಧ ಸಮಯಗಳಲ್ಲಿ ಕಚೇರಿಗಳಿಗೆ ಹಾಜರಾಗುವಂತೆ ಕೇಳಲಾಗುತ್ತದೆ.
***
(Release ID: 1607235)
Visitor Counter : 167